Untitled Document
Sign Up | Login    
Dynamic website and Portals
  
Home >> Movie Home >> Reviews >> ಶಿವ
Movie Review
ಶಿವ
'ಶಿವ'ದಲ್ಲಿ ಶಿವಣ್ಣನ ಶಿವತಾಂಡವ
Rating :
Hero :
ಶಿವರಾಜ್ ಕುಮಾರ್
Heroine :
ರಾಗಿಣಿ ದ್ವಿವೇದಿ
Other Cast :
ರಂಗಾಯಣ ರಘು,ಶೋಭ್‌ರಾಜ್,ಬುಲ್ಲೇಟ್ ಪ್ರಕಾಶ್‌,ಗುರುದತ್ತ್ ,ರವಿಕಾಳೆ,ಪದ್ಮಜಾ,ರಮೇಶ್ ಭಟ್,ಚಿತ್ರಾ ಶೆಣೈ
Director :
ಓಂ ಪ್ರಕಾಶ್
Music Director :
ಗುರುಕಿರಣ್
Producer :
Release Date :
31-08-2012
ಕುದುರೆ ರೇಸ್‌ನೊಂದಿಗೆ ಚಿತ್ರ ತೆರೆದುಕೊಳ್ಳುತ್ತದೆ.ರವಿಕಾಳೆ ’ಜಾಕಿ ರಾಜೇಂದ್ರ’ನಾಗಿ ಕಾಣಿಸಿಕೊಂಡಿದ್ದಾರೆ. ಇವರ ಗೆಳೆಯನಾಗಿ ಸುಚೇಂದ್ರ ಪ್ರಸಾದ್ ’ಡಿ.ಸೋಜ’ಎಂಬ ಪತ್ರಕರ್ತನ ಪಾತ್ರದಲ್ಲಿ ಮಿಂಚಿದ್ದಾರೆ.ರವಿಕಾಳೆ ಪತ್ನಿಯಾಗಿ ಪದ್ಮಜಾ ಕಾಣಿಸಿಕೊಂಡಿದ್ದಾರೆ.ಡಿ.ಸೋಜನ ಮಗಳು ಮತ್ತು ರಾಜೇಂದ್ರನ ಮಗ ಇಬ್ಬರು ತಂದೆಯವರಂತೆ ಉತ್ತಮ ಸ್ನೇಹಿತರು.ಇಂತಹ ಸ್ನೇಹ ಒಂದೆಡೆಯಾದರೆ,ಇವರ ತದ್ವಿರಿದ್ಧವಾಗಿ ರವಿಶಂಕರ್, ರಂಗಾಯಣ ರಘು,ಗುರುದತ್ತ್ ಖಳನಾಯಕರಾಗಿ ಅಭಿನಯಿಸಿದ್ದಾರೆ.

ಕುದುರೆ ರೇಸ್‌ನಲ್ಲಿ ಜಾಕಿ ರಾಜೇಂದ್ರ ನಿಷ್ಠಾವಂತನಾಗಿರುತ್ತಾನೆ,ಅಂತೆಯೇ ಗೆಲುವಿನ ಸರದಾರ ಕೂಡ.ಆದರೆ ರೇಸ್‌ನಲ್ಲಿ ತಮ್ಮ ಕುದುರೆ ಗೆಲುವು ಪಡೆಯಬೇಕೆಂದು,ತ್ರ್ರಿಮೂರ್ತಿಗಳು ರಾಜೇಂದ್ರನಿಗೆ ’ಕೋಟಿ ಕೊಡುತ್ತೇನೆ’ ಎಂದರೂ ರಾಜೇಂದ್ರ ಅದನ್ನು ತಿರಸ್ಕರಿಸಿ ಪ್ರಾಮಾಣಿಕತೆಯನ್ನು ತೋರಿಸುತ್ತಾನೆ.ಆದರೆ ರೇಸ್‌ನಲ್ಲಿ ರಾಜೇಂದ್ರನ ಕುದುರೆ ನೆಲಕ್ಕುರುಳಿ ಸೋಲಾಗುತ್ತದೆ.ಸೋಲು ಒಂದೆಡೆಯಾದರೆ, ಈ ಸೋಲಿನಿಂದಾಗಿ, ಬಿಡ್ ಮಾಡಿದ ಅದೆಷ್ಟೋ ಮಂದಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ.ಇದಕ್ಕೆ ರಾಜೇಂದ್ರ ನೇರ ಹೊಣೆಯಾಗುತ್ತಾನೆ.ಈ ಸಂದರ್ಭದಲ್ಲಿ ಸ್ನೇಹಿತ ಡಿ.ಸೋಜ ಸೋಲಿನ ನಿಗೂಡತೆಯ ಅನಾವರಣ ಮಾಡುತ್ತಾನೆ.ಈ ತ್ರಿಮೂರ್ತಿಗಳು ತಮ್ಮ ಕುದುರೆ ಗೆಲ್ಲಬೇಕೆಂದು, ರಾಜೇಂದ್ರನ ಕುದುರೆಗೆ ಉಪ್ಪನ್ನು ತಿನ್ನಿಸಿದ ಫೋಟೊ,ನೈಜತೆಗೆ ಸಾಕ್ಷಿಯಾಗುತ್ತದೆ.ಡಿಸೋಜ ಪತ್ರಕರ್ತನಾದ್ದರಿಂದ ಜನರಿಗೆ ನಿಜಾಂಶ ತಿಳಿಸಬೇಕೆಂದು ಸಂಪಾದಕರಿಗೆ ಈ ವಿಚಾರವನ್ನು ತಿಳಿಸಿದಾಗ ಪ್ರಕಟಿಸುವುದಾಗಿ ಹೇಳುತ್ತಾನೆ.

ಅನಂತರ ಸಂಪಾದಕ ಈ ವಿಚಾರವನ್ನು ತ್ರಿಮೂರ್ತಿಗಳಲ್ಲಿ ತಿಳಿಸುತ್ತಾನೆ.ಈ ಹಿನ್ನಲೆಯಲ್ಲಿ ಡಿ.ಸೋಜ ಮತ್ತು ಅವನ ಪತ್ನಿಯನ್ನು ಜೀವಂತವಾಗಿ ಪೆಟ್ಟಿಗೆಯಲ್ಲಿ ಮುಚ್ಚಿ,ಮೊಳೆ ಬಡಿದು ಮಣ್ಣಿನಲ್ಲಿ ಹೂಳಲಾಗುತ್ತದೆ.ಈ ಮದ್ಯೆ ಮಗಳನ್ನು ’ವಯಸ್ಸಿಗೆ ಬಂದಾಗ ಯಾರಿಗಾದ್ರೂ ಉಪಯೋಗಕ್ಕೆ ಬರಬಹುದು’ಎಂದು ಬಿಟ್ಟು ಹೋಗುತ್ತಾರೆ. 15 ವರ್ಷಗಳ ನಂತರ ಎಂಬ ಅಡಿ ಬರಹದಲ್ಲಿ ಚಿತ್ರ ದ್ವಿತೀಯಾರ್ಧಕ್ಕೆ ಕಾಲಿಡುತ್ತದೆ.ಈ ತ್ರಿಮೂರ್ತಿಗಳು ಸಣ್ಣ ಪುಟ್ಟ ಕಾರಣದಿಂದಾಗಿ ಬೇರೆ ಬೇರೆ ಆಗುತ್ತಾರೆ.ಗುರುದತ್ತ್ ಜೈಲು ಪಾಲಾಗುತ್ತಾನೆ.ಪ್ರಸ್ತುತ ರವಿಶಂಕರ್‌ನ ಮಗನನ್ನು ನಾಯಕಿ ರಾಗಿಣಿ,ಕ್ಷಣ ಮಾತ್ರದಲ್ಲಿ ಮಿಂಚು ಹೊಡೆದಂತೆ ಶೂಟ್ ಮಾಡಿ ಕೊಲ್ಲುತ್ತಾಳೆ.ಈ ಸಾವಿಗೆ ಕಾರಣ ರಂಗಾಯಣ ರಘು ಎಂದು ತಿಳಿದು,ರವಿಶಂಕರ್ ಅವನ ಮಗನನ್ನು ಪತ್ತೆ ಹಚ್ಚುವಂತೆ ಆದೇಶಿಸುತ್ತಾನೆ. ಆಗ ರಂಗಾಯಣ ರಘುನ ಮಗ ’ಶಿವ’ನ ಬಗ್ಗೆ ಮಾಹಿತಿ ಸಿಗುತ್ತದೆ,ಶಿವನ್ನು ಕೊಲ್ಲಲು ಹಲವು ಸಂಚು ಮಾಡಿದರೂ ವಿಫಲವಾಗುತ್ತದೆ. ರಂಗಾಯಣ ರಘು ತನ್ನ ಶೋಕಿಗಾಗಿ ಚಿತ್ರಾ ಶೆಣೈನ್ನು ಮರುಮದುವೆ ಆಗಿರುತ್ತಾನೆ.ಚಿಕ್ಕಮ್ಮ ಎಂದರೂ ಶಿವ,’ಪ್ರೀತಿ ನೀಡಲು ತಾಯಿಯಾದರೇನು.? ಚಿಕ್ಕಮ್ಮಳಾದರೇನು.?’ಎನ್ನುವ ಸಂಭಾಷಣೆ ಅರ್ಥಪೂರ್ಣವಾಗಿದೆ.ಇದು ತಾಯಿಯ ಬಗೆಗಿನ ಸಂಬಂಧವನ್ನು ಅನಾವರಣ ಮಾಡುತ್ತದೆ.

ಈ ಮಧ್ಯೆ ಶಿವನಿಗೆ ನಾಯಕಿ ರಸ್ತೆಯಲ್ಲಿ ಕಾಣಸಿಗುತ್ತಾಳೆ.ಶಿವ ಇವಳ ಬಗ್ಗೆ ಮಾಹಿತಿ ಕಲೆ ಹಾಕಲು ಹೇಳಿದಾಗ, ಆಕೆಯ ಹೆಸರು ಜೂಲಿ. ಅವಳು ಏರ್‌ಟೆಲ್ ಕಸ್ಟಮರ್‌ಕೇರ್ ಆಗಿ ಕಾರ‍್ಯನಿರ್ವಹಿಸುವುದಾಗಿ ತಿಳಿಯುತ್ತದೆ. ಚಿತ್ರದಲ್ಲಿ ಯಾವುದೇ ಬೋರಿಂಗ್ ದೃಶ್ಯವನ್ನು ಕಾಣಲು ಅಸಾಧ್ಯ.ಮಾಸ್‌ಗೆ ಸ್ವಲ್ಪ ರಿಲಾಕ್ಸ್ ನೀಡಲು, ಶೋಭ್‌ರಾಜ್-ಬುಲ್ಲೇಟ್ ಪ್ರಕಾಶ್‌ರ ಮಾಸ್‌ಮಿಕ್ಸಿಂಗ್ ವಿಭಿನ್ನ ಕಾಮಿಡಿ ಪ್ರೇಕ್ಷಕರಿಗೆ ಇನ್ನಷ್ಟು ಮುದವನ್ನು ನೀಡುತ್ತದೆ. ಈ ಚಿತ್ರ ಹಲವು ಸಂದೇಶವನ್ನು ಬಿಂಬಿಸುತ್ತದೆ. ಸುಸೈಡ್ ಮಾಡಲು ಯತ್ನಿಸಿದವನನ್ನು ಕಾಪಾಡುವ ದೃಶ್ಯ ರೋಮಾಂಚನಕಾರಿಯಾಗಿದೆ.ಆತನಿಗೆ ಹೇಳುವ ಬುದ್ದಿವಾದ ಸುಸೈಡ್ ಮಾಡಲು ಯತ್ನಿಸಿದವರಿಗೆ, ಜೀವನದ ಪಾಠವನ್ನು ದರ್ಶಿಸುತ್ತದೆ.ಸುಸೈಡ್‌ಗೆ ಕಾರಣವಾದ ಅಂಶ ಇನ್ನೂ ಶೋಚನೀಯ. ಪೋಲಿಸ್ ಉದ್ಯಮದಲ್ಲಿ ನಡೆದ ಅನ್ಯಾಯ. ಈ ಕೃತ್ಯದ ಮೂಲ ಹುಡುಕಿದಾಗ, ಇದಕ್ಕೆ ಸೂತ್ರದಾರ ರವಿಶಂಕರ್ ಎಂದು ತಿಳಿಯುತ್ತದೆ.ಆದರೂ ಯಾವ ಹೊಡೆದಾಟ ಬಡೆದಾಟ ಇಲ್ಲದೆ. ಉತ್ತಮ ಸಂಭಾಷಣೆಯಲ್ಲೇ ಶಿವ ನ್ಯಾಯ ದೊರಕಿಸುತ್ತಾನೆ.

ಅಪರಾಧಿ ಪೋಲಿಸರಿಗೆ, ಉನ್ನತಾಧಿಕಾರಿಗಳ ಮೂಲಕ ಶಿವ ಶಿಕ್ಷಿಸುತ್ತಾನೆ. ಉನ್ನತಾಧಿಕಾರಿಯಾಗಿ ರಮೇಶ್ ಭಟ್ ಕಾಣಿಸಿಕೊಂಡಿದ್ದಾರೆ. ಇಷ್ಟಲ್ಲದೆ ಮಕ್ಕಳ ಬಿಕ್ಷಾಟನೆಯ ಬಗ್ಗೆಯೂ ಉತ್ತಮ ಸಂದೇಶವಿದೆ. ಈ ಬಗ್ಗೆ ಶಿವನ ಮಾಸ್ ಸಂಭಾಷಣೆ, ಜೊತೆಗೆ ಫೈಟ್ ಅದ್ದೂರಿಯಾಗಿ ಮೂಡಿಬಂದಿದೆ.ನಾಯಕಿ ಜೂಲಿ ಶಿವನಲ್ಲಿ ಪ್ರೀತಿಯನ್ನು ಹಂಚಿಕೊಳ್ಳಲು ಬರಹೇಳಿದಾಗ, ಅಲ್ಲಿನ ಫೈಟ್ ಅದ್ಬುತವಾಗಿ ಮೂಡಿಬಂದಿದೆ. ಇದರಲ್ಲಿ ನಾಯಕಿ ಶಿವನ್ನು ಕಾಪಾಡಿದರೂ, ಕೊನೆಗೆ ಅವಳೇ ಕೊಲ್ಲುತ್ತಾಳೆ.

ಮಧ್ಯಂತರದ ನಂತರ ಚಿತ್ರ ತಿರುವು ಪಡೆಯುತ್ತದೆ. ಶಿವನನ್ನು ಕೊಂದ ಜೂಲಿ,ಡಿ.ಸೋಜನ ಮಗಳು. ತನ್ನ ಹೆತ್ತವರನ್ನು ಕೊಂದ ಸಲುವಾಗಿ, ರಂಗಾಯಣ ರಘುನ ಮಗನಾದ,ಶಿವನನ್ನು ಕೊಂದು ಸೇಡನ್ನು ತೀರಿಸಿಕೊಳ್ಳುತ್ತಾಳೆ.ಶಿವನ ಬಗ್ಗೆ ಮಾಹಿತಿ ಕಲೆ ಹಾಕಿದ ರವಿಶಂಕರ್, ರಂಗಾಯಣ ರಘುನ ಬಳಿಗೆ ಬಂದು, ’ಆತ ನಿನ್ನ ಮಗ ಅಲ್ಲ ನನ್ನ ಮಗನನ್ನು,ಶಿವನ್ನು ಕೊಂದವಳು ಒಂದು ಒಂದು ಹೆಣ್ಣು.ಈಗ ಆಕೆ ನಮ್ಮಿಬ್ಬರ ಶತ್ರು’ ಎಂದು ಪುನಃ ಗೆಳೆಯರಾಗುತ್ತಾರೆ. ರಂಗಾಯಣ ರಘುನ ಮಗ ಗೋವದಲ್ಲಿ ಇರುವ ವಿಚಾರ ತಿಳಿದು ಜೂಲಿ ಅಲ್ಲಿಗೆ ಹೋಗುತ್ತಾಳೆ. ಇದನ್ನು ತಿಳಿದ ರಂಗಾಯಣ ರಘು, ಮಗನಿಗೆ ಕಾಲ್ ಮಾಡಿ ತಿಳಿಸಿದಾಗ, ರೌಡಿಗಳು ಜೂಲಿಯನ್ನು ಕೊಲ್ಲಲು ಅಟ್ಟಿಸಿಕೊಂಡು ಹೋಗುತ್ತಾರೆ.

ಈ ವೇಳೆ ಶಿವ ಆಕೆಯನ್ನು ಕಾಪಾಡುತ್ತಾನೆ. ನಂತರ ಜೂಲಿ ’ನಾನು ನಿನ್ನನ್ನು ರಂಗಾಯಣ ರಘುನ ಮಗ ಎಂದು ತಿಳಿದು ಕೊಂದೆ’ ಎಂದು ತನ್ನ ಬಾಲ್ಯದಲ್ಲಾದ ಘಟನೆ ಬಗ್ಗೆ ವಿವರಿಸುತ್ತಾಳೆ. ಈ ವೇಳೆ ಶಿವ, ಬಾಲ್ಯದಲ್ಲಿ ಮಾಡಿಕೊಡುತ್ತದ್ದ ಆಟಿಕೆಯನ್ನು ದರ್ಶಿಸಿದಾಗ ಅವರ ಬಾಲ್ಯದ ಗೆಳೆತನ ಪ್ರೀತಿಯತ್ತ ತಿರುಗುತ್ತದೆ. ಶಿವ ತನ್ನ ಹಿಂದಿನ ವಿಚಾರವನ್ನು ಆಕೆಯ ಜೊತೆ ಹಂಚಿಕೊಳ್ಳುತ್ತಾನೆ. ಈ ತ್ರಿಮೂರ್ತಿಗಳು ಶಿವನ ಹೆತ್ತವರನ್ನೂ ಕೊಂದು, ಶಿವನ ಬಾಯಿಗೆ ವಿಷ ಹಾಕುತ್ತಾರೆ. ಆದರೆ ಶಿವ ಸಾವನ್ನು ಗೆದ್ದು ಬರುತ್ತಾನೆ. ಹೀಗೆ ಪರಸ್ಪರ ನೋವನ್ನು ಹಂಚಿಕೊಂಡ ಇವರು, ರಂಗಾಯಣ ರಘುನ ಮಗನ ಭವ್ಯ ಕೋಟೆಯೊಳಗೆ ಹೋಗುತ್ತಾರೆ. ಅಲ್ಲಿ ದೇಶದ್ರೋಹಿ ಚಟುವಟಿಕೆಯ ಬಗೆಗಿನ ಪಾಸ್‌ವರ್ಡ್, ಡೀಟೇಲ್ಸ್‌ನ್ನು ಸಾಹಸಮಯವಾಗಿ ತೆಗೆದುಕೊಳ್ಳುತ್ತಾರೆ. ಅವರ ಕಡೆಯವರು ಶಿವನನ್ನು ಬೆನ್ನೆಟ್ಟಿಸಿಕೊಂಡು ಬರುತ್ತಾರೆ. ಈ ವೇಳೆ ಜೂಲಿಯನ್ನು ಕಿಡ್ನಾಪ್ ಮಾಡಿ ಪಾಸ್‌ವರ್ಡ್, ಡೀಟೇಲ್ಸ್‌ನ್ನು ನೀಡುವಂತೆ ಹೇಳುತ್ತಾರೆ.

ಆದರೆ ಚಿತ್ರದ ಕೊನೆಯ ಭಾಗದಲ್ಲಿ ಕಾಳಭೈರವನ ಮುಂದೆ ಅದ್ಬುತವಾದ ಫೈಟ್‌ನೊಂದಿಗೆ ಚಿತ್ರ ಕೊನೆಗಾಣುತ್ತದೆ.ಇದರಲ್ಲಿ ರವಿಶಂಕರ್, ರಂಗಾಯಣ ರಘು, ಗುರುದತ್ತ್ ಸಾವನ್ನಪ್ಪುತ್ತಾರೆ.ಆದರೆ ಆರಂಭದಲ್ಲಿ ತಂದೆ ಎಂದ ರಂಗಾಯಣ ರಘುನ್ನು ಶಿವ ಏಕೆ ಕೊಲ್ಲುತ್ತಾನೆ? ಶಿವನಿಗೆ ಮತ್ತು ರಂಗಾಯಣ ರಘುನಿಗೆ ಹೇಗೆ ಪರಿಚಯ? ಜೈಲ್‌ನಲ್ಲಿದ್ದ ಗುರುದತ್ತ್ ಹೇಗೆ ಹೊರಬಂದ? ಶಿವ ಬಾಲ್ಯದಲ್ಲಿ ಸಾವನ್ನು ಗೆದ್ದು ಮುಂದೆ ಏನು ಮಾಡಿದ? ಶಿವ ತನ್ನ ತಂದೆಗೆ ಬಂದ ಕಳಂಕವನ್ನು ಹೇಗೆ ಹೋಗಲಾಡಿಸಿದ? ಜೂಲಿ ಕೊಂದಾಕಿದಾಗ ಶಿವನನ್ನು ಬದುಕಿಸಿದರು ಯಾರು? ಶಿವ ಸತ್ತದನ್ನು ತಿಳಿದ ತ್ರಿಮೂರ್ತಿಗಳು, ಈತ ಬದುಕಿದ ಬಗ್ಗೆ ತಿಳಿದದ್ದು ಹೇಗೆ.? ಇವರ ಆರಂಭಿಕ ಭೇಟಿ ಹೇಗೆ? ಎಂದು ತಿಳಿಯಬೇಕಾದರೆ ಶಿವ ಚಿತ್ರವನ್ನು ತಪ್ಪದೇ ವೀಕ್ಷಿಸಿ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited