Untitled Document
Sign Up | Login    
Dynamic website and Portals
  
Home >> Movie Home >> Reviews >> ಮದರಂಗಿ
Movie Review
ಮದರಂಗಿ
ಮುದ ನೀಡದ ಮದರಂಗಿ..
Rating :
Hero :
ಕೃಷ್ಣ
Heroine :
ಸುಷ್ಮ, ನಕ್ಷಾ ಶಟ್ಟಿ
Other Cast :
ಕೃಷ್ಣ, ಸುಷ್ಮ, ನಕ್ಷಾ ಶಟ್ಟಿ, ಶರತ್ ಲೋಹಿತಾಶ್ವ,ಅವಿನಾಶ್, ಸುಚೆಂದ್ರ ಪ್ರಸಾದ್,ಅಶೋಕ್ ಕುಮಾರ್, ವಿನಯ ಪ್ರಸಾದ್,
Director :
ಮಲ್ಲಿಕಾರ್ಜುನ್ ಮುತ್ತಲಗೇರಿ
Music Director :
ಅನುಪ್ ಸೀಳಿನ್
Producer :
ನಾಗಪ್ಪ, ಕ್ರಷ್ಣ ಟಾಕೀಸ್
Release Date :
10-05-2013
ಕನ್ನಡ ಸಿನಿಮಾರಂಗದಲ್ಲಿ ಹೊರಬರ ಕೃಷಿ ಜೋರಾಗಿದೆ. ಆದರೆ ಈ ಕೃಷಿಯ ಅಬ್ಬರದಲ್ಲಿ ಯಾರು ಉತ್ತಮ ಬೆಳೆಯನ್ನು ತೆಗೆಯುತ್ತಾರೋ ಅವರು ಮಾತ್ರ ಸ್ವಲ್ಪ ಸಮಯ ನಿಲ್ಲಬಹುದು. ಜಾಳದ ಕಾಳನ್ನು ಬೆಳೆದವನಿಗೆ ಕಂಡಿತ ಇಲ್ಲಿ ಮಣೆಹಾಕುವ ಅವಶ್ಯಕತೆ ಇಲ್ಲ.

ಹಾಗೆ ಈ ರಂಗು ರಂಗಿನ ಮದರಂಗಿ ಕೇವಲ ಮೆಹಂದಿಯ ಛಾಯೆ ಇದೆಯೆ ಹೊರತು, ಅದರ ರಂಗನ್ನು ಜನರ ಮನಸ್ಸಿನಲ್ಲಿ ತೋರಿಸುವಲ್ಲಿ ವಿಫಲವಾಗಿದೆ. ಕಿರುತೆರೆಯಲ್ಲಿ ಮಿಂಚಿದ ಕೃಷ್ಣ ಅಲಿಯಾಸ್ ಕಿಟ್ಟಪ್ಪ ಬೆಳ್ಳಿತೆರೆಗೆ ಬರುವ ಭರದಲ್ಲಿ ಎಡವಿದ್ದಾರೆ. ತಮ್ಮ ಸ್ವಂತ ಬ್ಯಾನರ್ ಅಡಿಯಲ್ಲಿ ನಾಯಕನಾಗಿ ಅಭಿನಯಿಸುವ ಜವಾಬ್ದಾರಿ ಹೊತ್ತಿರುವ ವ್ಯಕ್ತಿಗೆ, ಚಿತ್ರದ ಕತೆಯ ಆಯ್ಕೆಯಲ್ಲಿ ಎಚ್ಚರಿಕೆ ಇರಬೇಕಾಗಿತ್ತು.

ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲಗೇರಿ ಟೈಟಲ್ಗಾಗಿ ಕತೆಯನ್ನು ಕಟ್ಟಿದರೋ.?, ಕತೆಗೆ ಟೈಟಲ್ ಇಟ್ಟರೋ..? ಎಂಬುದು ಚಿತ್ರ ನೋಡಿದವರಿಗೆ ಗೊಂದಲ ಉಂಟುಮಾಡುತ್ತದೆ. ಇಲ್ಲಿ ಯಾರ ಕತೆಯನ್ನು ಹೇಳಲು ಹೊರಟಿದ್ದಾರೆ..? ಎಂಬುದು ಮತ್ತೊಂದು ಪ್ರಶ್ನೆ ಕಾಡುತ್ತದೆ. ಒಂದು ಚಿತ್ರದಲ್ಲಿ ಕೇವಲ ಒಂದು ಹಾಡನ್ನು ಹಿಟ್ಟ್ ಮಾಡಿಕೊಂಡರೆ ಸಿನಿಮಾ ಓಡುತ್ತದೆ ಎಂಬುದು ಇಂದಿಗೆ ಹಳೆಯ ಲಾಜಿಕ್. ಅದು ಈಗ ವರ್ಕ್ ಆಗುತ್ತಿಲ್ಲ ಎಂಬುದು ನಿರ್ದೇಶಕರ ಗಮನಕ್ಕೆ ತರುತ್ತೇವೆ.

ಚಿತ್ರದ ಕತೆಯ ವಿಷಯಕ್ಕೆ ಬರುವುದಾದರೆ ಪ್ರಾರಂಭವಾದ 35 ನಿಮಿಷ ಯಾವುದೋ ಎಂ.ಎಲ್.ಎ ಮಗನ ಎಪಿಸೋಡ್ ಮತ್ತು ಅವನಿಗೆ ಸುಪಾರಿ ಕೊಡುವ ಶೆಟ್ಟಿ(ಶರತ್ ಲೋಹಿತಾಶ್ವ) ಅದರ ವಿಷಯವಾಗಿ ಕೆಲಸ ಮಾಡುವ 4 ಜನ ಹುಡುಗರು. ಅವರನ್ನು ಹುಡುಕುವ ಇನ್ಪೆಕ್ಟರ್ ನಾಯಕ (ಸುಚೇಂದ್ರ ಪ್ರಸಾದ್). ಹೀಗೆ ಕಳ್ಳ ಪೋಲಿಸ್ ಆಟದಲ್ಲಿ ನಾಯಕ ಮನುವಿನ(ಕೃಷ್ಣ) ಮನೆಗೆ ಬರುವ ರೌಡಿಗಳು. ಅಮ್ಮ (ವಿನಯ ಪ್ರಸಾದ್) ಅವರಿಗೆ ಊಟ ಹಾಕುತ್ತಾಳೆ. ಪೋಲಿಸರು ಈ ರೌಡಿಗಳನ್ನು ಹಿಡಿಯಲು ಬಂದು ಮನುವನ್ನು ಹಿಡಿದುಕೊಂಡು ಹೋಗುತ್ತಾರೆ. ಅಲ್ಲಿ ಅವನು ಮೆಂಟಲಿ ಚಾಲೆಂಚ್ ಎಂದು ಗೊತ್ತಾಗುತ್ತದೆ. ಅವನಿಗೆ ಟ್ರೀಟ್ ಮೆಂಟ್ ಕೊಡುತ್ತಾ ನಿಜವಾದ ಕತೆ ಓಪನ್ ಆಗುತ್ತದೆ.

ಅದೇ ಟ್ರಯಾಂಗಲ್ ಪ್ರೇಮ್ ಕಹಾನಿ. ಇಬ್ಬರು ಹುಡುಗಿರಯರ ಮಧ್ಯೆ ಸಿಕ್ಕುವ ನಾಯಕ. ಇದರ ಮಧ್ಯೆ ನಾಯಕನ ತಂಗಿಯ ಮದುವೆ, ಹೀಗೆ ಅಲ್ಲಿ ಮದರಂಗಿಯ ಥೀಮ್ ಸಾಂಗ್ ಎಲ್ಲವೂ ನಡೆದು ಕಡೆಯಲ್ಲಿ ಅವನಿಗೂ ಮತ್ತು ಎಂಎಲ್ಎ ಮಗನ ಕೊಲೆಯ ನಂಟು ತೆರೆದುಕೊಳ್ಳುತ್ತದೆ. ಒಂದು ಕಡೆ ನಾಯಕನ ಕತೆ, ಮತ್ತೊಂದು ಕಡೆ ಎಂಎಲ್ಎ, ಇನ್ನೊಂದು ಕಡೆ ರೌಡಿಗಳು, ಇದರ ಮಧ್ಯೆ ಶೆಟ್ಟಿಯ ವೈಯಕ್ತಿಕ ದ್ವೇಶ ಏನೇನೋ ತಂದು ಗೊಂದಲಮಾಡಿಕೊಂಡಿದ್ದಾರೆ. ಅವನಿಗೆ ಏಕೆ ತಲೆ ಕೆಟ್ಟಿತ್ತು, ಯಾರನ್ನು ಮದುವೆಯಾಗುತ್ತಾನೆ, ಹೀಗೆಲ್ಲಾ ಪ್ರಶ್ನೆಗಳಿದ್ದರೆ, ನಿಮ್ಮಲ್ಲಿ ನೋಡುವ ತಾಳ್ಮೆ ಇದ್ದರೆ ಚಿತ್ರಮಂದಿರದಲ್ಲಿ ನೋಡಿ.

ಚಿತ್ರದ ಪ್ಲೆಸ್ ಪಾಯಿಂಟ್ ಅನುಪ್ ಸೀಳಿನ್ ಸಂಗೀತ. ಮದರಂಗಿ.., ಮಳೆಹನಿಯೇ.., ಡಾರ್ಲಿಗ್..., ಚಿತ್ರ ಬೋರ್ ಎನ್ನಿಸಿದಾಗ ಮುದ ನೀಡುತ್ತದೆ. ಆದರೆ ಅರಸು ಅಂತಾರೆ ಬರೆದಿರುವ ಮಳೆಹನಿಯೇ.. ಎಂಬ ಇಂಪಾದ ಹಾಡಿಗೆ ಚಿತ್ರಿಕರಿಸುವಾಗ ನ್ಯಾಯ ಒದಗಿಸಿಲ್ಲ. ಸಂಕಲನ ಸುಮಾರಾಗಿದೆ. ಸಂಭಾಷಣೆಯು ಅಂತದೇನು ಗಿಟ್ಟುವುದಿಲ್ಲ.
ನಾಯಕ ಕಿಟ್ಟಪ್ಪ ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಹೊಸ ಪರಿಚಯದ ಸುಷ್ಮ, ನಕ್ಷಾ ಶೆಟ್ಟಿ, ಹಾಗು ರೌಡಿಗಳಾಗಿ ಅಭಿನಯಿಸಿರುವ ಹುಡುಗರು ಉತ್ತಮವಾಗಿ ಅಭಿನಯಿಸಿದ್ದಾರೆ.

ಒಟ್ಟಾರೆ ರಂಗುರಂಗಾರಿರಬೇಕಾಗಿದ್ದ ಮದರಂಗಿ ತನ್ನ ರಂಗನ್ನು ಕಳೆದುಕೊಂಡು ಪ್ರೇಕ್ಷನಿಗೆ ನಿರಾಸೆ ಮೂಡಿಸುತ್ತದೆ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited