Untitled Document
Sign Up | Login    
Dynamic website and Portals
  
Home >> Movie Home >> Reviews >> ರಜನಿಕಾಂತ
Movie Review
ರಜನಿಕಾಂತ
ಗಿಮಿಕ್ ಇಲ್ಲದ ರಜನಿಕಾಂತ
Rating :
Hero :
ದುನಿಯಾ ವಿಜಿ
Heroine :
ಐಂದ್ರಿತಾ
Other Cast :
ವಿಜಯ್, ಐಂದ್ರಿತಾ, ಜಸ್ವೀರ್, ರೇಖಾ, ಬುಲೇಟ್ ಪ್ರಕಾಶ್, ಮತ್ತಿತರರು.
Director :
ಪ್ರದೀಪ್ ರಾಜ್
Music Director :
ಅರ್ಜುನ್ ಜನ್ಯ
Producer :
ಕೆ.ಮಂಜು
Release Date :
01-03-2013
ದುನಿಯಾ ವಿಜಯ್‌ರವರ ಸಿನಿಮಾ ರಜನಿಕಾಂತ ಬಹಳ ನಿರೀಕ್ಷೆ ಹುಟ್ಟಿಸಿತ್ತು. ಇದಕ್ಕೆ ಎರಡು ಕಾರಣಗಳಿದ್ದವು, ಒಂದು, ಬಹಳ ದಿನಗಳ ನಂತರ ತೆರೆಗೆ ಬರುತ್ತಿರುವ ವಿಜಯ್. ಎರಡು, ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ. ಬಹಳ ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡಿದ ಪ್ರೇಕ್ಷಕರಿಗೆ ಸ್ವಲ ಸಿಹಿ, ಹೆಚ್ಚು ಕಹಿಯಾಗುವುದು ಖಂಡಿತ.

ಇನ್ನು ಕಥೆಯ ವಿಚಾರಕ್ಕೆ ಬಂದರೆ ವಿಜಯರವರನ್ನು ದ್ವಿಪಾತ್ರದಲ್ಲಿ ತೋರಿಸಿರುವ ಕೀರ್ತಿ ನಿರ್ದೇಶಕ ಪ್ರದೀಪ್ ರಾಜ್‌ರವರಿಗೆ ಸಲ್ಲುತ್ತದೆ. ಗಂಡನಿಲ್ಲದ ಟೀಚರ್ ಒಬ್ಬಳ ಮಕ್ಕಳಾಗಿ ವಿಜಯ್ ಎರಡು (ರಜನಿ ಮತ್ತು ಕಾಂತ)ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸೀಳು ತುಟಿ, ಮುಗ್ಧ ಆದರೆ ಓದಿನಲ್ಲಿ ಮುಂದು ರಜನಿ ಪಾತ್ರ. ಇನ್ನು ಕಾಂತ ಪಾತ್ರದಲ್ಲಿ ಜಂಗ್ಲಿಯ ವಿಜಯ್ ಕಾಣಿಸುತ್ತಾರೆ. ಅಮ್ಮನಿಗೆ ರಜನಿ ಮೇಲೆ ಪ್ರೀತಿ ಜಾಸ್ತಿ, ಅದೇ ಕಾಂತನಿಗೆ ಕಿರಿಕಿರಿಯಾಗುತ್ತದೆ. ಆದರೂ ಜೊತೆಯಲ್ಲೇ ಓದುತ್ತಾರೆ. ಇದರ ನಡುವೆ ಪ್ರಿಯಾ(ಐಂದ್ರಿತಾ ರೈ) ಬಬ್ಲಿ ಪಾತ್ರದಲ್ಲಿ ಎಂಟ್ರಿ, ಇಬ್ಬರು ಅವಳನ್ನು ಇಷ್ಡಪಡುತ್ತಾರೆ. ಪ್ರಿಯಾಳಿಗೆ ಒಬ್ಬ ಅಣ್ಣ ಇರುತ್ತಾನೆ ಅವನೇ ವಿಲನ್, ಕೆಲ ದಿನಗಳು ಕಾಂತ ಅವನ ಜೊತೆ ಕೆಲಸಮಾಡುತ್ತಾನೆ. ಮಿಕ್ಕಿದ್ದು ನಿಮಗೇ ಗೊತ್ತಿದೆ.

ಇಲ್ಲಿ ಅಣ್ಣ, ತಮ್ಮರ ನಡುವಿನ ಪ್ರೀತಿಯನ್ನು ಹೇಳಲೇಬೇಕು. ಅಣ್ಣನಿಗೋಸ್ಕರ ತಮ್ಮ ಪ್ರೀತಿಸಿದ ಹುಡುಗಿಯನ್ನು ಮರೆಯಲು ಯತ್ನಿಸುತ್ತಾನೆ. ತಮ್ಮನು ಕೂಡ ಅದೇ ಪ್ರಯತ್ನ ಮಾಡುತ್ತಾನೆ. ಕೆಲವು ಭಾವನಾತ್ಮಕ ಸನ್ನಿವೇಶಗಳು ಇಷ್ಟವಾಗುತ್ತವೆ.
ಧಾರಾವಾಹಿ ತರದ ಸ್ಕ್ರೀನ್ ಪ್ಲೇ, ಅಲ್ಲಲ್ಲಿ ಎಡವಿದ ಸಂಭಾಷಣೆ, ಕೂತೂಹಲಕಾರಿ ಅಂಶಗಳ ಅಭಾವ, ಸಿನಿಮಾದ ಮೈನೆಸ್ ಪಾಯಿಂಟ್. ಸುಂದರವಾಗಿ ಕಾಣುವ ಐಂದ್ರಿತಾ, ಅರ್ಜುನ್ ಜನ್ಯರಾ ಸಂಗೀತದಲ್ಲಿ ಮೂಡಿಬಂದಿರುವ 2 ಹಾಡುಗಳು ಪ್ಲಸ್ ಪಾಯಿಂಟ್. ಮಿಕ್ಕೆಲ್ಲವೂ ಪರವಾಗಿಲ್ಲ ಎನ್ನುವಂತಿದೆ.

ಅಭಿನಯಕ್ಕೆ ಬಂದೆರೆ : ಸೀಳು ತುಟಿಯ ಹಾಗೂ ಅಣ್ಣನ (ರಜನಿ) ಪಾತ್ರದಲ್ಲಿ ವಿಜಯ್, ಬುದ್ದಿಮಾಂದ್ಯನ ಪಾತ್ರದಲ್ಲಿ ಬುಲೆಟ್ ಪ್ರಕಾಶ್, ದಿ|| ಕರಿಬಸವಯ್ಯ , ಅಮ್ಮನ ಪಾತ್ರಧಾರಿ(ರೇಖ) ಇಷ್ಟವಾಗುತ್ತಾರೆ.

ಅಂತಾ ಏನೂ ವಿಶೇಷವಿದಿದ್ದರೂ, ಸುಮ್ಮನೆ ಒಂದು ಬಾರಿ ಸಿನಿಮಾ ನೋಡಿ ಪರವಾಗಿಲ್ಲ ಎನ್ನಬಹುದು.

ವರದಿ: ನಟರಾಜ್ ಎಸ್ ಭಟ್.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited