Untitled Document
Sign Up | Login    
Dynamic website and Portals
  
Home >> Movie Home >> Reviews >> ಗಜಕೇಸರಿ
Movie Review
ಗಜಕೇಸರಿ
ಗಜಕೇಸರಿ ಯೋಗಾಯೋಗಾ.. ಯಾರಿಗೆ..?
Rating :
Hero :
ಯಶ್
Heroine :
ಅಮೂಲ್ಯ
Other Cast :
ಅನಂತನಾಗ್ ರಂಗಾಯಣ ರಘು, ಸಾಧು, ಹೊನ್ನವ್ಳಿ ಕೃಷ್ಣ, ಮಂಡ್ಯ ರಮೇಶ್, ಗಿರಿಜಾಲೋಕೇಶ್, ಎಂ ಕೆ ಮಠ, ಅಶೋಕ್, ರಾಜೇಶ್, ಶಿವರಾಂ, ಶ್ರೀಧರ್.
Director :
ಕೃಷ್ಣ
Music Director :
ಹರಿಕೃಷ್ಣ
Producer :
ಜಯಣ್ಣ, ಭೋಗೇದ್ರ
Release Date :
23-05-2014
ಸಿನಿಮಾಗಳು ಮತ್ತೆ ಮತ್ತೆ ರಿಪೀಟ್ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ, ಪ್ರಪಂಚ ಪುಟ್ಟದಾದಾಗ ಚಿತ್ರದ ಯೋಚನಾ ಲಹರಿ ವಿಸ್ತಾರವಾಗಬೇಕು. ತುಂಬಾ ಜಾಗರೂಕರಾಗಿ ಕತೆಯನ್ನು ಮಾಡಬೇಕಾಗುತ್ತದೆ. ಕತೆ ಮಾಡಿದ್ದೇವೆ ಎಂದು ಸಿನಿಮಾ ಮಾಡಿದರೆ ಒಂದೇ ರೀತಿಯ ಸಿನಿಮಾಗಳು ಬರುತ್ತದೆ. ಹಿಂದೆ ಬಂದಂತಹ ಭಜರಂಗಿ ಮತ್ತು ಇಂದು ತೆರೆಕಂಡಿರುವ ಗಜಕೇಸರಿ ಸರಿ ಸುಮಾರು ಒಂದೇ ರೀತಿ ಇದೆ. ಎನ್ನುವುದು ಜನರ ಅಭಿಪ್ರಾಯ.

ಈಗಾಗಲೇ ಕನ್ನಡದಲ್ಲಿ ಛಾಯಾಗ್ರಾಹಕರರಾಗಿ ಹಲವಾರು ಸಿನಿಮಾಗಳನ್ನು ಮಾಡಿರುವ ಕೃಷ್ಣ ರವರು ಯಶ್ ಎನ್ನುವ ಕಮರ್ಶಿಲ್ ನಾಯಕರನನ್ನು ಕಟ್ಟಿಕೊಂಡು ಟು ಶೇಡ್ ಸಿನಿಮಾ ಮಾಡಿರುವು ನಿಜಕ್ಕೂ ಶ್ಲಾಘನೀಯ. ಆದರೆ ಅದನ್ನು ಹೇಗೆ ಮ್ಯಾನೇಜ್ ಮಾಡುವುದು ಎನ್ನುದರಲ್ಲಿ ಸ್ವಲ್ಪ ಎಡವಿದ್ದಾರೆ. ಮೊದಲನೆಯದು ಕತೆಯ ಆಯ್ಕೆ, ನಂತರ ಲೊಕೇಷನ್, ಮತ್ತೆ 360 ವರ್ಷದ ಹಿಂದಿನ ಭಾಷೆ, ಹೀಗೆ ಹಲವಾರು ವಿಭಾಗಗಲ್ಲಿ ಎಡವಿದ್ದಾರೆ.

ಕತೆಯ ವಿಷಯಕ್ಕೆ ಬಂದರೆ ನಗರದಲ್ಲಿ ಸುಮ್ಮನೆ ಒಂದು ಸಣ್ಣ ಬಿಸಿನೆಸ್ ಮಾಡಿಕೊಂಡಿರುವ ಕೃಷ್ಣ(ಯಶ್). ತಾಯಿ ಒಂದು ಮಠಕ್ಕೆ ನಡೆದುಕೊಳ್ಳುತ್ತಿರುತ್ತಾಳೆ. ಅಲ್ಲಿಯ ಗುರುಗಳ ಆಜ್ಞೆಯ ಮೇರೆಗೆ ಮಠಕ್ಕೆ ಬರುವ ಕೃಷ್ಣನಿಗೆ ನೀನೆ ಮುಂದಿನ ಈ ಮಠದ ಮಠಾಧಿಪತಿ ಎಂದು ಹೇಳಿ ಶಾಕ್ ಕೊಡುತ್ತಾರೆ. ಅದನ್ನು ತಪ್ಪಿದರೆ ಒಂದು ಆನೆಯನ್ನು ಮಠಕ್ಕೆ ತಪ್ಪುಕಾಣಿಕೆ ಕೊಡಬೇಕು ಎಂದು ಹೇಳಿ ಕಳಿಸುತ್ತಾರೆ. ಇದೆಲ್ಲವನ್ನು ಒಲ್ಲದ ಕೃಷ್ಣ ಜನರ ಕಣ್ಣಿನಲ್ಲಿ ಕೆಟ್ಟವನಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುವ ಎಪಿಸೋಡ್ ಮುಂದುವರೆಯುತ್ತದೆ.

ಕಡೆಗೆ ಯಾವುದೂ ಫಲಿಸಿದಕ್ಕೆ ಆನೆಗಾಗಿ ಕಾಡಿಗೆ ಹೋಗುವ ತೀರ್ಮಾನ ಕೈಗೊಳ್ಳುತ್ತಾನೆ. ಅಲ್ಲಿಸಿಗುವ ಇಸ್ಪೆಕ್ಟರ್ ಅಗ್ನಿ (ರಂಗಾಯಣ ರಘು) ಹಾಗು ಸಾಧು ನಕ್ಕು ನಗಿಸುತ್ತಾರೆ. ಅಲ್ಲೇ ಒಂದು ಹಾಡಿಯಲ್ಲಿ ಸಿಗುವ ನಾಯಕಿ(ಅಮೂಲ್ಯ), ಜೊತೆಗೆ ಹಾಡಿಯ ಜನ. ಕೃಷ್ಣ ಅವರ ಕಷ್ಟಗಳಿಗೆ ಹೀರೋ ಆಗುತ್ತಾನೆ. ಸರ್ಕಾರದ ವಿರುದ್ದ ನಿಲ್ಲುತ್ತಾನೆ. ಕಳ್ಳಕಾಕರ ವಿರುದ್ಧ ನಿಲ್ಲುತ್ತಾನೆ. ಹೀಗೆ ಅವನ ಜೀವನ ಚರಿತ್ರೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದು ಹೇಗೆ ಏನು ಎನ್ನುವುದು ನೀವೇ ಊಹಿಸಬಹುದು ಅಥವ ಚಿತ್ರಮಂದಿರಕ್ಕೆ ಹೋಗಿ ನೋಡಿ. ಎಲ್ಲಾ ನಾಯಕರ ಚಿತ್ರದಂತೆ ನಾಯಕನನ್ನು ಬಿಟ್ಟರೇ ಬೇರೆ ಯಾರೂ ಕಾಣುವುದಿಲ್ಲ. ಕ್ಯಾಮರ ಸತ್ಯ ಹೆಗಡೆ ಪರವಾಗಿಲ್ಲ. ಹರಿಕೃಷ್ಣ ಸಂಗೀತದಲ್ಲಿ ಹಾಡುಗಳನ್ನು ಕೇಳಬಹುದೇ ಹೊರತು ಯಾವುದೂ ನೆನಪಿನಲ್ಲುಳಿಯುವುದಿಲ್ಲ. ಸಂತೋಷ್ ಡೈಲಾಗ್ ಚೆನ್ನಾಗಿದೆ. ಸಿನಿಮಾದ ಮೊದಲಾರ್ದ ತೂಗಿಸಿಕೊಂಡು ಹೋಗುತ್ತಾರೆ. ಮುಂದೆ ಏನೋ ಇದೆ ಎಂದು ಕಾದು ಕೂತವರಿಗೆ ಐತಿಹಾಸಿಕ ವಿಷಯ ಪೇಲವ ಎನ್ನಿಸುತ್ತದೆ. ಅದೆ ಘಟನೆ ವಾಸ್ತವದಲ್ಲು ಮರುಕಳಿಸುತ್ತದೆ. ಯಶ್ ಎಫರ‍್ಟ್ ಕಾಣುತ್ತದೆ. ಅಮೂಲ್ಯ ನೆಪ ಮಾತ್ರ. ಉಳಿದಂತೆ ಅನಂತನಾಗ್ ರಂಗಾಯಣ ರಘು, ಸಾಧು, ಹೊನ್ನವ್ಳಿ ಕೃಷ್ಣ, ಮಂಡ್ಯ ರಮೇಶ್, ಗಿರಿಜಾಲೋಕೇಶ್, ಎಂ ಕೆ ಮಠ, ಉತ್ತಮ ಅಭಿನಯ ತೋರಿಸಿದ್ದಾರೆ. ಅಶೋಕ್, ರಾಜೇಶ್, ಶಿವರಾಂ, ಮುಂತಾದವರು ಅಭಿನಯಿಸಿದ್ದಾರೆ. ಪ್ರಯತ್ನ ಪಟ್ಟಿದ್ದರೆ ಇನ್ನೂ ಉತ್ತಮ ಚಿತ್ರ ಮಾಡಬಹುದಾಗಿತ್ತು.

ವರದಿಃ ನಟರಾಜ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited