Untitled Document
Sign Up | Login    
Dynamic website and Portals
  
Home >> Movie Home >> Reviews >> ಪ್ಯಾರ‍್ಗೆ ಆಗ್ಬಿಟೈತೆ
Movie Review
ಪ್ಯಾರ‍್ಗೆ ಆಗ್ಬಿಟೈತೆ
ಪ್ಯಾರ‍್ಗೆ ಅಲ್ಲಾ.., ಬೋರ‍್ಗೆ ಆಗ್ಬಿಟೈತೆ...
Rating :
Hero :
ಕೋಮಲ್
Heroine :
ಪ್ರಾರ್ಥನ
Other Cast :
ಅಕುಲ್‌ ಬಾಲಾಜಿ, ಟೆನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ಮಾಸ್ಟರ್ ಆನಂದ್, ಮುಂತಾದವರು
Director :
ಕವಿನ್‌ಬಾಲ
Music Director :
ಧರ್ಮತೇಜ
Producer :
ಶೋಭಾ ಪ್ರಕಾಶ್
Release Date :
05-09-2013
ಇತ್ತೀಚೆಗೆ ಬರುತ್ತಿರುವ ಚಿತ್ರಗಳಲ್ಲಿ ಎರಡು ಪಾತ್ರಗಳನ್ನು ಮುಖ್ಯಭೂಮಿಕೆಯಲ್ಲಿ ಬಳಸಿಕೊಂಡು, ಮಿಕ್ಕೆಲ್ಲಾ ಪಾತ್ರಗಳನ್ನು ಸುಮ್ಮನೆ ಟಿ.ವಿ ರೈಟ್ಸ್‌ಗೆ ಇರಲಿ ಎಂದು ಬಳಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಹಾಗೆ ಇಲ್ಲಿಯೂ ಒಂದಿಷ್ಟು ಜನರನ್ನು ಸುಮ್ಮನೆ ಪೋಸ್ಟರ್ ತುಂಬಿಸಲು ಬಳಸಲಾಗಿದೆ. ಈ ಕತೆಯನ್ನು ತುಂಬಾ ಸೂಕ್ಷ್ಮವಾಗಿ ಮಾಡಿದ್ದರೆ ಇದನ್ನು ಪ್ರಯೋಗಾತ್ಮಕ ಚಿತ್ರ ಎನ್ನಬಹುದಾಗಿತ್ತು. ಆದರೆ ಯಾವುದೇ ಹುರುಳಿಲ್ಲದೆ ಸುಮ್ಮನೆ ಮಾತಾಡುತ್ತಾ ಹೋಗುವ ಚಿತ್ರವಾಗಿದೆ. ಅದಕ್ಕೆ ಹೊಂದಿಕೊಂಡತೆ ಒಂದು ಸ್ಪೆಷಲ್ ಸಾಂಗ್. ಫೈಟ್ ಒಂದು ಕಮ್ಮಿ. ಅದೊಂದು ಇದ್ದಿದ್ದರೆ ಕಮರ್ಶಿಲ್ ಸಿನಿಮಾದ ಎಲ್ಲಾ ಅಂಶವನ್ನು ಮುಟ್ಟಿ ಬಂದ ಹಾಗಿರುತ್ತಿತ್ತು.

ಚಿತ್ರದಲ್ಲಿ ಮೂಲ ಕತೆಯನ್ನು ಬೇರೆ ಭಾಷೆಯಿಂದ ತೆಗೆದುಕೊಳ್ಳಲಾಗಿದೆ. ಕತೆಯನ್ನು ಕನ್ನಡಕ್ಕೆ ತರುವಲ್ಲಿ ಎಡವಿದ್ದಾರೆ. ಕತೆಯು ಹೂರಣವಿಲ್ಲದ ಒಬ್ಬೊಟ್ಟಾಗಿದೆ. ನಿರ್ದೇಶಕರು ತಮ್ಮ ಚಿತ್ರ ಎನ್ನುವುದಕ್ಕಿಂತ, ಸುಮ್ಮೆನೆ ಒಂದು ಸಿನಿಮಾ ಮಾಡಿ ಬಿಡುವ ಎನ್ನುವ ಉದ್ದೇಶದಿಂದ ಮಾಡಿದ ಹಾಗಿದೆ. ಕತೆಯ ವಸ್ತು ಏನೆಂದರೆ, ಬೆಂಗಳೂರಿನಿಂದ ಮೈಸೂರಿಗೆ ಮದುವೆಯಾಗುವ ಗಂಡನ್ನು ನೋಡಿ ಹೋಗಲು ನಾಯಕಿ ಮಿಸ್ ಬೆಂಗಳೂರು (ಪ್ರಾರ್ಥನ) ಬಂದಿಳಿಯುತ್ತಾಳೆ. ಪರಿಚಯವಿಲ್ಲದ ಮೈಸೂರಿನಲ್ಲಿ ತನ್ನ ಮೊಬೈಲ್ ಕೆಡಿಸಿಕೊಂಡು, ಹೋಗಬೇಕಾದ ಅಡ್ರಸ್‌ಗೆ ಹೋಗುತ್ತಾಳೆ. ಅಲ್ಲಿ ಹುಡುಗ ಸಿಗುವುದಿಲ್ಲ. ಸಂಜೆ ವಾಪಸ್ ಬೆಂಗಳೂರಿಗೆ ಹೋಗುವಳಿರುತ್ತಾಳೆ. ಅಲ್ಲಿಯವರೆಗೂ ಕಾಲ ಕಳೆಯಲು ನಾಯಕ(ಕೋಮಲ್) ಸಿಗುತ್ತಾನೆ. ಇಬ್ಬರ ನಡುವೆ ನಡೆಯುವ ಪುಟ್ಟ ಪುಟ್ಟ ಕ್ಲಾಷ್‌ಗಳಿಂದ ಬೇರೆ ಬೇರೆ ಆಗುತ್ತಾರೆ. ಅಲ್ಲಿ ಮೋಸ ಮಾಡುವ ಆಟೋದವರಿಂದ ಮತ್ತೆ ನಾಯಕನ ತೆಕ್ಕೆಗೆ ಬೀಳುವ ನಾಯಕಿ. ನಾಯಕ, ನಾಯಕಿಯನ್ನು ಬೆಳಗಿನಿಂದ ಸಂಜೆಯವರೆಗೂ ಹೇಗೆ ಖುಷಿಯಾಗಿಟ್ಟಿರುತ್ತಾನೆ ಎನ್ನುವುದು ಕತೆಯ ವಸ್ತು. ಮೈಸೂರನೆಲ್ಲಾ ಸುತ್ತಿಸುತ್ತಾನೆ. ಇದರ ಮಧ್ಯೆ ಒಂದು ಐಟಂ ಸಾಂಗ್. ಹೀಗೆ ಸಾಗುತ್ತಾ ಕತೆಯು ಮುಕ್ತಾಯವಾಗುತ್ತದೆ. ಹಾಗಾದರೆ ಅವಳು ಹುಡುಕಿಕೊಂಡು ಬಂದ ಹುಡುಗ ಯಾರು..? ಅವನು ಇವಳಿಗೆ ಸಿಗುವುದಿಲ್ಲವೇ..? ಇವಳೊಂದಿಗೆ ನಾಯಕನಿಗೆ ಪ್ರೇಮವಾಗುತ್ತದೆ..? ಎನ್ನುವ ಪ್ರಶ್ನೆಗೆ ಚಿತ್ರ ನೋಡಿ.

ಪ್ಯಾರ‍್ಗೆ ಆಗ್ಬಿಟೈತೆ ಎನ್ನುವ ಚಿತ್ರ ಕನ್ನಡ ಪ್ರೇಕ್ಷಕ ವರ್ಗ ಸುಮ್ಮನೆ ಕೂತು ಎದ್ದುಹೋಗುತ್ತಾರೆ. ಚಿತ್ರದಲ್ಲಿ ಒಂದೆರಡು ಕಡೆ ಜನರನ್ನು ನಗಿಸಿದರು, ಕೊಟ್ಟ ಹಣದಲ್ಲಿ ೩೦% ಕೂಡ ವರ್ಕೌಟ್ ಆಗುವುದಿಲ್ಲ. ಎರಡು ಹಾಡುಗಳಿವೆ. ಒಂದೂ ಚಿತ್ರಕ್ಕೆ ಸಪೋರ್ಟ್ ಮಾಡುವುದಿಲ್ಲ. ಚಿತ್ರಕ್ಕೆ ಮತ್ತೊಂದು ಮೈನೆಸ್ ಪಾಯಿಂಟ್ ಕ್ಯಾಮರ. ಪಾತ್ರಗಳೇ ಕಾಣದಂತೆ ಚಿತ್ರೀಕರಿಸಿದ್ದಾರೆ. ಚಿತ್ರದ ನಿರೂಪಣೆಯೂ ಅಂತಹ ಹೊಸದೇನು ಕಟ್ಟಿಕೊಡುವುದಿಲ್ಲ. ಕಾಮಿಡಿ ಟ್ಯ್ರಾಕ್ ಗಿಟ್ಟುವುದಿಲ್ಲ. ಕವಿನ್‌ಬಾಲ ಇನ್ನೂ ಪಳಗಬೇಕಾಗಿದೆ. ಕೋಮಲ್ ಎನ್ನುವ ಕಾರಣದಿಂದ ಈ ಸಿನಿಮಾವನ್ನು ನಿರ್ಮಾಪಕರು ಮಾಡಿದ್ದಿರಬಹುದು. ಮುಂದಿನ ಚಿತ್ರಗಳಲ್ಲಿ ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ಇದೆ.

ಕೋಮಲ್ ತಮ್ಮ ಪಾತ್ರವನ್ನು ತಾವು ನೀಟಾಗಿ ಮಾಡಿಕೊಂಡು ಹೋಗಿದ್ದಾರೆ. ನಾಯಕಿ ಪರವಾಗಿಲ್ಲ. ಮಿಕ್ಕಂತೆ ಅಕುಲ್ ಬಂದು ಹೋಗುತ್ತಾರೆ. ಮಾಸ್ಟರ್ ಆನಂದ್, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ ತಮ್ಮ ಪಾತ್ರ ಮಾಡಿದ್ದಾರೆ.

ವರದಿ:ನಟರಾಜ್ ಎಸ್, ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited