Untitled Document
Sign Up | Login    
Dynamic website and Portals
  
Home >> Movie Home >> Reviews >> ಡಾರ್ಲಿಂಗ್
Movie Review
ಡಾರ್ಲಿಂಗ್
ಅಲೆಮಾರಿಯ ಜೊತೆ ಡಾರ್ಲಿಂಗ್ ಪಯಣ...!
Rating :
Hero :
ಯೋಗೀಶ್
Heroine :
ಮುಕ್ತಾ
Other Cast :
ನಿನಾಸಂ ಅಶ್ವಥ್, ಅವಿನಾಶ್, ಬಿಡ್ಡ, ಚಿಕ್ಕಣ್ಣ, ರಾಜೇಂದ್ರ ಕಾರಂತ್, ಮುಕ್ತ, ಮುಂತಾದವರು.
Director :
ಸಂತು
Music Director :
ಅರ್ಜುನ್ ಜನ್ಯ
Producer :
-
Release Date :
31-01-2014
ಈಗಾಗಲೇ ತೆರೆಕಂಡಿರುವ ಅಲೆಮಾರಿ ಚಿತ್ರದ ನಿರ್ದೇಶಕ ಸಂತು ರವರ ಮತ್ತೊಂದು ಚಿತ್ರ ಇಂದು ತೆರೆಕಂಡಿದೆ. ಅತೀ ಶೀರ್ಘವಾಗಿ ಸೆಟ್ಟೇರಿ ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾದ ಈ ಚಿತ್ರ ಲೂಸ್ ಮಾದ ಯೋಗಿಶ್ ಅಭಿಮಾನಿಗಳಲ್ಲಿ ಬಾರಿ ನಿರೀಕ್ಷೆಯನ್ನು ಹುಟ್ಟಿಸಿತ್ತು. ಅವರ ತವಕಕ್ಕೆ ಇಂದು ತೆರೆ ಬಿದ್ದಿದೆ. ಎಲ್ಲರು ಚಿತ್ರವನ್ನು ನೋಡಿ ಆನಂದಿಸುತ್ತಿದ್ದಾರೆ. ಸಂತು, ಲೂಸ್ ಮಾದ ಹಾಗು ಕ್ಯಾಮರ ಮಂಜುನಾಥ್‌ರವರ ಕಾಂಬಿನೇಷನ್‌ನ ೨ನೇ ಚಿತ್ರ.

ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನ ಜ್ಞಾನ ಭಾರತಿ ಆವರಣದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ವಿಷಯದ ತೆಳುವಾದ ಎಳೆಯನ್ನು ಹಿಡಿದುಕೊಂಡು, ಅದಕ್ಕೆ ಒಂದು ಪ್ರೇಮ ಕಥೆಯನ್ನು ಜೋಡಿಸಿ ಹೆಣೆದು ಸಿನಿಮಾ ಕಥೆಯನ್ನು ಕಟ್ಟಲಾಗಿದೆ. ಕಟ್ಟಲಾದ ಗಂಟು ಅಂಥದೇನು ಬಿಗಿಯಾಗಿರದೆ ಸಡಿಲಿಕೆಯನ್ನು ಕಂಡದಿದೆ. ಅಂದರೆ ಕತೆಯಲ್ಲಿ ಅಂತದೇನು ವಿಶೇಷವಿಲ್ಲ. ಸಿನಿಮಾದ ಒಂದು ಸಂದರ್ಭದಲ್ಲಿ ನಾಯಕನೇ ಹೇಳುವಂತೆ ನೋಡು ಇದು ಕಮರ್ಶಿಯಲ್ ಸಿನಿಮಾ.. ಯಾರು..? ಏಕೆ..? ಹೇಗೆ..? ಅಂತೆಲ್ಲಾ ಕೇಳೋಹಾಗಿಲ್ಲ ಎನ್ನುವಂತೆ ಸುಮ್ಮನೆ ನೋಡಿಕೊಂಡು ಟೈಂ ಪಾಸ್ ಮಾಡಬಹುದಾದ ಸಿನಿಮಾ ಎನ್ನಬಹುದು.

ಹಿಂದೆ ಹೇಳಿದ ಹಾಗೆ ಸಿನಿಮಾ ಒಂದು ಅತ್ಯಾಚಾರದ ವಿಷಯದಿಂದ ಪ್ರಾರಂಭವಾಗುತ್ತದೆ. ಸೆರೆಸಿಕ್ಕ ಅಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸುತ್ತದೆ, ಅವರು ತಪ್ಪಿಸಿಕೊಂಡು ಹೋಗುತ್ತಾರೆ. ಅದಾದ ನಂತರ 6 ತಿಂಗಳ ಹಿಂದೆ - ನಾಯಕನ ಕತೆ ಓಪನ್ ಆಗುತ್ತದೆ. ಒಂದು ಕಾಂಪ್ಲೆಕ್ಸ್‌ನಲ್ಲಿ ಟ್ಯಾಟು ಹಾಕುವ ಸತ್ಯ(ಯೋಗಿಶ್). ಅವನಿಗಾಗೆ ಹುಡುಕಿಕೊಂಡು ಬರುವ ಹೆಣ್ಣುಮಕ್ಕಳು. ಹಾಗೆ ಸತ್ಯನ ಟ್ಯಾಟುವಿಗೆ ಬೋಲ್ಡ್ ಆದ ಹುಡುಗಿಯೇ ಪಾರು(ಭಾನು) ಆಕೆಗೆ ಬೋಲ್ಡ್ ಆಗುವ ನಾಯಕ. ನಾಯಕನಿಗೆ ಪ್ರಾರಂಭವಾದ ಪ್ರೇಮ ಪಾರುವಿನಲ್ಲಿ ನಿವೇದಿಸುತ್ತಾನೆ. ಅದಕ್ಕೆ ಅಡ್ಡ ಬರುವ ಅವಳ ಅಣ್ಣ ಭವಾನಿ. ಅದಕ್ಕೆ ಪ್ರತಿಯಾಗಿ ನಾಯಕ ಮತ್ತೊಬ್ಬ ರೌಡಿಯ ಆಶ್ರಯವನ್ನು ಪಡೆಯುತ್ತಾನೆ. ಅವನೇ ಗುಬ್ಬಿ. ಹೀಗೆ ಇಬ್ಬರು ರೌಡಿಗಳ ಹೊಡೆದಾಟದಲ್ಲಿ ಇವರ ಪ್ರೀತಿ ಸುಖಃವಾಗಿರುತ್ತದೆ. ಒಂದು ಹಂತದಲ್ಲಿ ಇಬ್ಬರು ರೌಡಿಗಳು ಒಂದಾಗುತ್ತಾರೆ, ಅಲ್ಲಿಂದ ಹೇಗೆ ಇವರ ಪ್ರೇಮ ಮುಂದುವರೆಯುತ್ತದೆ..? ರೌಡಿಗಳು ಏನಾಗುತ್ತಾರೆ..? ತಪ್ಪಿಸಿಕೊಂಡು ಓಡಿ ಹೋದ ಕೈದಿಗಳಿಗು, ನಾಯಕ ನಾಯಕಿಗೂ ಏನು ಸಂಬಂಧ..? ಹೀಗೆಲ್ಲಾ ಪ್ರಶ್ನೆಗಳು ಕಾಡಿದರೆ..? ನಿಮ್ಮಲ್ಲಿ ಸಮಯವಿದ್ದರೆ ಸಿನಿಮಾ ನೋಡಿ ಬನ್ನಿ.

ತೆಳುವಾದ ಎಳೆ ಹುಡುಕಿ, ಅದಕ್ಕೆ ೫ ಸಾಂಗ್ ತುಂಬಿಕೊಂಡು, ಒಂದಷ್ಟು ಕಾಮಿಡಿ ಸೀನ್ ಕಟ್ಟಿಕೊಂಡು, ೩ ಫೈಟ್ ಸೇರಿಸಿ, ನಾಯಕ ನಾಯಕಿಯ ಲವ್ ಎಪಿಸೋಡ್ ತರುವುದೆಲ್ಲಾ ಹಳೆಯ ಗಿಮಿಕ್. ಯುವ ನಿರ್ದೇಶಕರಾದ ಸಂತು ಅದನ್ನೆ ಇಲ್ಲಿ ಅಳವಡಿಸಿಕೊಂಡಿದ್ದಾರೆ. ಐಟಂ ಸಾಂಗ್ ಒಂದು ಮಿಸ್. ಯಾವುದೇ ಪಾತ್ರಗಳಿಗೆ ಸರಿಯಾದ ನ್ಯಾಯ ಒದಗಿಸಿಲ್ಲ. ಅತೀ ಬಿಲ್ಡಪ್ ಪಡೆದುಕೊಂಡು ಬರುವ ಪಾತ್ರಗಳೆಲ್ಲಾ ಕಾಮಿಡಿಯಾಗಿ ಪರಿವರ್ತನೆಯಾಗುತ್ತದೆ. ಕತೆ ಮುಂದೆ ನೂಕಲು ಪಾತ್ರಗಳನ್ನು ಬಳಸಲಾಗಿದೆ. ಬಾಲಿಶವಾದ ಕ್ಲೈಮ್ಯಾಕ್ಸ್.

ಸಿನಿಮಾದಿಂದ ಯುವ ಜನತೆಗೆ ಮೆಸೇಜ್ ಕೊಡುತ್ತೇನೆಂದ ಇವರು ಏನು ಹೇಳಲು ಹೊರಟಿದ್ದಾರೋ ಗೊತ್ತಿಲ್ಲ. ಕ್ಯಾಮರ ಕೈಚಳಕದಲ್ಲಿ ಮಂಜುನಾಥ್ ನಾಯಕ್ ಪರವಾಗಿಲ್ಲ. ಸಂಭಾಷಣೆ ಸ್ಪಲ್ಪ ಮಟ್ಟಿಗೆ ಗಿಟ್ಟುತ್ತದೆ. ಅರ್ಜುನ್ ಸಂಗೀತದಲ್ಲಿ ೨ ಹಾಡು ಕೇಳಬಹುದು.. ಸ್ವಲ್ಪ ಲೂಸು.. ಚೆನ್ನಾಗಿದೆ.

ಯೋಗೀಶ್ ತಮ್ಮ ಮಟ್ಟಿಗೆ ಅಭಿನಯಿಸಿದ್ದಾರೆ. ಡ್ಯಾನ್ಸ್‌ಗಳಲ್ಲಿ ಯೋಗಿಯ ಶ್ರಮ ಕಾಣಬಹುದು. ಭಾನು ಪರವಾಗಿಲ್ಲ. ಮಿಕ್ಕಂತೆ ಚಿಕ್ಕಣ್ಣ ಚೆನ್ನಾಗಿ ಸೀನ್‌ಗಳಲ್ಲಿ ತಮ್ಮ ಅಭಿನಯ ತೋರಿಸಿದ್ದಾರೆ. ಬಿಡ್ಡ ಮತ್ತು ಅಶ್ವಥ್ ಅಭಿನಯಿಸಿದ್ದಾರೆ.
ಯೋಗಿ ಅಭಿಮಾನಿಗಳು ನೋಡಿ, ಆನಂದಿಸಿ, ಹರಸಿದರೆ ನಿರ್ದೇಶಕ ಸಂತುರವರ ಶ್ರಮ ಸಾರ್ಥಕ.

ವರದಿಃ ನಟರಾಜ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited