Untitled Document
Sign Up | Login    
Dynamic website and Portals
  
Home >> Movie Home >> Reviews >> ಉಳಿದವರು ಕಂಡಂತೆ
Movie Review
ಉಳಿದವರು ಕಂಡಂತೆ
ಸಿನಿಮಾ ಕಂಡವರು ಕಂಡತೆ..
Rating :
Hero :
ರಕ್ಷಿತ್ ಶೆಟ್ಟಿ
Heroine :
ಶಿತಲ್ ಶೆಟ್ಟಿ,ಯಜ್ನಾ ಶೆಟ್ಟಿ
Other Cast :
ರಕ್ಷಿತ್ ಶೆಟ್ಟಿ,ಕಿಶೋರ್,ತಾರಾ,ಅಚ್ಯುತ್ ಕುಮಾರ್,ಯಜ್ನ ಶೆಟ್ಟಿ,ರಿಷಬ್,ಶೀತಲ್,ಗೌರೀಶ್ ಅಕ್ಕಿ ಮುಂತಾದವರು
Director :
ರಕ್ಷಿತ್ ಶೆಟ್ಟಿ
Music Director :
ಅಜನೀಶ್ ಲೋಕನಾಥ್
Producer :
ಹೇಮಂತ್, ಸುನಿ, ಅಭಿ
Release Date :
28-03-2014
ಕನ್ನಡದ ಪಾಲಿಗೆ ಹೊಸ ಅಲೆಗಳು ಬರುತ್ತಿರುವುದು ಸ್ವಾಗತಾರ್ಹ. ಹಿಂದಿನ ಲೂಸಿಯಾ, ಜಟ್ಟ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಹೀಗೆ ಬೆರಳೆಣಿಕೆ ಸಿನಿಮಾಗಳು ಹೊಸಾ ನಿರ್ದೇಶಕರ ಮೇಲೆ ನಂಬಿಕೆ ಇಡುವಂತೆ ಮಾಡಿತ್ತು. ಪ್ರಯೋಗಾತ್ಮಕ ಸಿನಿಮಾಗಳು ಬಂದು, ನೋಡುಗರ ನೋಡುವ ಆಯಾಮವನ್ನು ಬದಲಿಸಿತ್ತು. ಆದರೆ ಪ್ರಯೋಗತ್ಮಕ ಕತೆಯನ್ನು ಮಾಡುವ ಓಟದಲ್ಲಿ ಇಂಡಿಯನ್ ಸೆಂಟಿಮೆಂಟ್, ಕತೆಯ ನಿರಂತರ ಓಟ, ಹಾಗು ಸ್ಕ್ರೀನ್ ಪ್ಲೇ ಏರಿಳಿತ ಈ ಬಗ್ಗೆ ಚಿತ್ರ ತಂಡಗಳು ಕೊಂಚ ಗಮನಿಸಿದರೆ ಒಳ್ಳೆಯ ಸಿನಿಮಾಗಳನ್ನು ಕೊಡಬಹುದು.

ಟೆಕ್ನಿಕಲಿ ಎಲ್ಲರೂ ಇಂದು ಉತ್ತಮವಾಗಿ ಮಾಡುತ್ತಿದ್ದಾರೆ. ಆದರೆ ಅದರ ಜೊತೆಗೆ ಕತೆಗೆ ಒತ್ತು ಕೊಡುವಲ್ಲಿ ಸ್ವಲ್ಪ ಗಮನ ಹರಿಸಬೇಕಾಗಿದೆ. ಉಳಿದವರು ಕಂಡಂತೆ ಸಿನಿಮಾ ಕೂಡ ಅತಹುದೇ ಕೊರತೆಯನ್ನು ಹೊಂದಿದೆ. ಕತೆಯನ್ನು ಹೇಳುವ ಪರಿ ಹೊಸದೆನಿಸಿದರು ಹೇಳಿದ್ದೇ ಹೇಳುತ್ತಿದ್ದಾರೆ ಎನ್ನಿಸುತ್ತದೆ.

ಕತೆ ಒಬ್ಬ ಪತ್ರಕರ್ತೆಯಿಂದ(ಶಿತಲ್) ಪ್ರಾಂಭವಾಗಿ ಆಕೆಯ ನಿರೂಪಣೆಯಲ್ಲಿ ಕತೆಯು ಮುಂದುವರೆಯುತ್ತದೆ. ಆದರೆ ಆಕೆ ಅವಳು ಕಂಡತೆ ಹೇಳದೆ ಕತೆಗೆ ಹೊಂದಿಕೊಂಡ ಪಾತ್ರಗಳ ಮೂಲಕ ಹೇಳುತ್ತಾ ಹೋಗುತ್ತಾರೆ. ಅಲ್ಲಿ ನಡೆಯುವುದೇನು ಯಾರು ಏಕೆ ಹೀಗೆ ಹೇಳಿದರು ಎನ್ನುವುದನ್ನು ಜನರು

ತಲೆ ಕಡಿಸಿಕೊಳ್ಳದೆ ಸುಮ್ಮನೆ ನೋಡುತ್ತಾ ಹೋಗುತ್ತಾರೆ. ರಿಚ್ಚಿ , ರಘು, ಬಾಲು, ಮುನ್ನ, ಶಂಕರಣ್ಣ ಪಾತ್ರಗಳ ನಡುವೆ ನಡೆಯುತ್ತಾ ಹೋಗುತ್ತದೆ. ರಘುವಿಗಾಗಿ ಒಬ್ಬ ವ್ಯಕ್ತಿಯನ್ನು ಕೊಂದು ಜೈಲಿಗೆ ಹೋಗುವ ರಿಚ್ಚಿ(ರಕ್ಷಿತ್), ಅವನಿಂದಲೆ ಭಯ ಪಟ್ಟು ಮುಂಬೈಗೆ ಓಡಿ ಹೋಗುವ ರಘು(ರಿಷಬ್). ಮತ್ತು ಬಾಲು(ಅಚ್ಯುತ್) ಎನ್ನುವ ಮೀನುಗಾರ, ಮತ್ತೊಬ್ಬ ಆತನ ತಂಗಿಯನ್ನೇ(ಯಜ್ಞಾ) ಪ್ರೀತಿಸುವ ಮಂಡ್ಯದ ಮುನ್ನ (ಕಿಶೋರ್). ಹೀಗೆ ಪಾತ್ರಗಳ ನಡುವೆ ಕತೆ ಓಡುತ್ತದೆ. ರಘು ಬಾಂಬೆಯಲ್ಲಿ ದಂದೆಯ ಕೆಲಸ ಮಾಡುತ್ತಿರುತ್ತಾನೆ. ಪೋಲಿಸ್ ಸಹಾಯದಿಂದ ತಾಯಿಯನ್ನು(ತಾರ) ನೋಡು ಮಲ್ಪೆಗೆ ಬರುತ್ತಾನೆ. ಬಂದವನಿಗೆ ಒಂದು ಚಾಲೆಂಜ್ ಎದುರಾಗುತ್ತದೆ. ಅದರಿಂದ ಆತ ಬಿಡಿಸಿಕೊಳ್ಳುತ್ತಾ ಹೋಗುತ್ತಾನೆ.

ಎಲ್ಲರ ಸುತ್ತ ಕತೆ ತಳುಕು ಹಾಕುತ್ತಾ ಸಾಗುತ್ತಾದೆ. ಒಟ್ಟು ಕತೆಯನ್ನು ಏಳು ಜನರು ದೃಷ್ಟಿಕೋನದಿಂದ ಹೇಳುತ್ತಾ ಹೋಗುತ್ತಾರೆ. ಆದರೆ ಅದಾವುದೂ ಅವರ ದೃಷ್ಟಿಯದ್ದು ಎಂದು ಸಾಮಾನ್ಯ ಪ್ರೇಕ್ಷಕನಿಗೆ ತತ್‌ಕ್ಷಣಕ್ಕೆ ಅರ್ಥವಾಗುವುದಿಲ್ಲ. ಅರ್ಥವಾದ ಪ್ರೇಕ್ಷಕನಿಗೆ ಬೇರೆ ಬೇರೆ ಆಯಾಮಗಳಲ್ಲಿ ಬರುತ್ತಿರುವ ಅದೇ ಕತೆ ಅದೇ ದೃಷ್ಯಗಳು ಬೋರಿಂಗ್ ಎನ್ನಿಸುತ್ತದೆ. ಹೀಗೆ ಓಡುವ ಕತೆ.. ಕಡೆಯಲ್ಲಿ ಎಲ್ಲಿಗೆ ಬಂದು ನಿಲ್ಲುತ್ತದೆ..? ಯಾರು ಏತಕ್ಕಾಗಿ ಹೊಡೆದಾಡುತ್ತಾರೆ..? ಪ್ರೇಮ ಕತೆಯ ಅಂತ್ಯ ಏನು..? ಯಾವುದು ಸತ್ಯ..? ಯಾವುದು ಸುಳ್ಳು..? ಹೀಗೆಲ್ಲಾ ಯೋಚಿಸುತ್ತಿದ್ದರೆ ಕನ್ನಡದ ಹೊಸ ಪ್ರತಿಭೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ನಿಮ್ಮವರನ್ನು ನೀವು ಕಂಡು ಬನ್ನಿ.

ಮೊದಲಾರ್ದ ನೋಡುತ್ತಾ ದ್ವಿತಿಯಾರ್ದದಲ್ಲೇನಾದರು ಇರುತ್ತದೆ ಎಂದು ಕಾದು ಕೂತ ಪ್ರೇಕ್ಷಕನಿಗೆ, ಅಲ್ಲಿಯೂ ಅದೇ ಕತೆಯ ಓಟ ಬೋರಿಂಗ್ ಎಸಿಸುತ್ತದೆ. ಚಿತ್ರ ಕತೆ ಮತ್ತು ಕತೆಯನ್ನು ಸ್ವಲ್ಪ ಗಟ್ಟಿ ಮಾಡಿಕೊಂಡಿದ್ದರೆ ನಿಜವಾಗಿಯೂ ಉತ್ತಮ ಚಿತ್ರವಾಗುತ್ತಿತ್ತು. ವಲ್ಡ್ ಸಿನಿಮಾ ನೋಡುಗರಿಗೆ ಮಜಾ ಸಿಗುತ್ತದೆ.

ಸಂಕಲನದಲ್ಲಿ ಸಚಿನ್, ಸಂಗೀತದಲ್ಲಿ ಅಜನೀಶ್ ಲೋಕನಾಥ್, ಕ್ಯಾಮರಾದಲ್ಲಿ ಕರ್ಮ್ ಚಾವ್ಲಾ ಮೂರು ಜನರು ಉತ್ತಮವಾದ ಕೆಲಸ ಮಾಡಿದ್ದಾರೆ. ಚಿತ್ರದ ಪ್ಲೇಸ್ ಪಾಯಿಟ್‌ಗಳು ನಿಜವಾಗಿಯು ಅದು. ಉಳಿದವರಿಗೆ ಈ ಎಲ್ಲಾ ಬ್ಯಾಕಪ್ ಸೂಪರ್‌ಆಗಿ ಸಿಕ್ಕಿದೆ. ಯುವಕರು ರಾಕ್ ಮಾಡಿದ್ದಾರೆ.

ಅಭಿನಯದಲ್ಲಿ ರಕ್ಷಿತ್ ಶೆಟ್ಟಿ ಸೂಪರ್, ಅಚ್ಯುತ್ ಮತ್ತು ಕಿಶೋರ್ ಬಗ್ಗೆ ಹೇಳಲೇ ಬೇಕಾಗಿಲ್ಲ. ಕೊಟ್ಟ ಪಾತ್ರವನ್ನ ಚೆನ್ನಾಗಿ ಮಾಡಿದ್ದಾರೆ. ತಾರ ಮತ್ತು ರಿಷಬ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಯಜ್ಞಾ ಶೆಟ್ಟಿ ಬಂದು ಹೋದರು ಅವರ ಪಾತ್ರಕ್ಕೆ ಮೋಸ ಮಾಡಿಕೊಂಡಿಲ್ಲ. ವಿಶೇಷವಾಗಿ ಗಮನ ಸೆಳೆಯುವುದು ಡೆಮಾಕ್ರಸಿ ಪಾತ್ರ. ಎಲ್ಲಾ ಅಂಶಗಳು ಚೆನ್ನಾಗಿದೆ ಆದರೆ ರಕ್ಷಿತ್ ಜನರ ನಾಡಿ ಮಿಡಿತ ಹಿಡಿಯುವಲ್ಲಿ ಇನ್ನೂ ಪಳಗ ಬೇಕು ಎನ್ನಿಸುತ್ತದೆ. ಕನ್ನಡಕ್ಕೆ ಒಂದು ಉತ್ತಮ ವಿಶ್ಯೂಲ್ ಬ್ಯೂಟಿ ಕಟ್ಟಿ ಕೊಡುವ, ಸುದ್ದಿ ಮಾಡಿ ಸಿನಿಮಾ ನಿಲ್ಲಿಸಿಕೊಳ್ಳುವ, ಪರಭಾಷಿಗರನ್ನು ನೋಡುವಂತೆ ಮಾಡುತ್ತಿರುವುದು ಒಂದು ಒಳ್ಳೆಯ ವಿಷಯ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited