Untitled Document
Sign Up | Login    
Dynamic website and Portals
  
Home >> Movie Home >> Reviews >> ದಂಡುಪಾಳ್ಯ
Movie Review
ದಂಡುಪಾಳ್ಯ
Rating :
Hero :
ರವಿಕಾಳೆ, ರಘುಮುಖರ್ಜಿ
Heroine :
ಪೂಜಾಗಾಂಧಿ, ಪ್ರಿಯಾ ಕೊತಾರಿ,
Other Cast :
ಮಕರಂದದೇಶಪಾಂಡೆ, ಕರಿಸುಬ್ಬು, ಪೆಟ್ರೋಲ್‌ಪ್ರಸನ್ನ, ಯತಿರಾಜು, ಮುನಿ, ಭವ್ಯಾ ಮತ್ತು ನಿಶಾಕೊಠಾರಿ
Director :
ಶ್ರೀನಿವಾಸರಾಜು
Music Director :
ಅರ್ಜುನ್ ಜನ್ಯಾ
Producer :
ಪ್ರಶಾಂತ್ ಜಿ.ಆರ್, ಗಿರೀಶ್ ಟಿ.
Release Date :
29-06-2012
ದಂಡು ಪಾಳ್ಯ ಹೆಸರು 1999ರಲ್ಲಿ ಇಡೀ ಸಿಲಿಕಾನ್ ಸಿಟಿಯುನ್ನೇ ತಲ್ಲಣ ಮೂಡಿಸಿತ್ತು. ಇಂತಹ ದಂಡುಪಾಳ್ಯದ 9 ಜನರ ಗ್ಯಾಂಗ್ ಬಗ್ಗೆ ಚಿತ್ರ ಬಿಡುಗಡೆಯಾಗಿರುತ್ತದೆ. ನಾವುಗಳು ಅಂದು ಸುದ್ದಿಗಳಲ್ಲಿ ಅವರು ಹೇಗೆ ಅಪರಾದ ಮಾಡುತ್ತಾರೆ ಎಂಬುದನ್ನು ಮಾತ್ರ ಓದಿದ ನೆನಪು ಇತ್ತು. ಆದರೆ ದಂಡುಪಾಳ್ಯ ಚಿತ್ರ ನೋಡಿದಾಗ ನಿಜಕ್ಕೂ ಅವರ ಅಪರಾದಗಳ ವಿವದ ಭಂಗಿಗಳನ್ನು ಚಿತ್ರೀಕರಿಸಿ ಪ್ರೇಕ್ಷಕರಿಗೆ ತೋರಿಸಿರುವುದು ಅಷ್ಟು ಸುಲಭದ ಕೆಲಸವಲ್ಲ ಎನ್ನುವುದು ಅರಿವಾಗುತ್ತದೆ.

ಬಾಲಿವುಡ್‌ನಲ್ಲಿ ಇಂತಹ ಕತರ್‌ನಾಕ್ ಸಿನಿಮಾಗಳು ಬಂದು ಹೋಗಿದ್ದವು. ಸ್ಯಾಂಡಲ್‌ವುಡ್‌ನಲ್ಲಿ ನಾವು ಇಂತಹ ಹಾರರ್ ಸಿನಿಮಾಗಳನ್ನು ಮಾಡುತ್ತೇವೆಂದು ತೋರಿಸಿದ್ದಾರೆ ನಿರ್ದೇಶಕ ಶ್ರೀನಿವಾಸರಾಜು. ನೀರು ಕೇಳಿ ಕತ್ತನ್ನು ಕುಯ್ಯವುದು ಅಲ್ಲದೆ ಹೆಣ್ಣುಮಕ್ಕಳನ್ನು ಹೀನಾಯವಾಗಿ ಅತ್ಯಾಚಾರವೆಸಗುತ್ತಿದ್ದು ಆಗ ಒಂಟಿಯಾಗಿ ಇರಲು ಹೆದರುತ್ತಿದ್ದರು. ಚಿತ್ರಕ್ಕೆ ಪ್ರಾರಂಭದಿಂದಲೂ ವಿಘ್ನಗಳು ಹಾಗೂ ಬಿಡುಗಡೆ ಹಂತದಲ್ಲೂ ವ್ಯಾಪಕ ಟೀಕೆಗಳು ಬಂದು ಕೊನೆಗೂ ನಿರ್ಮಾಪಕರು ಜಯ ಸಾಧಿಸಿ ಚಿತ್ರವನ್ನು ತೆರೆಗೆ ತಂದಿರುವುದು ಸಾಹಸದ ಕೆಲಸವೆನ್ನಬಹುದಾಗಿದೆ.

ಚಿತ್ರದ ಕುರಿತು ಹೇಳುವುದಾದರೆ ಪ್ರಥಮ ಬಾರಿಗೆ ನಕರಾತ್ಮಕ ಪಾತ್ರ ಮಾಡಿರುವ ಪೂಜಾಗಾಂಧಿ ಬೀಡಿ ಸೇದಿ, ತನ್ನ ಪೂರ್ಣ ಮೈಯನ್ನು ಬೆತ್ತಲಾಗಿ ತೋರಿಸಿ, ಹಾಡಿನಲ್ಲಿ ಕ್ಯಾಬರೆ ತರಹ ಕುಣಿದು ತಮ್ಮ ವಿಶಿಷ್ಟ ನೋಟದಿಂದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಿಯಲ್‌ನಲ್ಲಿ ಇನ್ಸ್‌ಪೆಕ್ಟರ್ ಚಲಪತಿ ಪಾತ್ರವನ್ನು ರೀಲ್‌ನಲ್ಲಿ ರವಿಶಂಕರ್ ಚಲಪತಿ ಹೆಸರಿನಲ್ಲೆ ಪ್ರಾರಂಭದಿಂದ ಕೊನೆಯವರೆವಿಗೂ ತಮ್ಮ ಕಂಚಿನ ಕಂಠ ಹಾಗೂ ಹಾವಭಾವದಲ್ಲಿ ಚಿತ್ರದುದ್ದಕ್ಕೂ ಮಿಂಚಿದ್ದಾರೆ. ಪ್ರತಿ ಸೀನ್‌ನಲ್ಲಿ ಗ್ಯಾಂಗ್ ಕ್ರೈಮ್ ಮಾಡುವಾಗ ಅರ್ಜುನ್‌ಜನ್ಯಾರ ಹಿನ್ನಲೆ ಸಂಗೀತ ಮೈಜುಂ ಎನಿಸುತ್ತದೆ.

ಬಾಲಿವುಡ್ ನಟರಾದ ಮಕರಂದದೇಶಪಾಂಡೆ, ರವಿಕಾಳೆ ಅಭಿನಯ ಸೂಪರ್. ಕರಿಸುಬ್ಬು, ಪೆಟ್ರೋಲ್‌ಪ್ರಸನ್ನ, ಯತಿರಾಜು, ಮುನಿ, ದಂಡುಪಾಳ್ಯ ಗ್ಯಾಂಗ್‌ನಂತೆ ಕಾಣಿಸಿಕೊಳ್ಳುವಲ್ಲಿ ನಟಿಸಿರುವುದು ಚಿತ್ರಕ್ಕೆ ಕಳೆ ತಂದಿದೆ. ಪಾಳ್ಯದ ಕ್ರೈಮ್ ನಲ್ಲಿ ಭವ್ಯಾ ಮತ್ತು ನಿಶಾಕೊಠಾರಿ ಸಹ ಸೇರಿದ್ದು, ಸವಾರಿ ಖ್ಯಾತಿ ರಘುಮುಖರ್ಜಿ ಒಂದು ಹಾಡಿಗೆ, ಮೂರು ಸೀನ್‌ನಲ್ಲಿ ಬಂದು ಹೋಗುತ್ತಾರೆ. ಕೆಲವೊಂದು ಉತ್ಕಟ ಸನ್ನಿವೇಶಗಳನ್ನು ನೋಡಲು ಮುಜಗರ ಹಾಗೂ ಭಯ ಹುಟ್ಟಿಸುತ್ತದೆ. ಹಿಂದೆಯಲ್ಲ ಮಹಾನುಭವರ ಚಿತ್ರಗಳನ್ನು ನೋಡುತ್ತಿದ್ದ ಕಾಲವೆ ಬೇರೆ, ಪ್ರಸಕ್ತ ಪ್ರಚಲಿತ ವಿದ್ಯಾಮಾನದ ಚಿತ್ರಗಳನ್ನು ಈಗ ನೋಡುತ್ತಿರುವುದು ವಿಪರ್ಯಾಸ ಎಂದರೆ ತಪ್ಪಾಗಲಾರದು. ಫ್ಯಾಮಲಿ ಮತ್ತು ಮಕ್ಕಳನ್ನು ತೋರಿಸುವ ಸಿನಿಮಾ ಇದಾಗಿರುವುದಿಲ್ಲ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited