Untitled Document
Sign Up | Login    
Dynamic website and Portals
  
Home >> Movie Home >> Reviews >> ಒಗ್ಗರಣೆ
Movie Review
ಒಗ್ಗರಣೆ
ಒಲವಿನ ಹದವಾದ ಒಗ್ಗರಣೆ
Rating :
Hero :
ಪ್ರಕಾಶ್ ರೈ
Heroine :
ಸ್ನೇಹ, ಸಂಯುಕ್ತ ಹೊರನಾಡು
Other Cast :
ಪ್ರಕಾಶ್ ರಾಜ್, ಸ್ನೇಹ, ಸಂಯುಕ್ತ ಹೊರನಾಡು, ತೇಜಸ್, ಅಚ್ಯುತ್ ಕುಮಾರ್, ಮಂಡ್ಯ ರಮೇಶ್, ಗೌತಮ್. ಐಶ್ವರ್ಯ ಮುಂತಾದವರು.
Director :
ಪ್ರಕಾಶ್ ರೈ
Music Director :
ಇಳಯರಾಜ
Producer :
ಪ್ರಕಾಶ್ ರೈ
Release Date :
06-06-2014
ಈಗಾಗಲೆ ನಾನು ನನ್ನ ಕನಸು ಎನ್ನುವ ಫುಲ್ ಫ್ಯಾಮಿಲಿ ಸಿನಿಮಾವನ್ನು ಮಾಡಿದ್ದ ಪ್ರಕಾಶ್ ರೈ ಬುದ್ದಿವಂತಿಕೆಯನ್ನು ಬಳಸಿ ಎಲ್ಲಾ ಮಾಸ್ ಸಿನಿಮಾಗಳಿಗೆ ಬಿಸಿಯಾದ ಒಗ್ಗರಣೆ ಹಾಕಿದ್ದಾರೆ. ಹಾಗಂದರೇನು ಎನ್ನುವಿರಾ..? ಮೊದಲನೇ ದಿನವೇ ಯುವಕರನ್ನು ಫ್ಯಾಮಿಲಿ ಜನರನ್ನು ಸೆಳೆದಿರುವ ಈ ಚಿತ್ರ ಅಬ್ಬರಗಳಿದಲ್ಲದೆ ಶಾಂತವಾಗಿ ಒಗ್ಗರಣೆಯ ಸ್ವಾಧವನ್ನು ಸವಿಯಬಹುದು.

ಮದುವೆಯಾಗದ ಮಧ್ಯ ವಯಸ್ಕ ನಳಮಹಾರಾಜ ಕಾಳಿದಾಸ(ಪ್ರಕಾಶ್ ರೈ) ಆತನಿಗೆ ಸರಿ ಹೊಂದುವ ಅನುರೂಪಳಾದ ಹುಡುಗಿ ಗೌರಿ(ಸ್ನೇಹ). ಕಾಳಿದಾಸನಿಗೆ ಮದುವೆ ಹೆಣ್ಣನು ಹುಡುಕುತ್ತಾ ಅವರ ಮನೆಯಲ್ಲೇ ಇರುವ ಮಂಡ್ಯ ರಮೇಶ್. ಹುಡುಗಿಯನ್ನು ನೋಡಲು ಹೋಗಿ ಅಲ್ಲಿ ಅಡುಗೆ ಮಾಡುವ ಅಚ್ಯುತ್ ಕುಮಾರ್ ಅನ್ನು ಮನೆಗೆ ಕರೆತರುವ ಸ್ವಾಧ ಪ್ರಿಯ ಕಾಳಿದಾಸ. ವೃತ್ತಿಗೆ ಪ್ರಾಚ್ಯವಸ್ತುಶಾಸ್ತ್ರಜ್ಞಾ. ಅಲ್ಲೇ ದೂರದ ಊರಿನಲ್ಲಿ ಬುಡಕಟ್ಟಿನ ನಡುವೆ ಸಂಶೋಧನೆ ಮಾಡುತ್ತಾ, ಅಲ್ಲಿಯ ಮುಖ್ಯಸ್ಥನಿಗೆ ಆಶ್ರಯನೀಡುತ್ತಾನೆ. ಅದರಿಂದ ಗಲಾಟೆ ಏರ್ಪಾಡಾಗುತ್ತದೆ. ಇದರ ಜೊತೆಗೆ ಊರಿಂದ ಬಂದ ಅಕ್ಕನ ಮಗ ನವೀನ್(ತೇಜಸ್). ಅನಿರೀಕ್ಷಿತವಾಗಿ ಬರುವ ಹುಡುಗಿಯ ಕರೆಗೆ ಕಾಳಿದಾಸ ಸಿಡಿದೇಳುತ್ತಾನೆ. ಆಕೆಗೆ ಬೈಯುತ್ತಾನೆ. ಸಿಟ್ಟಿನಲ್ಲಿ ಫೋನಿಡುತ್ತಾನೆ. ಆಕೆ ರಾಂಗ್ ನಂಬರ್‌ಗೆ ಫೋನ್ ಮಾಡಿರುತ್ತಾಳೆ. ಇದೆಲ್ಲವನ್ನು ಗಮನಿಸುತ್ತಿದ್ದ ನವೀನ್ ಸಂಬಂಧ ಬೆಳೆಸಲು ಮುಂದಾಗುತ್ತಾನೆ. ಅತ್ತ ಅಕ್ಕ ಗೌರಿಯ ಪರವಾಗಿ ಸಂಯುಕ್ತ ಮಾತಾಡುತ್ತಾಳೆ. ಈ ಇಬ್ಬರಿಂದ ಹಿರಿಯ ಜೀವಗಳು ಖುಷಿಯಾಗಿರುತ್ತದೆ. ಆದರೆ ಒಂದು ಎಡರಿನಿಂದ ಇಬ್ಬರ ನಡುವೆ ಅಂತರ ಏರ್ಪಡುತ್ತದೆ. ಏನು ಎಡವಟ್ಟು..? ಈ ಇಬ್ಬರು ಒಂದಾಗುತ್ತಾರಾ.? ಸಂಯುಕ್ತ ಮತ್ತು ನವೀನ್ ಪ್ರೇಮಕತೆ ಹೇಗೆ ಉಂಟಾಗುತ್ತದೆ..? ಎನ್ನುವುದೆಲ್ಲ ಸಿನಿಮಾದಲ್ಲಿ ನೋಡಿ.

ಹೀಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಘಾಟಿನಿಂದ ಮುಂದುವರೆಯುವ ಈ ಕತೆ ನಿಧಾನ ಗತಿಯಲ್ಲಿ ಸಾಗಿದರೂ ನೋಡಿಸಿಕೊಂಡು ಹೋಗುತ್ತದೆ. ಸಂಶೋಧನೆಯ ವಿಷಯವನ್ನು ಇನ್ನೂ ಚೆನ್ನಾಗಿ ಹಿಡಿಯಬಹುದಿತ್ತು. ಕೆಲವು ಸೀನ್ಗಳು ಲಿಂಕ್ ಇಲ್ಲದೆನಿಸುತ್ತದೆ. ಹಿರಿಯರ ಪ್ರೇಮದ ಎಪಿಸೋಡ್ ಇನ್ನೂ ವಿವರಿಸಿಬಹುದಿತ್ತು ಎನ್ನಿಸುತ್ತದೆ. ಸಂಯುಕ್ತ ಮತ್ತು ತೇಜಸ್ ಲವ್ ಎಪಿಸೋಡ್ ಚೆನ್ನಾಗಿದೆ.

ಉಳಿದಂತೆ ಟೆಕ್ನಿಕಲಿ ಸೂಪರ್. ಕ್ಯಾಮರ ಕೈ ಚಳಕ ಚೆನ್ನಾಗಿದೆ, ಎಡಿಟಿಂಗ್ ಗುಡ್, ಹಾಗೆ ಸಂಗೀತ ಬ್ರಹ್ಮ ಇಳಯರಾಜ್ ರವರ ಹಾಡುಗಳು ಕತೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ. ತಿಳಿಹಾಸ್ಯದ ಸಂಭಾಷಣೆ ಚೆನ್ನಗಿ ಮೂಡಿಬಂದಿದೆ.

ಅಭಿನಯದ ಮಟ್ಟಿಗೆ ಎಲ್ಲರೂ ಸೂಪರ್. ಅವರರವರ ಪಾತ್ರಗಳಿಗೆ ತಕ್ಕಂತೆ ಎಲ್ಲರು ಚೆನ್ನಾಗಿ ಅಭಿನಯಿಸಿದ್ದಾರೆ. ಬಹುತಾರಾಗಣಗಳಿಂದ ಕೂಡಿರುವ ಇಲ್ಲಿ ಎಲ್ಲರೂ ಚೆನ್ನಾಗಿ ಪಾತ್ರ ಫೋಷಣೆ ಮಾಡಿದ್ದರೆ. ಮಕ್ಕಳಾದಿಯಾಗಿ ಎಲ್ಲರೂ ಆರಾಮಾಗಿ ನೋಡಿ ಬರುವಂತಹ ಸಿನಿಮಾ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited