Untitled Document
Sign Up | Login    
Dynamic website and Portals
  
Home >> Movie Home >> Reviews >> ಶ್ರಾವಣಿ ಸುಬ್ರಹ್ಮಣ್ಯ
Movie Review
ಶ್ರಾವಣಿ ಸುಬ್ರಹ್ಮಣ್ಯ
ಹಳೆಯ ಕಥೆಗೆ ಹೊಸಾ ಬಣ್ಣ
Rating :
Hero :
ಗಣೇಶ್
Heroine :
ಅಮೂಲ್ಯ
Other Cast :
ಅನಂತ್ ನಾಗ್, ತಾರ, ಅವಿನಾಶ್, ವಿನಯ ಪ್ರಸಾದ್
Director :
ಮಂಜು ಸ್ವರಾಜ್
Music Director :
ಹರಿಕೃಷ್ಣ
Producer :
ಸುರೇಶ್ ಕೆ.ಎ.
Release Date :
27-12-2013
ಶಿಶಿರದ ನಂತರ ನಿರ್ದೇಶಕ ಮಂಜು ಸ್ವರಾಜ್ ಈ ಶ್ರಾವಣಿ ಸುಬ್ರಹ್ಮಣ್ಯ ಎನ್ನುವ ಸಿನಿಮಾವನ್ನು ಕಟ್ಟಿದ್ದಾರೆ. ಹಳೆಯ ಕತೆಯನ್ನು ಹಿಡಿದುಕೊಂಡು ಹೊಸಾ ಹಿಟ್ಟ್ ಕಾಂಬಿನೇಷನ್ ಬಳಸಿಕೊಂಡು ಸಿನಿಮಾ ಮಾಡಿದರೆ ಗಿಟ್ಟುತ್ತದೆ ಎನ್ನುವ ಒಂದು ವಿಚಾರ ಗಾಂಧಿನಗರದಲ್ಲಿ ಹಿಂದಿನಿಂದ ಬಂದಿರುವ ಪ್ರತೀತಿ. ಅದನ್ನು ಇಲ್ಲೂ ಅಪ್ಲೇ ಮಾಡಿದ್ದಾರೆ. ಚೆಲುವಿನ ಚಿತ್ತಾರದ ಗಣೇಶ್ ಹಾಗು ಅಮೂಲ್ಯ ಜೋಡಿ ಇಲ್ಲಿ ಪಾತ್ರವಹಿಸಿದ್ದಾರೆ. ಕನ್ನಡದಲ್ಲಿ ಇಂತ ಚಿತ್ರಗಳು ಹಲವಾರು ಬಂದು ಹೋದರು ಸಾಕಷ್ಟು ಹಣ ಸುರಿದು ಚಿತ್ರಗಳನ್ನು ಮಾಡುತ್ತಿದ್ದಾರೆ. ಇತ್ತಿಚೆಗೆ ಗಿಟ್ಟುತ್ತಿರುವ ಪ್ರಯೋಗಾತ್ಮಕ ಚಿತ್ರದೊಂದಿಗೆ ಶ್ರಾವಣಿ ಸುಬ್ರಹ್ಮಣ್ಯ ಗಿಟ್ಟುವುದು ಡೌಟ್.

ಕತೆ ಏನಪ್ಪ ಎಂದರೆ ತಂದೆ ತಾಯಿ ಕಳೆದುಕೊಂಡು ಅನಾಥನಾಗಿ ಬೆಳೆದ ಹುಡುಗ ಸುಬ್ರಹ್ಮಣ್ಯ (ಗಣೇಶ್) ತನ್ನ ಹಾಡುಗಾರಿಕೆಯಿಂದ ಹೆಸರು ಮಾಡಬೇಕೆಂದು ಕನಸನ್ನು ಹೊತ್ತಿರುತ್ತಾನೆ. ಅದಕ್ಕಾಗಿ ಆಕ್ರೇಷ್ಟ್ರಾ ಹಾಗು ಪಬ್‌ಗಳಲ್ಲಿ ಹಾಡಿಕೊಂಡು ತನ್ನ ಜೀವನ ಕಳೆಯುತ್ತಾ ಸಂಗೀತ ನಿರ್ದೇಶಕರ ಬಳಿ ತಿರುಗುತ್ತಿರುತ್ತಾನೆ. ಶ್ರಾವಣಿ(ಅಮೂಲ್ಯ) ಒಂದು ಊರಿನ ಗೌಡರ ಮನೆಯ ಹುಡುಗಿ. ದೇವರು ಆಕೆಗೆ ಚಂದದ ರೂಪ, ಯವ್ವನ ಕೊಟ್ಟಿರುತ್ತಾನೆ ಹೊರತು ಬುದ್ದಿಯಲ್ಲಿ ಮುಗ್ಧತೆಯನ್ನು ಹಾಗೆ ಉಳಿಸಿರುತ್ತಾನೆ. ಅತಿಯಾದ ಮುಗ್ಧತೆ ಆಕೆಯ ಜೀವನದಲ್ಲಿ ಎಡವುವಂತೆ ಮಾಡುತ್ತದೆ. ಆಕೆಯ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ಹುಡುಗರ ಗುಂಪು ಅತ್ಯಾಚಾರಕ್ಕೆ ಪ್ರಯತ್ನಿಸುತ್ತದೆ. ಎಲ್ಲಿಂದಲೋ ಬಂದ ನಾಯಕ ಆಕೆಯನ್ನು ರಕ್ಷಿಸುತ್ತಾನೆ. ಆಕೆಯ ಸಂಕಷ್ಟ ತೀರಿಸಲು ಆಕೆಯ ಗಂಡನೆಂದು ಅಭಿನಯಿಸಿ ಮನೆಯಿಂದ ಹೊರಗೆ ಹಾಕಿಸಿಕೊಳ್ಳುತ್ತಾನೆ. ಈ ಇಬ್ಬರು ಮನೆಯಿಂದ ಹೊರಬಂದು ತಮ್ಮದೇ ಆದ ಜೀವನ ಪ್ರಾರಂಭಿಸುತ್ತಾರೆ.

ಸುಬ್ಬುವಿನ ಜೊತೆ ಮನೆ ಷೇರ್ ಮಾಡಿಕೊಳ್ಳುವ ಶ್ರಾವಣಿ. ಯುವ ಪ್ರೇಮಿಗಳಿಗೆ ಮನೆಯನ್ನು ಕೊಟ್ಟು ಹರಸುವ ಅನಂತನಾಗ್ ದಂಪತಿಗಳು. ಆಕೆಯ ಮುಗ್ಧತೆಯ ನಡುವೆ ಸುಬ್ಬು ಹೆಣಗುವುದೇ ಪ್ರೇಮ ಕತೆಯ ಎಪಿಸೋಡ್. ಮುಂದಿನದು ನೀವೆ ಹೇಳಬಹುದು. ಆತ ಮತ್ತು ಆಕೆಯೊಂದಿಗೆ ಪ್ರೇಮವಾಗುತ್ತದಾ..? ಹುಡುಗಿಯ ಮನೆಯವರು ಒಪ್ಟುತ್ತಾರಾ..? ಅನಂತ್‌ನಾಗ್ ತಾರ ದಂಪತಿಗಳ ಪಾತ್ರವೇನು ಎನ್ನುವುದನ್ನು ಚಿತ್ರ ಮಂದಿರದಲ್ಲಿ ನೋಡಿ.
ಕ್ಯಾರೆಕ್ಟರ್ ಹಾಡುಗಾರನಾಗಿ ತನ್ನ ಸಾಧನೆ ಮಾಡುವುದನ್ನು ಯಾವುದೇ ಹಂತದಲ್ಲೂ ತೀವ್ರತರವಾಗಿ ತೋರಿಸುವುದೇ ಇಲ್ಲ. ಸುಮ್ಮನೆ ಒಂದು ಪಾತ್ರಕ್ಕೇನಾದರು ಕೆಲಸ ಬೇಕು ಎಂದು ಹಾಡುಗಾರ ಎಂದು ಇಟ್ಟುಕೊಂಡತಿದೆ. ನಾಯಕಿಯ ಪಾತ್ರ ಪೋಷಣೆ ಚೆನ್ನಾಗಿದೆ. ರಿಯಲಿಸ್ಟಿಕ್ ಇಲ್ಲದ ಗಿಮಿಕ್ ಚಿತ್ರವಾದರೂ ನೋಡಿಸಿಕೊಂಡು ಹೋಗುತ್ತದೆ. ಹಲವಾರು ಕನ್ನಡ ಸಿನಿಮಾಗಳಿಂದಲೇ ಇಸ್ಪೇರ್ ಆದ ಸಿನ್‌ಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ನಾಯಕ ನಾಯಕಿಯ ಸಿನಿಮಾಗಳದ್ದೇ ಕ್ಲಿಪಿಂಗ್ ಹಾಗು ಕಥೆಗಳು ಸುಮ್ಮನೆ ಸ್ವಯಂ ಪ್ರಶಂಸೆ ಎನಿಸುತ್ತದೆ. ಹೊಸಾ ಕತೆಯನ್ನು ಕಟ್ಟಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು.

ಎರಡನೇ ಪ್ರಯತ್ನ ದೊಡ್ಡ ಹೀರೋಗೆ ಮಾಡುತ್ತಿರುವ ಎಲ್ಲಾ ಛಾಯೆ ಇದೆ. ಒಂದು ಐಟಂ ಸಾಂಗ್, ಎರಡು ಫೈಟ್, ಮೂರು ಪ್ರೀತಿ-ಸಲ್ಲಾಪದ ಹಾಡು ಹೀಗೆ ಎಲ್ಲಾ ಅಂಶಗಳು ಸೇರಿ ಕಮರ್ಶಿಯಲ್ ಪ್ರಯತ್ನ ಎನಿಸುತ್ತದೆ. ಸಾಧು ಕಾಮಿಡಿ ವರ್ಕ್ ಆಗಿಲ್ಲ. ಹರಿಕೃಷ್ಣ ಸಂಗೀತದಲ್ಲಿ ಒಂದು ಸಾಂಗ್ ಮಾತ್ರಾ ಕೇಳಬಹುದು. ಕ್ಯಾಮರ ಚೆನ್ನಾಗಿದೆ.
ಗಣೇಶ್ ಅಭಿನಯ ಮತ್ತೊಮ್ಮೆ ಮುಂಗಾರುಮಳೆ ನೆನಪಿಸುತ್ತದೆ. ಅಮೂಲ್ಯ ಚೆನ್ನಾಗಿ ಅಭಿನಯಿಸಿದ್ದಾರೆ. ಅನಂತನಾಗ್, ತಾರ, ಅವಿನಾಶ್, ವಿನಯ ಪ್ರಸಾದ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನೀನಾಸಂ ಅಶ್ವತ್ ಅಭಿನಯ ಹೆಚ್ಚಾಗಿದೆ.
ಒಟ್ಟಾರೆ ಸಿನಿಮಾ ಪರವಾಗಿಲ್ಲ.

ಇತ್ತೀಚಿನ ಎಲ್ಲಾ ಚಿತ್ರಗಳನ್ನು ನೋಡುತ್ತಾ ಬಂದಾಗ ಒಂದು ಅಂಶ ಗಮನಕ್ಕೆ ಬರುತ್ತದೆ. ಒಳ್ಳೆ ಕತೆ ಇದ್ದಲ್ಲಿ ಸ್ಟಾರ್ ಕಾಸ್ಟಿಂಗ್ ಇರುವುದಿಲ್ಲ, ಸ್ಟಾರ್ ಕಾಸ್ಟಿಂಗ್ ಇದ್ದಲ್ಲಿ ಕತೆ ಇರುವುದಿಲ್ಲ.


ವರದಿ: ನಟರಾಜ್ ಎಸ್ ಭಟ್.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited