Untitled Document
Sign Up | Login    
Dynamic website and Portals
  
Home >> Movie Home >> Reviews >> ವಿಕ್ಟರಿ
Movie Review
ವಿಕ್ಟರಿ
ವಿಕ್ಟರಿ...
Rating :
Hero :
ಶರಣ್
Heroine :
ಅಸ್ಮಿತಾ ಸೂದ್
Other Cast :
ರಾಗಿಣಿ, ಸಾಧು ಕೋಕಿಲ, ಗಿರಿಜಾ ಲೋಕೇಶ್, ಅವಿನಾಶ್, ತಬಲ ನಾಣಿ, ದಯಾನಂದ್, ರಮೇಶ್ ಭಟ್ ಮತ್ತಿತರರು.
Director :
ನಂದ ಕಿಶೋರ್
Music Director :
ಅರ್ಜುನ್ ಜನ್ಯ
Producer :
ಎಸ್. ಆರ್. ಎಸ್.
Release Date :
23-08-2013
ಸಿನಿಮಾದ ಎಳೆ ತುಂಬಾ ಚೆನ್ನಾಗಿದೆ. ಆದರೆ ಅದನ್ನು ಪ್ರಸ್ತುತಪಡಿಸುವಲ್ಲಿ ಮಾಮೂಲಿ ಸಿನಿಮಾ ಎನಿಸುತ್ತದೆ. ಈ ಕಥೆಯನ್ನು ಇಟ್ಟುಕೊಂಡು ತುಂಬಾ ಹೊಸದಾಗಿ ತೋರಿಸಬಹುದಾಗಿತ್ತು. ಆದರೆ ಇದರಲ್ಲಿಯ ಒಂದಷ್ಟು ಡಬ್ಬಲ್ ಮೀನಿಂಗ್ ಡೈಲಾಗ್ಗಳು, ಒಂದು ಐಟಂ ಸಾಂಗ್, ಒಂದು ಕುಡುಕರ ಸಾಂಗ್, ಎರಡು ವಿದೇಶಿ ಚಿತ್ರೀಕರಣದ ಸಾಂಗ್ ಎಲ್ಲವೂ ಒಂದು ಒಳ್ಳೇಯ ವಿಷಯವನ್ನು ಸಾಮಾನ್ಯವಾಗಿ ಪ್ರಸ್ತುತಪಡಿಸಿದ ಹಾಗಿದೆ.

ಸಿನಿಮಾದಲ್ಲಿ ಎಲ್ಲವೂ ಅದ್ಭುತ ಎಂದು ಹೇಳದಿದ್ದರೂ, ತುಂಬಾ ಒಳ್ಳೆಯ ಪ್ರಯತ್ನ. ಶರಣ್ ನಾಯಕರಾಗಿ ರ‍್ಯಾಂಬೊ ಗಿಟ್ಟಿತ್ತು. ಆದರೆ ಇದು ಆ ಸಿನಿಮಾವನ್ನು, ಶರಣ್‌ರನ್ನು ಜನರು ಒಪ್ಪಿರುವುದನ್ನು ಪ್ರಮಾಣಿಕರಿಸುತ್ತದೆ ಎಂದು ಹೇಳಲಾಗಿತ್ತು. ಅದು ನಿಜವಾಗುವ ಎಲ್ಲ ಸಾಧ್ಯತೆಗಳು ಇದೆ. ನಂದ ಕಿಶೋರ್ ತಮ್ಮ ಚೊಚ್ಚಲ ಚಿತ್ರದಲ್ಲೇ, ಈ ಮಟ್ಟಿಗೆ ಮಾಡಿರುವುದು ಒಳ್ಳೆಯ ಬೆಳವಣೆಗೆ. ಆದರೆ ಕತೆಯನ್ನು ಹೆಣೆಯುವಲ್ಲಿ ಸ್ವಲ್ಪ ಸೋತಿದ್ದಾರೆ. ಕತೆಯ ಮೊದಲ ಹಂತದಲ್ಲೆ ಜನರು ಸ್ವಲ್ಪ ಪ್ರಮಾಣದಲ್ಲಿ ನಕ್ಕು ಮತ್ತೆ ನಗು ಮರೆತೇ ಹೋಯಿತು ಎನ್ನುವಾಗ ಮತ್ತೊಮ್ಮೆ ನಗುವಂತೆ ಮಾಡಿದ್ದಾರೆ. ಆದರೆ ಶರಣ್ ಸಿನಿಮಾ ಎಂದರೆ ಜನರು ’ಹೊಟ್ಟೆ ಹುಣ್ಣಾಗುವಷ್ಟು ನಗಬಹುದು’ ಎಂದು ಬಂದಿದ್ದರೆ ಅದಕ್ಕೆ ನಿರಾಶೆಯಾಗುತ್ತದೆ. ಎಲ್ಲರೂ ’ಖಾಲಿ ಕ್ವಾಟ್ರು...’ ಮತ್ತು ’ಅತ್ತೆ ನಿನ್ನ್ ಮಗಳು..’ ಸಾಂಗ್ ಎಂಜಾಯ್ ಮಾಡುತ್ತಾರೆ. ಸೀಟಿ ಹಾಕುತ್ತಾರೆ. ಅರ್ಜುನ್ ಇಲ್ಲಿಯೂ ಯಶಸ್ಸು ಕಂಡಿದ್ದಾರೆ.

ಕತೆಯ ವಿಷಯಕ್ಕೆ ಬಂದರೆ, ಒಬ್ಬ ಮದುವೆ ಮಾಡಿಸುವ ಬ್ರೋಕರ್ ಚಂದ್ರು(ಶರಣ್), ಅವನಿಗೆ ಒಬ್ಬ ಹುಡುಗಿ ಜೊತೆ ಲವ್ ಆಗಿ ಮದುವೆಯು ಆಗುತ್ತದೆ. ಆದರೆ ಹೆಂಡತಿ ಒಂದು ಕಾರಣಕ್ಕೆ ಮನೆ ಬಿಟ್ಟು ಹೋಗುತ್ತಾಳೆ. ಅವಳನ್ನು ಸಮಾಧಾನಿಸುವಲ್ಲಿ ವಿಫಲನಾಗುವ ಚಂದ್ರು, ಸಾಯಲು ನಿರ್ಧರಿಸುತ್ತಾನೆ. ಆದರೆ ಅವೆಲ್ಲವೂ ಸಾಕಾರಗೊಳ್ಳುವುದಿಲ್ಲ. ಆಗ ಅವನು ಒಬ್ಬ ಮಾಫಿಯಾ ಡಾನ್ಗೆ (ರವಿ ಶಂಕರ್) ತನ್ನನ್ನು ಕೊಲ್ಲುವಂತೆ ಸುಪಾರಿ ಕೊಡುತ್ತಾನೆ. ಅಲ್ಲಿಂದ ಸಿನಿಮಾ ಓಡುತ್ತದೆ. ಮುಂದೆ ಏನಾಗುತ್ತದೆ...? ಇದರ ಮಧ್ಯ ಯಾರೆಲ್ಲಾ ಬರುತ್ತಾರೆ..? ಹೇಗೆ ಕತೆ ಮುಗಿಯುತ್ತದೆ..? ನಾಯಕನ 5-6 ಅವತಾರಳೇನು..? ಎಂದು ತಿಳಿಯಬೇಕಾದರೆ ಸಿನಿಮಾ ನೋಡಿ. ಒಮ್ಮೆ ನೋಡಲು ಅಡ್ಡಿಯಿಲ್ಲ.

ಸಂಭಾಷಣೆಯಲ್ಲಿ ಡಬ್ಬಲ್ ಮೀನಿಂಗ್ ಅಧಿಕವಿಲ್ಲವಾದರೂ ಅದರ ಝಲಕ್ ಇದ್ದೇ ಇದೆ. ಚಿತ್ರಕತೆಯಲ್ಲಿ ತುಂಬಾ ಗೊಂದಲಗೊಂಡು ಏನೇನೋ ಮಾಡಲು ಹೋಗಿ ಸುಮ್ಮನೆ ಸೀನ್ ತುಂಬಿದ್ದಾರೆ. ಕೆಲವು ಬೋರ್ ಹೊಡೆಸುತ್ತದೆ. ಶರಣ್ ಕಾಮಿಡಿ, ಸಾಧು, ರವಿಶಂಕರ್ ಕಾಮಿಡಿ ತುಂಬಾ ಚೆನ್ನಾಗಿ ವರ್ಕೌಟ್ ಆಗಿದೆ. ಸಿನಿಮಾದಲ್ಲಿ ಮತ್ತೊಂದು ಅಂಶ ಟೈಟಲಿಂಗ್ ಟ್ರಿಕ್ ಚೆನ್ನಾಗಿದೆ. ಛಾಯಾಗ್ರಹಣ, ಸಂಕಲನ ಉತ್ತಮ.

ಮಾಮೂಲಿ ಚಿತ್ರ ಮಂದಿರದಲ್ಲಿ, ಭಾರಿ ನಿರೀಕ್ಷೆ ಇಲ್ಲದೆ ಒಮ್ಮೆ ನೋಡಿ ನಕ್ಕು ಬರಬಹುದಾದ ಸಿನಿಮಾ..

ವರದಿ: ನಟರಾಜ್ ಎಸ್. ಭಟ್.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited