Untitled Document
Sign Up | Login    
Dynamic website and Portals
  
Home >> Movie Home >> Reviews >> ಕ್ರೇಜಿಸ್ಟಾರ್
Movie Review
ಕ್ರೇಜಿಸ್ಟಾರ್
ಕನಸಿನ ಲೋಕದ ತುಂಬಾ ಕ್ರೇಜಿಸ್ಟಾರ್ ಡೋಲಾಯಮಾನ..
Rating :
Hero :
ರವಿಚಂದ್ರನ್
Heroine :
ಪ್ರಿಯಾಂಕ ಉಪೇಂದ್ರ
Other Cast :
ಪ್ರಕಾಶ್ ರೈ, ರಂಗಾಯಣ ರಘು, ಅವಿನಾಶ್, ಶೋಭರಾಜ್, ನವೀನ್ ಕೃಷ್ಣ, ದಿಲೀಪ್ ರಾಜ್, ಅಕುಲ್, ಭಾವನ, ಧರ್ಮ, ರವಿಶಂಕರ್ ಮುಂತಾದವರು.
Director :
ರವಿಚಂದ್ರನ್
Music Director :
ರವಿಚಂದ್ರನ್
Producer :
ಈಶ್ವರಿ ಡ್ರೀಮ್ಸ್
Release Date :
14-02-2014
ಕನಸುಗಾರ ರವಿಚಂದ್ರನ್‌ರವರು ಒಂದು ರಿಮೇಕ್ ಕತೆಯನ್ನು ಹೇಗೆ ಕನ್ನಡೀ ಕರಿಸಬೇಕು ಎಂದು ಈ ಚಿತ್ರದ ಮೂಲಕ ತಿಳಿಸಿದ್ದಾರೆ. ಮೂಲಕತೆ ಮಲಯಾಳಂನ ’ಟ್ರಾಫಿಕ್’ ನಲ್ಲಿ ನಟನೊಬ್ಬನ ಜೀವನದಲ್ಲಿನ ಘಟನೆಯನ್ನು ಚಿತ್ರಿಸಿದರೆ ರವಿಚಂದ್ರನ್‌ರವರು ತಾವೇ ನಟರಾಗಿ ತಮಗೇ ಆ ಚಿತ್ರವನ್ನು ಅಳವಡಿಸಿಕೊಂಡಿದ್ದಾರೆ.

ಕ್ರೇಜಿಸ್ಟಾರ‍್ನ ಮಗಳಿಗೆ ಹೃದಯದ ಫೇಲ್ಯೂರ್ ಆಗಿ ಹಾರ್ಟ್ ಟ್ರಾನ್ಸ್‌ಫ್ಲಾಂಟೇಶನ್ ಆಗಬೇಕು ಅದೇ ಸಮಯದಲ್ಲಿ ದೂರದ ಮೈಸೂರಿನಲ್ಲಿ ಸದಾನಂದ ಎನ್ನುವ ವ್ಯಕ್ತಿಯ ಅಪಘಾತವಾಗುತ್ತದೆ. ಕೆಲಗಂಟೆಗಳಲ್ಲಿ ಸಾಯಲಿರುವ ಅವನ ಹೃದಯವನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳಿಗೆ ಅಳವಡಿಸಬೇಕು. ಕೇವಲ 2 ಗಂಟೆಯ ಅವಧಿಯಲ್ಲಿ ಈ ಕೆಲಸವಾಗಬೇಕಾಗಿರುತ್ತದೆ. ಕ್ರೇಜಿಸ್ಟಾರ್ ಸಹಾಯದಿಂದ ಆ ಹೃದಯವನ್ನು ತರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಪ್ರಯತ್ನ ಯಶಸ್ವಿಯಾಗುವುದೋ ಇಲ್ಲವೇ ಎನ್ನುವುದು ಸಿನಿಮಾದ ಕಥಾವಸ್ತು.

ಮೂಲಕತೆಯಲ್ಲಿ 4 ಪಾತ್ರಗಳು ಹಾಗು ಅದಕ್ಕೆ ತಕ್ಕ ಚಿತ್ರಕತೆಯಿದ್ದರೆ ನಮ್ಮ ಈ ಕ್ರೇಜಿಸ್ಟಾರ್ ಚಿತ್ರದಲ್ಲಿ ಇಡೀ ಪಾತ್ರಗಳು ರವಿಚಂದ್ರನ್ ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ರವಿಚಂದ್ರನ್ ತಮ್ಮ ಬಗ್ಗೆ ಅಭಿಮಾನಿಗಳಿಗೆ ಇರುವ ಹಲವಾರು ಸಂದೇಹಗಳಿಗೆ ಉತ್ತರ ನೀಡಲು ಪ್ರಯತ್ನಿಸಿದ್ದಾರೆ.ಚಿತ್ರದಲ್ಲಿ ಕ್ರೇಜಿಸ್ಟಾರ್ ಆಗಿಯೇ ಅಭಿನಯಿಸಿರುವುದರಿಂದ ಏಕಾಂಗಿಯ ಸೋಲು, ಮಂಜಿನ ಹನಿ ಚಿತ್ರದ ವಿಳಂಬ ಎಲ್ಲವೂ ಸಂಭಾಷಣೆಯ ಮೂಲಕ ಬಂದು ಹೋಗುತ್ತದೆ. ಕುಟುಂಬವನ್ನು ನಿರ್ಲಕ್ಷಿಸುವ ವ್ಯಕ್ತಿಯ ತುಮುಲಗಳನ್ನು ಅದನ್ನು ನೋಡಿ ತಿದ್ದುಕೊಳ್ಳಬಹುದಾದ ಅಂಶವನ್ನು ಚಿತ್ರದಲ್ಲಿ ಇಡಲಾಗಿದೆ.

ಈ ಚಿತ್ರದ ಪ್ರಮುಖ ಅಂಶವೆಂದರೆ ರವಿಚಂದ್ರನ್ ಎರಡನೆ ಮಗನ ಪರಿಚಯ. ಯುವ ಎಂಬ ಪಾತ್ರಧಾರಿಯಾಗಿ ಪರಿಚಯವಾಗುವ ಈ ಪಾತ್ರ ಚಿತ್ರದ ಮೊದಲು ಮತ್ತು ಕೊನೆಯಲ್ಲಿ ಕಾಣಿಸುತ್ತಾನೆ. ಅನಗತ್ಯ ಸಂಭಾಷನೆ ಮತ್ತು ದೃಶ್ಯಗಳು ಮಗನಿಗೆ ನೀಡಿರುವ ಬಿಲ್ಡಪ್ ಎನ್ನಿಸುತ್ತದೆ. ಒಟ್ಟಾರೆಯಾಗಿ ಕುಟುಂಬ ನೋಡುಲು ಅಡ್ಡಿ ಇಲ್ಲ. ಪ್ರೇಮಲೋಕದಿಂದ ಕ್ರೇಜಿ ಸ್ಟಾರ್ ವರೆಗೆ ರವಿಚಂದ್ರನ್ ಕನಸಿನ ಪಯಣ ಈ ಚಿತ್ರದಲ್ಲಿ ಕಾಣಸಿಗುತ್ತದೆ. ಚಿತ್ರದ ತುಂಬೆಲ್ಲಾ ಕ್ರೇಜಿಸ್ಟಾರ್ ತುಂಬಿರುವುದರಿಂದ ಮಿಕ್ಕ ಪಾತ್ರಗಳು ಕಣ್ಮರೆಯಾದಂತೆ ತೋರುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ತುರ್ತಾಗಿ ಮಾಡಿದಂತೆ ತೋರುತ್ತದೆ. ಕತೆಯ ತಾತ್ವಿಕ ಮುಕ್ತಾಯ ಬೇಕಾಗಿತ್ತು. ಅಂಶಗಳ ನಡುವೆಯು ರವಿಚಂದ್ರನ್ ತಮ್ಮ ಸಂಭಾಷಣೆಯಿಂದ ಕೆಲವು ಬಾರಿ ಜನರನ್ನು ಎಬ್ಬಿಸುತ್ತಾರೆ.
ಚಿತ್ರದ ಪಾಸಿಟೀವ್ ಅಂಶಗಳೆಂದರೆ... ಸಂಕಲನ, ಛಾಯಾಗ್ರಹಣ ಉತ್ತಮವಾಗಿ ಮೂಡಿಬಂದಿದೆ. ಜಿಎಸ್‌ವಿ ಸೀತಾರಾಂ ಕೆಲಸ ಎದ್ದು ಕಾಣುತ್ತದೆ.

ಸಂಗೀತದಲ್ಲಿ 4 ಹಾಡುಗಳು ಅಂತದೇನು ಮಾಂತ್ರಿಕತೆ ಮಾಡಿಲ್ಲ. ಸುಮ್ಮನೆ ಬಂದು ಹೋಗುತ್ತದೆ. ಹಿನ್ನೆಲೆ ಸಂಗೀತದಲ್ಲೂ ಅಂತಹ ಚುರುಕುತನವಿಲ್ಲ.

ಇನ್ನು ಅಭಿನಯದ ವಿಷಯಕ್ಕೆ ಬಂದರೆ ರವಿಚಂದ್ರನ್ ತಮ್ಮ ಮಾಮೂಲಿ ಅಭಿನಯ ಮಾಡಿದ್ದಾರೆ. ಪ್ರಿಯಾಂಕ ಬೆಟರ್. ಪ್ರಕಾಶ್ ರೈ ಮತ್ತು ರಂಗಾಯಣ ರಘು ಬಗ್ಗೆ ಹೇಳಬೇಕಾದ್ದೇ ಇಲ್ಲ. ಗುಡ್. ಅವಿನಾಶ್, ಭಾವನ ಮುಂತಾದವರು ತಮ್ಮ ತಮ್ಮ ಪಾತ್ರಗಳಿಗೆ ತಕ್ಕಂತೆ ಅಭಿನಯಿಸಿದ್ದಾರೆ.

ಹೀಗೆ ಒಟ್ಟರೆಯಾಗಿ ರವಿಚಂದ್ರನ್ ಅಭಿನಮಾನಿಗಳು ನೋಡಬಹುದಾದ ಚಿತ್ರವಾಗಿರುತ್ತದೆ. ಬೇರೆಯವರಿಗೆ ರುಚಿಸುವುದು ಕಷ್ಟ. ಯಥಾವತ್ತು ನಕಲು ಮಾಡದೆ, ಇತ್ತ ಸಂಪೂರ್ಣ ಕನ್ನಡೀಕರಿಸಲು ಸಾಧ್ಯವಾಗದೆ ಡೋಲಾಯಮಾನವಾದ ಸ್ಥಿತಿಯಲ್ಲಿ ಈ ಚಿತ್ರ ಬಂದು ಕೂರುತ್ತದೆ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited