Untitled Document
Sign Up | Login    
Dynamic website and Portals
  
Home >> Movie Home >> Reviews >> ಸಕ್ಕರೆ
Movie Review
ಸಕ್ಕರೆ
ಗಣೇಶ್ ಮೇಲೆ ಅಕ್ಕರೆ.. ಸಿಹಿಯಾದ ಸಕ್ಕರೆ...
Rating :
Hero :
ಗಣೇಶ್
Heroine :
ದೀಪಾ ಸನ್ನಿಧಿ
Other Cast :
ಅನಂತ್‌ನಾಗ್, ವಿನಯ ಪ್ರಸಾದ್, ಅನು ಪ್ರಭಾಕರ್, ಅಚ್ಯುತ್‌ಕುಮಾರ್, ವೀಣಾ ಸುಂದರ್, ರಾಜೇಶ್ ನಟರಂಗ, ನಂದಕುಮಾರ್, ಅರುಂಧತಿ, ರಾಮ್ ಮುಂತಾದವರು.
Director :
ಅಭಯ್ ಸಿಂಹ
Music Director :
ವಿ. ಹರಿಕೃಷ್ಣ
Producer :
ಶೈಲಜಾನಾಗ್, ಬಿ.ಸುರೇಶ್
Release Date :
18-10-2013
ನಿರ್ದೇಶಕ ಅಭಯ್‌ಸಿಂಹರವರು ಈಗಾಗಲೇ ಎರಡು ಸಿನಿಮಾವನ್ನು ಮಾಡಿದ್ದರೂ ಅದಾವುದು ಗಾಂಧೀ ನಗರದಲ್ಲಿ ಗಿಟ್ಟಿರಲಿಲ್ಲ. ಅದಕ್ಕೆ ಕಾರಣಗಳು ಬೇರೆ ಬಿಡಿ. ಆದರೆ ಸಕ್ಕರೆಯಲ್ಲಿ ನಿರ್ದೇಶಕರು ನಿಜವಾಗಿ ಸಾಮಾನ್ಯ ಜನರನ್ನು ಮತ್ತು ಕಾಲೇಜು ಹುಡುಗ ಹುಡುಗಿಯರನ್ನು ಸೆಳೆಯುವ ನಿಜವಾದ ಪ್ರಯತ್ನವನ್ನು ಮಾಡಿದ್ದಾರೆ. ಸಕ್ಕರೆ ಮನರಂಜನೆಯ ಪ್ಯಾಕೇಜ್. ನೀವು ಕೊಟ್ಟ ಹಣಕ್ಕೆ ಮೋಸವಿಲ್ಲ. ಹಾಗೆಂದು ಲಾಂಗು, ಮಚ್ಚು, ಕೌರ್ಯವನ್ನು ಆಸ್ವಾಧಿಸುವ ಪ್ರೇಕ್ಷಕರು ಹೋದರೆ ಅವರಿಗೆ ಕಂಡಿತಾ ಲಾಸ್. ಯಾಕೆಂದರೆ ’ಸಕ್ಕರೆ’ ಸಿನಿಮಾ ಹೆಸರೇ ಸೂಚಿಸುವಂತೆ ಅಪ್ಪಟ ’ಯೂ’ ಸರ್ಟಿಫಿಕೇಟ್ ಸಿನಿಮಾ.

ಸಿನಿಮಾ ನಿರೂಪಣೆಯಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದರು, ಸುಂದರ ಕತೆಯನ್ನು ಕಟ್ಟಿಕೊಡುವಲ್ಲಿ, ಮನರಂಜಿಸುವಲ್ಲಿ ಅಭಯ್ ಯಶಸ್ವಿಯಾಗಿದ್ದಾರೆ. ಸುಮನ್ ದೀಪ್ ಸಂಭಾಷಣೆ ಚೆನ್ನಾಗಿದೆ. ಡಬ್ಬಲ್ ಮೀನಿಂಗ್ ಮತ್ತು ಭಾಷೆಯ ಅಪಭ್ರಂಶ ರೂಪದ ಸಂಭಾಷಣೆ ಬರುತ್ತಿರುವ ಈ ಕಾಲದಲ್ಲಿ, ಅದರಿಂದ ಹೊರಬಂದು ಸುಮನ್ ಕನ್ನಡವನ್ನು ಚೆನ್ನಾಗಿ ದುಡಿಸಿಕೊಂಡು ಉತ್ತಮವಾಗಿ ಸಂಭಾಷಣೆಯನ್ನು ಮೂಡಿಸಿದ್ದಾರೆ. ಅದಕ್ಕೆ ಪಾತ್ರವರ್ಗವು ಚೆನ್ನಾಗಿ ಸಹಕರಿಸಿದೆ. ಪಾತ್ರವರ್ಗವೆಂದರೆ ಕೇವಲ ಹೋಗಿ ಬರುವ ಪಾತ್ರಗಳಲ್ಲ ಎಲ್ಲವೂ ಒಂದಕೊಂದು ಪೂರಕವಾಗಿದೆ.

ಒಂದು ಸುಂದರ ಊರಾದ ಕೊಡಗಿಗೆ ನಾಯಕಿ (ದೀಪಾಸನ್ನಿಧಿ) ತನ್ನ ಎರಡು ದುರಂತ ಪ್ರೇಮ ಕತೆಯನ್ನು ಮರೆಯಲು ಅಕ್ಕನ ಮನೆಗೆ ಬರುತ್ತಾಳೆ. ಅಲ್ಲಿ ದುತ್ತೆಂದು ಎದುರಾಗುವ ನಾಯಕ(ಗಣೇಶ್). ಏನೇ ’ಆದ್ರೂ ಡೋಂಟುವರಿ, ಸುಮ್ಮನೆ ಹಲ್ಲು ಕಿರಿ..’ ಎನ್ನುವ ಸ್ವಾಭಾವದ ’ವಿನಿ ಅಲಿಯಾಸ್ ವಿನ್, ಬಾಜಿಗರ್’ ಎನ್ನುವ ಹುಡುಗ. ಅವಳ ಪ್ರೇಮ ಕತೆಯನ್ನು ಕೇಳುತ್ತಾ ಹೋಗುತ್ತಾನೆ. ಅವಳು ಹಳೆಯ ೨ ಲವ್ ಸ್ಟೋರಿ ಹೇಳುತ್ತಾಳೆ. ಕತೆ ಮಂಗಳೂರು, ಬೆಂಗಳೂರಿಗೆ ಹೋಗುತ್ತದೆ. ಅಲ್ಲಿಂದಲೂ ಅವಳ ಹಿಂದೆ ಬಿದ್ದ ಇವನು ಹಿಂದಿನ ಕತೆಯನ್ನು ಹೇಳುತ್ತಾನೆ. ಅಲ್ಲಿ ಆಕೆ ಅವನಿಗೆ ಮನಸೋಲುತ್ತಾಳೆ. ಅದೇ ಸಮಯದಲ್ಲಿ ಒಂದು ಪ್ರಬುದ್ಧ ಪ್ರೇಮ ಕತೆಯನ್ನು ವಿನಿ ಮುಖಾಂತರ ನಿರ್ದೇಶಕರು ಪ್ರಾರಂಭಿಸುತ್ತಾರೆ. ಅದು ಕರ್ನಲ್ ಕಾರ್ಯಪ್ಪ(ಅನಂನ್‌ನಾಗ್) ಮತ್ತು ವಸುಂಧರ ಆಂಟಿ(ವಿನಯ ಪ್ರಸಾದ್).

ಈ ಇಬ್ಬರ ಒಂಟಿ ತನವನ್ನು ನೋಡಲಾದೆ ಅವರನ್ನು ಒಂದುಮಾಡುವ ಪ್ರಯತ್ನ ಮಾಡುತ್ತಾನೆ. ಆ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಡ್ರಾಮ ಕಟ್ಟಿಕೊಡುವಲ್ಲಿ ಅಭಯ್ ನಿಜವಾಗಿಯೂ ಗೆದ್ದಿದ್ದಾರೆ. ಜೊತೆಯಲ್ಲಿ ನಾಯಕನ ಮಾವ(ಅಚ್ಯುತ್ ಕುಮಾರ್)ನ ನಾಟಿ ವೈದ್ಯಕ್ಕೆ ಒಂದು ನೆಲೆಯನ್ನು ಕೊಡುತ್ತಾನೆ. ಹೀಗೆ ಎಲ್ಲರ ಮನಸ್ಸಿಗೂ ಸಿಹಿಯ ಸಕ್ಕರೆಯನ್ನು ಹಂಚುತ್ತಾ ತನ್ನ ಚಿಕ್ಕ ಜೀವನವನ್ನು ಎಂಜಾಯ್ ಮಾಡುವಾಗ ಒಂದು ಆಘಾತವಾಗುತ್ತದೆ. ಏನದು..? ಏಕೆ ಹೀಗಾಯಿತು..? ಹಿರಿಯ ಪ್ರೇಮಿಗಳು ಒಂದಾಗುತ್ತಾರಾ..? ಕತೆ ಏನಾಗುತ್ತದೆ..? ಎನ್ನುವುದನ್ನು ಚಿತ್ರಮಂದಿರಲ್ಲಿ ನೋಡಿ. ಪಕ್ಕಾ ಫ್ಯಾಮಿಲಿ ಪ್ಲಸ್ ಯೂತ್ ಓರಿಯೆಂಟೆಡ್ ಸಿನಿಮಾ.
ವಿಕ್ರಮ್ ಶ್ರೀವಾಸ್ತವ್ ಕ್ಯಾಮರಾ, ಚೋನಿ ಹರ್ಷ ಸಂಕಲನ ಚೆನ್ನಾಗಿದೆ. ಹರಿಕೃಷ್ಣ ಸಂಗೀತದಲ್ಲಿ ಸ್ವಲ್ಪ ಫ್ರೆಶ್ ಎನ್ನಿಸುವ ೩ ಹಾಡುಗಳನ್ನು ಕೇಳಬಹುದು ಮತ್ತು ನೋಡಬಹುದು.

ಗಣೇಶ್ ಅಭಿನಯ ಇಲ್ಲಿ ಮುಂಗಾರು ಮಳೆಯನ್ನು ನೆನಪಿಸುತ್ತದೆ. ದೀಪಾ ಬೇರೆ ಚಿತ್ರಗಳಿಗೆ ಹೋಲಿಸಿದರೆ ಚೆನ್ನಾಗಿ ನಟಿಸಿದ್ದಾರೆ. ಅನಂತ್‌ನಾಗ್ ಮತ್ತು ವಿನಯ ಪ್ರಸಾದ್ ನಿಜವಾಗಿಯೂ ಅದ್ಭುತವಾಗಿ ತಮ್ಮ ಪಾತ್ರ ಮಾಡಿದ್ದಾರೆ. ಉಳಿದಂತೆ ಅಚ್ಯುತ್‌ಕುಮಾರ್, ಅನು ಪ್ರಭಾಕರ್ ಪಾತ್ರಕ್ಕೆ ಜೀವತುಂಬಿದ್ದಾರೆ.

ಒಟ್ಟಾರೆ ಅಭಯ್ ಎಲ್ಲರನ್ನು ಚೆನ್ನಾಗಿ ದುಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಡುಗಳಲ್ಲಿ ಕಾಂಪ್ರೂ ಆದಂತಿದ್ದರೂ ಕತೆಯಲ್ಲಿ ತಮ್ಮ ತನ ತೋರಿಸಿದ್ದಾರೆ. ಅಭಯ್ ಭರವಸೆ ಮೂಡಿಸುತ್ತಾರೆ. ಲ್ಯಾಗಿಂಗ್ ಪಾಯಿಂಟ್ಗಳಿದ್ದರು ಹಾಡು ಅವನ್ನು ಮುಚ್ಚುತ್ತದೆ. ಆದರೆ ಇತ್ತೀಚಿನ ಬಿಸಿರಕ್ತದ ಜೋಷ್ ಸಿನಿಮಾ ನೋಡುಗರು ಇದನ್ನು ಹೇಗೆ ಸ್ವೀಕರಿಸುತ್ತಾರೋ..? ಕಾದು ನೋಡಬೇಕು.


ವರದಿ: ನಟರಾಜ್ ಎಸ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited