Untitled Document
Sign Up | Login    
Dynamic website and Portals
  
Home >> Movie Home >> Reviews >> ಗಾಲಿ
Movie Review
ಗಾಲಿ
ಗಾಲಿ
Rating :
Hero :
ಜೀವನ್
Heroine :
ರೂಪ ನಟರಾಜ್
Other Cast :
ಮುರಳಿ, ಬಿರಾದರ್, ಮೋಹನ್, ಮೇಘನ. ಮುಂತಾದವರು
Director :
ಲಕ್ಕಿ
Music Director :
ಡ್ಯಾನಿಯಲ್
Producer :
ಯೋಗೇಶ್
Release Date :
20-12-2013
ಡಬ್ಬಲ್ ಮೀನಿಂಗ್ ಡೈಲಾಗ್‌ಗಳನ್ನು ಬಳಸಿಕೊಂಡು ಶೂಟ್ ಮಾಡಿ ಟ್ರೈಲರ್‌ಗಳನ್ನು ಬಿಟ್ಟು ಜನರನ್ನು ಸಿನಿಮಾ ಮಂದಿರಗಳಿಗೆ ಎಳೆಯುವ ತಂತ್ರವನ್ನು ಮಾಡಿದ್ದರು. ಹಾಗೆ ಅದೇ ರೀತಿಯ ಟ್ರೈಲರ್ ಅನ್ನು ಬಿಟ್ಟು ಅತೀ ಸುದ್ದಿ ಮಾಡಿದ ಸಿನಿಮಾವೇ ಗಾಲಿ. ಕೆಲವು ಹೆಣ್ಣು ಮಕ್ಕಳು, ಫ್ಯಾಮಿಲಿ ಮಂದಿ ಅದರಿಂದ ಇರುಸು ಮುರಿಸು ಮಾಡಿಕೊಂಡಿದ್ದು ಉಂಟು. ಆದರೆ ಯುವ ಜನತೆ ಮಾತ್ರ ಈ ಸಿನಿಮಾ ಯಾವಾಗ ಚಿತ್ರಮಂದಿರಗಳಿಗೆ ಬರುತ್ತದೋ..? ಟ್ರೈಲರ್ ನಲ್ಲೇ ಇಷ್ಟು ಇರುವಾಗ, ಎರಡೂವರೆ ಅವಧಿಯಲ್ಲಿ ಎಷ್ಟು ಡೈಲಾಗ್ ತುಂಬಿರಬಹುದು..? ಎಂದೆಲ್ಲಾ ಕಾಯುತ್ತಾ ಕುತ್ತಿದ್ದರು. ಆದರೆ ಹಾಗೆ ಅವನ್ನೇ ನಂಬಿಕೊಂಡು ಚಿತ್ರಮಂದಿರಗಳಿಗೆ ಬಂದರೆ ಕಂಡಿತ ನಿಮಗೆ ನಿರಾಸೆಯಾಗುವುದರಲ್ಲಿ ಎರಡು ಮಾತಿಲ್ಲ. ಒಂದು ಸಿನಿಮಾ ನೋಡುವ ಅಂದುಕೊಂಡು ಬಂದು ನೋಡಿದರೆ ಸ್ವಲ್ಪ ಸಮಾಧಾನ ಸಿಗಬಹುದು.

ಟ್ರೈಲರ್‌ಗೂ ಸಿನಿಮಾಗೂ ಏನೂ ಸಂಬಂಧವೇ ಎಲ್ಲ ಎನ್ನುವುದು ಮಾತ್ರ ವಿಪರ್ಯಾಸ. ಟ್ರೈಲರ್ ಒಂದು ದಿಕ್ಕಾದರೆ ಸಿನಿಮಾ ಮತ್ತೊಂದು ದಿಕ್ಕು. ಎಲ್ಲವೂ ಸಿನಿಮಾ ತಂತ್ರ. ಇರಲಿ ಈಗ ಲಕ್ಕಿ ಎನ್ನುವ ನಿರ್ದೇಶಕ ತಮ್ಮ ಕತೆಯನ್ನು ತುಂಬಾ ಸರಳವಾಗಿ ಮಾಡುತ್ತಾ ಹೋಗಿದ್ದಾರೆ. ಸಿನಮಾ ನಿರ್ದೇಶನ ಮಾಡಬೇಕೆಂಬ ಕನಸನ್ನು ಹೊತ್ತು ಬೆಂಗಳೂರಿಗೆ ಬರುವ ನಾಯಕ(ಜೀವನ್). ಬೆಂಗಳೂರೆಂದರೆ ಸುಮ್ಮನೆಯೇ..? ನೆಲೆ ಇಲ್ಲದವರಿಗೆ ಕಷ್ಟವೇ ಕಷ್ಟ. ಅದರಲ್ಲೂ ಆತನಿಗೆ ಒಬ್ಬಳು ಹುಡುಗಿ ಸಿಗುತ್ತಾಳೆ.(ನಾಯಕಿ-ರೂಪ). ಇಬ್ಬರು ಅನಾಥರು ರಸ್ತೆ ತಿರುಗುತ್ತಾ ರಾತ್ರಿ ಕಳೆದು ಬೆಳಿಗ್ಗೆ ನಾಯಕನ ಸ್ನೇಹಿತನ ಮನೆಯಲ್ಲಿ ತಳ ಊರುತ್ತಾರೆ. ಅಲ್ಲಿಂದ ಆತನೊಂದಿಗೆ ಸಿನಿಮಾ ಮಾಡುವ ಪಯಣ ಶುರು. ನಿರ್ಮಾಪಕರ ಮನೆ ಮನೆ ಅಲೆಯುತ್ತಾನೆ. ಹೀಗೆ ಸ್ಟ್ರಗಲ್. ಒಬ್ಬ ನಾಯಕ ಓಕೆ ಹೇಳುತ್ತಾನೆ. ಅವನಿಗೆ ಸಿನಿಮಾ ಮಾಡಲು ಪ್ರಾರಂಭಿಸುತ್ತಾರೆ. ಅವನ ಅಹಂಕಾರಕ್ಕೆ ಸಿಟ್ಟಾದ ನಾಯಕ ಹೊಡೆದು, ತಾನೇ ನಾಯಕನಾಗುತ್ತಾನೆ. ಮುಂದೆ ಆ ಸಿನಿಮಾ ಏನಾಯಿತು..? ನಿರ್ದೇಶನ ಮಾಡಲು ಬಂದವ ನಾಯಕ ನಾದಾಗ ಏನಾಗುತ್ತಾನೆ..? ಅವನ ಸಮಸ್ಯೆಗಳೇನು..? ಎನ್ನುವುದು ಕತೆಯ ಒಳ ಸುಳಿ.

ಮೊದಲಾರ್ಧ ಸುಮಾರಾಗಿದೆ , ನಂತರದಲ್ಲಿ ಕತೆ ಓಡುತ್ತದೆ. ನಿರ್ದೇಶಕ ಲಕ್ಕಿ ಅನವಶ್ಯಕವಾಗಿ ರಾಜಕಾರಣಿಗಳನ್ನು ಹೊಗಳಲುವುದು, ಇಷ್ಟವಾಗದವರನ್ನು ಸಿನಿಮಾದ ಸಂಭಾಷಣೆಯ ಸೋಗಿನಲ್ಲಿ ಹೊಡೆಯುವುದು ತರವಲ್ಲ. ನಮ್ಮ ಕತೆಗೆ ಅದು ಎಷ್ಟು ಸೂಕ್ತ ಮತ್ತು ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು ಎನ್ನುವು ಸಾಮಜಿಕ ಕಳಕಳಿ ಇರಬೇಕು. ಈಗಂತು ಜನ ಮನೆಯಲ್ಲೇ ಕೂತು ಎಲ್ಲವನ್ನು ನೋಡುತ್ತಿದ್ದಾರೆ. ಹಣ ಕೊಟ್ಟು ಚಿತ್ರ ಮಂದಿರಕ್ಕೆ ಬರುವ ಜನರಿಗೂ ಅದನ್ನೇ ಕೇಳಿಸುವುದಲ್ಲಿ ಅರ್ಥವಿಲ್ಲ. ಅತೀ ಕಡಿಮೆ ಬಜೆಟ್‌ನಲ್ಲಿ ಮೂಡಿ ಬಂದಿರುವ ಚಿತ್ರವಾದರು ಸುಮ್ಮನೆ ನೋಡ ಬಹುದು. ಆದರೆ ಪೇಷನ್ಸ್ ಮುಖ್ಯ. ಬಹಳಷ್ಟು ಕಡೆ ಉಪೇಂದ್ರರ ಎ ಸೂಪರ್ ನೆನಪಾಗ ಬಹುದು.

ಯಾವುದೇ ವಿಭಾಗವನ್ನು ಚೆನ್ನಾಗಿ ಬಳಸಿ ಕೊಂಡಿದಲ್ಲ. ಸುಮ್ಮನೆ ಸಿನಿಮಾ ಮಾಡುವ ಎಂದು ಮಾಡಿದ ಹಾಗಿದೆ. ಸಂಗೀತ, ಸಂಕಲನ, ಎಲ್ಲಾ ಕ್ಷೇತ್ರ ಇನ್ನೂ ಇಂಪ್ರೂ ಆಗಬೇಕು. ಟ್ರೈಲರ್ ನೋಡಿ ಜನ ಸಿನಿಮಾಗೆ ಬಂದರೆ ಅಲ್ಲ ಬೀಪ್ ಗಳಿಂದ ನಿರಾಶೆ ಹೊಂದುತ್ತಾರೆ. ನಾಯಕ ಜೀವ ಪರವಾಗಿಲ್ಲ. ನಾಯಕಿ ರೂಪ ಹೆಸರಿಗೆ ನಾಯಕಿಯಾಗಿದ್ದಾರೆ. ಉಳಿದಂತೆ ಬಿರಾದರ್, ಮೋಹನ್, ಮೇಘನ, ಗುಂಡುಮಣಿ ಅಭಿನಯಿಸಿದ್ದಾರೆ.

ವರದಿಃ ನಟರಾಜ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited