Untitled Document
Sign Up | Login    
Dynamic website and Portals
  
Home >> Movie Home >> Reviews >> ಜಿದ್ದಿ
Movie Review
ಜಿದ್ದಿ
ಅದೇ ಕತೆ 16 ಬಣ್ಣ
Rating :
Hero :
ಪ್ರಜ್ವಲ್ ದೇವರಾಜ್
Heroine :
ಐಂದ್ರಿತ, ಐಶ್ವರ್ಯನಾಗ್
Other Cast :
ಪ್ರಜ್ವಲ್ ದೇವರಾಜ್, ಐಂದ್ರಿತ, ಐಶ್ವರ್ಯನಾಗ್, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಶ್ರೀನಿವಾಸ ಪ್ರಭು, ಅಶೋಕ್ ಮತ್ತಿತರು.
Director :
ಅನಂತರಾಜು
Music Director :
ಗಿರಿಧರ್ ದಿವಾನ್
Producer :
ವಿಜಯ್ ಸುರಾನ
Release Date :
22-03-2013
ಸಾಮಾಜಿಕ ಕಳಕಳಿ ಇಟ್ಟುಕೊಂಡು ಮಾಡುವ ಸಿನಿಮಾಗಳು ಒಂದು ರೀತಿಯಾದರೆ, ಜಿದ್ದಿಯಂತೆ ಸುಮ್ಮನೆ ಮಾಡುವ ಸಿನಿಮಾಗಳು ಒಂದು ರೀತಿ. ಎರಡೂ ಬಗೆಯವು ಜನರಿಗೆ ತಲುಪುವುದು ಕಷ್ಟ. ಮೊದಲನೇ ಬಗೆಯ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ಮಾಡಿ, ಕೆಲವಾರು ಅವಾರ್ಡ್ ‌ಗಳು ಬಂದು, ಸಿನಿಮಾ ಮಾಡಿದವರಿಗೆ ತೃಪ್ತಿ ತಂದು ಕೊಡುತ್ತದೆ. ರಾಷ್ಟ್ರ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಇದೆ ಎಂದು ಹೆಸರಾಗುತ್ತದೆ. ಆದರೆ ಹೀಗೆ ಜಿದ್ದಿಯಂತಹ ಸಿನಿಮಾಗಳು ಯಾರಿಗಾಗಿ ಮಾಡುತ್ತಿದ್ದಾರೋ ಗೊತ್ತಿಲ್ಲ.

ಪ್ರಜ್ವಲ್ ದೇವರಾಜ್ ಚಿತ್ರದ ಕತೆಗಳ ಬಗ್ಗೆ ಯೋಚನೆ ಮಾಡದೆ, ಸುಮ್ಮನೆ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಲೇ ಇದ್ದಾರೆ. ಅವರಾದರೂ ಕಥೆಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಬುದ್ದಿವಂತಿಕೆಯನ್ನು ತೋರಬಹುದು. ಚಿತ್ರರಂಗದ ಅನುಭವ ಇರುವ ಹಿರಿಯ ನಟ ದೇವರಾಜ್ ಅವರ ಮಾರ್ಗದರ್ಶನದಲ್ಲಾದರೂ ನಡೆಯಬಹುದು. ಹೀಗೆ ನಟರು ಬುದ್ದಿವಂತರಾದರೆ ಇಂತಹ ಸಿನಿಮಾ ಮಾಡುವುದನ್ನು ಅವೈಡ್ ಮಾಡಬಹುದು.

ಇನ್ನು ಕತೆಯ ವಿಷಯಕ್ಕೆ ಬಂದರೆ ಅದೇ ಕತೆ 16 ಬಣ್ಣ. ಹಳ್ಳಿಯ ಅಗ್ರಹಾರ. ಅಲ್ಲಿ ಬ್ರಹ್ಮಣ ಕುಟುಂಬದಲ್ಲಿ ಹುಟ್ಟಿ, ಹುಡುಗರಿಗೆ ಮೃದಂಗ ಹೇಳಿಕೊಟ್ಟು, ಬೇಸಿಕ್ ಎಜುಕೇಷನ್ ಮುಗಿಸಿರುವ ನಾಯಕ ಕೃಷ್ಣ(ಪ್ರಜ್ವಲ್), ಅಲ್ಲೇ ಅವನಿಗಾಗೆ ಹುಟ್ಟಿರುವ ಶ್ರೀದೇವಿ(ಐಶ್ವರ್ಯನಾಗ್), ಅಲ್ಲಿಂದ ಬೆಂಗಳೂರಿಗೆ ಇಂಜಿನಿಯರಿಂಗ್ ಓದಲು ಕೃಷ್ಣ ಬರುತ್ತಾನೆ. ಅಲ್ಲಿ ಸಹನ(ಐಂದ್ರಿತ) ಪರಿಚಯ. ಅವಳನ್ನು ಮದುವೆ ಮಾಡಿಕೊಳ್ಳಬೇಕೆಂದಿರುವ ಒಬ್ಬ ದೊಡ್ಡ ರೌಡಿಯ ಮಗ ಸುಧಿ. ಮುಂದಿನದು ನಿಮಗೆ ಗೊತ್ತು. ಅವರ ವೈರತ್ವ, ಗಲಾಟೆ, ಫ್ಯಾಮಿಲಿ ಇಗೋ, ಬೈಕ್ ಕಾರ್ ಚೇಸಿಂಗ್, ಡೂಪ್ ಫೈಟ್, ಇತ್ಯಾದಿ... ಇತ್ಯಾದಿ...

ಚಿತ್ರದಲ್ಲಿ ಒಂದು ಹಾಡು ಹಳೆಯ ಹಾಡಿನಂತೆ ಮಾಡಿದ್ದಾರೆ. ಸಿನಿಮಾದ ಕಥೆಯ ವೇಗಕ್ಕೂ, ಹಾಡಿಗೂ ಸಂಬಂಧವೇ ಇರುವುದಿಲ್ಲ. ಯಾವಾಗ ಬೇಕೆಂದರೆ ಅಲ್ಲಿ ಸೇರಿಸಲಾಗಿದೆ. ಫೈಟ್ಗಳದ್ದೇ ರಾಜ್ಯಭಾರ. ಸ್ಟಾರ್‌ಗಳು ಇರಲಿ ಎಂದು ಶರತ್ ಲೋಹಿತಾಶ್ವ, ಶ್ರೀನಿವಾಸ ಪ್ರಭು, ಅಶೋಕ್, ಸುಚೇಂದ್ರ ಪ್ರಸಾದ್, ಎಲ್ಲರನ್ನು ಬಳಸಿದ್ದಾರೆ. ಅವರು ಆ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಐಂದ್ರಿತಾ ಮತ್ತು ಐಶ್ವರ್ಯನಾಗ್ ಇದ್ದಾರೆ. ಇನ್ನು ಪ್ರಜ್ವಲ್ ಎಂದಿನಂತೆ ತಮ್ಮ ಮಾಮೂಲಿ ಅಭಿನಯ ಮಾಡಿದ್ದಾರೆ. ಒಂದೇ ಗ್ರಾಫ್ ಮೈನ್‌ಟೇನ್ ಮಾಡಿಕೊಂಡು ಬಂದಿದ್ದಾರೆ.

ಕೊಟ್ಟ ಹಣಕ್ಕೆ ಮನರಂಜನೆಸಿಗದೆ, ನೀವು ಜಿದ್ದಿನಿಂದ ಹೊರಬಂದು ಏನಾದರು ಮಾಡುವ ಬದಲು, ಹೊಗದಿರುವುದು ಒಳ್ಳೆಯದು.

ವರದಿ: ನಟರಾಜ್ ಎಸ್ ಭಟ್.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited