Untitled Document
Sign Up | Login    
Dynamic website and Portals
  
Home >> Movie Home >> Reviews >> ಸಿಂಪ್ಲಲಾಗ್ ಒಂದ್ ಲವ್ ಸ್ಟೋರಿ
Movie Review
ಸಿಂಪ್ಲಲಾಗ್ ಒಂದ್ ಲವ್ ಸ್ಟೋರಿ
ಸಿಂಪ್ಲಿ ಬ್ಯೂಟಿಫುಲ್ ಸ್ಟೋರಿ...
Rating :
Hero :
ರಕ್ಷಿತ್ ಶೆಟ್ಟಿ
Heroine :
ಶ್ವೇತ ಶ್ರೀ ವಾತ್ಸವ್
Other Cast :
ನರೇಂದ್ರಬಾಬು, ರಚನ ಮುಂತಾದವರು.
Director :
ಸುನಿ
Music Director :
ಬಿ.ಜೆ, ಭರತ್
Producer :
ಹೇಮಂತ್, ಸುನಿ
Release Date :
08-03-2013
ಕೇವಲ ಟ್ರೈಲರ್‌ನಿಂದಲೆ ಕಾಲೇಜು ಪಡ್ಡೆಗಳ ಮನಸ್ಸನ್ನು ಒಳಗೊಳಗೆ ನಕ್ಕು ನಗಿಸಿದ, ಹುಡುಗಿಯರ ಕೆಂದುಟಿಯಲ್ಲಿ ಕಿಲ ಕಿಲ ಮಂದಹಾಸ ತಂದು, ಆರು ತಿಂಗಳಿನಿಂದ ನೋಡುವ ನಿರೀಕ್ಷೆಯನ್ನು ಹುಟ್ಟುಹಾಕಿದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರ ಇಂದು ಯಶಸ್ವಯಾಗಿ ನೋಡುಗರ ಮನಸ್ಸನ್ನು ತಣಿಸಿದೆ.

ಯುವ ಪೀಳಿಗೆಯ ನಿರ್ದೇಶಕ ’ಸುನಿ’ ಹೊಸ ಆಯಾಮದೊಂದಿಗೆ ಬಂದಿರುವುದು ಖುಷಿಯ ಸಂಗತಿ. ಕಥೆ ಹೇಳುವ ವಿಧಾನದಲ್ಲಿ ಲವ ಲವಿಕೆ ಉಳಿಸಿಕೊಂಡು, ಮಾತುಗಳಲ್ಲಿ ನೋಡುಗರನ್ನು ರಂಜಿಸುತ್ತಾ, ಬಗೆ ಬಗೆಯ ಮೂಡ್ ಇಟ್ಟುಕೊಂಡು, ಹಳತಿನ ಪೊರೆ ಕಳಚುತ್ತಾ... ಒಂದು ಸುಂದರವಾದ ಲವ್ ಸ್ಟೋರಿ ಹೇಳಿರುವುದಕ್ಕೆ ನಿಜವಾಗಿಯು ಪ್ರಶಂಸಿಸಬೇಕು. ಕೆಲವು ಕಡೆಗಳಲ್ಲಿ ಬಳಸಿರುವ ಡಬ್ಬಲ್ ಮೀನಿಂಗ್ ಡೈಲಾಗ್ ಸೀಟಿ ಗಿಟ್ಟಿಸಿಕೊಳ್ಳುತ್ತದೆ. ಮನೋಹರ್ ಜೋಷಿ ಛಾಯಾಗ್ರಹಣ ಮುದ್ದಾಗಿದ್ದು, ಕಲ್ಲರ್ ಗ್ರೇಡಿಂಗ್ ಚೆನ್ನಾಗಿ ಮಾಡಿದ್ದಾರೆ.

ಇದು ನಿರ್ದೇಶಕರು ಹೇಳಿರುವಂತೆ ಸಿಂಪಲ್ಲಾಗ್ 'ಒಂದು' ಲವ್ ಸ್ಟೋರಿ ಅಲ್ಲ. ಸಿಂಪಲ್ಲಾಗ್ 'ಎರಡು' ಸ್ಟೋರಿ. ಚಿತ್ರದಲ್ಲಿ ಎರಡು ಪ್ರೇಮ ಕಥೆಗಳು ತೆರೆದುಕೊಳ್ಳುತ್ತದೆ. ಒಂದು ನಾಯಕನದ್ದು(ಕುಶಾಲ್-ರಕ್ಷಿತ್), ಮತ್ತೊಂದು ನಾಯಕಿಯದ್ದು(ಖುಷಿ-ಶ್ವೇತ). ಈ ಎರಡು ಸ್ಟೋರಿಯನ್ನು ಬಿಟ್ಟು ಮತ್ತೊಂದು ಪ್ರೇಮ ಪ್ರಸಂಗ ನಾಯಕ ನಾಯಕಿಯ ನಡುವೆ ನಡೆಯುತ್ತದೆ. ಅಯ್ಯೋ ಮೂರು ಸ್ಟೋರಿ ಅಂಥಾ ಗಾಬರಿ ಆಗಬೇಕಿಲ್ಲ. ಎಲ್ಲಾ ಕತೆಗಳು ತನ್ನದೇ ತೂಕ ಮತ್ತು ಸ್ವಾರಸ್ಯ ಉಳಿಸಿಕೊಂಡಿದೆ. ಕಥೆ ಹೇಳಲು ಚೆನ್ನಾಗಿರುವುದಿಲ್ಲ. ಚಿತ್ರ ಮಂದಿರಕ್ಕೆ ಹೋಗಿ ನೋಡಿದರೆ ಅದರ ಸ್ವಾದ ಅನುಭವಿಸಬಹುದು. ಕೊಟ್ಟ ಹಣಕ್ಕೆ ಮೋಸವಿಲ್ಲ. ಸಾಕಷ್ಟು ಮನರಂಜನೆ ಇದೆ.

ಈ ಚಿತ್ರ ಮುಂಗಾರು ಮಳೆಯ ಪ್ಲೇವರ್ ಇದ್ದು, ಮತ್ತೊಂದು ಮುಂಗಾರು ಮಳೆ ಆನ್ನಬಹುದು. ಅಂದರೆ ನಿಂರಂತರವಾಗಿ ಮಾತನಾಡುವ ನಾಯಕ, ಚಿನಕುರಳಿಯಂತೆ ಕೌಂಟರ್ ಕೊಡುವ ನಾಯಕಿ. ಹೀಗೆ ಸಂದರ್ಭಕ್ಕೆ ತಕ್ಕಂತೆ ಮಳೆ, ಬೇಸಿಗೆ, ಚಳಿ ಋತುಮಾನಗಳು ಬೆಂಬಲಿಸುವ ಸೂಕ್ಷ್ಮ ಎಳೆಯನ್ನು ಅಂಡರ್ ಪ್ಲೇ ಮಾಡಿ ಜನರಿಗೆ ನೀಡುವುದಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ. ಇದಾವುದನ್ನು ಗಮನಿಸಲು ಆಸಕ್ತಿ ಇಲ್ಲದ ಜನರಿಗೆ ಡೈಲಾಗ್ ಫುಲ್ ಮನರಂಜನೆ ನೀಡುತ್ತದೆ. ಮೊದಲಿನಿಂದಲೂ ನಾಯಕ ನಾಯಕಿ ಮಾತೂ ಮಾತೂ ಎನಿಸಿದರೂ ಕೊನೆಯಲ್ಲಿ ಕಟ್ಟಿಕೊಟ್ಟಿರುವ ಕ್ಲೈಮ್ಯಾಕ್ಸ್ ಎಲ್ಲದ್ದಕ್ಕೂ ಸಮಜಾಯಿಷಿ ನೀಡುತ್ತದೆ.

ಬಿ.ಜೆ ಭರತ್ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳಲ್ಲಿ ಎರಡು ಹಾಡುಗಳು ಚೆನ್ನಾಗಿದೆ. ಅದನ್ನು ಚೆನ್ನಾಗಿ ಚಿತ್ರಿಸಿ ಕೊಟ್ಟಿದ್ದಾರೆ. ಲೊಕೇಶನ್ - ಚಿತ್ರ ಸುಂದರವಾಗಿ ಮೂಡಿಬರಲು ಸಾಧ್ಯವಾಗಿದೆ. ರಕ್ಷಿತ್ ಶೆಟ್ಟಿ, ಶ್ವೇತಾ ಶ್ರೀವಾತ್ಸವ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಇಬ್ಬರ ಮೇಲೆ ಚಿತ್ರ ನಿಂತಿರುವುದಾದರು ಅದನ್ನು ಸಮರ್ಥವಾಗಿ ಅಭಿನಯಿಸಿ ಬೊರಿಂಗ್ ಎನಿಸದಂತೆ ಕಾಯ್ದುಕೊಂಡಿದ್ದಾರೆ. ರಕ್ಷಿತ್‌ಗೆ ಒಳ್ಳೆ ಬ್ರೇಕ್ ಕೊಡುವ ಚಿತ್ರ ಇದಾಗಿದೆ.

ಒಂದು ಚಿತ್ರವೆಂದಮೇಲೆ ಮೈನೆಸ್ ಪಾಯಿಂಟ್ ಇದ್ದೇ ಇರುತ್ತದೆ. ಅಂತಹವುಗಳೆಂದರೆ.. ಶ್ರೀನಗರ ಕಿಟ್ಟಿಯ ಪಾತ್ರ ಸುಮ್ಮನೆ ಪೇಜ್‌ಗಟ್ಟಲೆ ಡೈಲಾಗ್ ಹೊಡೆದು ಹೋಗುವುದು, ಸೀನ್‌ಗಳಲ್ಲಿ ಡ್ರಾಮಾ ಕ್ರಿಯೇಟ್ ಆಗದಿರುವುದು, ಎಲ್ಲಾ ಪಾತ್ರಗಳು ಒಂದೇ ರೀತಿ ಮಾತಾಡುವುದು ಮನೋಟಮಿ ಎನ್ನಿಸುತ್ತದೆ.

ನಿರ್ದೇಶಕ ಸುನಿ ಮುಂದಿನ ಚಿತ್ರಗಳಲ್ಲಿ ಈ ಕೆಲವಾರು ಸೂಕ್ಷ್ಮ ವಿಷಯಗಳ ಕಡೆ ಗಮನ ಹರಿಸಿ ಮತಷ್ಟು ವಿಭಿನ್ನ ಚಿತ್ರಗಳನ್ನು ಕೊಡಲಿ. ಚಿತ್ರ ತಂಡಕ್ಕೆ ಶುಭವಾಗಲಿ.

ವರದಿ: ನಟರಾಜ್ ಎಸ್ ಭಟ್.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited