Untitled Document
Sign Up | Login    
Dynamic website and Portals
  
Home >> Movie Home >> Reviews >> ಅಂಗಾರಕ
Movie Review
ಅಂಗಾರಕ
ಹಾಗೆ ಸುಮ್ಮನೆ...
Rating :
Hero :
ಪ್ರಜ್ವಲ್ ದೇವರಾಜ್
Heroine :
ಪ್ರಣೀತ
Other Cast :
ಅವಿನಾಶ್, ಜೈ ಜಗದೀಶ್, ರೂಪೇಶ್, ಹಾರ್ದಿಕ ಮುಂತಾದವರು.
Director :
ಶ್ರೀನಿವಾಸ್ ಕೌಶಿಕ್
Music Director :
ಅರ್ಜುನ್ ಜನ್ಯ
Producer :
ಜಯಸುಧಾ ರಾಘವೇಂದ್ರ
Release Date :
10-01-2014
ಕೆಲವು ಸಿನಿಮಾಗಳ ವಿಷಯಕ್ಕೆ ಬಂದರೆ-ಇವುಗಳನ್ನು ಏಕೆ ಇದನ್ನು ಮಾಡುತ್ತಿದ್ದೇವೆ.? ಅದರಿಂದ ಏನು ಪ್ರಯೋಜನ.? ಎಂದೆಲ್ಲ ಯೋಚಿಸುವ ಕಾಲ ಹೊರಟು ಹೋಗಿದೆ.

ಮನರಂಜನೆಯ ಅಂಶ ಬಿಡಿ, ಏನು ಹೇಳ ಹೊರಟ್ಟಿದೀವಿ ನಾವು ಎನ್ನುವುದಾದರೂ ನಿರ್ಮಾಪಕರಿಗೆ, ನಿರ್ದೇಶಕರಿಗೆ ಗೊತ್ತಿರುತ್ತದೆಯೋ ಇಲ್ಲವೋ..? ಅಂತಹ ಸಿನಿಮಾಗಳು ಇಂದು ತೆರೆಯ ಮೇಲೆ ಬರುತ್ತಿದೆ. ಹಾಗೆ ಹೋಲಿಸಿ ನೋಡಿದರೆ ಅಂಗಾರಕ ಎನ್ನುವ ಸಿನಿಮಾ ಸ್ವಲ್ಪ ಪ್ರಮಾಣದಲ್ಲಿ ಅದರಿಂದ ಹೊರತಾಗಿದೆ. ಮನರಂಜಿಸುವ ಅಂಶಗಳಾದ ೪ ಫೈಟ್ ೪ ಸಾಂಗ್ ಹೆಸರು ಮಾಡಿರುವ ನಾಯಕಿ, ನಾಯಕ ಚಿತ್ರದಲ್ಲಿದ್ದಾರೆ. ಕತೆ..? ಅದು ಸ್ಪಲ್ಪ ಪ್ರಮಾಣದಲ್ಲಿದೆ. ಹಳೇ ಥಿಯರಿಯ ಕತೆ.

ಸಿಟಿಯಿಂದ ಅಗ್ರಿಕಲ್ಚರಲ್ ಓದನ್ನು ಮುಗಿಸಿಕೊಂಡು ಬರುವ ನಾಯಕ ವಿಜಯ್(ಪ್ರಜ್ವಲ್) ಹಳ್ಳಿಗೆ ಬಂದು ರೈತನಾಗ ಹೊರಡುತ್ತಾನೆ. ತಂದೆಗೆ ಅದು ಸುತಾರಾಂ ಇಷ್ಟವಿರುವುದಿಲ್ಲ. ಆದರೂ ಹಳ್ಳಿಯಲ್ಲೇ ಉಳಿಯುವ ನಾಯಕ. ಅಲ್ಲೇ ಮನೆಯ ಪಾಠ ಮಾಡಿಕೊಂಡು ಕಾಲೇಜಿಗೆ ಹೋಗುತ್ತಿರುವ ಪ್ರಿಯಳನ್ನು(ಪ್ರಣಿತ) ಇಷ್ಟ ಪಡುತ್ತಾನೆ.

ಒಂದಷ್ಟು ಪ್ರೇಮಿಸುವ ಎಪಿಸೋಡ್‌ಗಳು ಮುಂದುವರೆಯುತ್ತದೆ. ವಿಜಯ್ ತಂದೆಯ ರಾಜಕಾರಣದಲ್ಲಿ ಮುಂದುವರೆಯುವ ಆಸೆಗೆ ನೀರೆರೆಯಲು ಬಾಲ್ಯ ಸ್ನೇಹಿತ ರಾಜಶೇಖರ್ ಹಳ್ಳಿಗೆ ಬರುತ್ತಾನೆ. ಅವನು ಸಿಟಿಯಲ್ಲಿ ದೊಡ್ಡ ಬಿಸಿನೆಸ್ ಮ್ಯಾಗ್ನೇಟ್. ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಮತ್ತು ತನ್ನ ಮಗಳ ಭವಿಷ್ಯಕ್ಕಾಗಿ ವಿಜಯ್‌ನನ್ನೇ ಅಳಿಯನನ್ನಾಗಿ ಮಾಡಿಕೊಳ್ಳುವ ಬಯಕೆ ವ್ಯಕ್ತ ಪಡಿಸುತ್ತಾನೆ.

ವಿಜಿ ತಂದೆ ಅದಕ್ಕೆ ಓಕೆ ಹೇಳುತ್ತಾನೆ. ವಿಜಿಯ ಪ್ರೇಮದ ವಿಷಯ ಗೊತ್ತಾದ ತಂದೆ ತನ್ನ ಸ್ವಲ್ಪ ಮುನಿಸಿಕೊಂಡರೂ ನಂತರ ಪ್ರೇಮಿಸಿದ ಹುಡುಗಿ ಜೊತೆ ಮದುವೆ ಮಾಡಿಸುತ್ತಾನೆ. ನಾಯಕಿಯ ಮಾವ ಅಡ್ಡಗಾಲಿಡುತ್ತಾನೆ. ಅದಕ್ಕೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಅದೇ ಸಮಯದಲ್ಲಿ ರಾಜಶೇಖರನ ಮಗಳು ಕಾವ್ಯ ಹಳ್ಳಿಗೆ ಬರುತ್ತಾಳೆ. ಅವಳಿಗೆ ಇವರು ಮದುವೆಯಾಗಿರುವ ವಿಷಯ ತಿಳಿಯದಂತೆ ಎಲ್ಲರೂ ನಾಟಕವಾಡುತ್ತಾರೆ. ಇದರ ಮಧ್ಯೆ ಒಂದಷ್ಟು ಎಪಿಸೋಡ್ ಹೋಗುತ್ತದೆ.. ಪ್ರಿಯಾಳ ಮಾವ ನಾಗ ಎಲ್ಲವನ್ನು ತಿಳಿಯುತ್ತಾನೆ. ಹೀಗೆ ಕತೆ ಸಾಗುತ್ತದೆ.. ಇದರ ನಡುವೆ ವಿಜಿ ಪ್ರಿಯಾ ಮದುವೆ ವಿಷಯ ಕಾವ್ಯಳಿಗೆ ತಿಳಿಯುತ್ತಾ..? ಕಾವ್ಯಳ ಜೊತೆ ವಿಜಿ ಮದುವೆ ಆಗುತ್ತಾ..? ವಿಜಿ ತಂದೆ ರಾಜಕಾರಣಿಯಾಗುತ್ತಾನಾ..? ನಾಗ ಏನು ಮಾಡುತ್ತಾನೆ..? ಎನ್ನುವುದೆಲ್ಲಾ ಸಿನಿಮಾ ಮಂದಿರದಲ್ಲಿ ನೋಡಿ.

ಕತೆಯಲ್ಲಿ ಅಂಥಾ ಧಮ್ ಇಲ್ಲ. ದೃಶ್ಯಕಟ್ಟುವಲ್ಲೂ ನಿರ್ದೇಶಕರು ವಿಫಲರಾಗಿದ್ದಾರೆ. ಸುಮ್ಮನೆ ಆಗಿ ಹೋದ ದೃಶ್ಯಗಳೇ ಮತ್ತೆ ಮತ್ತೆ ಬಂದು ಹೋಗುತ್ತದೆ. ನೋಡುಗರಿಗೆ ಬೋರ್ ಎನ್ನಿಸುತ್ತದೆ. ನಿರ್ದೇಶಕರ ವಿಫಲತೆ ಎಷ್ಟಿದೆ ಅಂದರೆ ಹಾಡನ್ನು ಎಲ್ಲಿ ಹಾಕಬೇಕು, ಏಕೆ ಬೇಕು ಎನ್ನುವುದೂ ಗೊತ್ತಾದೇ ಸುಮ್ಮನೆ ಜಾಗ ಸಿಕ್ಕಲ್ಲೆಲ್ಲಾ ತುರುಕಿದ್ದಾರೆ. ಕತೆಯಲ್ಲಿ ನಾಯಕ ರೈತನಾಗುವ ಕನಸು ಈಡೇರುವುದಿಲ್ಲ, ತಂದೆಯ ಆಸೆಯೂ ಸಾಕಾರವಾಗುವುದಿಲ್ಲ. ಪ್ರೇಮ ಕತೆಯನ್ನು ಹಳ್ಳಿಗೆ ತರಲು ಕ್ಯಾರೆಕ್ಟರ್ ಬಳಸಿದಂತಿದೆ. ಅಬ್ಬರದ ಫೈಟ್ ಸುಮ್ಮನೆ ಎನಿಸುತ್ತದೆ. ಹಳೇ ಕಾಲದ ರೀತಿ ಶೂಟ್ ಮಾಡಲಾಗಿದೆ. ಕಡಿಮೆ ಬಜೆಟ್ ಇರುವಾಗಲೂ ವಿದೇಶದಲ್ಲಿ ಹಾಡುಗಳ ಚಿತ್ರೀಕರಣ ಮಾಡಿದ್ದಾರೆ. ಅದು ಗಿಟ್ಟುವುದಿಲ್ಲ. ಸೀರಿಯಲ್ ನೋಡಿದಂತೆ ಎನ್ನಿಸುತ್ತದೆ.

ಕ್ಯಾಮರಾ ಕೈಚಳಕ ಪರವಾಗಿಲ್ಲ. ಸಂಭಾಷಣೆ ಸುಮಾರಾಗಿದೆ. ಅರ್ಜುನ್ ಜನ್ಯ ಸಂಗೀತ ಚೆನ್ನಾಗಿಲ್ಲ. ಪ್ರಜ್ವಲ್ ನೃತ್ಯ, ನಟನೆ ತಮ್ಮ ಮಟ್ಟಿಗೆ ಮಾಡಿದ್ದಾರೆ. ಪ್ರಣೀತ ಪರವಾಗಿಲ್ಲ. ಅವಿನಾಶ್, ಜೈಜಗದೀಶ್ ತಮ್ಮ ಪಾತ್ರಗಳಿಗೆ ಮೋಸ ಮಾಡಿಲ್ಲ. ಒಟ್ಟಾರೆ ಸಿನಿಮಾ ಪರವಾಗಿಲ್ಲ ಅಷ್ಟೆ.

ವರದಿಃ ನಟರಾಜ್ ಎಸ್.ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited