Untitled Document
Sign Up | Login    
Dynamic website and Portals
  
Home >> Movie Home >> Reviews >> ಬುಲ್ ಬುಲ್
Movie Review
ಬುಲ್ ಬುಲ್
ಬುಲ್ ಬುಲ್ ಮಾತಾಡಲಿಲ್ಲ..
Rating :
Hero :
ದರ್ಶನ್
Heroine :
ರಚಿತಾ ರಾಮ್
Other Cast :
ಅಂಬರೀಶ್,ದರ್ಶನ್,ರಚಿತಾ ರಾಮ್, ಶರಣ್, ಶರತ್ ಲೋಹಿತಾಶ್ವ, ರಮೇಶ್ ಭಟ್, ಅಶೋಕ್, ರಮ್ಯ ಭಾರ್ನೆ, ಟೆನಿಸ್ ಕ್ರಿಷ್ಣ,ಸ್ಪೂರ್ತಿ, ಸುರೇಶ್ ಮುಂತಾದವರು..
Director :
ಎಮ್.ಡಿ ಶ್ರೀಧರ್
Music Director :
ಹರಿಕ್ರಷ್ಣ
Producer :
ಮೀನಾ ತೂಗುದೀಪ್,ದಿನಕರ್
Release Date :
10-05-2013
ದೊಡ್ಡ ದೊಡ್ಡ ಬ್ಯಾನರ್ ಸಿನಿಮಾಗಳೆ ರೀಮೇಕ್ ಮಾಡಲು ಹೊರಟಿರುವುದು ಕನ್ನಡದ ಪಾಲಿಗೆ ನಿಜಕ್ಕೂ ಸಹಿಸಲಾಗದ ವಿಷಯ. ಉತ್ತಮ ನಾಯಕ, ಉತ್ತಮ ಪೋಷಕ ನಾಯಕ ನಟರನ್ನು ಇಟ್ಟುಕೊಂಡು ಹೀಗೆ ಸಿನಿಮಾಗಳನ್ನು ಮಾಡುವುದಲ್ಲಿ ದೊಡ್ಡತನವೇನು ಕಂಡುಬರುವುದಿಲ್ಲ.

ಸ್ನೇಹದ ತಳಹದಿಯಲ್ಲಿ ಹಲವಾರು ಸಿನಿಮಾಗಳು ಬಂದಿದ್ದರೂ ಈ ಚಿತ್ರ ಹೊಸದೊಂದು ಆಯಾಮವಾಗುತ್ತದೆ. ಸಿನಿಮಾದ ವಸ್ತು ವಿಷಯ ತುಂಬಾ ಚೆನ್ನಾಗಿದೆ. ಆದರೆ ಅದನ್ನು ನಿರೂಪಿಸುವಲ್ಲಿ ಚಿತ್ರ ಸೋತಿದೆ. ಗಿಟ್ಟುವ ವಿಚಾರವೆಂದರೆ ಅಂಬರೀಷ್ ಮತ್ತು ದರ್ಶನ್ ಕಾಂಬಿನೇಷನ್. ಅಣ್ಣವ್ರು ಸಿನಿಮಾದಲ್ಲಿ ಒಂದಾಗಿದ್ದ ಇಬ್ಬರೂ ಮತ್ತೆ ಇಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಿಂತ ಈ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ಗಿಟ್ಟಿದೆ. ಸಂಭಾಷಣೆ ವಿಷಯದಲ್ಲಿ ಜನರಿಂದ ಸೀಟಿ ಗಿಟ್ಟಿಸಿಕೊಳ್ಳುತ್ತದೆ.

ಇನ್ನು ಕಥೆಯ ವಿಷಯಕ್ಕೆ ಬಂದರೆ ಜನರೆಲ್ಲಾ ನೊಡಿರುವ ಅದೇ ತೆಲುಗಿನ ’ಡಾರ್ಲಿಂಗ್’ ಸಿನಿಮ. ರಿಮೇಕ್ ಆದರೂ ಕನ್ನಡದ ಸೊಗಡನ್ನು ಹರಡುವಲ್ಲಿ ಮುಂದೆ ಬಂದಿದೆ. ಕನ್ನಡ ನಾಡಿನ, ಭಾಷೆಯ, ಸಂಸ್ಕೃತಿಯ ಲೇಪನ ಮೆರುಗು ತಂದಿದೆ. ಮೊದಲಾರ್ದ ಬೋರ್ ಎನ್ನಿಸಿದರೂ ದ್ವಿತಿಯಾರ್ಧ ಉತ್ತುಮವಾಗಿ ಮೂಡಿಬಂದಿದೆ. ವ್ಯವಹಾರದಲ್ಲಿ ಮುಳುಗಿರುವ ಸ್ನೇಹಿತರು ಹತ್ತು ವರ್ಷಗಳ ನಂತರ ಭೇಟಿಯಾಗುವ ಸಂದರ್ಭಕ್ಕೆ ಪ್ಲಾನ್ ಮಾಡುತ್ತಾರೆ. ಅದರಂತೆ ಎಲ್ಲರೂ ಸೇರುತ್ತಾರೆ. ಆದರೆ ವಿಜಯ್(ದರ್ಶನ್) ಮಾತ್ರ ಒಂದು ಹುಡುಗಿಯ ಲವ್ ನಲ್ಲಿ ಸಿಕ್ಕಿಹಾಕಿಕೊಂಡು ಅವಳಪ್ಪನಿಂದ ಬಿಡಿಸಿಕೊಂಡು ಬರುವಲ್ಲಿಗೆ ಮೊದಲಾರ್ಧ ಕೊನೆಯಾಗುತ್ತದೆ. ಅಷ್ಟರಲ್ಲಿ ಸ್ವಿಜರ್ಲ್ಯಾಂಡಿನ ಕತೆ ತೆರೆದುಕೊಳ್ಳುತ್ತದೆ. ಅದು ಏನೆಂದು ಸಿನಿಮಾದಲ್ಲೇ ನೋಡಬೇಕು. ಕೊನೆಗೂ ಅವನು ಸ್ನೇಹಿತರ ಪಾರ್ಟೀಗೆ ಬಂದು ಸೇರುತ್ತಾನೆ. ಅಲ್ಲಿ ನಡೆಯುವ ಡ್ರಾಮವೇ ನಿಜವಾದ ಸಿನಿಮಾ.

ಕತೆಯಲ್ಲಿ ಪೋಷಕ ಪಾತ್ರಗಳಿಗೆ ಸಮಾನವಾದ ಒತ್ತುಕೊಡದೆ, ಡೀಟೇಲಿಂಗ್ ಮಾಡದೆ ಮುಖ್ಯಪಾತ್ರದ ಸುತ್ತವೇ ಕಥೆ ಓಡುತ್ತದೆ. ಅದೂ ರಿಪಿಟೆಡ್ ಸೀನ್ ಎನ್ನಿಸಿ ನೋಡುಗನಿಗೆ ಬೋರ್ ಹೊಡೆಸುತ್ತದೆ. ಅಂಬರೀಷ್ ಮತ್ತು ದರ್ಶನ್ ಕಾಂಬಿನೇಷನ್ ಸೀನ್ಗಳು ಜನರಿಗೆ ಮನೋರಂಜನೆ ಕೊಡುತ್ತದೆ. ಹೀಗೆ ಸೇರುವ ಸ್ನೇಹಿತರು ತಮ್ಮ ತಮ್ಮ ಮಕ್ಕಳ ಮತ್ತು ಸಂಸಾರದ ಸುಖಃ ದುಃಖವನ್ನು ಹಂಚಿಕೊಳ್ಳುವ ವಿಷಯಗಳು ಅಷ್ಟೇನು ರುಚಿಕಟ್ಟಾಗಿಲ್ಲ.

ಇನ್ನು ಸಂಗೀತದಲ್ಲಿ ಹರಿಕೃಷ್ಣರ ರಾಮನ ಲೆಕ್ಕಕ್ಕಿಂತ ಕೃಷ್ಣನ ಲೆಕ್ಕವೇ ಹೆಚ್ಚಾಗಿದೆ. ಕೇಳಿದ ಹಾಡುಗಳನ್ನೆ ಮತ್ತೆ ಕೇಳುತ್ತಿದ್ದೇವೆ ಎನ್ನಿಸಿ, ಬುಲ್ ಬುಲ್ ಮಾತಾಡಕಿಲ್ವಾ.. ಎಂಬುದು ಮಾತ್ರ ಉಳಿಯುತ್ತದೆ.ಸಂಕಲನ, ಛಾಯಾಗ್ರಹಣ ಸುಮಾರಾಗಿದೆ. ಕವಿರಾಜ್ ಇಲ್ಲಿ ಸಂಭಾಷಣೆಯ ಹೊರೆ ಹೊತ್ತು ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದಾರೆ.

ಅಂಬಿ ವಿಷಯವಾಗಿ ಹೇಳುವ ಅವಶ್ಯಕತೆ ಇಲ್ಲ. ಸೂಪರ್ ಅಭಿನಯ. ದರ್ಶನ್ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದು, ಹೊಸ ಪರಿಚಯದ ನಾಯಕಿ ರಚಿತಾರಾಮ್ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಆದರೂ ಮೊದಲ ಚಿತ್ರದ ಅಳುಕು ಎದ್ದು ಕಾಣುತ್ತದೆ. ಉಳಿದಂತೆ ರಮೇಶ್ ಭಟ್, ರಮ್ಯ ಭಾರನೆ, ಶರತ್ ಲೋಹಿತಾಶ್ವ, ಅಶೋಕ್, ಟೆನಿಸ್ ಕೃಷ್ಣ ಗಮನ ಸೆಳೆಯುತ್ತಾರೆ.

ಒಟ್ಟಾರೆ ಚಿತ್ರ ಮಂದಿರದಲ್ಲಿ ಎರಡೂವರೆ ಗಂಟೆ ಜನರೇನಾದರೂ ಕೂತಿದ್ದರೆ, ಅವರಿಗೆ ದ್ವಿತೀಯಾರ್ಧದ ಕೆಲವು ಸೀನ್ಗಳು ಮಜಾ ಕೊಡಬಹುದು.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited