Untitled Document
Sign Up | Login    
Dynamic website and Portals
  
Home >> Movie Home >> Reviews >> ಈ ಭೂಮಿ ಆ ಭಾನು
Movie Review
ಈ ಭೂಮಿ ಆ ಭಾನು
ಈ ಭೂಮಿ ಆ ಭಾನು ಚಿತ್ರದಲ್ಲಿ ಅಜಿತ್ ಮತ್ತು ಶರಣ್ಯ ಮೋಹನ್
Rating :
Hero :
ಅಜಿತ್
Heroine :
ಶರಣ್ಯ ಮೋಹನ್
Other Cast :
ಸಂಗೀತ,ಸುರೇಶ್ ಹೆಬ್ಳಿಕರ್,ಶರಣ್
Director :
ವೇಣುಗೋಪಾಲ್
Music Director :
ಪ್ರೇಮ್ ಕುಮಾರ್
Producer :
ಶ್ರಿಷ್ಟಿ ದಿ ರಿಯೇಶನ್
Release Date :
11-01-2013
ಕನ್ನಡಕ್ಕೆ ಮತ್ತೊಂದು ಪ್ರೇಮ ಕಥೆ. ಪ್ರೇಮವನ್ನು ಹೊರತುಪಡಿಸಿ ನಿರ್ಮಾಪಕರು, ನಿರ್ದೇಶಕರು, ಕಥೆಗಾರರು ಎಂದು ಯೋಚಿಸುತ್ತಾರೋ...? ಆ ದೇವರಿಗೇ ಗೊತ್ತು.! ಆದರೂ ಮೇಲಿಂದ ಮೇಲೆ ಪ್ರೇಮಕಥೆಗಳದ್ದೆ ರಾಜ್ಯಭಾರ...!
ಪ್ರೇಮ ಕಥೆಗಳನ್ನು ಹೇಳುವ ಹಲವಾರು ಚಿತ್ರಗಳು ಬಂದಿದ್ದಾದರೂ, ಈ ಭೂಮಿ ಆ ಭಾನು ಎಲ್ಲಾ ಕಥೆಗಳಿಂದ ಹೊರನಿಂತು, ತನ್ನದೇ ಆದ ಛಾಪನ್ನು ತೋರಿಸುತ್ತದೆ. ಕಥೆಯ ವಿಷಯವಾಗಿ ಮಾತ್ರಾ ಉತ್ತಮವಾಗಿರುವ ಈ ಚಿತ, ಅದನ್ನು ತೆರೆಯ ಮೇಲೆ ತೋರಿಸುವಲ್ಲಿ ಪ್ರೇಕ್ಷನ ಸಹನೆಯನ್ನು ಪರೀಕ್ಷಿಸುತ್ತದೆ.

ಹಾಡುವ ಹುಡುಗ ಭಾನು..(ಅಜಿತ್), ಆತನ ಪ್ರೀತಿಗೆ ಹಂಬಲಿಸುತ್ತಿರುವ ಎದುರುಮನೆ ಹುಡುಗಿ ಭೂಮಿ(ಶರಣ್ಯ ಮೋಹನ್). ಇಬ್ಬರ ನಡುವೆ ಪ್ರೇಮಾಂಕುರ. ವಿರೋಧಿಸುವ ಹುಡುಗಿಯ ಅಮ್ಮನಿದ್ದರೂ ಮದುವೆಯಾಗುವ ಪ್ರೇಮಿಗಳು. ಹಗಲು ಕೆಲಸಮಾಡುವ ಭೂಮಿ, ರಾತ್ರಿ ಹಾಡಿ ಸುಸ್ತಾಗಿ ಬರುವ ಭಾನು, ಇಬ್ಬರ ನಡುವೆ ಇದ್ದಕ್ಕಾಗಿ ಜಗಳವಾಗಿ ಬೇರೆಯಾಗುತ್ತಾರೆ. ನಂತರದಲ್ಲಿ ಭಾನುವಿಗಾಗಿ ಕಾಯುತ್ತಿರುವ ಭೂಮಿಗೆ, ತನ್ನ ಕಾಲ ಮೇಲೆ ನಿಲ್ಲಲು ಒಂದು ರೇಡಿಯೋ ಕಾರ್ಯಕ್ರಮ ಮೂಲಕ ಪ್ರೇರೇಪಿಸುವ ಭಾನು. ಜನರಿಂದ ಆ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ. ಹೀಗೆ ಸಾಗುವ ಕಥೆ ಭೂಮಿ, ಬಾನು ಒಂದಾಗುತ್ತಾರೆಯೇ...? ಇಲ್ಲವೇ ಎಂದು.... ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ನೋಡಿ.

ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ೩ಹಾಡುಗಳು ಚಿತ್ರದೊಂದಿಗೆ ಚೆನ್ನಾಗಿ ಮೇಳೈಸಿವೆ. ಉಳಿದವು ಅಬ್ಬರದ ಬಡಿತಗಳಿಲ್ಲದೆ ಶ್ರಾವ್ಯವಾಗಿದೆ. ಸಂಗೀತ ನಿರ್ದೇಶಕ ಪ್ರೇಮ್ ಕುಮಾರ್ ಮತ್ತಷ್ಟು ಕೃಷಿ ಮಾಡಿದಲಿ, ಮುಂಬರುವ ದಿನಗಳಲ್ಲಿ ಮಧುರವಾದ ಸಂಗೀತ ನೀಡುವುದಲ್ಲಿ ಅನುಮಾನವಿಲ್ಲ. ಛಾಯಾಗ್ರಹಣ ಅಂಥಾ ಗಮನ ಸೆಳೆಯದಿರುವುದು ಚಿತ್ರಕ್ಕೆ ಮೈನೆಸ್ ಪಾಯಿಂಟ್. ಸಂಭಾಷಣೆ ಕೇವಲ ಮಾತುಗಳಾಗಿದೆ, ಚಿತ್ರವನ್ನು ಉತ್ತಮವಾಗಿ ಹೆಣೆಯುವಲ್ಲಿ ಮಲ್ಲಿಕಾರ್ಜುನ್ ವಿಫಲವಾಗಿದ್ದಾರೆ, ಹಾಗು ಅದನ್ನು ಚಿತ್ರಿಸಿಕೊಡುವ ಜವಾಬ್ದಾರಿ ಹೊತ್ತಿರುವ ನಿರ್ದೇಶಕ ವೇಣುಗೋಪಾಲ್ ಹೆಣೆದ ಹಗ್ಗದಲ್ಲಿ ಎಡವಿದ್ದಾರೆ. ಮತ್ತಷ್ಟು ಕೃಷಿ ಮಾಡಿದಲಿ, ಹೋಮ್‌ವರ್ಕ್ ಮಾಡಿದಲ್ಲಿ ಕನ್ನಡ ಚಿತ್ರ ರಂಗಕ್ಕೆ ಬರವಸೆಯ ನಿರ್ದೇಶಕರಾಗುವುದರಲ್ಲಿ ಅನುಮಾನವಿಲ್ಲ.
ಅಜಿತ್ ಪಾತ್ರಕ್ಕೆ ಜೀವತುಂಬಿದ್ದರೂ, ಶರಣ್ಯ ಮೋಹನ್ ಎದುರು ಬಿದ್ದು ಬಿಡುತ್ತಾರೆ, ಉತ್ತಮವಾಗಿ ಅಭಿನಯಿಸಿರುವ ನಾಯಕಿ ಶರಣ್ಯ ಕನ್ನಡದಲ್ಲೇ ಉಳಿದರೆ, ಉತ್ತಮ ನಾಯಕಿಯ ಸ್ಥಾನಗಳಿಸುತ್ತಾರೆ. ಸಂಗೀತ ಹಾಗು ಸುರೇಶ್ ಹೆಬ್ಳಿಕರ್ ಕೊಟ್ಟ ಪಾತ್ರಕ್ಕೆ ಮೋಸ ಮಾಡಿಲ್ಲ. ಕಾಮಿಡಿಗೆಂದೆ ಇರುವ ಶರಣ್ ಹಾಗು ಮಿತ್ರ ಅಷ್ಟೇನು ಗಮನ ಸೆಳೆಯುವುದಿಲ್ಲ.

ಮಹಿಳಾ ಸಬಲೀಕರಣದ ಮೆಸೇಜ್ ಇಟ್ಟುಕೊಂಡು, ಅದರಲ್ಲಿ ಒಳ್ಳೆ ಲವ್ ಸ್ಟೋರಿ ಹೆಣೆದು, ನಾಯಕಿಯನ್ನು ಸಭ್ಯವಾಗಿ ತೋರಿಸಿ, ಅಶ್ಲೀಲತೆಯ ಸೋಂಕಿಲ್ಲದೆ ’ಪ್ಯೂರ್ ವೆಜ್’ ಚಿತ್ರವನ್ನು ಪ್ರೇಕ್ಷರಿಗೆ ತಲುಪಿಸಲು ಹೊರಟಿರುವ ಚಿತ್ರ ತಂಡದ ಹಂಬಲ, ಚಿತ್ರವನ್ನು ಸೀರಿಯಲ್‌ನಂತೆ ಎಳೆಯದಿದ್ದರೆ ಚೆಂದವಿರುತ್ತಿತ್ತು

ವರದಿಃ ನಟರಾಜ್ ಎಸ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited