Untitled Document
Sign Up | Login    
Dynamic website and Portals
  
Home >> Movie Home >> Reviews >> ದಿಲ್‌ವಾಲ
Movie Review
ದಿಲ್‌ವಾಲ
ಪ್ರೀತಿಸೋ ಹೃದಯಗಳ ಮ್ಯಾಜಿಕ್ ದಿಲ್‌ವಾಲ..
Rating :
Hero :
ಸುಮಂತ್ ಶೈಲೇಂದ್ರ
Heroine :
ರಾಧಿಕಾ ಪಂಡಿತ್
Other Cast :
ಜೈ ಜಗದೀಶ್, ವೀಣಾ ಸುಂಧರ್, ಹೊನ್ನವಳ್ಳಿ ಕೃಷ್ಣ, ಶರತ್ ಲೋಹಿತಾಶ್ವಾ, ರವಿ ಶಂಕರ್, ಸಾಧುಕೋಕಿಲ, ಪವನ್, ರಮೇಶ್ ಭಟ್, ಬುಲೇಟ್ ಪ್ರಕಾಶ್ ಮುಂತಾದವರು.
Director :
ಅನಿಲ್ ಕುಮಾರ್
Music Director :
ಅರ್ಜುನ್ ಜನ್ಯ
Producer :
ಶೈಲೇಂದ್ರ ಬಾಬು
Release Date :
04-10-2013
ಕಮರ್ಶಿಯಲ್ ಎಲಿಮೆಂಟ್ಗಳನ್ನೆಲ್ಲಾ ಒಟ್ಟಾಗಿ ಕೂಡಿಸಿ ಒಂದು ಲವ್ ಸಿನಿಮಾ ಮಾಡಲು ಹೊರಟಿರುವ ನಿರ್ದೇಶಕ ಅನಿಲ್ ಕುಮಾರ್ ತಮ್ಮ ಎಲ್ಲಾ ಎಫರ‍್ಟ್ ಅನ್ನು ಹಾಕಿದ್ದಾರೆ. ಆದರೆ ಸಿನಿಮಾ ನೋಡುವವ ಅದನೆಲ್ಲಾ ನೋಡುವುದಿಲ್ಲ. ಸಿನಿಮಾ ರಂಜಿಸಿತೋ..? ಇಲ್ಲವೋ..? ಎನ್ನುವದನ್ನು ಮಾತ್ರ ನೋಡಿ ಚೆನ್ನಾಗಿದೆ, ಪರವಾಗಿಲ್ಲ, ಡಬ್ಬಾ ಎನ್ನುವ ಮೂರು ರೀತಿ ಅಭಿಪ್ರಾಯ ಕೊಡುತ್ತಾನೆ. ಹಾಗೆ ನೋಡಿದರೆ ದಿಲ್‌ವಾಲ ಪರವಾಗಿಲ್ಲ ಎನ್ನುವ ಸಾಲಿಗೆ ಸೇರುತ್ತದೆ.

ಸಿನಿಮಾದ ಕತೆಯ ಮಟ್ಟಿಗೆ ಹಳತಾದರೂ ನಿರೂಪಣೆ ಮಾಡುವ ಹಂತದಲ್ಲಿ ಸ್ವಲ್ಪ ಲೀನಿಯರಾಗೇ ಹೋಗಿದ್ದಾರೆ. ಆದರೂ ಎರಡು ಟ್ರಾಕ್ ಓಪನ್ ಮಾಡಿಕೊಂಡು ಎರಡಕ್ಕೂ ಏನು ನಂಟು..? ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿ ನೋಡುಗರನ್ನು ಕೂರಿಸುತ್ತಾರೆ. ಮಾಮೂಲಿ ಕತೆ. ಒಬ್ಬ ಕಾಲೇಜು ಓದುತ್ತಿರುವ ಹುಡುಗ (ಪ್ರೇಮ್-ಸುಮಂತ್). ಕೆಲಸವಿಲ್ಲ ಕಾರ್ಯವಿಲ್ಲ, ಉಡಾಡಿಗುಂಡ. ಮನೆಯ ಮನೆಯ ಮಟ್ಟಿಗಂತು ಗೊತ್ತಿಲ್ಲ. ಒಂದು ಹಳ್ಳಿಯಿಂದ ಓದಲು ಬರುವ ಇಂಡಿಯನ್ ಸೆಂಟಿಮೆಂಟ್ ಹುಡುಗಿ (ಪ್ರೀತಿ-ರಾಧಿಕ ಪಂಡಿತ್). ಇಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ಅವನ ಹಿನ್ನೆಲೆ ನೋಡದೆ ಆಕೆ ಅವನನ್ನು ಪ್ರೀತಿಸುತ್ತಾಳೆ. ಮತ್ತೊಂದು ಟ್ರ್ಯಾಕ್‌ನಲ್ಲಿ ಶರತ್ ಲೋಹಿತಾಶ್ವಾ ಮತ್ತು ರವಿ ಶಂಕರ್ ನಡುವೆ ಬಧ್ದ ವೈಶಮ್ಯ ತೋರಿಸುತ್ತಾರೆ. ಈ ಇಬ್ಬರಿಗೂ ಮತ್ತು ನಾಯಕ ನಾಯಕಿಗೂ ಏನು ಸಂಬಂಧ ಎನ್ನುವುದನ್ನು ಚಿತ್ರಮಂದಿರಲ್ಲಿ ನೋಡಿ. ಚಿತ್ರದ ಕೊನೆಯಲ್ಲಿ ಏನು ಎನ್ನುವುದನ್ನು ಪ್ರೇಕ್ಷಕರಿಗೆ ಬಿಟ್ಟು, ಗೊಂದಲದಲ್ಲಿ ಕೊನೆಯಾಗಿಸುತ್ತಾರೆ.

ಕೆಲವು ದೃಶ್ಯಗಳಂತು ತುಂಬಾ ಲ್ಯಾಗಿಂಗ್. ಅದೇಕೆ ನಾಯಕ ಸುಮ್ಮನೇ ಮಾತಾಡುತ್ತಿರುತ್ತಾನೆ ಎನ್ನುವುದೇ ಗೊತ್ತಾಗುವುದಿಲ್ಲ. ಕೆಲವು ಕಡೆ ನಾಯಕಿ ಸುಮ್ಮನೆ ಮಾತಾಡುತ್ತಿರುತ್ತಾಳೆ. ಈ ನಾಯಕ ಲಾಜಿಕ್ ಇಲ್ಲದೆ ಸುಮ್ಮನೆ ಮ್ಯಾಜಿಕ್ ಮಾಡುತ್ತಾ ಹೋಗುತ್ತಾನೆ. ನಿರ್ದೇಶಕರು ಸೀಜಿ ಮಾಡಿಸುವಾಗ ಚಂದ್ರನ ಗಾತ್ರವನ್ನು ಗಮದಲ್ಲಿಡಬೇಕಾಗಿತ್ತು. ಸಾಹಸವಂತೂ ಹಾಸ್ಯಕೆ ಎಡೆಮಾಡಿಕೊಡುತ್ತದೆ. ಸಿನಿಮಾಟಿಕ್ ಲಿಬರ್ಟಿ ಎಂದಾದರೂ, ಒಂದು ಚಂದದ ಸಿನಿಮಾಗೆ ಏನೆಲ್ಲಾ ಬೇಕೋ ಅದನ್ನು ಮಾಡುವುದು ಅಗತ್ಯ. ಹೊಸಾ ನಾಯಕನನ್ನು ಇಟ್ಟುಕೊಂಡು ಈಗಾಗಲೇ ಪ್ರೂ ಮಾಡಿರುವ ಕಮರ್ಶಿಯಲ್ ಹೀರೋಗಳ ಹಾಗೆ ತೋರಿಸುವ ಪ್ರಯತ್ನ ಮಾಡಲು ಹೊರಟಿದ್ದಾರೆ.

ಇಲ್ಲಿ ಒಳ್ಳೆಯ ಕತೆಯನ್ನು ತೋರಿಸುವ ಪ್ರಯತ್ನ ಕಡಿಮೆ ಇರುವಾಗ, ಹೊಸ ಪ್ರತಿಭೆಗಳು ಬಂದಾಗ ಅವರನ್ನು ಬಳಸಿಕೊಂಡು ಉತ್ತಮವಾಗಿ ಕತೆ ಹೇಳುವ ಪ್ರಯತ್ನಮಾಡಬಹುದು. ಕೆಲವು ಡೈಲಾಗ್‌ಗಳು ಪಡ್ಡೆಗಳಿಂದ ಸೀಟಿ ಗಿಟ್ಟಿಸಿಕೊಳ್ಳುತ್ತದೆ. ಹೆಚ್ಚಿನ ಡಬ್ಬಲ್ ಮೀನಿಂಗ್ ಇಲ್ಲದಿರುವುದು ಪ್ರಗತಿಯ ಹಂತದಲ್ಲಿರುವ ನಿರ್ದೇಶಕತ್ವವವನ್ನು ತೋರಿಸುತ್ತದೆ. ಮುಂದಿನ ಸಿನಿಮಾಗಲ್ಲಿ ಚಂದದ ಕತೆಯನ್ನು ಜನರಿಗೆ ತೋರಿಸಲಿ.

ನಾಯಕನ ಮಟ್ಟಿಗೆ ಹೇಳುವುದಾದರೆ ಹಿಂದಿನ ಸಿನಿಮಾಗೆ ಹೋಲಿಸಿದರೆ ಇರು ಪರವಾಗಿಲ್ಲ. ಇನ್ನೂ ದುಡಿಸಿಕೊಳ್ಳಬಹುದಾಗಿತ್ತು. ರಾಧಿಕಾ ಪಂಡಿತ್ ತಮ್ಮ ಪಾತ್ರ ಚೆನ್ನಾಗಿ ನಿರ್ವಹಿಸಿದ್ದಾರೆ. ಶರತ್ ಲೋಹಿತಾಶ್ವಾ ಮತ್ತು ರವಿ ಶಂಕರ್ ಉತ್ತಮವಾಗಿ ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದಾರೆ. ಮಿಕ್ಕಂತೆ ಬಹುತಾರಾ ವರ್ಗವೇ ಇದ್ದೂ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಂಗೀತದಲ್ಲಿ ಎರಡು ಹಾಡು ಕೇಳಬಹುದು. ಮಿಕ್ಕೆಲವೂ ಸುಮ್ಮನೆ ಬಂದು ಹೋಗುತ್ತದೆ.



ವರದಿ: ನಟರಾಜ್ ಎಸ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited