Untitled Document
Sign Up | Login    
Dynamic website and Portals
  
Home >> Movie Home >> Reviews >> ಜೈಲಲಿತ
Movie Review
ಜೈಲಲಿತ
ಜೈ.. ಜೈ.. ಜೈಲಲಿತ....
Rating :
Hero :
ಶರಣ್
Heroine :
ದಿಶಾ ಪಾಂಡೆ
Other Cast :
ಟಿ ಎಸ್ ನಾಗಾಭರಣ, ಸುಚೇಂದ್ರ ಪ್ರಸಾದ್, ರಾಮಕೃಷ್ಣ, ರವಿಶಂಕರ್, ಹರೀಶ್ ರಾಜ್, ರಾಮ್ ಪ್ರಸಾದ್, ತಬಲ ನಾಣಿ, ಐಶ್ವರ್ಯ, ಮುಂತಾದವರು.
Director :
ಪಿ. ಕುಮಾರ್
Music Director :
ಶ್ರೀಧರ್ ಸಂಭ್ರಮ್
Producer :
ಇಂದಿರಾ, ಅರುಣ್ ಕುಮಾರ್
Release Date :
27-06-2014
ಜೈ ಲಲಿತಾ ಎನ್ನುವ ಚಿತ್ರದ ಮೊದಲ ಪೋಸ್ಟರ್ ನೋಡಿದವರಿಗೆ ಯಾರಪ್ಪಾ ಹೊಸಾ ನಾಯಕಿ ಕನ್ನಡಕ್ಕೆ..? ಎನ್ನುವ ಪ್ರಶ್ನೆ ಮೂಡಿರುವುದಂತು ಖಂಡಿತ. ತಕ್ಷಣಕ್ಕೆ ನೋಡಿದರೆ ನಿಜವಾಗಿಯೂ ಅದು ಶರಣ್ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಇಷ್ಟುದಿನ ಪೋಸ್ಟರ್ ನೋಡುತ್ತಿದ್ದವರಿಗೆ ಇಂದು ಚಿತ್ರ ತೆರೆಕಂಡಿದೆ ಅದರಲ್ಲಿ ಶರಣ್ ಹೆಣ್ಣಾಗಿ ಏನು ಮಾಡಿದ್ದಾರೆ..? ನೋಡಬಹುದು.

ಕನ್ನಡಕ್ಕೆ ಇದೇನು ಹೊಸದಲ್ಲ. ಹಿಂದೆ ರಾಜ್ ಕುಮಾರ್, ಶ್ರೀಧರ್, ಜಗ್ಗೇಶ್ ಹೀಗೆ ಹೆಣ್ಣಿನ ಪಾತ್ರ ಹಾಕಿ ಸಿನಿಮಾ ಮಾಡಿದ್ದಾರೆ. ಮುಖ್ಯ ಭೂಮಿಕೆ ಅಲ್ಲದಿದ್ದರೂ ಹಲವಾರು ನಟರು ಹೆಣ್ಣಿನ ಪಾತ್ರ ನಿರ್ವಹಣೆ ಮಾಡಿದ್ದಾರೆ. ನಿಜಕ್ಕೂ ಅದೊಂದು ಚಾಲೆಂಜಿಂಗ್ ಜಾಬ್. ಶರಣ್‌ರಂತಹ ಕಾಮಿಡಿ ನಾಯಕರು ಇಂತಹ ಸಾಹಸಕ್ಕೆ ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ. ಮತ್ತು ಜೈಲಲಿತ ಒಳ್ಳೆಯ ಪ್ರಯತ್ನಕೂಡ.

ಈ ಸಿನಿಮಾದ ಕತೆ ನಮ್ಮದಲ್ಲ ಮತ್ತು ಬೇರೊಂದು ಭಾಷೆಯ ರೀಮೇಕ್ ಸಿನಿಮಾವಾಗಿದ್ದರೂ ಅದನ್ನು ನಮ್ಮ ತನಕ್ಕೆ ಇಳಿಸಿಕೊಳ್ಳುವ ಪ್ರಯತ್ನ ಚೆನ್ನಾಗಿದೆ. ಶರಣ್ ಪಾತ್ರಕ್ಕೆ ಮೋಸ ಮಾಡದೇ ಚೆನ್ನಾಗಿ ಅಭಿನಯಿಸಿದ್ದಾರೆ. ಹಾಗೆ ಕಾಣಿಸುವಂತೆ ಮೇಕಪ್ ಮನ್ ಮಲ್ಲಿಕಾರ್ಜುನ್ ಮತ್ತು ಕ್ಯಾಮರ ಮನ್ ಕರುಣಾಕರ್ ಇಬ್ಬರೂ ಇಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ. ಇವರೆಲ್ಲರನ್ನು ನಿರ್ದೇಶಕ ಪಿ,ಕುಮಾರ್ ಚೆನ್ನಾಗಿ ದುಡಿಸಿಕೊಂಡಿದ್ದಾರೆ.

ಕತೆಯ ವಿಷಯಕ್ಕೆ ಬರುವುದಾದರೆ.. ಒಂದು ಹಳೆಯದಾದ ನಾಟಕದ ಕಂಪನಿ, ಪರಂಪರೆಯಿಂದ ನಾಟಕ ಮಾಡಿಕೊಂಡು ಬರುತ್ತಿರುವ ಶ್ರೀಕಂಠಯ್ಯ(ನಾಗಾಭರಣ) ಕುಟುಂಬ. ಅವರ ಮುಂದಿನ ಪೀಳಿಗೆಯೇ ಜೈರಾಜ್,.(ಶರಣ್) ಆದರೆ ಆತನಿಗೆ ಅಭಿನಯ ಎಂದರೆ ಅಲರ್ಜಿ. ಓದಿ ಉತ್ತಮ ಕೆಲಸ ಮಾಡಬೇಕೆಂಬುದು ಅವನ ಆಸೆ. ಅದರಂತೆ ಆತ ಓದುತ್ತಾನೆ ಕೂಡ. ಇತ್ತ ಯೋಗರಾಜ್(ಹರೀಶ್‌ರಾಜ್) ಎನ್ನುವ ಶ್ರೀಮಂತರ ಮನೆಯ ಹುಡುಗನಿಗೆ ಹೆಣ್ಣು ನೋಡುತ್ತಿರುತ್ತಾರೆ. ಅವನಿಗೆ ಸಿಗುವ ಲತ ಎನ್ನುವ ಹುಡುಗಿ. ಅವಳನ್ನು ಮದುವೆ ಮಾಡಕೊಳ್ಳಲು ಹೊರಡುವ ಯೋಗರಾಜ್. ಅವಳ ತಂದೆ ಲ್ಯಾಂಡ್ ಡೀಲಿಗೆ ಹu ಹೂಡುವಂತೆ ಒತ್ತಾಯಿಸುತ್ತಾನೆ. ಶ್ರೀಕಂಠಯ್ಯನ ನಾಟಕದ ಕಂಪನಿಮೇಲೆ ಕಣ್ಣು ಹಾಕುತ್ತಾನೆ. ಅದರ ವಿಷಯವಾಗಿ ಡೀಲ್ ಮಾಡಲು ಯೋಗರಾಜ್ ಮತ್ತು ಲಕ್ಷ್ಮೀಕಾಂತ(ರವಿಶಂಕರ್)ನನ್ನು ಬಿಡುತ್ತಾನೆ. ಈ ವಿಷಯದಲ್ಲಿ ಶ್ರೀಕಂಠಯ್ಯ ಕಣ್ಮರೆಯಾಗುತ್ತಾರೆ. ಯೋಗರಾಜನ ಹುಡುಗಿ ಓಡಿ ಹೋಗುತ್ತಾಳೆ. ಅವಳ ಜಾಗಕ್ಕೆ ತುರ್ತು ಪರಿಸ್ಥಿತಿಯಲ್ಲಿ ಬಾಡಿಗೆಗೆ ಬರುವ ಹುಡುಗಿಯೇ ಜೈ ಲಲಿತ. ಅಲ್ಲಿಂದ ಗೇಮ್ ಶುರು. ಯಾರು ಯಾರಿಗೆ ಹೆಂಡತಿ..? ಏಕೆ ಜೈ ಲಲಿತಾ ಬರುತ್ತಾಳೆ..? ಅವಳಿಗೂ ಯೋಗರಾಜನಿಗೂ ಏನು ಸಂಭಂಧ.? ಜೈ ರಾಜ್ ಏನಾಗುತ್ತಾನೆ..? ಎನ್ನುವ ಅಂಶಗಳನ್ನು ಸಿನಿಮಾ ಮಂದಿರದಲ್ಲಿ ನೋಡಿ.

ಒಮ್ಮೆ ನೋಡಲು ಅಡ್ಡಿ ಇಲ್ಲ. ಕೆಲವಾರು ಅಂಶಗಳು ಲ್ಯಾಗಿಂಗ್ ಎನ್ನಿಸುತ್ತದೆ. ಸ್ಕ್ರೀನ್ ಪ್ಲೇ ಚೆನ್ನಾಗಿ ಮಾಡಿಕೊಂಡಿದ್ದರೆ ಲ್ಯಾಗಿಂಗ್ ಪಾಯಿಂಟ್ ತೆಗೆಯಬಹುದಾಗಿತ್ತು. ಒಳ್ಳೆಯ ಸಂಗೀತ ಸಿನಿಮಾಗೆ ಸಿಗಬೇಕಾಗಿತ್ತು. ಸುಮ್ಮನೆ ಕೇಳಿ ಮರೆಯಾಗಿ ಹೋಗುತ್ತದೆ. ಹೊಸತು ಎನ್ನಿಸುವುದಿಲ್ಲ. ಕನ್ನಡ.. ಮತ್ತು ಸದಾರಮೆ ಹಾಡು ಪರವಾಗಿಲ್ಲ. ಸಂಭಾಷಣೆ ಯಲ್ಲಿ ಪ್ರಶಾಂತ್ ತಮ್ಮ ಹಿಂದಿನ ಚಾಳಿ ಮುಂದುವರೆಸಿದ್ದಾರೆ. ಡಬ್ಬಲ್ ಮೀನಿಂಗ್ ಸ್ವಲ್ಪ ಕಮ್ಮಿ ಮಾಡಬಹುದಾಗಿತ್ತು.

ನಾಯಕ ಮತ್ತು ನಾಯಕಿಯಾಗಿ ಎರಡಾಗಿಯೂ ಶರಣ್ ಅಭಿನಯಿಸಿರುವುದರಿಂದ ದಿಶಾಗೆ ಚೆನ್ನಾಗಿ ಅಭಿನಯಿಸಿ ಪ್ರೂ ಮಾಡಿಕೊಳ್ಳುವ ಸಂದರ್ಭ ಒದಗಿ ಬಂದಿಲ್ಲ. ಐಶ್ವರ್ಯ ಪರವಾಗಿಲ್ಲ. ಹರೀಶ್ ರಾಜ್, ರವಿಶಂಕರ್, ರಾಮಕೃಷ್ಣ, ನಾಗಾಭರಣ, ಹಾಗು ತಬಲ ನಾಣಿ, ಸುಚೇಂದ್ರ ಪ್ರಸಾದ್ ತಮ್ಮ ಪಾತ್ರಗಳಿಗೆ ಮೋಸ ಮಾಡದೆ ಚೆನ್ನಾಗಿ ಅಭಿನಯಿಸಿದ್ದಾರೆ.

ಸಿನಿಮಾ ಓಕೆ. ಒಮ್ಮೆ ನೋಡಿ ನಕ್ಕು ಬರಲು ಅಡ್ಡಿಯಿಲ್ಲ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited