Untitled Document
Sign Up | Login    
Dynamic website and Portals
  
Home >> Movie Home >> Reviews >> ಟಿಪಿಕಲ್
Movie Review
ಟಿಪಿಕಲ್
ಟಿಪಿಕಲ್ ಕೈ ಲಾಸ್...
Rating :
Hero :
ಸೃಜನ್ ಲೋಕೇಶ್
Heroine :
ವೃಂದ
Other Cast :
ಓಂ ಪ್ರಕಾಶ್‌ರಾವ್, ಸುಂದರ್ ರಾಜ್, ಶ್ರೀನಿವಾಸ ಪ್ರಭು, ಲಕ್ಷ್ಮಿದೇವಿ, ಆಸಿಫ್ ಪರೂಕಿ, ಶ್ರೀಧರ್, ಸುಮನ್, ಪ್ರಶಾಂತ್, ಮುಂತಾದವರು.
Director :
ಬಿ ಎಸ್ ಮಲ್ಲಿಕ್
Music Director :
ವಿ. ಮನೋಹರ್
Producer :
ಎನ್ ದೇವರಾಜ್, ಶಿವಕುಮಾರ್
Release Date :
ನೋಡಿ ನಾವು ವಾಟರ್ ಇದ್ದಂಗೆ ಲೋಟಕ್ ಹಾಕಿದ್ರೆ ಲೋಟದ್ ಶೇಪು, ಬಾಟ್ಲಿಗ್ ಹಾಕಿದ್ರೇ ಬಾಟಲಿ ಶೇಪು.. ಹೇಗ್ ಬೇಕೋ ಹಾಗೆ.. ಎನ್ನುವ ಡೈಲಾಗ್ ಹೊಡೆದುಕೊಂಡು ಸುಮ್ಮನೆ ತಿಂದು ಓಡಾಡುವ ಉಂಡಾಡಿ ಗುಂಡ ಕೈಲಾಸ್..(ಸೃಜನ್). ಆತನನ್ನು ಜೀವನದಲ್ಲಿ ಉದ್ಧಾರ ಮಾಡಲು ಬರುವು ಹುಡುಗಿಯೇ ನಾಯಕಿ(ವೃಂದ). ಹೀಗಿದೆ ಕತೆಯ ಸಾರ.

ಅರ್ಥವಾಗದಂತಹ ವ್ಯಕ್ತಿತ್ವವೇನು ಅಲ್ಲ. ಅವನಿಗೆ ಕೆಲಸ ಮಾಡುವುದೆಂದರೆ ಅಲರ್ಜಿ. ಅಪ್ಪನಿಗೆ ಮುದಿ ವಯಸ್ಸಿನಲ್ಲೂ ಸಿನಿi ನಾಯಕನಾಗುವ ಬಯಕೆ. ತಾಯಿಗೆ ಅದೊಂದು ಸಂಪತ್ತು. ಮಗನಾದ ಈತ ಒಂದಷ್ಟು ಪುಸ್ತಕಗಳನ್ನು ಹಾಕಿಕೊಂಡು ಸ್ವಯಂ ಎಜುಕೇಷನ್ ಮಾಡಿಕೊಂಡು ಯಾವಾಗಲು ಮಲಗಿಕೊಂಡಿರುತ್ತಾನೆ. ತಂದೆ ತಾಯಿ ಒಂದು ಆಕ್ಸಿಡೆಂಟಿನಲ್ಲಿ ಮರಣ ಹೊಂದುತ್ತಾರೆ. ಅಲ್ಲಿಂದ ಕೈಲಾಸ್ ಜೀವನ ಪ್ರಾರಂಭ. ಎಲ್ಲೇ ಹೋದರೂ ಲಾಸ್.. ಲಾಸ್.. ಜೀವನ ಅಧೋಗತಿಗೆ ಇಳಿಯುತ್ತದೆ. ಅನಾಥನಾಗಿ ಅಲೆದಾಡುತ್ತಾನೆ. ಅಲ್ಲಿ ಆಶ್ರಯವಾಗುವುದೇ ಇವರ ತಾತನಿಂದ ಸಹಾಯ ಹೊಂದಿವರು. ಅದೇ ಮನೆಗೆ ನಾಯಕಿ ಕೂಡ ಬಂದು ಕೂರುತ್ತಾಳೆ. ಅಲ್ಲಿಂದ ಕತೆ ಪ್ರಾರಂಭ. ಅವನ ಮೇಲೆ ಆಕೆಗೆ ಸಿಟ್ಟಿನಿಂದ ಪ್ರೀತಿ ಹುಟ್ಟುತ್ತದೆ. ಆತನನ್ನು ಮುಂದುವರೆಯುವಂತೆ ಮಾಡಬೇಕು ಮತ್ತು ಆಕೆಯ ಮನೆಯವರು ಆತನನ್ನು ಒಪ್ಪಬೇಕು ಎಂದು ಎಲ್ಲಿಲ್ಲದ ಪ್ರಯತ್ನ ಮಾಡುತ್ತಾಳೆ. ಹಾಗೆ ಪ್ರಯತ್ನ ಮಾಡುವುದೇ ಸಿನಿಮಾ..

ಆತ ಜೀವನದಲ್ಲಿ ಉದ್ದಾರ ಆಗುತ್ತಾನಾ..? ಆಕೆ ಏನು ಮಾಡುತ್ತಾಳೆ..? ಅವನ ಸಾಧನೆ ಏನು..? ಅವನು ಆಕೆಯನ್ನು ಪ್ರೀತಿಸುತ್ತಾನಾ..? ಎಂಬೆಲ್ಲಾ ಪ್ರಶ್ನೆಗಳಿಗೆ ಚಿತ್ರಮಂದಿರದಲ್ಲಿ ಉತ್ತರ ಸಿಗುತ್ತದೆ.

ಚಿತ್ರದಲ್ಲಿ ಬೋರಿಂಗ್ ಇದ್ದರು ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆ. ಹಾಗೆ ನೊಡಿಸಿಕೊಂಡು ಹೋಗಲು ಕಾರಣವೇ ಮೇಲೆ ಉಂಟಾಗುವ ಪ್ರಶ್ನೆಗಳು. ಬಿ, ಎನ್ ಮಲ್ಲಿಕಾ ಈ ಕತೆಯನ್ನು ಚಿತ್ರ ಮಾಡಲು ಹರಸಾಹಸ ಮಾಡಿರುವುದು ಕಾಣುತ್ತದೆ. ಆದರೆ ಇನ್ನೂ ಕೆಲವಾರು ಅಂಶಗಳಲ್ಲಿ ತಮ್ಮ ಪ್ರಯತ್ನ ಹಾಕಬಹುದಾಗಿತ್ತು. ಕತೆಯ ದೃಶ್ಯಗಳಲ್ಲಿ ಒಂದಷ್ಟು ಜೀವ ತುಂಬಬಹುದಾಗಿತ್ತು.

ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಸೃಜನ್ ತಮ್ಮ ಅಭಿನಯದಲ್ಲಿ ಸ್ವಲ್ಪ ಹೊಸದಾಗಿ ಕಾಣಿಸಿಕೊಂಡಿದ್ದಾರೆ. ವೃಂದ ಒಳ್ಳೆಯ ಅಭಿನಯ ಮಾಡಿದ್ದಾರೆ.

ತಾಂತ್ರಿಕವಾಗಿ ಸಂಗೀತದಲ್ಲಿ, ಛಾಯಾಗ್ರಹಣದಲ್ಲಿ, ಸಂಕಲನದಲ್ಲಿ ಎಲ್ಲರನ್ನು ತಕ್ಕಮಟ್ಟಿಗೆ ಬಳಸಿಕೊಂಡಿದ್ದಾರೆ. ಅದ್ಭುತವಾದದ್ದೇನು ನಡೆದಿಲ್ಲ. ಯಾವುದೇ ಹಾಡು ಬಾಯಲ್ಲಿ ಉಳಿಯುವುದಿಲ್ಲ. ಸಂಭಾಷಣೆಯಲ್ಲಿ ಸ್ವಲ್ಪ ಮಟ್ಟಿಗೆ ಚುರುಕು ಮುಟ್ಟಿಸಿ ಜನರನ್ನು ರಂಜಿಸಿದ್ದರೆ ಹೆಚ್ಚುದಿನ ಜನರ ಮನಸ್ಸಿನಲ್ಲಿ ಉಳಿಯುವ ಸಾಧ್ಯತೆ ಇತ್ತು. ಸಿನಿಮಾ ಪ್ರಾರಂಭವಾದ ಮೊದಲ ಹಂತದಲ್ಲೇ ಬೋರಿಂಗ್ ಎನ್ನಿಸಿ ಬಿಡುತ್ತದೆ. ಕೆಲವು ನಿಮಿಷದ ನಂತರ ನೋಡುಗರನ್ನು ಎಂಗೇಜ್ ಮಾಡುತ್ತಾರೆ.

ವರದಿ ಃ ನಟರಾಜ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited