Untitled Document
Sign Up | Login    
Dynamic website and Portals
  
Home >> Movie Home >> Reviews >> ಖತರ‍್ನಾಕ್
Movie Review
ಖತರ‍್ನಾಕ್
ಖಾಲಿ ಖಾಲಿ ಖತರ‍್ನಾಕ್..
Rating :
Hero :
ರವಿಕಾಳೆ
Heroine :
ರೂಪಿಕ
Other Cast :
ಶರತ್ ಲೋಹಿತಾಶ್ವ,ಶೋಭನ, ಸಾಧು, ರವಿವರ್ಮ, ಬುಲೇಟ್ ಪ್ರಕಾಶ್
Director :
ಮಳವಳ್ಳಿ ಸಾಯಿಕೃಷ್ಣ
Music Director :
ಸಾಧು ಕೋಕಿಲ
Producer :
ಆದಿತ್ಯ ರಮೇಶ್
Release Date :
22-11-2013
ಉಮೇಶ್ ರೆಡ್ಡಿ, ಉಮೇಶ್ ಹೀಗೆಲ್ಲಾ ಹಲವಾರು ಹೆಸರುಗಳನ್ನು ಬದಲಿಸಿಕೊಂಡ ಈ ಚಿತ್ರ ಕಡೆಗೂ ಖತರ‍್ನಾಕ್ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಹೊಂದಿದೆ. ಇದನ್ನು ಯಾವ ಕ್ಯಾಟಗರಿ ಸಿನಿಮಾ ಎನ್ನುವುದು..? ಎಂಬುದು ಗೊಂದಲದ ಗೂಡಾಗಿದೆ. ಇದೊಂದು ಅವೇರ್‌ನೆಸ್ಸ್ ಸಿನಿಮಾ ಎನ್ನಬೇಕೇ..?, ಒಬ್ಬ ವ್ಯಕ್ತಿಯ ಲೈಫ್ ಹೇಳುವ ಸಿನಿಮಾ ಎನ್ನಬೇಕೆ..?, ಉತ್ತಮ ಕಥೆ ಇದೆಯೇ..? ಎಂದರೆ ಎಲ್ಲರಿಗೂ ಈಗಾಗಲೇ ಗೊತ್ತಿರುವ ಜಗಜ್ಜಾಹೀರವಾದ ವಿಷಯ, ಹಾಗಾದರೆ ಈ ಚಿತ್ರದ ಮೂಲ ಉದ್ದೇಶವೇನು ಎಂದರೆ..? ಜನರಿಗೆ ತಿಳುವಳಿಕೆ ಹೇಳುವುದು, ಅವರನ್ನು ಎಚ್ಚರಿಸುವುದು ಎನ್ನುತ್ತಾರೆ ನಿರ್ದೇಶಕರು.

ಸಮಾಜಕ್ಕೆ ಯಾವುದಾದರು ಸಕಾರಾತ್ಮಕ ಅಂಶಗಳನ್ನು ಹೇಳುವುದರ ಮೂಲಕ ಅವರನ್ನು ತಿದ್ದುವುದು ಹಾಗು ತಿಳಿಹೇಳುವ ಸಂಪ್ರದಾಯವಿತ್ತು. ಆದರೆ ಇಂದು ಅದೆಲ್ಲಾ ಹೋಗಿಯಾಗಿದೆ. ಹೋಗಲಿ ಕೆಟ್ಟದನ್ನು ಹೋಗಿಸುತ್ತಾ ಒಳ್ಳೆಯದರೆಡೆಗೆ ನೋಡುವ ದೃಷ್ಟಿಕೋನದ ಸಿನಿಮಾಗಳನ್ನು ನೀಡಿದರೆ ಅದರಿಂದ ಯುವ ಸಮುದಾಯಕ್ಕೆ, ಸಮಾಜಕ್ಕೆ ಹಿತವೆನಿಸುತ್ತದೆ. ಅದೆಲ್ಲವನ್ನು ಬಿಟ್ಟು ಉಮೇಶ್ ರೆಡ್ಡಿ ಯಂತಹ ವಿಕೃತ ವ್ಯಕ್ತಿಯ ಕತೆಯನ್ನು ಹೇಳುತ್ತಾ, ಜನರು ಮರೆತಿರುವ ವಿಷಯವನ್ನು ಕೆದಕಿಕುವುದರಲ್ಲಿ ಅರ್ಥವಿಲ್ಲ. ಆದರೆ ಚಿತ್ರ ಮಾಡಿದವರಿಗೆ ಅರ್ಥವಂತು(ಹಣ) ಇದ್ದೇ ಇದೆ.

ಹೋಗಲಿ ಬಿಡಿ ಇದನ್ನು ಅದೆಷ್ಟು ಬಾರಿ ಹೇಳಿದ್ದೇನೋ...! ಈಗ ಚಿತ್ರದ ವಿಮರ್ಷೆ ನೊಡುವ..
ಇದೊಂದು ವಿಕೃತ ಕಾಮಿ ಉಮೇಶ್ ಕತೆ. ಒಬ್ಬ ಮನಃಶಾಸ್ತ್ರ ವಿದ್ಯಾರ್ಥಿನಿ ಉಮೇಶನ ಜೀವನವನ್ನು ತಿಳಿಯಲು ಅವನ ಊರಿಗೆ ಹೋಗುತ್ತಾಳೆ. ಅಲ್ಲಿ ಸಿಗುವ ಪಟೇಲ, ಉಮೇಶನ ಬಾಲ್ಯದ ವಿಷಯವನ್ನು ತಿಳಿಸುತ್ತಾನೆ. ತಾಯಿ ಅವನ ಕೆಲಸಗಳಿಗೆ ಬೆಂಬಲ ಕೊಟ್ಟಿದ್ದು, ಅವನನ್ನು ಅಂಕೆಶಂಕೆಯಲ್ಲಿಡದೆ ಅವನ ಪಾಡಿಗೆ ಅವನನ್ನು ಬಿಟ್ಟಿದ್ದು, ರಾಮಚಾರಿಯ ಹೆಂಡತಿ ಉಮೇಶನನ್ನು ಬಳಸಿದ್ದು ಹೇಗೆ ಸಮಾಜದಿಂದ ಆತ ವಿಕೃತವಾದ ಎನ್ನುವುದು ತಿಳಿಯುತ್ತದೆ. ಅಲ್ಲಿಂದ ಹಾಗೆ ಪೋಲಿಸ್ ಅಧಿಕಾರಿಯರ ಬಳಿ ಹೋಗಿ ಅಲ್ಲಿ ಅವನ ಕಾಮಲೀಲೆಗಳನ್ನು ಮತ್ತು ಅವನ ಕೃತ್ಯಕ್ಕೆ ಬಲಿಯಾದ ಕುಟುಂಬದ ಕತೆಯನ್ನು ಕೇಳುತ್ತಾಳೆ. ಅಲ್ಲಿಂದ ಬಳ್ಳಾರಿಯಲ್ಲಿ ಅವನ ಕೃತ್ಯ, ಆಂದ್ರದಲ್ಲಿ ಹಾಗು ತೋರಣಗಲ್ಲಿನಲ್ಲಿ ನಡೆಸಿದ ಅತ್ಯಾಚಾರಗಳನ್ನು ತಿಳಿಯುತ್ತಾಳೆ. ಬೆಂಗಳೂರಿಗೆ ಬಂದ ಅವನು ಬೆಂಗಳೂರಿನಲ್ಲಿ ನೆಡೆಸಿದ ಕೃತ್ಯಗಳನ್ನು ಎಸ್ ಐ ತಿಳಿಸುತ್ತಾರೆ. ಅದನ್ನು ಕೇಳಿದ ಆಕೆ ಉಮೇಶನ ಮೇಲೆ ಸಿಟ್ಟಿಗೇಳುತ್ತಾಳೆ. ಮುಂದೆ ಏನಾಗುತ್ತದೆ ಎನ್ನುವುದನ್ನು ಚಿತ್ರಮಂದಿರದಲ್ಲಿ ನೋಡಿ.

ನಿರ್ದೇಶಕರ ಮಳವಳ್ಳಿ ಸಾಯಿಕೃಷ್ಣ ರವರು ತಮ್ಮ ಬುದ್ದಿಯನ್ನೆಲ್ಲಾ ಕರ್ಚುಮಾಡಿ ಡೈಲಾಗ್ ಬರೆಯೋಣವೆಂದರೆ ಅದಕ್ಕೆ ಈ ವಿಷಯ ವಸ್ತು ಸಪೋರ್ಟ್ ಮಾಡಿಲ್ಲ. ತಮ್ಮ ಚೊಚ್ಚಲ ಚಿತ್ರಕ್ಕೆ ಇದನೇಕೆ ಆಯ್ಕೆ ಮಾಡಿಕೊಂಡರೋ ದೇವರೇ ಬಲ್ಲ. ಇದು ತುಂಬಾ ಸೂಕ್ಷ್ಮವಾದ ವಿಷಯವಾಗಿರುವುದರಿಂದ ಹೇಳುವುದರಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರು ಬೇರೆಯದೇ ಆದ ಅರ್ಥವನ್ನು ತಂದುಕೊಡುತ್ತದೆ. ಕ್ಯಾಮರ ಪರವಾಗಿಲ್ಲ.. ಸಂಗೀತಕ್ಕೆ ಅಂತಾ ಹೇಳಿಕೊಳ್ಳುವ ಕೆಲಸವೇನೂ ಇಲ್ಲ. ಎಡಿಟಿಂಗ್ ಚೆನ್ನಾಗಿದೆ.

ಪಾತ್ರವಾಗಿ ರವಿಕಾಳೆ ತಮ್ಮ ಕೆಲಸವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ರೂಪಿಕ, ಶೋಭನ, ಸಾಧು, ರವಿವರ್ಮ, ಬುಲೇಟ್ ಪ್ರಕಾಶ್, ಪಾತ್ರ ನಿರ್ವಹಿಸಿದ್ದಾರೆ.

ವಿಶೇಷವಾದ ತಾಳ್ಮೆ, ಸಮಯ ನಿಮ್ಮಲಿದ್ದರೆ ಈ ಚಿತ್ರವನ್ನು ನೋಡಿ ಜೀರ್ಣಿಸಿಕೊಳ್ಳಿ

ವರದಿಃ ನಟರಾಜ್ ಎಸ್. ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited