Untitled Document
Sign Up | Login    
Dynamic website and Portals
  
Home >> Movie Home >> Reviews >> ಟೋನಿ
Movie Review
ಟೋನಿ
ಟೋನಿ ಚಿತ್ರದ ಹಾಡಿನ ದೃಶ್ಯ
Rating :
Hero :
ಶ್ರೀನಗರ ಕಿಟ್ಟಿ
Heroine :
ಐಂದ್ರಿತಾ ರೈ
Other Cast :
ಧರ್ಮೆಂದ್ರ, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ದಿಲೀಪ್ ರಾಜ್, ಪ್ರೀತಿ ಜಿಂಗಾನಿಯ, ಶ್ರೀಧರ್
Director :
ಜಯತೀರ್ಥ
Music Director :
ಸಾಧು ಕೋಕಿಲ
Producer :
--
Release Date :
09-08-2013
ಕನ್ನಡಕ್ಕೆ ಟೋನಿ ಹೊಸ ಆಯಾಮದ ಚಿತ್ರ. ಹಿಂದೆಲ್ಲಾ ಇದು ಸಾಧ್ಯ, ನಿಷ್ಕರ್ಷ ಹೀಗೆಲ್ಲಾ ಸಿನಿಮಾಗಳು ಬಂದು ಜನರನ್ನು ನೋಡುವ ದೃಷ್ಟಿಯನ್ನು ಬದಲಾಯಿಸಿತ್ತು. ಅಂತಹ ಸಿನಿಮಾಗಳು ಬೇರೆ ಭಾಷೆಯಲ್ಲಿ ಇಂದು ಜನರಿಗೆ ನೋಡಲು ಸಿಗುವುದರಿಂದ ಇದೇನು ಅಂತಾ ಹೊಸದನ್ನಿಸದೇ ಇದ್ದರೂ ಕನ್ನಡದ ಮಟ್ಟಿಗೆ ಹೊಸದು.

ಅಂದರೆ ಇತ್ತೀಚಿನ ದಿನದ ಸಮಸ್ಯೆಗಳನ್ನು ಇಟ್ಟುಕೊಂಡು ಹೊಸದೊಂದು ಆಯಾಮದಲ್ಲಿ ಕತೆಯನ್ನು ಕಟ್ಟಿ, ಅದನ್ನು ವಿಸ್ತಾರವಾಗಿ ತಿಳಿಸಿ, ಜನರನ್ನು ಜಾಗ್ರತರನ್ನಾಗಿಸುವ ಪ್ರಯತ್ನ ಟೋನಿ. ನಿರ್ದೇಶಕ ಜಯತೀರ್ಥರವರು ’ಒಲವೇ ಮಂದಾರ’ದ ನಂತರ ಇಂತಹ ಕತೆಗೆ ಕೈ ಹಾಕಿರುವುದು ನಿಜಕ್ಕೂ ಶ್ಲಾಘನೀಯ. ಕಮರ್ಶಿಯಲ್ ಪಾಯಿಂಟ್ಗಳಿದ್ದರೂ ಅಂತರಾಳದ ವಿಷಯವನ್ನು ತೋರಿಸಲು ಪ್ರಯತ್ನ ಪಟ್ಟಿದ್ದಾರೆ.

4 ಹಂತದಲ್ಲಿ ಕತೆಯು ತೆರೆದುಕೊಳ್ಳುತ್ತದೆ. ಒಂದು ಟೋನಿ ಅಲಿಯಾಸ್ ಕೇಶವಮೂರ್ತಿ ಯ ಏಕ್ ದಿನ್ ಕಾ ಸುಲ್ತಾನ್ ಕತೆ. ಅವನು ಸುಲ್ತಾನನೋ..? ಅಲ್ಲವೋ..? ನೀವೇ ನೋಡಿ. ಅದರೊಂದಿಗೆ ಅಂಟಿಕೊಂಡಿರುವ ಅವನ ಹಿಂದಿನ ನೆನಪುಗಳು. ಅಣ್ಣ, ಅತ್ತಿಗೆ, ಮಕ್ಕಳು, ಪ್ರಿಯತಮೆ, ಸ್ನೇಹಿತರು ಇತ್ಯಾದಿ. ಮತ್ತೆರಡು ನಿಜವಾಗಿ ನಿರ್ದೇಶಕನ ಅಂತರಾಳದ ಕತೆಗಳು. ಒಂದು ಹಾಡನ್ನು ಬಯಸುವ, ಕಲಿಸುವ ಜೋಗಯ್ಯನನ್ನು ಸತ್ಕರಿಸುವ ಕುಟುಂಬ, ಮತ್ತೊಂದು ಜಮೀನಿಗಾಗಿ ಜನರನ್ನು ಓಡಲು ಬಿಡುವ ಜಮೀನ್ದಾರ. ಹೀಗೆ ಒಂದೇ ಸಮಯದಲ್ಲಿ 4 ಕತೆಗಳು ತೆರೆದುಕೊಳ್ಳುತ್ತದೆ. ಎಲ್ಲಾದರೂ ಯಾವುದಾಕ್ಕಾದರೂ ಸಂಬಂಧವಿದೆಯಾ..? ಸಿನಿಮಾ ನೋಡಿ. ಹೀಗೆ ಓಡುವ ಕತೆಯಲ್ಲಿ ಜನರು ಹಣಕ್ಕಾಗಿ ಯಾವುದಾದರೂ ವಿಷಯದಲ್ಲಿ ಟ್ರ್ಯಾಪ್ ಆಗುತ್ತಿರುತ್ತಾರೆ. ಅದರಿಂದ ಹೊರಬಂದು ಪ್ರಪಂಚ ನೋಡಿ, ಹಣಕ್ಕಾಗಿ ಜೀವನವಲ್ಲ.. ಜೀವನಕ್ಕಾಗಿ ಹಣ ಎನ್ನುವುದು ಸಿನಿಮಾದ ಉದ್ದೇಶ.

ಹೀಗೊಂದು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಜಯತೀರ್ಥ ರವರು ಉತ್ತಮ ಕತೆಯನ್ನು ಹೆಣೆದಿದ್ದಾರೆ. ಅದರ ನಿರೂಪಣೆಯು ಚೆನ್ನಾಗಿದೆ. ಆದರೆ ಅದು ಸರ್ವೇ ಸಾಮಾನ್ಯ ಮನುಷ್ಯನಿಗೆ ಅರ್ಥವಾಗುವಂತೆ ಬಿಡಿಸಿಟ್ಟಿದ್ದರೆ ಚೆನ್ನಾಗಿತ್ತು. ಕೆಲವು ಸಮಯ ನೋಡುತ್ತಿರುವ ನೋಡುಗ ಉದ್ವೇಗಕ್ಕೆ ಒಳಪಟ್ಟು, ತಾಳ್ಮೆ ಕಳೆದುಕೊಳ್ಳುವಂತೆ ಮಾಡುತ್ತದೆ.

ಉತ್ತಮವಾಗಿ ಹೇಳುವಲ್ಲಿ ಎಲ್ಲಾ ಪ್ರಯತ್ನವನ್ನು ಮಾಡಿದ್ದಾರೆ. ಹಾಡುಗಳು ಚೆನ್ನಾಗಿದೆ. ಕ್ಯಾಮರಾವನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಜಯತೀರ್ಥರು ಹೇಳುವ ಕತೆಯನ್ನು ನೋಡುಗರು ಸಿನಿಮಾ ನೋಡಿ ಹೊರಬಂದರೂ ಅದು ಏಕೆ ಹಾಗೆ..? ಇದು ಏಕೆ ಹೀಗೆ..? ಎನ್ನುವಂತೆ ಮಾಡುತ್ತದೆ. ಕೆಲವು ಕಡೆ ತುಂಬಾ ಚೆನ್ನಾಗಿ ಕಾಣುವ ಕಿಟ್ಟಪ್ಪ ಅಭಿನಯದಲ್ಲಿ ರಸತುಂಬಿಲ್ಲ. ಐಂದ್ರಿತಾ ಉತ್ತಮ. ಧರ್ಮೆಂದ್ರ, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ದಿಲೀಪ್ ರಾಜ್, ಪ್ರೀತಿ ಜಿಂಗಾನಿಯ, ಶ್ರೀಧರ್ ಪಾತ್ರಗಳಿಗೆ ಮೋಸಮಾಡಿಲ್ಲ.

ಜಯತೀರ್ಥರ ಒಂದು ಪಾಸಿಟಿವ್ ಪಾಯಿಂಟ್ ಹಳ್ಳಿಯ ಸೀನ್‌ಗಳನ್ನು ತುಂಬಾ ಚೆನ್ನಾಗಿ ಕಟ್ಟು ಕೊಟ್ಟಿದ್ದಾರೆ. ಅದೇ ಅವರ ವೀಕ್ನೆಸ್ಕೂಡ. ಈ ಸಿನಿಮಾಗೆ ಸಂಬಂಧಿಸಿದಂತೆ, ಕೊನೆಯ ಕ್ಷಣದಲ್ಲಿ ಗೊಂದಲಗೊಂಡಂತೆ ಕಾಣುವು ಈ ಸಿನಿಮಾವನ್ನು ಒಮ್ಮೆ ನೋಡಬಹುದು.


ವರದಿ: ನಟರಾಜ್ ಎಸ್ ಭಟ್.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited