Untitled Document
Sign Up | Login    
Dynamic website and Portals
  
Home >> Movie Home >> Reviews >> 18ನೇ ಕ್ರಾಸ್
Movie Review
18ನೇ ಕ್ರಾಸ್
18th ಕ್ರಾಸ್ ಚಿತ್ರದ ಸುದ್ದಿಗೋಷ್ಠಿ
Rating :
Hero :
ದೀಪಕ್‌
Heroine :
ರಾಧಿಕಾ ಪಂಡಿತ್
Other Cast :
ವಿನಯ ಪ್ರಸಾದ್,ಬುಲ್ಲೆಟ್ ಪ್ರಕಾಶ್
Director :
ಚಿಕ್ಕಣ್ಣ
Music Director :
ಅರ್ಜುನ್ ಜನ್ಯಾ
Producer :
ಜಯಣ್ಣ
Release Date :
03-08-2012
ಕನ್ನಡದ ಹ್ಯಾಟ್ರಿಕ್ ನಟಿ ರಾಧಿಕಾ ಪಂಡಿತ್ ನಾಯಕಿನಟಿಯಾಗಿ ನಟಿಸಿದ ಮೊದಲ ಚಿತ್ರವಿದು. ಆದರೆ ಚಿತ್ರದಲ್ಲಾದ ತೊಡಕಿನಿಂದಾಗಿ, ನಂತರ ನಿರ್ಮಿಸಲಾದ ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ರಾಧಿಕಾ ಪಂಡಿತ್ ಕನ್ನಡಿಗರಿಗೆ ಪರಿಚಿತರಾದರು. ಚಿತ್ರಕ್ಕೆ ಸಂಗೀತವನ್ನು ಅರ್ಜುನ್ ಜನ್ಯಾ ನೀಡಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿವೆ.

ಅದರಲ್ಲೂ ’ತಿರುಗಿ... ತಿರುಗಿ.... ನೋಡೆ ಜಾಣೆ.....’ ಎಂಬ ಹಾಡು, ಚಿತ್ರ ವೀಕ್ಷಿಸಿದ ಪ್ರೇಕ್ಷಕರ ಮನದಲ್ಲಿ ಮತ್ತೆ, ಮತ್ತೆ ಗೊಣಗುವಂತೆ ಮಾಡುತ್ತದೆ.2 ವರ್ಷ ಧೀರ್ಘಕಾಲ ತೆಗೆದುಕೊಂಡಿದ್ದರಿಂದ ಚಿತ್ರಕ್ಕೆ ಮೊದಲಾರ್ಧ ಮತ್ತು ದ್ವಿತೀಯಾರ್ಧಕ್ಕೆ ಕ್ರಮವಾಗಿ, ಬಿ.ಎಲ್ ಬಾಬು ಮತ್ತು ಪಿ.ಎಲ್ ರವಿ, ಇಬ್ಬರು ಛಾಯಾಗ್ರಾಹಕರು. ದಿವಂಗತ ಚಿಕ್ಕಣ್ಣ ಅವರ ಕೊನೆಯ ಮಗ, ಚಿತ್ರ ವಿತರಕ ಜಯಣ್ಣ 18ನೇ ಕ್ರಾಸ್‌ನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಇದಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.


ನಿರ್ದೇಶಕರ ಮಾತಿನ ಪ್ರಕಾರ 18ನೇ ಕ್ರಾಸ್ ಎಂಬುದು, 18 ವಯಸ್ಸಿನಲ್ಲಾಗುವ ಪ್ರಮುಖ ವಿಚಾರದೊಂದಿಗೆ, ರೌಡಿಸಂನ ಬಗೆಗಿನ ಚಿತ್ರವಿದು. ಆದರೆ ಚಿತ್ರದಲ್ಲಿ ಅಮಾಯಕರನ್ನು ಅಧಿಕಾರಿ ಶಾಹಿಗಳು ದುರುಪಯೋಗಿಸುವ ಚಿತ್ರಣವಿದೆ. ರಾಜಕಾರಣ, ರೌಡಿಸಂ, ಪೋಲಿಸ್ ಎಂಬ ತ್ರಿಶಕ್ತಿಗಳು ಕೈ ಜೋಡಿಸಿ ಮಾಡುವ ದಂಧೆ ಚಿತ್ರದ ಹೈಲೈಟ್. ಇಲ್ಲಿ ನಾಯಕ ದೀಪಕ್‌ನ ಹೆಸರು ’ಜೀವಾ’. ಈತನ ಮೂಲ ನಾಮಧ್ಯೇಯ ಜೀವನ್. ಊರು ಭದ್ರಾವತಿ. ತನ್ನ ಹೆತ್ತವರನ್ನು ಕಳೆದುಕೊಂಡು ಬೆಂಗಳೂರು ಸೇರಿದ ಜೀವನ್‌ಗೆ ಬುಲ್ಲೆಟ್ ಪ್ರಕಾಶ್ ಗೆಳೆಯನಾಗುತ್ತಾನೆ. ಅಂತೆಯೇ ಅವನ ವೆಲ್ಡಿಂಗ್ ಶಾಪ್‌ನಲ್ಲಿ ಜೀವಾನಿಗೂ ಕೆಲಸ ಕೊಡುತ್ತಾನೆ. ಅಲ್ಲಿ ರಾಧಿಕಾ ಪಂಡಿತ್ ’ಪುಣ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾಳೆ. ಇವಳ ಹೆತ್ತವರ ಪಾತ್ರದಲ್ಲಿ ರಾಮಕೃಷ್ಣ, ವಿನಯ ಪ್ರಸಾದ್ ನೈಜತೆಯೊಂದಿಗೆ ಭಾಸವಾಗುತ್ತಾರೆ. ರಾಮಕೃಷ್ಣ ಸಂಗೀತಗಾರನಾಗಿ ಶ್ಯಾಮಲ ಶಾಸ್ತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ವಿನಯ ಪ್ರಸಾದ್ ಅಂಬು(ಅಂಬುಜಾ) ಎಂಬ ಪಾತ್ರದಲ್ಲಿ ಗೃಹಿಣಿಯಾಗಿ ಮಿಂಚಿದ್ದಾರೆ.

ಚಿತ್ರದ ವಿಶೇಷ ಆಕರ್ಷಣೆ ನಾಯಕ ಜೀವಾನ ಸ್ಕೂಟರ್. ಇದು ಸ್ಕೂಟರ್ ಆದರೂ ಇದನ್ನು ಕಾರಿನಂತೆ ಆಲ್ಟ್ರೇಷನ್ ಮಾಡಲಾಗಿದೆ. ಅಂತೆಯೇ ನಾಯಕಿ ಪುಣ್ಯಳ ಸೈಕಲ್‌ನ್ನು ಸ್ಕೂಟರ್‌ಗೆ ಹೋಲುವಂತೆ ನಿರ್ಮಿಸಲಾಗಿದೆ. ಚಿತ್ರದಲ್ಲಿ ನಾಯಕಿ ಪುಣ್ಯ ಭರತನಾಟ್ಯ ಕಲಿಯುತ್ತಿರುತ್ತಾಳೆ. ಇಬ್ಬರ ಆರಂಭದ ಭೇಟಿಗೆ ಇದೂ ಸಹಾಯವಾಗುತ್ತದೆ.18th ಕ್ರಾಸ್‌ನ ಬಸ್ಸು ತಂಗುದಾಣ ಚಿತ್ರದ ಮುಖ್ಯ ಭಾಗ. ಚಿತ್ರದಲ್ಲಿ ಪುಣ್ಯ ನಾಯಕನಿಗೆ ತನ್ನ ದೈನಂದಿನ ವಿಚಾರವನ್ನು ಹೇಳುವ ಸಂಭಾಷಣೆ ನವಪ್ರೇಮಿಗಳಿಗೆ ಸ್ಪೂರ್ತಿಯಾಗಲಿದೆ.

ಚಿತ್ರದ ಪ್ರಮುಖ ವಿಚಾರ. 1995 ಕರಿನಾಗನ ದಂದೆ. ಇನ್ನೊಂದೆಡೆ 1998ರಲ್ಲಿ ರಾಜಕಾರಣಿ ಬಿ.ಕೆ ಅಲಿಯಾಸ್ ಬೆಣ್ಣೆ ಕೃಷ್ಣ. ದಂದೆಯ ವಿಚಾರವಾಗಿ ಬಿ.ಕೆ ಕರಿನಾಗನನ್ನು ಡೀಲ್ ಮಾಡಲು ಚಿಂತಿಸುತ್ತಾನೆ. ಆಗ ಆತನಿಗೆ ಸಿಗುವುದು ಲೋಕಲ್ ರೌಡಿ ಬಯ್ಯ. ಕರಿನಾಗನನ್ನು ಡೀಲ್ ಮಾಡಿದ ಬಯ್ಯ ನಂತರ ಸ್ವತಂತ್ರನಾಗಿ ಡೀಲ್ ನಡೆಸುತ್ತಾನೆ. ಅಲ್ಲದೆ ತನ್ನ ಗುರು ಬಿ.ಕೆಗೆ ಸ್ಕೆಚ್ ಹಾಕುತ್ತಾನೆ. ಇದನ್ನು ತಿಳಿದ ಬಿ.ಕೆ ಬಯ್ಯನ್ನು ಮುಗಿಸುತ್ತಾನೆ. ಬಯ್ಯನನ್ನು ಜೀವಾನ ವೆಲ್ಡಿಂಗ್ ಶಾಪ್‌ನಲ್ಲಿ ಜೀವನ ಮುಂದೆ ಕೊಲ್ಲಲಾಗುತ್ತದೆ. ಈ ಬಗ್ಗೆ ಜೀವಾ ಸಾಕ್ಷಿ ಹೇಳಲು ಮುಂದಾದಾಗ, ಈ ಕೊಲೆಗೆ ಕಾರಣ ಜೀವಾ ಎಂದು ಆತನನ್ನೇ ಶಿಕ್ಷಿಸಲಾಗುತ್ತದೆ. ಕಾರಣ ಎಸ್.ಐ ’ಕೋಟೆ’ ರೌಡಿ ರಾಜಕಾರಣಿ ಬಿ.ಕೆನ ಕೈಗೊಂಬೆ. ನಂತರ ಕೊಲೆಗೆ ಕಾರಣರಾದ ಉಳಿದ ೪ ಮಂದಿಯನ್ನು ಹುಡುಕುವಂತೆ ನ್ಯಾಯಾಲಯ ಆದೇಶಿಸುತ್ತದೆ. ಆಗ ಜೀವಾನನ್ನು ಮುಗಿಸಲು ಸ್ಕೆಚ್ ಹಾಕಿ, ೪ ಮಂದಿ ಬಯ್ಯನ ಸಹಚರರು ಜೈಲು ಸೇರುತ್ತಾರೆ. ಕೊನೆಯಲ್ಲಿ ಅವರಿಗೆ ನಿಜಾಂಶ ತಿಳಿಯುತ್ತದೆ. ಎಸ್.ಐ ಕೋಟೆ ಜೀವಾನ ಗೆಳೆಯ ಬುಲ್ಲೆಟ್ ಪ್ರಕಾಶ್‌ನನ್ನು ಜೈಲ್‌ಗೆ ಹಾಕಿ ಲಾಕಪ್‌ಡೆತ್ ಮಾಡುತ್ತಾನೆ. ಅದಕ್ಕಾಗಿ ಜೀವಾ ಕೋಟೆಯನ್ನು ಕೊಲ್ಲುತ್ತಾನೆ. ಬಯ್ಯನ ಸಂಗಡಿಗರ ಜೊತೆ ಸೇರಿ ಇತರ ಶತ್ರುಗಳನ್ನು ಸದೆಬಡಿಯುತ್ತಾರೆ.

ಚಿತ್ರದ ಕೊನೆಯಲ್ಲಿ, ಜೀವಾ ರೌಡಿಸಂ ಬಿಟ್ಟು ಪುಣ್ಯಳೊಂದಿಗೆ ಬಾಂಬೆಗೆ ತೆರಳಲು ನಿರ್ಧರಿಸುತ್ತಾನೆ. ಇದರೊಂದಿಗೆ ಪೋಲಿಸರ ಎನ್‌ಕೌಂಟರ್, ಜೀವಾ ಪ್ರಾಣ ರಕ್ಷಣೆಗೆ ಹರಸಾಹಸ. ಇನ್ನೊಂದೆಡೆ ಪುಣ್ಯ ಜೀವಾನನ್ನು ಕಾಯುತ್ತಿರುತ್ತಾಳೆ. ಕೊನೆಯಲ್ಲಿ ಜೀವಾ-ಪುಣ್ಯ ಒಂದಾಗುತ್ತಾರಾ...? ಎನ್ನುವುದು ಚಿತ್ರದ ಕುತೂಹಲಕಾರಿ ಕ್ಲೈಮ್ಯಾಕ್ಸ್. ರೌಡಿ ರಾಜಕಾರಣಿ ಬಿ.ಕೆಗೆ ಏನಾಗುತ್ತದೆ.? ಈತನ ರೌಡಿಸಂ ಪುಣ್ಯಳಿಗೆ ಗೊತ್ತಾಗದಿರಲು ಕಾರಣವೇನು..? ಚಿತ್ರದಲ್ಲಿ ಫೈಟಿಂಗ್ ಹೇಗಿದೆ..? ಇನ್ನೂ ಅದೆಷ್ಟೋ ಕುತೂಹಲ ವಿಚಾರ ಚಿತ್ರದಲ್ಲಿ ಅಡಗಿದೆ. ಈ ಬಗ್ಗೆ ತಿಳಿಯಬೇಕಾದರೆ ಚಿತ್ರವನ್ನು ತಪ್ಪದೇ ವೀಕ್ಷಿಸಿ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited