Untitled Document
Sign Up | Login    
Dynamic website and Portals
  
Home >> Movie Home >> Reviews >> ಡಿಸೆಂಬರ್ 1
Movie Review
ಡಿಸೆಂಬರ್ 1
ವಾಸ್ತವ್ಯದ ಅವ್ಯವಸ್ಥೆಯ ಅನಾವರಣ....
Rating :
Hero :
ಸಂತೋಷ್ ಉಪ್ಪಿನ
Heroine :
ನಿವೇದಿತ
Other Cast :
ದತ್ತಣ್ಣ, ಶಶಿಕುಮಾರ್, ಶಾಂತಾಬಾಯಿ, ಮಂಜುನಾಥ್, ನಟರಾಜ್ ಎಸ್ ಭಟ್, ಮುಂತಾದವರು
Director :
ಪಿ. ಶೇಷಾದ್ರಿ
Music Director :
ವಿ. ಮನೋಹರ್
Producer :
ಬಸಂತ್ ಕುಮಾರ್ ಪಾಟೀಲ್
Release Date :
ಡಿಸೆಂಬರ್ 1 ಇತ್ತೀಚೆಗೆ ಕನ್ನಡಕ್ಕೆ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ತಂದುಕೊಟ್ಟ ಚಿತ್ರ. ಉತ್ತಮ ಕನ್ನಡ ಚಿತ್ರ ಹಾಗು ಉತ್ತಮ ಚಿತ್ರಕತೆ ವಿಭಾಗದಲ್ಲಿ ರಾಜ್ಯಕ್ಕೆ ಹೆಸರನ್ನು ತಂದು ಚಿತ್ರವನ್ನು ಪಿ. ಶೇಷಾದ್ರಿ ರವರು ನಿರ್ದೇಶಿಸಿದ್ದಾರೆ.

ಇವರ ಬಹುತೇಕ ಸಿನಿಮಾಗಳು ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ. ಉತ್ತಮ ಕತೆಯನ್ನು ಹೊಂದಿರುವ ಈ ಚಿತ್ರ ತೋರಿಕೆಯ ಮಟ್ಟದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತದೆ. ವಾಸ್ತವಗಾಗಿ ಈ ಪ್ರಕಾದ ಚಿತ್ರಗಳೇ ಹೀಗೆ. ನೈಜತೆಗೆ ಹೆಚ್ಚಿನ ಒತ್ತನ್ನು ಕೊಡಲಾಗುತ್ತದೆ. ಹಾಗಾಗಿ ಕಮರ್ಶಿಲ್ ಸಿನಿಮಾ ನೋಡುಗರಿಗೆ ಸ್ವಲ್ಪ ಬೋರಿಂಗ್ ಎನ್ನಿಸುತ್ತದೆ.

ಶೇಷಾದ್ರಿಯವರ ಬೇರೆ ಸಿನಮಾಗಳಿಗೆ ಹೋಲಿಸಿಕೊಂಡರೆ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಸ್ಕ್ರೀನ್ ಪ್ಲೇ ವೇಗವಾಗಿ ಸಾಗುತ್ತದೆ. ಮಧ್ಯದಲ್ಲಿ ಬರುವ ಒಂದು ಹಾಡು ಕತೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ. ಕತೆಯ ವಿಷಯವಾಗಿ ಹೇಳುವುದಾದರೆ ಉತ್ತರ ಕರ್ನಾಟಕದ ಒಂದು ಬಡ ಕುಟುಂಬ. ಅದರಲ್ಲಿ ಹೆಂಡತಿ ದೇವಕ್ಕ(ನಿವೇದಿತ) ರೊಟ್ಟಿಯನ್ನು ಮಾರುತ್ತಿರುತ್ತಾಳೆ, ಗಂಡ(ಸಂತೋಷ್) ತನ್ನ ಕಾಲನ್ನು ಕಳೆದುಕೊಂಡರೂ ಕೆಲಸ ಮಾಡುವ ಹಠದಿಂದಾಗಿ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಈ ದಂಪತಿಗೆ ಒಬ್ಬ ಮಗ. ಒಬ್ಬಳು ಮಗಳು. ಮನೆಯಲ್ಲಿ ವಯಸ್ಸಾದ ಒಂದು ಅಜ್ಜಿ. ಹೀಗೆ ಗಂಡ ಮತ್ತು ಹೆಂಡತಿಯ ಸಂಪಾದನೆ ಯಿಂದ ಸಂಸಾರ ಸಾಗುತ್ತಿರುತ್ತದೆ. ಇಬ್ಬರು ಸಂಪಾದಿಸಿದರೂ ಅರೆಹೊಟ್ಟೆ. ಅಂತಹ ಕುಟುಂಬಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಬರುವ ಹಾಗು ಅವರ ಮನೆಯಲ್ಲಿ ಒಂದು ದಿನ ವಾಸ್ತವ್ಯ ಹೂಡುವ ನಿರ್ಧಾರ ಮಾಡುತ್ತಾರೆ. ಊರಿನಲ್ಲಿ ಎಲ್ಲಿಲ್ಲದ ಸಡಗರ. ಶ್ರೀಮಂತರಿಗೆ ಇವನ ಮನೆಗೆ ಏಕೆ ಬರುತ್ತಾರೆ..? ಎಂಬ ಪ್ರಶ್ನೆಯಾದರೆ, ಊರಿನಲ್ಲಿ ಇವರನ್ನು ಕೀಳಾಗಿ ಕಂಡವರೆಲ್ಲಾ ಇದ್ದಕ್ಕಿದ್ದ ಹಾಗೆ ಗೌರವ ಕೊಡಲು ಪ್ರಾರಂಭಿಸುತ್ತಾರೆ. ತಮ್ಮ ಅಹವಾಲುಗಳನ್ನು ಮಂತ್ರಿಗಳಿಗೆ ಮುಟ್ಟಿಸುವಂತೆ ಜೋತು ಬೀಳುತ್ತಾರೆ. ಮನೆಗೆ ಐಷಾರಾಮಿ ವಸ್ತುಗಳು ತನ್ನ ತಾನೆ ಬರುತ್ತದೆ .ಹೀಗೆ ಬಂದ ಗೌರವವನ್ನು ದೇವಕ್ಕ ಕುಟುಂಬ ಮುಜುಗರದಿಂದ ಅನುಭವಿಸುತ್ತಾರೆ. ಹೀಗಿರುವಾಗ ಮಂತ್ರಿಗಳು ಬರುತ್ತಾರಾ..? ಅವರಿಂದ ಆದ
ಅಚಾತುರ್ಯ ಏನು..? ಕುಟುಂಬ ಏನಾಗುತ್ತದೆ..? ಎನ್ನುವುದನ್ನು ಚಿತ್ರದಲ್ಲಿ ನೋಡಿ.

ಕ್ಯಾಮರಾ ಕೈ ಅಶೋಕ್ ಚೆನ್ನಾಗಿ ಕೆಲಸ ಮಾಡಿದ್ದಾರೆ. ಸಂಗೀತದಲ್ಲಿ ವಿ.ಮನೋಹರ್ ಒಂದು ಹಾಡನ್ನು ಕೊಟ್ಟಿದ್ದಾರೆ. ಕೆಂಪರಾಜು ಅವರ ಸಂಕಲನ ಚೆನ್ನಾಗಿ ಮೂಡಿಬಂದಿದೆ.

ಮುಖ್ಯ ಪಾತ್ರದಲ್ಲಿ ನಿವೇದಿತ ಪಾತ್ರಕ್ಕೆ ಒಗ್ಗಿಕೊಂಡಿದ್ದಾರೆ. ಉತ್ತಮ ಅಭಿನಯ ಮಾಡಿದ್ದಾರೆ. ಸಂತೋಷ್ ಉಪ್ಪಿನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಿಕ್ಕಂತೆ ಶಾಂತಾಬಾಯಿ, ಮಂಜುನಾಥ್, ಶಶಿಕುಮಾರ್, ದತ್ತಣ್ಣ, ನಟರಾಜ್ ಎಸ್ ಭಟ್ ತಮ್ಮ ತಮ್ಮ ಪಾತ್ರಗಳಿಗೆ ತಕ್ಕಂತೆ ಅಭಿನಯಿಸಿದ್ದಾರೆ. ಎಲ್ಲರಿಂದಲೂ ಉತ್ತಮ ಕೆಲಸ ತೆಗೆಯುವಲ್ಲಿ ಪಿ. ಶೇಷಾದ್ರಿ ರವರು ಸಫಲರಾಗಿದ್ದಾರೆ. ವಿಶೇಷವೆಂದರೆ ಉತ್ತರ ಕರ್ನಾಟಕದ ಸುಮಾರು 100 ಕಲಾವಿದರನ್ನು ದುಡಿಸಿಕೊಂಡಿದ್ದಾರೆ. ಸಾಮಾನ್ಯ ನೋಡುಗನ ಮನರಂಜನೀಯ ಅಂಶಗಳಾದ ಹಾಡು, ಫೈಟ್ ಗಳು ಇಲ್ಲವಾಗಿರುವುದು ಚಿತ್ರದ ಬ್ಯಾಕ್ ಪಾಯಿಂಟ್. ಅದೂ ಅಲ್ಲದೆ ಬರಿ ಮಲ್ಟಿ ಪ್ಲೆಕ್ಸ್ ಗಳಲ್ಲಿ ರಿಸಿಲೀಸ್ ಮಾಡಿರುವುದು ಮತ್ತಷ್ಟು ಎಟುಕದಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಚಿತ್ರಗಳು ಜನ ಸಾಮಾನ್ಯನನ್ನು ತಲುಪುವಂತಾಗಲಿ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited