Untitled Document
Sign Up | Login    
Dynamic website and Portals
  
Home >> Movie Home >> Reviews >> ಮಾಣಿಕ್ಯ
Movie Review
ಮಾಣಿಕ್ಯ
ಮಿಂಚುವ ಮಾಣಿಕ್ಯ
Rating :
Hero :
ಸುದೀಪ್
Heroine :
ಮಹಾಲಕ್ಷ್ಮಿ, ರಾನ್ಯ
Other Cast :
ರಮ್ಯ ಕೃಷ್ಣ, ಅವಿನಾಶ್, ಶೋಭರಾಜ್, ರವಿಶಂಕರ್, ಅಶೋಕ್, ಸಾಧುಕೋಕಿಲ, ನಾಗಶೇಕರ್, ಟೆನ್ನಿಸ್ ಕೃಷ್ಣ, ಶರಣ್, ಮುಂತಾದವರು.
Director :
ಸುದೀಪ್
Music Director :
ಅರ್ಜುನ್ ಜನ್ಯ
Producer :
ಎನ್ ಎಂ ಕುಮರ್, ಪ್ರವೀಣ್.
Release Date :
01-05-2014
ಸುದೀಪ್, ಕ್ರೇಜಿ ಸ್ಟಾರ್ ರವಿಚಂದ್ರನ್, ರವಿಶಂಕರ್, ಅಶೋಕ್, ಅವಿನಾಶ್, ಶೋಭರಾಜ್ ಹೀಗೆ ಹಿರಿಯ ಕಲಾವಿದರ ದಂಡನ್ನೇ ಹಾಕಿಕೊಂಡು ಸಿನಿಮಾ ಮಾಡುವುದೆಂದರೆ ನಿಜಕ್ಕೂ ಸವಾಲಿನ ಸಂಗತಿ. ಅಂತಹ ಸಿನಿಮಾ ಹೇಗಿರಬಹುದು..? ಅವರನ್ನೆಲ್ಲಾ ಹೇಗೆ ದುಡಿಸಿಕೊಂಡಿರಬಹುದು ಎನ್ನುವುದಕ್ಕೆ ಕನ್ನಡದ ಮಾಣಿಕ್ಯ ಸಿನಿಮಾ ನೋಡಿ. ಇಂತಹ ಸಿನಿಮಾದ ನಿರ್ದೇಶನ ಮಾಡಿದವರು ಸುದೀಪ್. ಹಾಗೆಂದ ಮಾತ್ರಕ್ಕೆ ಎಲ್ಲವೂ ಚೆನ್ನಾಗಿದೆ ಎಂದೇನಲ್ಲ. ಅಲ್ಲಲ್ಲಿ ಎಡವಿದ್ದರೂ ಅದನ್ನು ಬಿಟ್ಟುಕೊಡದೆ ತೂಗಿಸಿಕೊಂಡು ಹೋಗಿದ್ದಾರೆ.

ತೆಲುಗಿನ ಮಿರ್ಚಿ ಸಿನಿಮಾದ ರೀಮೇಕಾದರೂ ಕನ್ನಡಕ್ಕೆ ಹೊಂದಿಸಿಕೊಳ್ಳಲು ಹೆಣಗಾಡಿದ್ದಾರೆ. ಅಬ್ಬರದ ಸೆಟ್ಟ್, ಝಗ ಝಗಿಸುವ ಮಿಣುಕುವ ದೀಪದ ನಡುವಿನ ಹಾಡುಗಳು ರಂಜಿಸುತ್ತದೆ. ಕತೆಯ ವಿಷಯವಾಗಿ ತೆಲುಗಿನ ಮಟ್ಟಿಗೆ ಹಳತು. ಅಂತಹ ಕುಟುಂಬಗಳನ್ನು ಒಂದು ಮಾಡುವ ಕತೆ ಹಲವಾರು ಸಿನಿಮಾಗಳು ಬಂದು ಹೋಗಿದೆ.

ಕನ್ನಡದ ಮಟ್ಟಿಗೆ ಕಡಿಮೆ. ವಿದೇಶದಲ್ಲಿ ಓದುತಿದ್ದ ಜೈ ಮಾನಸ ಎನ್ನುವ ಹುಡುಗಿಯ ಜೊತೆ ಪ್ರೇಮಾಂಕುರವಾಗುತ್ತದೆ. ಅವಳ ಮನೆಯ ಪರಿಸ್ಥಿತಿಯನ್ನು ಅರಿತು, ಆಕೆಯ ಅಣ್ಣನ ಸಹಾಯದಿಂದ ನಾಯಕಿಯ ಮನೆಯನ್ನು ಸೇರುತ್ತಾನೆ. ಅಲ್ಲಿ ಎರಡು ಕುಟುಂಬದ ನಡುವಿನ ಜಗಳವನ್ನು ಒಂದು ಮಾಡಿವ ಉದ್ದೇಶವನ್ನು ಹೊಂದುತ್ತಾನೆ.ಅಲ್ಲೋ ಮಾತೆತ್ತಿದ್ದರೆ ಲಾಂಗು ಮಚ್ಚು ಹಿಡಿದು ಕೊಲ್ಲುತ್ತಿರುತ್ತಾರೆ. ಅವರ ಮನಸ್ಸಿನಲ್ಲಿ ಪ್ರೀತಿಯನ್ನು ತಂದು ಒಂದು ಮಾಡುವುದು ಅವನಿಗಿರುವ ಟಾಸ್ಕ್. ಇದರ ಮಧ್ಯೆ ನಾಯಕನ ಫ್ಲಾಶ್ ಬ್ಯಾಕ್, ಅಲ್ಲೊಂದು ಪ್ರೇಮ ಕತೆ, ಕುಟುಂಬಗಳ ಜಗಳಕ್ಕೆ ಕಾರಣ, ಹೀಗೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಹೀಗೆಲ್ಲಾ ಇರುವಾಗ ನಾಯಕ ತನ್ನ ಪ್ರೇಮ ಪಡೆಯಲು ಸಫಲನಾಗುತ್ತಾನಾ..? ಎರಡು ಕುಟುಂಬಗಳಿಗೂ ಏನು ಸಂಬಂಧ..? ಪ್ರೇಮ ಕತೆಗೆ ಅಂತಿಮತೆ ಏನು..? ದ್ವೇಷಾನಾ..? ಪ್ರೀತೀನಾ..? ಸಿನಿಮಾ ನೋಡಿ.

ಸಿನಿಮಾದಲ್ಲಿ ಎಲ್ಲವೂ ಚೆನ್ನಾಗಿಲ್ಲದಿದ್ದರೂ ಕೆಲವು ಅಂಶಗಳು ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಜೀನಾ.. ಜೀನಾ.. ಮತ್ತು ಜೀವ ಜೀವ... ಹಾಡುಗಳು ನೆನಪುಳಿಯುತ್ತದೆ. ಫೈಟ್ ದೃಶ್ಯಗಳು ತೆಲುಗಿನಂತೆ ಅಬ್ಬರ ಎನ್ನಿಸದಿದ್ದರೂ ಚೆನ್ನಾಗಿದೆ. ಆದರೆ ಕತೆಯ ವಿಚಾರವಾಗಿ ಸಿನಿಮಾ ಬೋರಿಂಗ್ ಹೊಡೆಸುತ್ತದೆ. ನಾಯಕನಿಗೆ ಎಲ್ಲವೂ ಈಜಿಯಾಗುತ್ತಾ ಹೋಗುತ್ತದೆ. ಅವನ ಅನುಕೂಲತೆಗೆ ತಕ್ಕಂತೆ ಕತೆ ಸಾಗುತ್ತದೆ. ಅಲ್ಲಿ ಆತ ಟಾಸ್ಕ್ ಫೇಸ್ ಮಾಡುವುದೇ ಇಲ್ಲ. ಇವನ ಬಗೆಗಿನ ಅಭಿಪ್ರಾಯ ಕುಟುಂಬದಲ್ಲಿ ಒಳ್ಳೆಯ ತನದಲ್ಲಿ ಮೂಡಿರುವುದು ಗೊತ್ತಾಗುವುದೇ ಇಲ್ಲ. ಮೊದಲಿನ ಪರಿಸ್ಥಿತಿಯಲ್ಲೇ ಎಲ್ಲರೂ ಅಭಿನಯಿಸಿದ್ದಾರೆ.

ಸಾಧು ಕಾಮಿಡಿ ಗಿಟ್ಟುತ್ತದೆ. ಆತ ನಾಯಕಿಯ ಮನೆಗೆ ಬಂದ ನಂತರದಲ್ಲಿ ಬಿದ್ದು ಹೋಗುತ್ತದೆ. ಟೆನ್ನಿಸ್ ಕೃಷ್ಣ ನಾಗಶೇಕರ್ ಕಾಮಿಡಿ ವರ್ಕ್ ಆಗಿಲ್ಲ. ಬೋರ್ ಹೊಡೆಸುತ್ತದೆ.

ಇನ್ನು ಅಭಿನಯದ ವಿಚಾರವಾಗಿ ಬಂದರೆ ಸುದೀಪ್ ಸೂಪರ್. ರವಿಚಂದ್ರನ್ ಅಪ್ಪನ ಪಾತ್ರ ಚೆನ್ನಾಗಿ ನಿರ್ವಹಿಸಿದ್ದಾರೆ. ಇನ್ನೂ ಸ್ವಲ್ಪ ಪ್ರೌಢಿಮೆ ಬೇಕಾಗಿತ್ತು. ಮಿಕ್ಕಂತೆ ರಮ್ಯ ಕೃಷ್ಣ, ಅವಿನಾಶ್, ಶೋಭರಾಜ್, ರವಿಶಂಕರ್, ಅಶೋಕ್ ಚೆನ್ನಾಗಿ ಅಭಿನಯಿಸಿದ್ದಾರೆ. ವರಮಹಾಲಕ್ಷ್ಮಿ, ರನ್ಯ.. ಇನ್ನೂ ಚೆನ್ನಾಗಿ, ಉತ್ತಮವಾಗಿ ಅಭಿನಯಿಸಬಹುದಿತ್ತು.
ಟೆಕ್ನಿಕಲಿ ಸೂಪರ್.. ಎಡಿಟಿಂಗ್ ವಿಶ್ವಾ, ಕ್ಯಾಮರ-ಶೇಕರ್ ಚಂದ್ರ, ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ನಿರ್ದೇಶಕ ಸುದೀಪ್ ಎಲ್ಲರನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ತೆಲುಗಿನ ಸಿನಿಮಾ ನೋಡದವರು ಮಾಣಿಕ್ಯ ನೋಡಬಹುದು.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited