Untitled Document
Sign Up | Login    
Dynamic website and Portals
  
Home >> Movie Home >> Reviews >> ಘರ್ಷಣೆ
Movie Review
ಘರ್ಷಣೆ
ಪಾಪಿಗಳನ್ನು ತಳಸೇರಿಸುವ ನೇತ್ರಾವತಿ.. sumಘರ್ಷಣೆಯಲ್ಲಿ..
Rating :
Hero :
___
Heroine :
ಮಾಲಾಶ್ರೀ.
Other Cast :
ಸುಚೇಂದ್ರ ಪ್ರಸಾದ್, ಆಶಿಷ್ ವಿದ್ಯಾರ್ಥಿ, ರೂಪಿಕ, ಅಯ್ಯಪ್ಪ, ಮುನಿ, ಕೀರ್ತಿರಾಜ್, ಪವಿತ್ರ ಲೋಕೇಶ್, ಸುನೇತ್ರ ಪಂಡಿತ್. ಮುಂತಾದವರು..
Director :
ದಯಾಳ್ ಪದ್ಮನಾಭ್
Music Director :
ಮಣಿಕಾಂತ್ ಕದ್ರಿ
Producer :
ಶಂಕರ್ ರೆಡ್ಡಿ, ಶಂಕರೇ ಗೌಡ
Release Date :
03-01-2014
ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರ ಎಂದರೆ ಒಂದಷ್ಟು ಸ್ಟೈಲಿಶ್ ಆಗಿ ಶೂಟ್ ಮಾಡಿರುತ್ತಾರೆ ಎನ್ನುವುದಂತು ಸತ್ಯ. ಅಂತಹ ಅಂಶವನ್ನು ಸ್ವಲ್ಪ ಮಟ್ಟಿಗೆ ಘರ್ಷಣೆ ಚಿತ್ರ ದಿಂದ ಎಕ್ಸ್‌ಪೆಟ್ ಮಾಡಬಹುದು. ಮಾಲಾಶ್ರೀಯವರಿಗೆ ಹಿಂದೆ ಇದ್ದಂತಹ ಪ್ಯಾನ್ ಫಾಲೋಯರ‍್ಸ್ ಬದಲು, ಹೊಸಾ ಪೀಳಿಗೆಯ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಅಂತಹ ಯುವ ಜನಾಂಗಕ್ಕೆ ಮಾಲಾಶ್ರೀ ಬದಲಾಗಿ ರೆಬೆಲ್ ಆಗಿ, ಪವರ್ ಫುಲ್ ಆಗಿ ಕಾಣಿಸಿಕೊಳ್ಳುತ್ತಿರುವುದು ಹೊಸಾ ಮಾತೇನಲ್ಲ. ಅದೇ ರೀತಿಯ ಪವರ್ ಫುಲ್ ಕ್ರೈಂ ಬ್ರ್ಯಾಂಚ್ ಪೋಲಿಸ್ ಆಗಿ ಇಲ್ಲಿ ಕಾಣಿಸುತ್ತಾರೆ.

ಘರ್ಷಣೆ ಪ್ರಾಂಭವಾಗುವುದೇ ನೇತ್ರಾವತಿ(ಮಾಲಾಶ್ರೀ)ಯ ತಂಗಿಯ ವಿಷಯದಿಂದ. ರೂಪಿಕಾ ತಂಗಿಯ ಪಾತ್ರ ನಿರ್ವಹಿಸಿದ್ದಾರೆ. ಅಲ್ಲಿಂದ ಆಕೆಯ ಕಿಡ್ನಾಪ್. ಅದರ ಹಿಂದೆಯೆ ಹಲವಾರು ಜನ ಹೆಣ್ಣು ಮಕ್ಕಳು ಕಿಡ್ನಾಪ್ ಆಗುತ್ತಾರೆ. ಇದು ಪೊಲೀಸರಿಗೆ ತಲೆ ಬಿಸಿಯಾಗುತ್ತದೆ. ಇದರ ಹಿಂದೆಯೇ ಊರಿನಲ್ಲಿ ಕೆಲವು ಕಡೆ ಕತ್ತರಿಸಿದ ಕೈಗಳು ಸಿಗುತ್ತದೆ. ಅದರ ಇನ್ವೇಷ್ಟಿಗೇಷನ್ ನಡೆಸಲು ನೇತ್ರಾವತಿಯನ್ನು ನೇಮಿಸಲಾಗುತ್ತದೆ. ಆಕೆ ತನ್ನ ತಂಗಿಯ ವಿಚಾರ ಹಾಗು ಅನಾಮದೇಯ ಕೈಗಳ ವಿಚಾರವಾಗಿ ತನಿಖೆ ನಡೆಸುತ್ತಾಳೆ. ಹೀಗೆ ತನಿಖೆ ಮುಂದುವರೆದು, ಎಲ್ಲೋ ಒಂದು ಕಡೆ ಪೋಲಿಸರು ತಪ್ಪು ಮಾಡಿದ್ದಾರೆ ಎಂದು ಅನ್ನಿಸುತ್ತದೆ.

ಇಬ್ಬರ ಮಧ್ಯೆ ಘರ್ಷಣೆ ಪ್ರಾಂಭವಾಗುತ್ತದೆ. ಹೀಗಿರುವಾಗ ಕೈ ಕತ್ತರಿಸುತ್ತಿರುವ ವ್ಯಕ್ತಿಯನ್ನು ಹುಡುಕುವ ಬಗ್ಗೆ ಒತ್ತಡ ಪ್ರಾರಂಭವಾಗುತ್ತದೆ. ಈ ಎಲ್ಲದರ ಮಧ್ಯೆ ತಂಗಿಯನ್ನು ಯಾರು ಕಿಡ್ನಾಪ್ ಮಾಡಿರುವರು ಎನ್ನುವ ವಿಚಾರ ತಿಳಿಯುವ ತನಿಖೆ ತಾನೇ ಮಾಡುತ್ತಾಳೆ. ಜೊತೆಯಲ್ಲೇ ತಂಗಿಗಾಗಿ ನೆನೆಯುತ್ತಾ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಾಳೆ. ಹೀಗೆ ಸೆಂಟಿಮೆಂಟ್, ತ್ರಿಲ್ಲಿಂಗ್, ಮತ್ತು ಆಕ್ಷನ್ ಬ್ಲಾಕ್ ಒಟ್ಟು ಗೂಡಿ ಕತೆ ಸಾಗುತ್ತದೆ. ಕೊನೆಯಲ್ಲಿ ಯಾರು ಅಪರಾಧಿಗಳು..? ಎನ್ನುವುದನ್ನು ಚಿತ್ರದಲ್ಲಿ ನೋಡಿ.

ಮಾಮೂಲಿ ಕತೆಯಾಗಿರುವುದರಿಂದ ಜನರು ಮೊದಲಾರ್ಧದಲ್ಲೇ ಕ್ಲೈಮ್ಯಾಕ್ಸ್ ಹೇಳಿ ಬಿಡುತ್ತಾರೆ. ಕೆಲವು ಕಾಲ ನೋಡಿಸಿಕೊಂಡರೂ ರಿಪಿಟೆಡ್ ಸೀಕ್ವೆನ್ಸ್ ತಲೆ ತಿನ್ನುತ್ತದೆ. ತಂತ್ರಜ್ಞಾನ ಮುಂದುವರೆದಿದ್ದರೂ ಹಲವಾರು ಕಡೆ ಶೋಧಿಸುವಲ್ಲಿ ವಿಫಲರಾಗುತ್ತಾರೆ.

ಇತ್ತೀಚಿನ ದಿನಗಳಲ್ಲಿ ತ್ರಿಲ್ಲಿಂಗ್ ಕಮ್ ಸಸ್ಪೆಸ್ಸ್ ಸಿನಿಮಾ ಮಾಡಬೇಕಾದರೆ ಹೆಚ್ಚಿನ ತಲೆ ಓಡಿಸಬೇಕು. ಏಕೆಂದರೆ ಜನರು ದಿನ ಬರುವ ಸಿ ಐ ಡಿ ಧಾರವಾಹಿಗಳನ್ನು , ಕೈಂ ಗಳನ್ನು ನೋಡಿ ಬುದ್ದಿವಂತರಾಗುತ್ತಿದ್ದಾರೆ. ಅದರಲ್ಲೂ ಕೈಮ್ಯಾಕ್ಸ್ ಎಲಿಮೆಂಟ್ ತೀರಾ ಮಾಮೂಲಿ ಪಾಯಿಂಟ್. ಅಲ್ಲಲ್ಲಿ ಸೆಂಟಿಮೆಂಟ್ ಟಚ್ ಕೊಟ್ಟರೂ ಪೇಲವ ಎನ್ನಿಸುತ್ತದೆ.

ಟೋಟಲ್ ಸಿನಿಮಾ ಆಕ್ಷನ್ ಪ್ಯಾಕ್. ಮಾಲಾಶ್ರೀರವರ ಇತ್ತೀಚಿನ ಎಲ್ಲಾ ಸಿನಿಮಾಗಳು ಒಂದೇ ರೀತಿ ನೋಡಿದ ಹಾಗೆ ಕಾಣುತ್ತದೆ. ಎಲ್ಲರಲ್ಲೂ ಒಂದೇ ಗೆಟಪ್, ಒಂದೇ ರೀತಿಯ ಕತೆ, ಒಂದೇ ರೀತಿಯ ಫೈಟ್. ಅಭಿಮಾನಿಗಳು ನೊಡಬಹುದು. ಮಾಲಾಶ್ರೀ ತಮ್ಮ ಪಾತ್ರ ಚೆನ್ನಾಗಿ ನಿರ್ವಹಿಸಿದ್ದಾರೆ. ರೂಪಿಕಾ, ಆಶಿಷ್ ವಿದ್ಯಾರ್ಥಿ, ಸುಚೇಂದ್ರಪ್ರಸಾದ್, ಕಾಶಿ ತಮ್ಮ ಪಾತ್ರ ಮಾಡಿದ್ದಾರೆ.

ಕ್ಯಾಮರ ಕೈ ಚಳಕ ಚೆನ್ನಾಗಿ ತೋರಿಸಿದ್ದಾರೆ, ಸಂಭಾಷಣೆ ಶ್ಯಾಂ ಪ್ರಸಾದ್ ಪರವಾಗಿಲ್ಲ, ಶ್ರೀ ಸಂಕನ ಚೆನ್ನಾಗಿದೆ. ಸಂಗೀತದಲ್ಲಿ ಒಂದೂ ಹಾಡು ಉಳಿಯುವುದಿಲ್ಲ. ಅಗತ್ಯವಿಲ್ಲದಿದ್ದರೂ ಹಾಡನ್ನು ತುರುಕಲಾಗಿದೆ. ದಯಾಳ್‌ರವರು ಕತೆಯ ವಿಷಯವಾಗಿ ಇನ್ನೂ ಗಮನ ಹರಿಸಿದ್ದರೆ ಉತ್ತಮವಾಗಿ ಮುಡಿಬರುತ್ತಿತ್ತು.

ವರದಿ ಃ ನಟರಾಜ್ ಎಸ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited