Untitled Document
Sign Up | Login    
Dynamic website and Portals
  
Home >> Movie Home >> Reviews >> ಪರಾರಿ
Movie Review
ಪರಾರಿ
ಪರಾರಿ ....
Rating :
Hero :
ಶ್ರವಂತ್,ಬುಲೆಟ್ ಪ್ರಕಾಶ್
Heroine :
ಶುಭ ಪೂಂಜ,ಜಾಹ್ನವಿ
Other Cast :
ಬುಲೆಟ್ ಪ್ರಕಾಶ್, ಜಾಹ್ನವಿ, ಶ್ರವಂತ್, ಶುಭ ಪೂಂಜ, ಅರುಣ್ ಸಾಗರ್
Director :
ಕೆ.ಎಂ ಚೈತನ್ಯ
Music Director :
ಅನೂಪ್ ಸೀಳನ್
Producer :
ಸುಮಿತ್ ಕೊಂಬ್ರ
Release Date :
19-04-2013
ಆ ದಿನಗಳು ಅಂತಹ ಸೂಪರ್ ಹಿಟ್ ಮೂವೀ ಕೊಟ್ಟಂತಹ ಕೆ.ಎಂ ಚೈತನ್ಯರವರ ನಿರೀಕ್ಷೆಯ ಚಿತ್ರ ಪರಾರಿ. ಬಹಳ ದಿನಗಳ ನಂತರ ಬಂದರು ನಿರೀಕ್ಷೆಗೇನೂ ಕಡಿಮೆ ಇರಲಿಲ್ಲ. ಕಾರಣ ಚಿತ್ರದ ನಿರ್ದೇಶಕ. ಆ ನಿರೀಕ್ಷೆ ಇಂದಲೇ ಪ್ರೇಕ್ಷಕರು ಪರಾರಿ ಚಿತ್ರವನ್ನು ಆ ದಿನಗಳಿಗಿಂತಲೂ ಚೆನ್ನಾಗಿರಬಹುದು ಎಂದು ಚಿತ್ರಮಂದಿರಕ್ಕೆ ಹೋದರೆ ಪ್ರೇಕ್ಷಕರ ಮನದಲ್ಲಿ ಆ ದಿನಗಳು ಓಕೆ ಪರಾರಿ ಯಾಕೆ? ಎಂಬ ಪ್ರಶ್ನೆ ಮೂಡಬಹುದು. ಕಾರಣ ನಿರೀಕ್ಷೆಗೆ ನಿರ್ದೇಶಕರು ಮೋಸ ಮಾಡಿದ್ದಾರೆ ಎನಿಸುತ್ತದೆ.

ಕಥೆಯ ವಿಚಾರಕ್ಕೆ ಬಂದರೆ ಮೂರು ಯುವಕರು ಕಾಲೇಜಿಗೆ ಹೋಗುತ್ತಿರುತ್ತಾರೆ. ಅದರಲ್ಲಿ ಒಬ್ಬ ಅನಂತ (ಶೃಂಗ) ವಾರಕ್ಕೊಂದು ಹುಡುಗಿಯನ್ನು ಪ್ರೀತಿ ಮಾಡುತ್ತಾನೆ ಅವಳು ಕೈಕೊಟ್ಟಾಗ ಸಾಯುಲು ರೆಡಿಯಾಗುತ್ತಾನೆ ಅಷ್ಟರಲ್ಲಿ ಇನ್ನೊಂದು ಹುಡುಗಿ ಸಿಗುತ್ತಾಳೆ, ಅವಳನ್ನು ಲವ್ ಮಾಡಲು ಶುರು. ಇನ್ನೊಬ್ಬ ಕರಣ್ (ಶ್ರವಂತ್) ಇವನು ಮಾಡೆಲಿಂಗ್ ಮಾಡುತ್ತಿರುತ್ತಾನೆ. ಜೂನಿಯರ್ ಅರ್ಟಿಸ್ಟ್ ಕೂಡ, ಜೊತೆಗೆ ಸೀರಿಯಲ್‌ನಲ್ಲಿ ಸೀತಾ ಮಾತೆಯ ಪಾತ್ರ ಮಾಡುವ ಊರ್ಮಿಳಾ(ಶುಭ ಪೂಂಜ)ನನ್ನು ಲವ್ ಮಾಡುತ್ತಾನೆ. ಕೊನೆಯದಾಗಿ ಮೂರನೆಯವನು ಬೋಪಯ್ಯ, ಪೀಡೆ (ಬುಲೆಟ್ ಪ್ರಕಾಶ್)ಯಾವಾಗಲು ಅಮ್ಮನ ಹತ್ತಿರ ಬೈಯಿಸಿಕೊಳ್ಳುತ್ತಿರುತ್ತಾನೆ. ಒಂದು ದಿನ ಅನಂತನ ಹುಟ್ಟಿದ ದಿನ ಬರುತ್ತದೆ ಆದರೆ ಆಚರಿಸಲು ಯಾರು ಇರುವುದಿಲ್ಲ. ಅದಕ್ಕೆ ಬೇಸರ ಮಾಡಿಕೊಳ್ಳುವಷ್ಟರಲ್ಲಿ ಪೀಡೆ, ಕರಣ್ ಎಲ್ಲಾ ವ್ಯವಸ್ಥೆ ಮಾಡುತ್ತಾರೆ.

ಇಂತಹ ಸಂದರ್ಭದಲ್ಲಿ ಒಬ್ಬ ಸ್ವಾಮಿಜಿ ಬಂದು ಈ ವಯಸ್ಸಿನಲ್ಲಿ ನಿಮಗೆ ಬೇಕಾಗಿರುವುದು ಏನೂ ಅಂತ ನನಗೆ ಗೊತ್ತು, ಅದಕ್ಕೆ ನಾನು ವ್ಯವಸ್ಥೆ ಮಾಡುತ್ತೇನೆ ಎಂದು ದೇವದಾಸಿಯರ ಹಳ್ಳಿಗೆ ಅವರ ಆಸೆಗಳನ್ನು ತೀರಿಸಿಕೊಳ್ಳಲು ಕಳುಹಿಸುತ್ತಾನೆ. ಆಗ ಇವರಿಗೆ ಕೋಆರ್ಡಿನೇಟರ್, ಮಾಮ(ಅರುಣ್ ಸಾಗರ್) ಸಿಕ್ಕು ನೀವು ನನ್ನ ಕೈಗೆ ಸಿಕ್ಕಿದ್ದು ಒಳ್ಳೆದಾಯಿತು ನಾನೇ ಎಲ್ಲಾ ವ್ಯವಸ್ಥೆ ಮಾಡುತ್ತೇನೆ, ನನ್ನದೆ ಹಳ್ಳಿ ಎಂದು ಆ ಹಳ್ಳಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿಗೆ ಹೋದಾಗ ಬುಲೆಟ್ ಕೆಲಸ ಬಾಗಿಲಲ್ಲೆ ಆಗುತ್ತದೆ, ಅನಂತ ಪೆದ್ದು ಏನು ಮಾಡಬೇಕು ಗೊತ್ತಿಲ್ಲ, ಆ ಹುಡುಗಿಯು(ಜಾಹ್ನವಿ) ಏನು ತಿಳಿಯದಂತೆ ನಟಿಸುತ್ತಾಳೆ. ಕರಣ್ ರೂಮಿನಲ್ಲಿ ಊರ್ಮಿಳ ಇವನಿಗೆ ಶಾಕ್. ಬೆಳಿಗ್ಗೆ ಅನಂತ ಮದುವೆಗೆ ರೆಡಿ ಆಗುತ್ತಾನೆ. ಮದುವೆ ನಿಲ್ಲಿಸಿ ಎಂದು ಪೀಡೆ ಉರ್ಮಿಳಳಿಗೆ ಹೇಳುತ್ತಾನೆ. ಮದುವೆ ನಿಲ್ಲಿಸಿ, ಮದುವೆ ಹೆಣ್ಣಿನ ಸಹಿತ ಎಲ್ಲರು ತಪ್ಪಿಸಿಕೊಳ್ಳುತ್ತಾರೆ. ಹೊಟ್ಟೆ ಹಸಿವು ಅಂತ ಡಾಬಾಕ್ಕೆ ಹೋಗುತ್ತಾರೆ, ದುಡ್ಡಿಲ್ಲ. ಅಲ್ಲಿ ಒಂದು ಡೆಡ್ ಬಾಡಿ ಇವರಿಗೆ ತಗಲಾಕಿಕೊಳ್ಳುತ್ತದೆ. ಅದರಿಂದ ಹೇಗೆ ಪರಾರಿ ಆಗುತ್ತಾರೆ, ಅದಕ್ಕಾಗಿ ಅವರು ಏನೇನೂ ಮಾಡುತ್ತಾರೆ. ಕೊನೆಗೆ ಏನಾಗುತ್ತದೆ ಎಂದು ನೀವು ತಿಳಿಯಲು ಪ್ಲೀಸ್ ವಾಚ್ ಪರಾರಿ ಸಿನಿಮಾ.

ಅಭಿನಯದ ವಿಚಾರಕ್ಕೆ ಬಂದರೆ ಶೃಂಗ ಪೆದ್ದುವಾಗಿ ಇಷ್ಟವಾಗುತ್ತಾರೆ, ಬುಲೆಟ್ ಪ್ರಕಾಶ್, ಜಾಹ್ನವಿ, ಶ್ರವಂತ್, ಶುಭ ಪೂಂಜ, ಅರುಣ್ ಸಾಗರ್, ಕೊಟ್ಟ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಉಮಾಶ್ರೀ, ರಂಗಾಯಣ ರಘು ಮತ್ತು ಶರತ್ ಲೋಹಿತಾಶ್ವ ಚಿಕ್ಕ ಪಾತ್ರವನ್ನು ಚೊಕ್ಕವಾಗಿ ಮಾಡಿದ್ದಾರೆ.

ಉಳಿದಂತೆ ಕಥೆ ಒಂದೊಂದು ಕಡೆ ಸೀರಿಯಲ್ ತರಹ ಎನಿಸಿದರೆ, ಕೆಲವು ಕಡೆ ವೇಗವಿದೆ. ಸ್ಕ್ರೀನ್ ಪ್ಲೇ ಅಲ್ಲಲ್ಲಿ ಕೈಕೊಟ್ಟಿದೆ. ಅನೂಪ್ ಸೀಳನ್ ಸಂಗೀತದಲ್ಲಿ ಎರಡು ಹಾಡು ಕೇಳುವಂತಿದೆ. ಬೀಜ,ಬೀಜ ಹಾಡು ಪಡ್ಡೆಗಳಿಗೆ ಖುಷಿ ಕೊಡುತ್ತದೆ. ಕ್ಯಾಮರ ವರ್ಕ್ ಚೆನ್ನಾಗಿದೆ. ಸಂಭಾಷಣೆ ಅಲ್ಲಲ್ಲಿ ಒಂದೊಂದು ಪಟಾಕಿ ಸಿಡಿದಂತೆ ಸಿಡಿಯುತ್ತದೆ.

ವರದಿ: ನಟರಾಜ್ ಎಸ್. ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited