Untitled Document
Sign Up | Login    
Dynamic website and Portals
  
Home >> Movie Home >> Reviews >> ಪ್ರೀತಿ ಗೀತಿ ಇತ್ಯಾದಿ..
Movie Review
ಪ್ರೀತಿ ಗೀತಿ ಇತ್ಯಾದಿ..
ಪಾಪ ಪುಣ್ಯ ಇತ್ಯಾದಿ...
Rating :
Hero :
ಪವನ್ ಒಡೆಯರ್
Heroine :
ಸಂಗೀತ ಭಟ್
Other Cast :
ರಂಗಾಯಣ ರಘು, ವಿನಯ ಪ್ರಸಾದ್, ಮಂಜುನಾಥ ಗೌಡ, ಮುಂತಾದವರು.
Director :
ವೀರೇಂದ್ರ
Music Director :
ವೀರ ಸಮರ್ಥ
Producer :
ವಿಜಯ ಕುಮಾರ್ ಮಂಗ್ಸೂಳೆ.
Release Date :
13-06-2014
ಪ್ರೀತಿ ಗೀತಿ ಇತ್ಯಾದಿ.. ಎಂದು ನಾಮಕರಣಗೊಂಡು ಇಂದು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ ನಿರ್ದೇಶಕ ಪವನ್ ಒಡೆಯರ್ ನಾಯಕರಾಗಿ ಅಭಿನಯಿಸಿ, ವೀರೇಂದ್ರ ನಿರ್ದೇಶಿಸಿರುವ ಈ ಚಿತ್ರಕ್ಕೆ ಪಾಪ ಪುಣ್ಯ ಇತ್ಯಾದಿ.. ಅಥವ ಪ್ರಾಯಶ್ಚಿತ್ತಾ.. ಅಥವಾ ಅನಾಹುತ.. ಎಂತಲ್ಲಾ ಇಡಬಹುದಾಗಿತ್ತು. ಅದೇಕೆ ಹೀಗೆ ಪ್ರೀತಿ ಗೀತಿ ಇತ್ಯಾದಿ.. ಎಂದಿಟ್ಟರೋ ಅವರಿಗೆ ಗೊತ್ತು. ಇದೊಂದು ಪ್ರಶ್ನೆ ಕಾಡಿದರೆ ಸಿನಿಮಾ ನೋಡಿದವರಿಗೆ ಪವನ್ ಒಡೆಯರ್ ಅನ್ನೇ ಏಕೆ ಆಯ್ಕೆ ಮಾಡಿಕೊಂಡರು ಎನ್ನುವುದಂತು ಕಾಡುತ್ತದೆ. ಯೋಗರಾಜ್ ಭಟ್ಟರ ಕತೆಯಾಗಿರುವುದರಿಂದ ಅವರ ಪಾತ್ರಗಳೆಲ್ಲಾ ಹಿಂದಿನ ಸಿನಿಮಾಗಳಾದ ಗಾಳಿಪಟ, ಮುಂಗಾರು ಮಳೆ, ಪರಮಾತ್ಮದಂತೆಯೇ ಜೋವೆಲ್ ಆಗಿ ಮಾತಾಡಿಕೊಂಡು ಓಡಾಡುತ್ತದೆ. ಪವನ್ ಹೇಗೆ ಅಂತಹ ಪಾತ್ರಕ್ಕೆ ಹೊಂದಿಕೆಯಾಗುತ್ತಾರೆ ಎಂದು ವೀರೇಂದ್ರ ನಿರ್ಧರಿಸಿದರೋ ಅವರಿಗೆ ಗೊತ್ತು. ಹೋಗಲಿ ಬಿಡಿ ಸಿನಿಮಾವಂತು ಆಗಿದೆ.

ಇಡೀ ಚಿತ್ರ ನಿಂತಿರುವುದೇ ಒಂದು ಅಕ್ಸಿಡೆಂಡ್ ಮತ್ತು ವ್ಯಕ್ತಿಯಲ್ಲಿರುವ ಪಾಪ ಪ್ರಜ್ಞೆ ಯ ಆಧಾರದ ಮೇಲೆ. ಬೈ ಬರ್ತ್ ಬಾರ್ ಓನರ್ ಪವನ್, ಮತ್ತು ಅವನ ಚಿಕ್ಕಪ್ಪ ಮತ್ತು ತಂಗಿಯ ಒಂದು ಕುಟುಂಬ. ತಂಗಿಗೆ ಮದುವೆ ಫಿಕ್ಸ್ ಆಗಿರುತ್ತದೆ. ತನ್ನ ಬಾಯ್ ಫ್ರೆಂಡ್ ಜೊತೆ ಮಾತಾಡುತ್ತಾ.. ಕಾರ್ ಓಡಿಸಿಕೊಂಡು ಹೋಗುವಾಗ ಅಚಾನಕ್ಕಾಗಿ ಒಂದು ಆಕ್ಸಿಡೆಂಟ್ ನಡೆದು ಹೋಗುತ್ತದೆ. ಅಪಘಾತಕ್ಕೆ ಒಳಗಾದವನು ಸತ್ತನೋ ಬದುಕಿದನೋ ಎನ್ನುವುದನ್ನು ನೋಡದೆ ಅಲ್ಲಿಂದ ತಂಗಿ ಮತ್ತು ಪವನ್ ಕಾರ್ ಓಡಿಸಿಕೊಂಡು ಹೋಗುತ್ತಾರೆ. ಅಲ್ಲಿಂದ ನಾಯಕನಿಗೆ ಆ ಫ್ಯಾಮಿಯ ಮೇಲೆ ಕನಿಕರ ಮೂಡುತ್ತದೆ. ಅವರಿಗೆ ತಾನೆ ಸಹಾಯ ಮಾಡಲು ಹೋಗುತ್ತಾನೆ. ಒಂದು ವಿಚಿತ್ರವೆಂದರೆ ಅಪರಿಚಿತನಾದ ಪವನ್ ಅನ್ನು ಮನೆಯವರು ತಮ್ಮವನು ಎಂಬುವಂತೆ ಮನೆಗೆ ಕರೆದುಕೊಳ್ಳುತ್ತಾರೆ. ಇದಕ್ಕೆ ಯಾವುದೇ ಲಾಜಿಕ್ ಇಲ್ಲ. ಆತನೂ ತನ್ನ ಪಾಡಿಗೆ ತಾನಿರುತ್ತಾನೆ. ಅವರ ಕಷ್ಟಗಳಿಗೆ ಪರಿಹಾರ ಸೂಚಿಸುತ್ತಾನೆ. ಎಲ್ಲರಿಗೂ ಉಡುಗೊರೆಗಳನ್ನು ಕೊಟ್ಟು ಖುಷಿಯಾಗಿಡುತ್ತಾನೆ. ಹೀಗಿರುವಾಗ ಕತೆಯಲ್ಲಿ ಸಮಸ್ಯೆ ಏನು ಎಂದಿರಾ..? ಅವನೇ ಆ ಕುಟುಂಬದ ವ್ಯಕ್ತಿಯ ಸಾವಿಗೆ ಕಾರಣ ಎಂದು ತಿಳಿಯುವುದೋ ಇಲ್ಲವೋ ಎನ್ನುವುದು. ಚಿತ್ರ ಮಂದಿರದಲ್ಲಿ ನೋಡಿ. ಇದರ ಮಧ್ಯೆ ಒಬ್ಬ ವಿಲನ್ ಬರುತ್ತಾನೆ, ಮತ್ತೊಬ್ಬ ಪ್ರೇಮಿ ಬರುತ್ತಾನೆ, ತಂಗಿಯ ಮದುವೆ ಹೀಗೆ ಹಲವಾರು ಅಂಶಗಳು ಸೇರಿಕೊಂಡಿದೆ ನೋಡಿ ಆನಂದಿಸಿ.

ಸಿನಿಮಾದಲ್ಲಿ ಯಾವ ಒಂದು ಅಂಶಗಳು ಮನಸ್ಸಿನಲ್ಲಿ ಕಾಡಬೇಕೋ ಆ ಅಂಶಗಳು ಕಾಡುವುದರ ಬದಲಿಗೆ ಹಿಂಸೆ ಎನಿಸುತ್ತದೆ. ಕ್ಯೂರಿಯಸ್ ಅನ್ನಿಸುವ ವಿಷಯಗಲೂ ಜಾಳು ಜಾಳಾಗಿದೆ. ಕತೆಯ ಅಂಶ ಚೆಂದ ಎನ್ನಿಸಿದರೂ ಅದನ್ನು ಚಿತ್ರ ಕತೆಗೆ ತರುವಲ್ಲಿ ಹಲವಾರು ಮೇಕ್ ಓವರಿ ಮಾಡಿಕೊಳ್ಳು ಅಂಶಗಳಿರುತ್ತದೆ. ಅವುಗಳನ್ನು ಬಿಟ್ಟು ಸುಮ್ಮನೆ ದೃಶ್ಯ ಕಟ್ಟಿಕೊಂಡು ಅದನ್ನು ನಿರೂಪಿಸಿದಂತಿದೆ. ಕೇವಲ ಮಾತುಗಳೇ ಸಿನಿಮಾವಾಗುವುದಿಲ್ಲ ಎನ್ನುವುದನ್ನು ಈಗಾಗಲೇ ಹಲವಾರು ಸಿನಿಮಾಗಳಿಂದ ಸಾಭಿತಾಗಿದೆ. ಮೊದಲಾರ್ಧ ನೋಡಿಸಿಕೊಳ್ಳುವಲ್ಲಿ ಸುಸ್ತಾಗಿಸುತ್ತದೆ. ದ್ವಿತಿಯಾರ್ಧದ ನಂತರ ಕ್ಲೈಮ್ಯಾಕ್ಸ್ ಗೊತ್ತಾಗುತ್ತದೆ. ಸಂಭಾಷಣೆ ಪರವಾಗಿಲ್ಲ. ಸ್ವಲ್ಪ ಮಟ್ಟಿಗೆ ಸಮ್ಮಾಳಿಸುತ್ತದೆ.
ವೀರೇಂದ್ರ ರವರು ಎಲ್ಲರನ್ನು ದುಡಿಸಿ ಕೊಳ್ಳುವಲ್ಲಿ ಒಳ್ಳೆ ಪ್ರಯತ್ನ ಮಾಡಿದ್ದಾರೆ. ಎಲ್ಲಾ ಹೊಸ ಮುಖಗಳನ್ನು ಇಟ್ಟುಕೊಂಡು ಗೆಲ್ಲಲು ಹೊರಟಿದ್ದಾರೆ. ರಂಗಾಯಣ ರಘು, ವಿನಯ ಪ್ರಸಾದ್ ಮತ್ತು ನಾಯಕಿ ಸಂಗೀತ ಭಟ್ ಉತ್ತಮ ಅಭಿನಯ ಮಾಡಿದ್ದಾರೆ. ನಾಯಕ ಪವನ್ ಒಡೆಯರ್ ಇನ್ನೂ ಪಳಗ ಬೇಕಿದೆ. ವೀರ ಸಮರ್ಥ ಸಂಗೀತದಲ್ಲಿ ಒಂದು ಹಾಡು ಕೇಳಬಹುದು. ಮಿಕ್ಕಂತೆ ಸಿನಿಮಾ ಪರವಾಗಿಲ್ಲ ಸುಮ್ಮನೆ ನೋಡಬಹುದು ಅಷ್ಟೆ.

ವರದಿಃ ನಟರಾಜ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited