Untitled Document
Sign Up | Login    
Dynamic website and Portals
  
Home >> Movie Home >> Reviews >> ಜಟ್ಟ
Movie Review
ಜಟ್ಟ
ಸಿದ್ಧಾಂತಗಳ, ತತ್ವಗಳ ನಡುವಿನ ಜಟಾಪಟಿ ಈ ಜಟ್ಟ
Rating :
Hero :
ಕಿಶೋರ್
Heroine :
ಸುಕೃತ, ಪಾವನ
Other Cast :
ಬಿ.ಸುರೇಶ್, ಕಿರಣ್, ಸಂಜು, ನಾಗೇಂದ್ರ, ಶ್ರೇಯ, ಆರ್ಯ, ಮುಂತಾದವರು.
Director :
ಬಿ.ಎಮ್ ಗಿರಿರಾಜ್
Music Director :
ಆಶ್ಲೇ, ಅಭಿಲಾಷ್
Producer :
ರಾಜ್ ಕುಮಾರ್
Release Date :
12-10-2013
ಕನ್ನಡದಲ್ಲಿ ಸೃಜನ ಶೀಲ ನಿರ್ದೇಶಕರು ಮತ್ತು ಉತ್ತಮ ಸಿನಿಮಾಗಳು ಬರುತ್ತಿರುವುದು ಸ್ವಾಗತಾರ್ಹ. ಒಂದು ಭಾಷೆಯೆಂದಮೇಲೆ ಎಲ್ಲಾ ರೀತಿಯ ಸಿನಿಮಾಗಳು ಬಂದಾಗ ಅದಕ್ಕೆ ಹಿರಿಮೆ ಹೆಚ್ಚು. ಆದರೆ ಎಲ್ಲವನು ಒಪ್ಪಿಕೊಳ್ಳಬೇಕೆಂದು ಏನು ಇಲ್ಲ. ಒಬ್ಬ ಆಟೋ ಚಾಲಕ 3 ಗಂಟೆ ಸಿನಿಮಾ ನೋಡಿ ಯಾವುದಾದರು ಒಂದು ರಸವನ್ನು ಅನುಭವಿಸಬೇಕು. ನೀರಸವಾಗಿ ಹೋಗಬಾರದು. ನೋಡುಗರ ಯೋಚನಾ ಲಹರಿ ಮತ್ತು ನಾಡಿ ಮಿಡಿತವನ್ನು ಅರ್ಥಮಾಡಿಕೊಂಡು ಸಿನಿಮಾ ಮಾಡುವುದು ಇತ್ತೀಚಿನ ಕನ್ನಡ ಸಿನಿಮಾ ನಿರ್ಮಾಣ ಮಾಡುವವರಿಗೆ ಕಬ್ಬಿಣದ ಕಡಲೆಯಾಗಿದೆ. ಅಂತಹ ಒಂದು ಗೊಂದಲದಲ್ಲಿ ಜಟ್ಟ ಮೂಡಿ ಬಂದಿದೆ.

ಕತೆಯ ಸಾರ ಚೆಂದವಿದ್ದರೂ ಅದನ್ನು ಪ್ರಸ್ತುತಪಡಿಸುವಲ್ಲಿ ತುಂಬಾ ವಿಕ್ ಆಗಿದೆ. ಸಾಮಾನ್ಯ ನೋಡುಗರಿಗೆ ಏನು ಬೇಕು ಎಂದು ತಿಳಿಯುವ ಬದಲು, ತಮ್ಮ ಬುದ್ದಿಯನ್ನು ಸಾಣಿ ಹಿಡಿದುಕೊಳ್ಳುವ ಪ್ರಯತ್ನ ಮಾಡಿದ ಹಾಗೆ ಸಂಭಾಷಣೆಗಳು ಮೂಡುತ್ತದೆ. ಏನು ಸೇರಿಸಬೇಕು ಯಾವುದನ್ನು ಕಟ್ಟ್ ಮಾಡಬೇಕು ಎಂದು ತಿಳಿಯದೆ ಎಲ್ಲವನ್ನು ಬಳಸಿಕೊಂಡು ಜೊಡಿಸಿಟ್ಟಂತಿದೆ. ಜಳ್ಳುಕಾಳು ಗಟ್ಟಿಕಾಳನ್ನು ಹೆಕ್ಕಿ ತೆಗೆಯುವಲ್ಲಿ ನಿರ್ದೇಶಕರು ಎಡವಿದ್ದಾರೆ.

ಕತೆಯ ಮೂಲ ಇರುವುದು ಸಿದ್ದಾಂತವನ್ನು ಆಧರಿಸಿ. ’ಎಲ್ಲರಿಗೂ ಸಮಾನವಾಗಿ ಬದುಕಲು ಹಕ್ಕಿದೆ ಅವರನ್ನು ಹಾಗೆ ಬದುಕಲು ಬಿಡಿ’ ಎಂದು. ಕಾಡಿನಲ್ಲಿ ಗಾರ್ಡಾಗಿ ಜಟ್ಟ(ಕಿಶೋರ್) ಕೆಲಸ ಮಾಡುತ್ತಿರುತ್ತಾನೆ. ಅವನ ಹೆಂಡತಿ ಸಿಟಿಯವನ ಜೊತೆ ಓಡಿ ಹೋಗಿರುತ್ತಾಳೆ. ಆಗಿನಿಂದ ಸ್ವದೇಶಿ ಸಂಸೃತಿಯನ್ನು ಉಳಿಸುವ ಭಾರತಿಯತೆಯ ಸಂಘಟನೆಯ ವಕ್ತಾರನಂತಿರುವವನ(ಬಿ.ಸುರೇಶ್) ಸಂಪರ್ಕದಲ್ಲಿ ಇದ್ದು ಅವರಿಗೆ ಸಹಾಯ ಮಾಡುತ್ತಿರುತ್ತಾನೆ. ಕಾಡು ಮತ್ತು ಸಂಸೃತಿಯ ತಂಟೆಗೆ ಯಾರಾದರು ಬಂದರೆ ಕಾಡು ಮೃಗದ ರೀತಿ ವರ್ತಿಸುತ್ತಿರುತ್ತಾನೆ. ಆಗ ಒಬ್ಬ ಹುಡುಗಿ(ಸುಕೃತ) ಜಟ್ಟನ ಕೈಗೆ ಸಿಕ್ಕಿ ಬೀಳುತ್ತಾಳೆ. ಅವಳು ತುಂಡುಡುಗೆ ಹಾಕಿ, ನಶೆಯಲ್ಲಿರುತ್ತಾಳೆ. ಅವಳನ್ನು ಪಳಗಿಸುವ ಕೆಲಸಕ್ಕೆ ಜಟ್ಟ ಬರುತ್ತಾನೆ. ರೇಜರ್ ಜೊತೆಯಲ್ಲಿ ಕಳ್ಳರನ್ನು ಹಿಡಿಯುವ ಕೆಲಸದಲ್ಲಿ ಮುಂದುವರೆಯುತ್ತಾನೆ. ಅಲ್ಲಿ ಆಡಳಿತ ವ್ಯವಸ್ಥೆ ರೇಂಜರ್ ಅನ್ನು ಟ್ರಾನ್ಸ್ಫರ್ ಮಾಡುವ ತಂತ್ರ ಮಾಡುತ್ತದೆ. ಜಟ್ಟನ ಮೇಲೆ ಅವನಿಗೆ ಕನಿಕರವಿರುತ್ತದೆ. ಇದರ ಮಧ್ಯೆ ಜಟ್ಟ ಅವಳನ್ನು ಸರಿದಾರಿಗೆ ತರುವಾಗ, ಜಟ್ಟನ ಹೆಂಡತಿ ವಾಪಾಸ್ ಬರತ್ತಾಳೆ. ಅಲ್ಲಿ ಏನಾಗುತ್ತದೆ..? ಜಟ್ಟ ಅವಳನ್ನು ಪಳಗಿಸುತ್ತಾನಾ..? ಹೆಂಡತಿಯ ಗತಿ ಏನಾಗುತ್ತದೆ..? ರೇಂಜರ್ ಏನಾಗುತ್ತಾನೆ..? ಕಡೆಗೆ ಜಟ್ಟನ ಸ್ಥಿತಿ ಎಂತದು ಎನ್ನುವುದನ್ನು ಸಿನಿಮಾ ಮಂದಿರಲ್ಲಿ ನೋಡಿ. ಆದರೆ ನೋಡುವ ಮುಂಚೆ ಒಂದು ಕಿವಿಮಾತು ತುಂಬಾ ತಾಳ್ಮೆ, ಸಂಯಮದಿಂದ ನೋಡಿ. ಪೇಷನ್ಸ್ ಚೆಕ್ಕ್ ಮಾಡುವ ಸಿನಿಮ.

ಗಿರಿರಾಜ್ ತಮ್ಮ ಸಿನಿಮಾದಲ್ಲಿ ಅಂಬೇಡ್ಕರ್‌ವಾದ, ರಾಷ್ಟ್ರೀಯವಾದ, ಸಮತಾವಾದ, ಸಮಾನತವಾದ, ಫ್ರಾಯ್ಡ್ ಸಿದ್ದಾಂತಗಳು, ಡಾರ್ವಿನ್ ಸಿದ್ದಾಂತಗಳು, ಕೆಂಪು ಬಾವುಟ ಹೀಗೆ ಹಲವಾಗು ಅಂಶಗಳನ್ನು ಹಾಗು ವ್ಯಕ್ತಿ ಸಂಘರ್ಷಗಳನ್ನು ನೋಡುಗರ ಮೇಲೆ ಹೇರುತ್ತಾ ಹೋಗುತ್ತಾರೆ. ಸಿದ್ದಾಂತವನ್ನು ಹೇಳುವದು, ಇದ್ದ ಹಾಗೆ ತೋರಿಸುವುದು ತುಂಬಾ ಕಷ್ಟದ ಕೆಲಸ. ವಿಷಯವನ್ನು ಕಟ್ಟಿಕೊಂಡು, ಅದರ ಅಂಡರ್ ಪ್ಲೇ ಸಿದ್ದಾಂತವಾಗಿದ್ದರೆ ಚೆನ್ನಾಗಿ ಮೂಡಿ ಬರುತ್ತಿತ್ತು. ಸಿದ್ದಾಂತವೆ ಸಿನಿಮಾವಾದರೆ ಜಟ್ಟವಾಗುತ್ತದೆ.

ಸಂಗೀತದಲ್ಲಿ ಆಶ್ಲೇ ಅಭಿಲಾಷ್ ಉತ್ತಮ ಪ್ರಯತ್ನ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಚೆನ್ನಾಗಿ, ಪ್ರಾಂತಿಯತೆಗೆ ತಕ್ಕಂತೆ ಬಳಸಿದ್ದಾರೆ. ಸಂಕಲನ ಚೆನ್ನಾಗಿದೆ. ಕಿಶೋರ್ ಚೆನ್ನಾಗಿ ಅಭಿನಯಿಸಿದ್ದಾರೆ. ಸುಕೃತ ವಾಗ್ಲೇ ಮತ್ತು ಪಾವನ ಪಾತ್ರಕ್ಕೆ ಮೋಸ ಮಾಡಿಲ್ಲ. ಮಿಕ್ಕಂತೆ ಪರವಗಿಲ್ಲ.ವರದಿ: ನಟರಾಜ್ ಎಸ್. ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited