Untitled Document
Sign Up | Login    
Dynamic website and Portals
  
Home >> Movie Home >> Reviews >> ರಾಂಬೋ
Movie Review
ರಾಂಬೋ
Rating :
Hero :
ಶರಣ್
Heroine :
ಮಾಧುರಿ
Other Cast :
ಉಮಾಶ್ರೀ,ರಂಗಾಯಣ ರಘು, ಸಾಧುಕೋಕಿಲ,ನವೀನ್‌ಕೃಷ್ಣ
Director :
ಎಮ್.ಎಸ್.ಶ್ರೀನಾಥ
Music Director :
ಅರ್ಜುನ್‌ಜನ್ಯಾ
Producer :
ಅಟ್ಲಾಂಟ ನಾಗೇಶ್, ಶರಣ್
Release Date :
07-09-2012
ಹಾಸ್ಯ ನಟ ಶರಣ್ ಮೊದಲ ಸಲ ನಾಯಕನಾಗಿ ನಟಿಸಿದ ಚಿತ್ರವು ಕೈಹಿಡಿಯಲಿಲ್ಲ. ಈಗ ’ರ‍್ಯಾಂಬೋ’ ವನ್ನು ಪ್ರೇಕ್ಷಕರು ಅಪ್ಪಿ ಮುದ್ದಾಡಿ ಶರಣ್ ನಾಯಕನಾಗಲು ಯೋಗ್ಯನೆಂದು ಪ್ರಮಾಣಿಕರಿಸುವುದು ಚಿತ್ರದ ಭರ್ಜರಿ ಕಲೆಕ್ಷನ್ ಸಾಕ್ಷಿಯಾಗಿದೆ.

ಶರಣ್ ಮೊದಲಿನಿಂದಲೂ ಚಿತ್ರದ ಬಗ್ಗೆ ಹೇಳಿಕೊಂಡರೆ ಹೊರತು ರಾಂಬೋ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಎಲ್ಲ ಚಿತ್ರಗಳಂತೆ ಪ್ರೀತಿ, ಫೈಟ್ ಇದರಲ್ಲಿ ಇರುವುದಿಲ್ಲ. ಪ್ರೀತಿ ಇದ್ದರೂ ನಾಯಕ ನಾಯಕಿಯ ಹಿಂದೆ ಸುತ್ತದೆ ಇಬ್ಬರು ಅರ್ಥಮಾಡಿಕೊಂಡು ಕ್ಲೈಮಾಕ್ಸ್ ತನಕ ಒಟ್ಟಿಗೆ ಇರುತ್ತಾರೆ. ನಾಯಕ ಕೃಷ್ಣ ಮಾಮ ತಬಲನಾಣಿ ಕಾರ್ ಬ್ರೋಕರ್ ಆಗಿದ್ದು ಕಾರುಗಳನ್ನು ವ್ಯಾಪಾರ ಮಾಡಿಸಿ ಹಣಗಿಟ್ಟಿಸುವ ದಂದೆಯಲ್ಲಿ ಇರುತ್ತಾರೆ. ಒಮ್ಮೆ ಕಾರು ವ್ಯಾಪಾರದಲ್ಲಿ ನಾಯಕಿಗೋಸ್ಕರ ಕಾರನ್ನು ತಾನೆ ಖರೀದಿಸಿ ಪೇಚಿಗೆ ಸಿಲಿಕಿ ಡಿಕ್ಕಿಯಲ್ಲಿ ಶವದ ದೇಹದಲ್ಲಿ ಪೆನ್‌ಡ್ರೈವ್‌ನ್ನು ವಶಪಡಿಸಿಕೊಳ್ಳಲು ಉಗ್ರಗಾಮಿಗಳು ಕಾರನ್ನು ಚೇಸ್ ಮಾಡುವ ದೃಶ್ಯವನ್ನು ಹಾಸ್ಯದಲ್ಲಿ ತೋರಿಸಿ ಸುಂದರವಾಗಿ ಕೊನೆ ಗೊಳಿಸಿದ್ದಾರೆ ನಿರ್ದೇಶಕರು.

ಶರಣ್ ಪ್ರಾರಂಭದಿಂದ ಕೊನೆಯವರೆವಿಗೂ ಅದ್ಬುತವಾಗಿ ನಟಿಸಿ ಎಲ್ಲರನ್ನು ನಗಿಸುವುದರಲ್ಲಿ ಸಪಲರಾಗಿದ್ದಾರೆ. ಇವರಿಗೆ ಸಾತ್ ತಬಲನಾಣಿ ನಾನೇನು ಕಡಿಮೆಯಿಲ್ಲ ಎಂಬಂತೆ ನಟನೆ ಇರುತ್ತದೆ. ನಾಯಕಿ ಮಾಧುರಿ ರೇವತಿಯಾಗಿ ಅಭಿನಯ ಮತ್ತು ಉಮಾಶ್ರೀ ನಟನೆ ಹಿಂದಿನ ಚಿತ್ರಗಳನ್ನು ನೆನಪಿಸುತ್ತದೆ. ವಿರಾಮದ ನಂತರ ಬರುವ ರಂಗಾಯಣ ರಘು, ಸಾಧುಕೋಕಿಲ ನಗಿಸುತ್ತಾರೆ. ನವೀನ್‌ಕೃಷ್ಣ ತಮ್ಮ ಪಾತ್ರಕ್ಕೆ ಮೋಸಮಾಡಿಲ್ಲ. ಅಯ್ಯೋ ಫೋನ್ ಬಂತು ರಿಂಗ್ ಟೋನ್ ಸನ್ನಿವೇಶಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ.

ಕೃಷ್ಣ ಛಾಯಾಗ್ರಹಣ ಅಲ್ಲಲ್ಲಿ ಕೆಲಸ ಮಾಡಿದೆ. ಅರ್ಜುನ್‌ಜನ್ಯಾ ಎರಡು ಹಾಡುಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್. ಇಡಿ ಸಿನಿಮಾ ಪ್ರೇಕ್ಷಕರನ್ನು ಸೀಟಿನಲ್ಲಿ ಕೂರಿಸುವಂತೆ ಮಾಡಿರುವುದು ಸಂಭಾಷಣೆ. ಪ್ರತಿ ಡೈಲಾಗ್‌ನಲ್ಲೂ ನಗು ತುಳುಕಾಡುತ್ತದೆ. ತಬಲನಾಣಿ ಸಂಭಾಷಣೆ ಚಿತ್ರಕ್ಕೆ ಮೆರುಗುತಂದಿದೆ. ಗೋಲ್ಡನ್‌ಸ್ಟಾರ್ ಗಣೇಶ್ ನೇಪಥ್ಯದಲ್ಲಿ ಅಲ್ಲಲ್ಲಿ ಮಾತನಾಡುತ್ತಾರೆ. ರ‍್ಯಾಂಬೋ ಯಾರೆಂದು ನಾವು ಹೇಳಿದರೆ ಸರಿಯನಿಸುವುದಿಲ್ಲ. ಇದನ್ನು ತಿಳಿದುಕೊಳ್ಳಬೇಕಾದರೆ ಚಿತ್ರಮಂದಿರಕ್ಕೆ ಹೋಗುವುದು ಲೇಸು. ನೀವು ನಗಲು ಇಷ್ಟಪಡುವುದಾದರೆ ರ‍್ಯಾಂಬೋ ಒಮ್ಮೆ ನೋಡುವುದು ಸೂಕ್ತ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited