Untitled Document
Sign Up | Login    
Dynamic website and Portals
  
Home >> Movie Home >> Reviews >> ಅಜಿತ್
Movie Review
ಅಜಿತ್
ಸುತ್ತಿದೆ.. ಸುತ್ತುತ್ತೇ.. ಅಜಿತ್ ಪಯಣ..
Rating :
Hero :
ಚಿರಂಜೀವಿ ಸರ್ಜ
Heroine :
ನಿಕ್ಕಿ
Other Cast :
ಅರ್ಪಿತ್, ರಾಕ್ಲೈನ್ ಸುಧಾಕರ್, ಶಿವ, ಮಂಜು ಮುಂತಾದವರು.
Director :
ಮಹೇಶ್ ಬಾಬು
Music Director :
ಯುವನ್ ಶಂಕರ್‌ರಾಜ
Producer :
ಪ್ರೇಮ್, ಪ್ರಣವ್ ಗೌಡ
Release Date :
09-05-2014
ಕನ್ನಡದ ಸಿನಿಮಾಗಳೆಂದರೆ ಬೇರೆ ಭಾಷಿಗರು ಬಂದು ನೋಡಿ ಅದನ್ನು ಅವರ ಭಾಷೆಗಳಲ್ಲಿ ಮಾಡುವ ಕಾಲವಿತ್ತು. ಇಂದು ಸಾಲು ಸಾಲಾಗಿ ಕನ್ನಡದಲ್ಲೇ ರೀಮೇಕ್ ಸಿನಿಮಾಗಳು ಬರುತ್ತಿದೆ. ಕನ್ನಡದಲ್ಲಿ ಸ್ವಮೇಕ್ ಸಿನಿಮಾಗಳು ಹೆಚ್ಚಾಗಿ ಗೆಲ್ಲುತ್ತಿಲ್ಲ. ಇದರ ಮೇಲೆ ಹೀಗೆ ರೀಮೇಕ್ ಸಿನಿಮಾಗಳು ದಾಳಿ ಇಡುತ್ತಿದೆ. ಇದಕ್ಕೆ ಮೂಲ ಕಾರಣ ಇಂತಹ ಕತೆಯನ್ನು ಆಯ್ದುಕೊಂಡರೆ ಉತ್ತಮವಾಗಿರುತ್ತದೆ, ಜನರು ನೋಡುತ್ತಾರೆ ಎನ್ನುವ ಆಯ್ಕೆಗಾರರ ಸಮಸ್ಯೆ. ಬೇರೆ ಭಾಷೆಯಲ್ಲಿ ಹೆಸರು ಮಾಡಿರುವ ಸಿನಿಮಾವನ್ನು ತಂದು ಇಲ್ಲಿ ಮಾಡಿದರೆ ಅದು ಗಿಟ್ಟುತ್ತದೆ ಎನ್ನುವ ಮೂಢನಂಬಿಕೆ. ಅಂತಹ ನಂಬಿಕೆಗಳಲ್ಲಿ ಅಜಿತ್ ಚಿತ್ರವು ಒಂದು.

ಕತೆಯನ್ನು ಎಲ್ಲಿಗೆ ಬೇಕಾದರು ಹೊಂದಿಸಿಕೊಳ್ಳುವ ಚಾಣಾಕ್ಷರು ಇರುವ ಇಲ್ಲಿ, ಪಕ್ಕದ ರಾಜ್ಯದ ಕತೆಯನ್ನು ಇಲ್ಲಿಗೆ ಚೆನ್ನಾಗೇ ಹೊಂದಿಸಿಕೊಂಡಿದ್ದಾರೆ. ಓದಿಕೊಂಡು ಕೆಲಸ ಮಾಡದೇ ಓಡಾಡಿಕೊಂಡಿರುವ ಹುಡುಗ ಅಜಿತ್‌ಗೆ(ಚಿರು) ೫ ಜನ ಸ್ನೇಹಿತರು. ಅವರು ಇವನಿಗೆ ಕೆಲಸ ಕೊಡಿಸುವ ಪ್ರಯತ್ನ ಮಾಡುತ್ತಾರೆ. ಹಾಗೆ ಇರುವಾಗ ಅವನಿಗೆ ಒಬ್ಬ ಬೆಡಗಿ ಆತನಿಗೆ ಕಾಣಿಸುತ್ತಾಳೆ. ಅವಳೆ ಚಾರುಲತ(ನಿಕ್ಕಿ). ಈತ ಮಾಡುವ ಕೆಲಸವನ್ನು ಬಿಟ್ಟು ಆಕೆಯ ಹಿಂದೆ ಬೀಳುತ್ತಾನೆ. ಅಕಸ್ಮಾತ್ ಆಗಿ ಸಿಕ್ಕ ಆಕೆಯನ್ನು ಹೈದರಾಬಾದಿಗೆ ಕರೆದುಕೊಂಡು ಹೋಗುವ ಪ್ರಸಂಗ ಒದಗುತ್ತದೆ. ರೊಟ್ಟಿ ಜಾರಿ ತುಪ್ಪಕೆ ಬಿದ್ದಹಾಗೆ ಅವನು ಅವಳನ್ನು ಕರೆದುಕೊಂಡು ಹೋಗಲು ಅಣಿಯಾಗುತ್ತಾನೆ. ಸ್ನೇಹಿತನ ಕಾರನ್ನು ಹೇಳದೆ ಕೇಳದೆ ತೆಗೆದುಕೊಂಡು ಹೊರಡುತ್ತಾನೆ. ಅಲ್ಲಿಂದ ಇಬ್ಬರ ಪ್ರಾಯಾಸದ ಪ್ರಣಯ ಯಾತ್ರೆ ಪ್ರಾರಂಭ. ಆಕೆ ಇದ್ದಕ್ಕಿದ್ದ ಹಾಗೆ ಬಾಂಬೆಗೆ ಹೋಗುವ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅಲ್ಲಿಗೆ ಹೋಗುವ ನಡುವಿನಲ್ಲೇ ಇವರಿಬ್ಬರ ಫ್ಲಾಷ್‌ಬ್ಯಾಕ್ ಸ್ಟೋರಿ. ಆಕೆಯ ಮನೆಯ ಕಡೆಯವರು ಬಲವಂತದ ಮದುವೆ ಮಾಡುತ್ತಿರುತ್ತಾರೆ ಎನ್ನುವ ಕಾರಣಕ್ಕೆ ಆಕೆ ಬಂದಿದ್ದರೆ, ಈತ ಅವಳಿಗಾಗಿ, ಅವಳ ಪ್ರೀತಿಗಾಗಿ ಬಂದಿರುತ್ತಾನೆ. ಹೀಗೆ ಕತೆಯು ಸಾಗುತ್ತದೆ. ಕತೆಯಲ್ಲಿ ಬರುವ ರೌಡಿಗಳು ತಮಿಳು, ತೆಲುಗು, ಹಿಂದಿ ಎಲ್ಲವನ್ನು ಮಾತಾಡಿ ಜನರನ್ನು ಗೊಂದಲಕ್ಕೆ ಗುರಿ ಮಾಡುತ್ತಾರೆ. ಇದರ ನಡುವೆ ಅಜಿತ್ ಅವಳ ಮನಸ್ಸನ್ನು ಗೆಲ್ಲುತ್ತಾನಾ..? ಆಕೆಯ ಕಡೆಯ ರೌಡಿಗಳು ಅವನನ್ನು ಉಳಿಸುತ್ತಾರಾ..? ಬಾಂಬೆಗೆ ಏಕೆ ಹೋಗುತ್ತಿದ್ದಳು..? ಎಲ್ಲವೂ ಚಿತ್ರದಲ್ಲಿ ನೋಡಿ.

ಕತೆಯ ಎಳೆ ತೆಳುವಾದರೂ ಅದನ್ನು ಕ್ಯೂರಿಯಸ್ಸಾಗಿ ತೆಗೆದುಕೊಂಡು ಹೋಗ ಬಹುದಾಗಿತ್ತು. ಯಾವುದೇ ಎಮೋಷನ್ ಇಲ್ಲದ ಸೀನ್ಗಳು, ಡ್ರಾಮವನ್ನೇ ಕ್ರಿಯೇಟ್ ಮಾಡದ ಸುಮ್ಮನೆ ಬಂದು ಹೋಗುವ ಹಾಡುಗಳು ಬೇಸರವೆನಿಸುತ್ತದೆ.
ಚಿತ್ರದಲ್ಲಿ ಈಗಾಗಲೇ ಜನರು ಕೇಳಿ ಆನಂದಿಸಿರುವ ಹಾಡಿನ ಕನ್ನಡ ಅವತರಣಿಕೆಯನ್ನು ಕೇಳಬಹುದು. ಹೊಸತು ಏನೂ ಇಲ್ಲ. ಮ್ಯೂಸಿಕ್ ಮಟ್ಟಿಗೆ ಸೂಪರ್. ಹಿನ್ನೆಲೆ ಸಂಗೀತದಲ್ಲಿ ಹರಿಕೃಷ್ಣ ಗಮನ ಸೆಳೆಯುವುದಿಲ್ಲ. ರವಿಮರ್ವ, ವೆಂಕಟೇಶ್ ಫೈಟ್ ಚೆನ್ನಾಗಿ ಬಂದಿದೆ. ಛಾಯಾಗ್ರಹಣ ಪರವಾಗಿಲ್ಲ.

ಮಹೇಶ್‌ಬಾಬುರವರು ತಮ್ಮ ಇಂತಹ ದುಸ್ಸಾಹಸಗಳಿಗೆ ತಿಲಾಂಜಲಿ ಇಟ್ಟು ಹೊಸ ಪ್ರಯತ್ನ ಮಾಡಿದರೆ ಜನರನ್ನು ಸೆಳೆಯಬಹುದು.

ವರದಿಃ ನಟರಾಜ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited