Untitled Document
Sign Up | Login    
Dynamic website and Portals
  
Home >> Movie Home >> Reviews >> ದೇವನ ಹಳ್ಳಿ
Movie Review
ದೇವನ ಹಳ್ಳಿ
ಶ್ರಾವಣಿ
Rating :
Hero :
ರಾಹುಲ್
Heroine :
ಶ್ರಾವಣಿ
Other Cast :
ರಾಹುಲ್, ಜಗದೀಶ್, ಪಲ್ಲಕ್ಕಿ, ಚಿದಾನಂದ್, ಕಿಲ್ಲರ್ ವೆಂಕಟೇಶ್, ಶ್ರೀರಾಘವ, ಉದಯ್‌ಗುರು, ಸುಮನ್ ಕ್ಷತ್ರಿಯ ಮತ್ತು ಇತರರು.
Director :
ಪಲ್ಲಕ್ಕಿ ರಾಮಚಂದ್ರ
Music Director :
ಪ್ರಯೋಗ್
Producer :
Release Date :
ಬದುಕಿನಲ್ಲಿ ಒಂದಕ್ಕೊಂದು ಸಂಬಂಧ ಇಲ್ಲದ ಘಟನೆಗಳು ನಡೆಯುವುದು ಇದೆಯೇ ? ಹೀಗೊಂದು ಪ್ರಶ್ನೆ ಕೇಳಿದರೆ, ಬಹುತೇಕರು ಇಲ್ಲ ಎಂದು ಉತ್ತರ ಕೊಡಬಹುದು. ಕೆಲವು ಸಿನಿಮಾ ಮಂದಿ ಮಾತ್ರ ನಡೆಯತ್ತೆ.. ಯಾಕೆ ನಡೆಯಲ್ಲ ? ನಮ್ ಸಿನಿಮಾ ನೋಡಿ.. ಅಂಥದ್ದೇ ಘಟನೆ ಆಧರಿಸಿ ಸಿನಿಮಾ ಕಥೆ ಹಣೆದಿರುವುದು ಎಂದು ಹೇಳುತ್ತಾರೆ.

ನಮ್ಮ ಜನ ಸಿನಿಮಾವನ್ನು ಮನರಂಜನೆಗಾಗಿ ನೋಡುತ್ತಾರೆ ಎನ್ನುವುದಾದರೆ, ಅದನ್ನು ಹುಡುಕಬೇಕು. ಇಲ್ಲಾ ಸಿನಿಮಾ ಸಮಾಜದ ಕನ್ನಡಿ ಎಂದು ಹೇಳುವುದಾದರೆ, ಸಮಸ್ಯೆಯನ್ನು ಹುಡುಕುಬೇಕು. ಸರಳವಾಗಿ ಹೇಳುವುದಾದರೆ, ಸಿನಿಮಾದಲ್ಲಿ ನವರಸಗಳಿರಬೇಕು ಎಂಬ ಸಿದ್ಧ ಸೂತ್ರ ಇದೆ. ಅನೇಕರಿಗೆ ಇದನ್ನು ಹೇಗೆ ಜೋಡಿಸಬೇಕು ಎಂಬುದು ಸಿನಿಮಾ ನಿರ್ಮಾಣದ ವೇಳೆ 'ಗಡಿಬಿಡಿ'ಯಲ್ಲಿ ಮರೆತು ಹೋಗಿರುತ್ತದೆ. ಪೂರ್ತಿಯಾದ ಮೇಲೆ ಒಮ್ಮೆ ನೋಡಿ ಏನೇನು ತಪ್ಪಾಗಿದೆ ಎಂಬುದನ್ನು ಪರಿಶೀಲಿಸಬೇಕು. ಆದರೆ, ಆ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂಬುದಕ್ಕೆ ಇನ್ನೊಂದು ಉದಾಹರಣೆ ರಾಧಾಕೃಷ್ಣ ಪಲ್ಲಕ್ಕಿ ಅವರ,'ದೇವನಹಳ್ಳಿ'.

ಚಿತ್ರ ಆರಂಭದಲ್ಲಿ ಆಸಕ್ತಿ ಕೆರಳಿಸುತ್ತದೆ. ಆದರೆ, ಅದು ಕಥೆಯ ಎಳೆ ಅಷ್ಟೇ. ಕಥೆಯನ್ನು ನಿರೂಪಿಸುವಾಗ ಸನ್ನಿವೇಶಗಳು ಚೆಲ್ಲಾಪಿಲ್ಲಿ. ಒಂದಕ್ಕೊಂದು ಸಂಬಂಧವಿಲ್ಲದಂತೆ ಅವು ಜನ್ಮತಳೆಯುತ್ತಾ ಹೋಗುತ್ತದೆ. ಕಥೆಯೇನೆಂಬುದು ತಿಳಿಯದೆ, ಪಾತ್ರಧಾರಿಗಳು ಯಾರು ? ಸನ್ನಿವೇಶ ಎಲ್ಲಿ ? ಎಂದು ಅರಿವಾಗದೆ ಪ್ರೇಕ್ಷಕ ಕಂಗಾಲಾಗುತ್ತಾನೆ.

ಒಟ್ಟಿನಲ್ಲಿ ಈ ಚಿತ್ರದ ಮೂಲಕ ರಿಯಲ್‌ ಎಸ್ಟೇಟ್‌ ದಂಧೆ ಮತ್ತು ಜನಸಾಮಾನ್ಯರ ಬದುಕಿನ ಚಿತ್ರಣವನ್ನು ಕಟ್ಟಿಕೊಡು ಪಲ್ಲಕ್ಕಿ ಹೊರಟಿದ್ದರು ಎಂದೆನಿಸುತ್ತದೆ. ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಖಾತ್ರಿಯಾದಾಗ ಅದೇ ಹಳ್ಳಿಯಲ್ಲೇ ಇರುವ ಊಸರವಳ್ಳಿಯಂಥ ವ್ಯಕ್ತಿ ನಲ್ಕುದ್ರೆ ನಾರಾಯಣ (ಪಲ್ಲಕ್ಕಿ) ಜಾಗೃತನಾಗುತ್ತಾನೆ. ಕ್ಷೌರಕ್ಕೂ ದುಡ್ಡು ಕೊಡಲಾಗದಂಥ ಸ್ಥಿತಿಯಲ್ಲಿ ಇರುವ ಈತ, ಮಾತನ್ನೇ ಬಂಡವಾಳ ಮಾಡಿಕೊಂಡು ಜನರಿಗೆ ಟೋಪಿ ಹಾಕುತ್ತಾನೆ. ಅವರ ದೌರ್ಬಲ್ಯಗಳನ್ನು ಅಸ್ತ್ರವಾಗಿಸಿ ಸಂಸಾರಗಳನ್ನು ಹಾಳು ಮಾಡುತ್ತಾನೆ. ನಾನಾ ವೇಷ ಧರಿಸುತ್ತಾನೆ. ಸಂದರ್ಭ ಬಂದಾಗ ಕೊಲೆಗಳನ್ನೂ ಮಾಡಿ, ಕೋಟ್ಯಧಿಪತಿಯಾಗುತ್ತಾನೆ. ಕೊನೆಗೆ ಇವನ ಕುತಂತ್ರಕ್ಕೆ ಒಳಗಾಗಿ ಅತಂತ್ರವಾದ ಮೂವರು ಯುವಕರು ಬಂಡೇಳುತ್ತಾರೆ. ನಂತರದ್ದೆಲ್ಲವೂ ದುಷ್ಟ- ಶಿಷ್ಟರ ನಡುವಿನ ಸಮರ. ಆದರೆ, ಈ ಸಮರ ಅಷ್ಟಕ್ಕೇ ಸೀಮಿತ. ಚಿತ್ರದುದ್ದಕ್ಕೂ ಖಳನಾಯಕನೇ ನಾಯಕ ಇಲ್ಲಿ..

ಅಭಿನಯದ ವಿಷಯದಲ್ಲಿ ಪಲ್ಲಕ್ಕಿ ಗೆದ್ದಿದ್ದಾರೆ. ಹಾವಭಾವ, ಮಾತಿನ ಪಟ್ಟು, ಪರದೆಯನ್ನು ತುಂಬಿಕೊಂಡ ಜೋಶ್ ಮೆಚ್ಚುಗೆಯಾಗುತ್ತದೆ. ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ರಾಹುಲ್ ಗಮನ ಸೆಳೆಯುತ್ತಾರೆ. ಇಲ್ಲಿ ಬರುವ ಯಾವ ಪಾತ್ರಗಳೂ ಕಾಲ್ಪನಿಕ ಅಲ್ಲ, ಬದುಕು ಒಂದು ನಾಟಕ ಎಂದು ಹೇಳುವುದಾದರೆ, ಸಿನಿಮಾದಲ್ಲಿ ಇರುವ ಪಾತ್ರಗಳೆಲ್ಲವೂ ನಮ್ಮ ಸುತ್ತಮುತ್ತಲು ಕಾಣುವಂತಹ ಪಾತ್ರಗಳೇ ಎಂದು ನೇರವಾಗಿ ಹೇಳುತ್ತಾರೆ ಪಲ್ಲಕ್ಕಿ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited