Untitled Document
Sign Up | Login    
Dynamic website and Portals
  
Home >> Movie Home >> Reviews >> ಟೋಪಿವಾಲ
Movie Review
ಟೋಪಿವಾಲ
ಟೋಪಿವಾಲ ಚಿತ್ರದ ದೃಶ್ಯ
Rating :
Hero :
ಉಪೇಂದ್ರ
Heroine :
ಭಾವನಾ
Other Cast :
ರಂಗಾಯಣ ರಘು,ಮೈತ್ರಿಯಾ, ರಾಜು ತಾಳಿಕೋಟೆ,ಬಿರಾದರ್, ಅಚ್ಫ್ಯುತ್, ಮಿತ್ರ, ರವಿ ಶಂಕರ,ಮತ್ತಿತರು.
Director :
ಶ್ರೀನಿ
Music Director :
ಹರಿ ಕೃಷಣ
Producer :
ಶ್ರೀಕಾಂತ್
Release Date :
15-03-2013
ಒಂದು ದೇಶಭಕ್ತಿಯ ಅಥವಾ ವ್ಯವಸ್ಥೆಯ ವಿರುದ್ಧ ಹೋರಾಡುವ ನಾಯಕನ ಪಾತ್ರವನ್ನು ರೂಪಿಸುವುದು ಅಷ್ಟು ಸುಲಭವಲ್ಲ. ಅದರಲ್ಲು ಅದನ್ನು ಹ್ಯೂಮರ್ ಇಟ್ಟುಕೊಂಡು ಹೇಳಲು ಹೊರಡುವುದೇ ಒಂದು ದೊಡ್ಡಸವಾಲು. ಎಲ್ಲೋ ರೇಡಿಯೋ ಜಾಕಿಯಾಗಿ ಲಾಜಿಕ್ಕಿಲ್ಲದೆ ಒಡ ಒಡ ಮಾತುಗಳನ್ನಾಡಿಕೊಂಡು, ಟೈಂ ಪಾಸ್ ಮಾಡಿಕೊಂಡಿದ್ದ ಹುಡುಗ, ಅಂಥಹ ವಿಷಯವನ್ನು ಹೇಗೆ ಹ್ಯಾಂಡಲ್ ಮಾಡಬಲ್ಲ ಎಂಬ ಸಣ್ಣ ಅರಿವು ಇಲ್ಲದೆ ನಿರ್ಮಾಪಕರು ದುಡ್ಡು ಹಾಕಿರುವುದು ಅರಗಿಸಿಕೊಳ್ಳಲಾಗದ ವಿಷಯ.

ಉಪ್ಪಿ ಮತ್ತು ರಂಗಾಯಣ ರಘು ಎಂಬ ಎರಡು ದೊಡ್ಡ ಶಕ್ತಿ ಇರುವುದೊಂದೆ ನಿರ್ಮಾಪಕರಿಗೆ ಬ್ರಹ್ಮಾಸ್ತ್ರ. ಆದರೂ ಉಪ್ಪಿ ಇಲ್ಲಿ ಎಡವಿದ್ದಾರೆ. ಸೂಪರ್‌ನಲ್ಲಿ ಎಲ್ಲಿ ಬಿದ್ದಿದ್ದರೋ ಅಲ್ಲೇ ಮತ್ತೆ ಬಿದ್ದಿದ್ದಾರೆ. ಸಿನಿಮಾ ಒಂದು ದೊಡ್ಡ ವಿಷಯವನ್ನು ಹೇಳುತ್ತದೆ ಎಂಬ ಕಳಕಳಿ ಬಿಟ್ಟರೆ ಇನ್ಯಾವುದು ಗಮನಿಸಬೇಕಾದ ಅಂಶ ಇಲ್ಲ. ಒಬ್ಬ ವ್ಯವಸ್ಥೆಯ ವಿರುದ್ಧ ಹೋರಾಡುವ ಪಾತ್ರವೇ ಕಳ್ಳ. ಅವನದ್ದೇ ಗುಂಪು ಮಾಡಿಕೊಂಡು ಪೋಲಿಸ್ ವೇಷದಲ್ಲಿ ನಗರವನ್ನೆಲ್ಲ ದೋಚುತ್ತಿರುತ್ತಾರೆ. ಅಲ್ಲೇ ನಾಯಕತ್ವ ಬಿದ್ದು ಹೋಗುತ್ತದೆ. ಡಿಫರೆಂಟಾಗಿ ಹೇಳುತ್ತೇವೆ ಎಂಬ ಓವರ್ ಕಾನ್ಪಡೆನ್ಸ್ ಸಿನಿಮಾದ ಜೀವಾಳವನ್ನು ಹಾಸ್ಯಾಸ್ಪದ ಮಾಡಿಬಿಡುತ್ತದೆ. ಇಂತಹ ಚಿತ್ರಗಳನ್ನು ಮಾಡುವ ಮುನ್ನ ಕಡ್ಡಾಯವಾಗಿ ಇಂಡಿಯನ್, ಅನ್ನಿಯನ್, ಜಟ್ಲಮನ್, ಕನ್ನಡದ ’ಅಂತ’ ವೀರಪ್ಪನಾಯಕ, ಚಿತ್ರಗಳನ್ನು ನೋಡಿ ಅನುಭವವನ್ನು ಪಡೆಯಬಹುದು, ಪಾತ್ರ ಪೋಷಣೆ ಬಗ್ಗೆ ಹಿರಿಯರಿಂದ ಪಾಠ ಕಲಿಯಬಹುದು.

ಕಥೆಯ ವಿಷಯವಾಗಿ ಬಂದರೆ ಸ್ವಿಸ್ ಬ್ಯಾಂಕಿನಲ್ಲಿರುವ ಭಾರತದ ರಾಜಕಾರಣಿಗಳ ಬ್ಲಾಕ್ ಮನಿಯನನ್ನು ಭಾರತಕ್ಕೆ ತರುವುದು. ಅದಕ್ಕಾಗಿ ಒಂದಷ್ಟು ಕೋಡ್ ವರ್ಡ್. ಅದನ್ನು ಭೇದಿಸಿಕೊಂಡು ಹೋಗುವ ಬಜಕ್(ಉಪ್ಪಿ). ಅದಕ್ಕೆ ಸಹಕಾರ ನೀಡುವ ನಾಯಕಿ(ಭಾವನ). ಅದನ್ನು ಬೆನ್ನಟ್ಟುವ ಪೋಲಿಸ್(ರಂಗಾಯಣ ರಘು) ಮತ್ತು ಸರ್ಕಾರ್(ರವಿಶಂಕರ್) ಎಂಬ ರಾಜಕಾರಣಿಗಳ ಗುಂಪಿನ ನಾಯಕ. ಈ ಮೂವರ ನಡುವೆ ಸ್ವಿಸ್ ಬ್ಯಾಂಕ್‌ನ ಬ್ಲಾಕ್ ಮನಿ ಭಾರತಕ್ಕೆ ಬರುತ್ತದೆಯೋ, ಬರುವುದಿಲ್ಲವೋ ಎಂಬುದು ಕಥೆಯ ವಿಷಯ. ಮಿಕ್ಕಿದ್ದು... ನೀವು ಉಪ್ಪಿ ಅಭಿಮಾನಿಯಾಗಿದ್ದರೆ ಚಿತ್ರ ಮಂದಿರದಲ್ಲಿ ನೋಡಬಹುದು. ನಿಜವಾದ ಟೋಪಿವಾಲ ಯಾರೆಂದು ತಿಳಿಯಬಹುದು.

ಎಲ್ಲಾ ವಿಷಯವನ್ನು ಕಮರ್ಶಿಯಲ್ ಕಮ್ ಹ್ಯೂಮರ್ ಆಗಿ ಹೇಳುವ ಬರದಲ್ಲಿ ಒಳ್ಳೆಯ ವಿಷಯಕ್ಕೆ ಅನ್ಯಾಯ ಮಾಡಿದಂತಾಗಿದೆ. ಸಿನಿಮಾ ನೋಡಿ ನಕ್ಕು ಹೋಗಬಹುದೇ ವಿನಹ ಮನನಾಟುವ ಅಂಶಗಳು ಉಳಿಯುವುದಿಲ್ಲ. ಸೀನ್‌ಗಳ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ಬೇರೆ ಬೇರೆ ಚಿತ್ರಗಳ ದೃಶ್ಯಗಳನ್ನೆ ಸ್ಫೂಫ್ ಮಾಡಲಾಗಿದೆ. ವಿಶೇಷವಾಗಿ ಶೋಲೆ, ಜೋಗಿ, ಆಪರೇಷನ್ ಅಂತ, ಎ, ಹೀಗೆ ಹಲವಾರು ಚಿತ್ರಗಳ ದೃಶ್ಯವನ್ನು, ಹಿನ್ನೆಲೆ ಸಂಗೀತ ಬಳಸಿಕೊಳ್ಳಲಾಗಿದೆ. ಸ್ಫೂಫ್ ಮಾಡಿ ಹೇಳುವಾಗ ಅದನ್ನು ಹಾಸ್ಯವೆಂತಲೆ ಜನರು ತೆಗೆದುಕೊಳ್ಳುತ್ತಾರೆ ಹೊರತು, ತುಂಬಾ ಸೀರಿಯಸ್ಸಾಗಿ ಪರಿಗಣಿಸುವುದಿಲ್ಲ. ವ್ಯವಸ್ಥೆಯ ವಿರುದ್ದ ನಾಯಕ ಎಷ್ಟೇ ಹೋರಾಡಿದರು ಅದು ಮಣ್ಣುಪಾಲಾಗುತ್ತದೆ.

ಈ ಚಿತ್ರದಲ್ಲಿ ಹರಿಕೃಷ್ಣರ 4 ಹಾಡುಗಳಿದ್ದು ಟೋಪಿವಾಲ, ಮಳ್ಳಿ ಮಳ್ಳಿ ಹಾಡು ಸೀಟಿ ಗಿಟ್ಟಿಸಿಕೊಳ್ಳುತ್ತದೆ. ಶ್ರೀಶ ಕೂದುವಳಿ ಕ್ಯಾಮರ ಪರವಾಗಿಲ್ಲ. ಒಂದು ಸಾಹಸ ದೃಶ್ಯ ಸೂಪರ್. ನಿರ್ದೇಶಕ ಶ್ರೀನಿ ಸಂಭಾಷಣೆಯಲ್ಲಿ ಉಪ್ಪಿಯ ಪ್ಲೇವರ್ ಕಂಡುಬರುತ್ತದೆ. ಉಪ್ಪಿಯ ಅಭಿನಯ ಯತಾವತ್ತಾಗಿ ಕಾಯ್ದುಕೊಂಡಿದ್ದಾರೆ, ಭಾವನ ಚಿತ್ರಕ್ಕೆ ಕಲರ್ ಕೊಡುತ್ತಾರೆ. ರಂಗಾಯಣ ರಘು ಪಾತ್ರಕ್ಕೆ ತಕ್ಕ ಜೀವ ಒದಗಿಸಿದ್ದಾರೆ. ಹೇಳಬೇಕೆಂದರೆ ರಘು ಇರುವ ಎಲ್ಲಾ ಸೀನ್‌ಗೆ ಚಪ್ಪಾಳೆ ಗಿಟ್ಟುತ್ತದೆ. ಬಿರಾದರ್ ಒಳ್ಳೆಯ ಅಭಿನಯ. ರವಿಶಂಕರ್‌ರ ಗಬ್ಬರ್ ಸಿಂಗ್ ಪಾತ್ರ ಚೆನ್ನಾಗಿದೆ. ಅಚ್ಯುತ್, ರಾಜು ತಾಳಿಕೋಟೆ, ಮಿತ್ರ ಚೆನ್ನಾಗಿ ಅಭಿನಯಿಸಿದ್ದಾರೆ.

ವರದಿ: ನಟರಾಜ್ ಎಸ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited