Untitled Document
Sign Up | Login    
Dynamic website and Portals
  
Home >> Movie Home >> Reviews >> ಪುಂಗಿದಾಸ
Movie Review
ಪುಂಗಿದಾಸ
ನಗಿಸುವ ಪುಂಗಿದಾಸ....
Rating :
Hero :
ಕೋಮಲ್
Heroine :
ಅಸ್ಮ
Other Cast :
ಸುದರ್ಶನ್, ಸಾಹುಕಾರ್ ಜಾನಕಿ, ಬಿ ಸಿ ಪಾಟೀಲ್, ತಬಲ ನಾಣಿ, ಬುಲೇಟ್ ಪ್ರಕಾಶ್, ಪದ್ವಜಾರಾವ್, ರಾಜೇಂದ್ರ ಕಾರಂತ್, ಶ್ರೀಧರ್, ಕುರಿ ಪ್ರತಾಪ್, ಚಿಕ್ಕಣ್ಣ ಮತ್ತು ಮುಂತಾದವರು.
Director :
ಎಂ ಎಸ್ ಶ್ರೀನಾಥ್
Music Director :
ಫಹಾರ್ ರೋಷನ್.
Producer :
ಭಾಗ್ಯಮ್ಮ, ಡಿ ಸದಾಶಿವ
Release Date :
30-05-2014
ಸ್ವಲ್ಪ ಮಟ್ಟಿಗೆ ನೋಡಬಹುದಾದ ಚಿತ್ರಗಳೇ ಅಪರೂಪವಾಗಿರುವಾಗ ಸುಮ್ಮನೆ ಒಮ್ಮೆ ನೋಡ ಬಹುದು ಎಂದು ಹೇಳುವ ಚಿತ್ರ ಪುಂಗಿದಾಸ. ಒಂದರ ಮೇಲೆಂದೊರಂತೆ ದುರಂತಗಳ ಮಳೆ ಸುರಿಸಿರುವ ಕೋಮಲ್ ಈಗ ಪುಂಗಿದಾಸ ಮಾಡಿದ್ದಾರೆ. ಹೇಳಿಕೊಳ್ಳುವಂತಹ ಓಪನಿಂಗ್ ಸಿಗದಿದ್ದರೂ ನಿಧಾನವಾಗಿ ಚೇತರಿಕೊಳ್ಳಬಹುದು.

ರ‍್ಯಾಂಬೋ ಚಿತ್ರದ ನಂತರದಲ್ಲಿ ಮತ್ತೋಂದು ಕಾಮಿಡಿ ಚಿತ್ರಮಾಡಿರುವುದು ಶೀನಾಥ್ ರವರ ಇರುವಿಕೆಯನ್ನು ತೋರಿಸುತ್ತದೆ. ಕೋಮಲ್ ಇಲ್ಲಿ ಒಬ್ಬ ಸೋಂಬೇರಿ ವ್ಯಕ್ತಿ. ಆತ ಮಾಡಿರುವ ಬಹುತೇಕ ಸಿನಿಮಾಗಳಲ್ಲಿ ಆತ ಸೋಮಾರಿ. ತಂದೆ ಕೋರ್ಟಿನಲ್ಲಿ ಅಮೀನ. ತಾಯಿ ಹೌಸ್ ವೈಫ್. ತಂಗಿ ಪಿಯು. ಹೀಗೆ ಇರುವ ಕುಟುಂಬದಲ್ಲಿ ತಾತನೆಂಬ ಕ್ಯಾರೆಕ್ಟರ್‌ಗೆ ಹೃದಯ ಸಂಬಂಧಿ ಚಿಕಿತ್ಸೆಗೆ ೧೫ ಲಕ್ಷ ಕರ್ಚಾಗಿರುತ್ತದೆ. ತಾತ ತುಂಬಾ ಕಡೆ ಹಣವನ್ನು ಬಡ್ಡಿಗಾಗಿ ಬಿಟ್ಟಿರುತ್ತಾನೆ. ಅದನ್ನು ಹಿಂಪಡೆಯುವಲ್ಲಿ ಅಪ್ಪ ಕಾಳಿದಾಸ(ರಾಜೇಂದ್ರ) ಮಗ ರಾಮದಾಸ(ಕೋಮಲ್) ಕಾರ್ಯ ನಿರತರಾಗುತ್ತಾರೆ. ಇದರ ಮಧ್ಯೆ ತಾತ(ಸುದರ್ಶನ್) ಕೋಮಾಗೆ ಹೋಗುತ್ತಾರೆ. ಈ ವಿಷಯ ತಿಳಿದು ತಾತನ ಮತ್ತೊಂದು ಕುಟುಂಬ ಅಜ್ಜಿ(ಜಾನಕಿ) ಮತ್ತು ಮೊಮ್ಮಗಳು ಪ್ರತ್ಯಕ್ಷರಾಗುತ್ತಾರೆ. ಕೊಟ್ಟ ದುಡ್ಡೇಬಾರದಿರುವಾಗ ಇರವರ ಹತ್ತಿರ ಏನಾದರು ಹಣ ಇರಬಹುದೆಂದು ಅವರ ಹಿಂದೆ ಅಪ್ಪ ಮಗ ಬೀಳುತ್ತಾರೆ. ಹಾಗಿರುವಾಗ ಆ ಹುಡುಗಿಯ ಜೊತೆ ಕೋಮಲ್ ಲವ್ ಪ್ರಾರಂಭ. ಹೀಗೆ ಸಾಗುವಾಗ ಅಜ್ಜಿಯ ಫ್ಯಾಮಿಲಿ ಎಲ್ಲಾ ಬರುತ್ತದೆ. ನಿಜವಾದ ವಾರಸುದಾರರು ಯಾರು..? ಎನ್ನುವ ಪ್ರಶ್ನೆ ಬರುತ್ತದೆ.. ಹೀಗೆ ಕತೆ ಸಾಗುತ್ತದೆ. ಏಕೆ ಹೀಗೆಲ್ಲಾ ಆಯಿತು ಇಬ್ಬರು ಮದುವೆಯಾಗುತ್ತಾರಾ..? ಎನ್ನುವುದನ್ನು ಚಿತ್ರದಲ್ಲಿ ನೋಡಿ.

ಈ ಚಿತ್ರದಲ್ಲಿ ನಿರ್ದೇಶಕರು ಕೊಂಚ ಗೊಂದಲಕ್ಕೆ ಬಿದ್ದಹಾಗೆ ಕಾಣುತ್ತದೆ. ಯಾವ ವಿಚಾರದಿಂದ ಕತೆಯನ್ನು ಪ್ರಸ್ತುತ ಪಡಿಸಬೇಕು..? ಯಾವ ವಿಚಾರ ಎಷ್ಟು ಹೇಳಬೇಕು ಎನ್ನುವ ಡೋಲಾಯಮಾನ ಸ್ತಿತಿಯಲ್ಲಿ ನಿಂತಿದ್ದಾರೆ. ಮೊದಲಾರ್ದ ನೋಡಬಹುದು ದ್ವಿತಿಯಾರ್ದ ಕಷ್ಟ. ಲ್ಯಾಗಿಂಗ್ ಎಪಿಸೋಡ್ ಗಳು ತಲೆ ತಿನ್ನುತ್ತದೆ. ಸ್ವಲ್ಪ ಕಮ್ಮಿ ಮಾಡಬಹುದಿತ್ತು. ತಾಂತ್ರಿಕವಾಗಿ ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಸಂಗೀತದಲ್ಲಿ ಬ್ಲಾಕ್ ಅಂಡ್ ವೈಟ್ ಸಾಂಗ್ ಗಿಟ್ಟುತ್ತದೆ. ಹಿರಿಯ ನಟ ಸುದರ್ಶನ್ ಚೆನ್ನಾಗಿ ಕಾಣಿಸುತ್ತಾರೆ.ಎಲ್ಲಾ ನಟರು ತಮ್ಮ ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಆದರೆ ಯಾವುದು ಹಾಸ್ಯ ಯಾವುದು ಸೀರಿಯಸ್ ಎನ್ನುವುದು ಮಾತ್ರ ಗೊತ್ತಾಗುವುದಿಲ್ಲ. ಇನ್ನೂ ಸ್ವಲ್ಪ ಕೆಲಸ ಮಾಡಿದ್ದರೆ ಉತ್ತಮ ಚಿತ್ರ ಮಾಡ ಬಹುದಾಗಿತ್ತು. ನಗುವಿಗೆ ಮೋಸವಿಲ್ಲ. ಸುಮ್ಮನೆ ಒಮ್ಮೆ ನೋಡಿ ಬರುವುದಕ್ಕೆ ಅಡ್ಡಿ ಇಲ್ಲ. ಕೋಮಲ್ ರ ಹಿಂದಿನ ಸಿನಿಮಾಗಳಿಗೆ ಹೋಲಿಸಿದ್ದರೆ ಇದು ಪರವಾಗಿಲ್ಲ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited