Untitled Document
Sign Up | Login    
Dynamic website and Portals
  
Home >> Movie Home >> Reviews >> ಆಟೊ ರಾಜಾ
Movie Review
ಆಟೊ ರಾಜಾ
ರಾಜ-ರಾಣಿ ಪ್ರೇಮ ಕಥೆ
Rating :
Hero :
ಗಣೇಶ್
Heroine :
ದೀಪಿಕಾ ಕಾಮಯ್ಯ, ಭಾಮ
Other Cast :
ಅರುಣ್ ಸಾಗರ್, ಸಾಧು ಕೊಕಿಲ, ಕುರಿ ಪ್ರತಾಪ್,
Director :
ಉದಯ್ ಪ್ರಕಾಶ್
Music Director :
ಅರ್ಜುನ್ ಜನ್ಯ
Producer :
ವಿಶ್ವ, ಗಿರೀಶ್
Release Date :
21-06-2013
ತ್ರಿಕೊನ ಪ್ರೇಮಕತೆಗಳಿಗೇನು ಕನ್ನಡದಲ್ಲಿ ಕಮ್ಮಿ ಇಲ್ಲ. ಅಂತಹ ಒಂದು ಸರಳ ಪ್ರೇಮಕತೆ ಈ ರಾಜ ರಾಣೀಯ ಆಟೊರಾಜ. ನಿರ್ದೇಶಕ ಉದಯ ಪ್ರಕಾಶ್ ಚೆನ್ನಾಗಿ ಕಟ್ಟಿಕೊಟ್ಟಿದ್ದರೂ ಇನ್ನೂ ಪಳಗ ಬೇಕಾದ ಅವಶ್ಯಕತೆ ಇದೆ. ಗಣೇಶ್ ರನ್ನು ಮುಖ್ಯವಾಗಿಟ್ಟುಕೊಂಡು ಕತೆ ಹೆಣೆದಂತಿದೆ. ಪಾತ್ರ ಪೋಷಣೆ ಸುಮಾರಾಗಿದೆ.

ಇನ್ನು ಕತೆಯ ವಿಚಾರಕ್ಕೆ ಬಂದರೆ ಸಾಮಾನ್ಯ ಆಟೋ ಡ್ರೈವರ್ ರೇಡಿಯೋ ಆರ್.ಜೆ ಆಗುವ ಅವಕಾಶ ದೊರೆಯುತ್ತದೆ. ಕಷ್ಟಜೀವಿಗಳ ಅಹವಾಲನ್ನು ಕೇಳುವ ಸಮಸ್ಯೆ ಪರಿಹರಿಸುವ ಕೆಲಸವನ್ನು ಶಂಕರ್ ನಾಗ್ ಧ್ವನಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಾನೆ ಆದರೆ ಅವನು ಆಟೋ ಡ್ರೈವರ್ ಎಂದು ಹೇಳಿಕೊಳ್ಳುವುದಿಲ್ಲ. ಇವನನ್ನು ಆರ್. ಜೆ ಮಾಡಿದ ಹುಡುಗಿ (ದೀಪಿಕಾ ಕಾಮಯ್ಯ) ಇವನೊಡನೆ ಲವ್ವಲ್ಲಿ ಬೀಳುತ್ತಾಳೆ. ಮತ್ತೊಂದೆಡೆ ಕೊಳ್ಳೇಗಾಲದ ಹಳ್ಳಿ ಹುಡುಗಿ ರಾಧಾ(ಭಾಮಾ) ಸಿನಿಮಾ ಹೀರೋಯಿನ್ ಆಗಬೇಕೆಂದು ಸಿಟಿಗೆ ಬರುತ್ತಾಳೆ. ಮುಂಬೈ ನೀಲಿಚಿತ್ರ ಜಾಲದ ವ್ಯಕ್ತಿಗಳಿಗೆ ಇವಳ ಮೇಲೆ ಕಣ್ಣು ಬೀಳುತ್ತದೆ, ಆದರೆ ರಾಧಾ ಗಾಂಧಿನಗರ ಸಂಸ್ಕೃತಿಗೆ ಬೆಚ್ಚಿಬಿದ್ದು ವಾಪಸ್ ತನ್ನ ಊರಿಗೆ ಹೋಗಬೇಕೆಂದು ನಿರ್ಧರಿಸುತ್ತಾಳೆ. ಅಷ್ಟರಲ್ಲಾಗಲೇ ನಾಯಕ ನಟ ಆಟೋ ರಾಜನ ಪರಿಚಯವಾಗಿರುತ್ತದೆ. ತನ್ನ ಹೆಸರನ್ನು ರಾಣಿ ಎಂದು ಹೇಳಿಕೊಂಡಿರುತ್ತಾಳೆ. ತನ್ನ ಹೆಸರು ರಾಜ ಇವಳ ಹೆಸರು ರಾಣಿ. ಹೀಗೆ ಹತ್ತು ಹಲವು ವಿಷಯಗಳು ರಾಜನಿಗೆ ಅವನಿಗೆ ರಾಧಾಳ ಮೇಲೆ ಲವ್ ಆಗುವಂತೆ ಮಾಡುತ್ತವೆ. ತನ್ನ ಪ್ರೇಮದ ಪರಿಯ ಹೇಳಬೇಕೆನ್ನುವಷ್ಟರಲ್ಲಿ ಅವಳು ಊರಿಗೆ ಹೊರಟಾಗಿರುತ್ತದೆ. ನಂತರ ಆ ಬಸ್ ಆಕ್ಸಿಡೆಂಟ್ ಆಗುತ್ತದೆ.

ರಾಧಾ ಉಳಿಯುತ್ತಾಳಾ..? ಉಳಿದರೆ ಅವಳಿಗೆ ರಾಜನ ಪ್ರೀತಿ ತಿಳಿಯುತ್ತದಾ? ರಾಜ ಯಾವ ರೀತಿ ತನ್ನ ಪ್ರೇಮವನ್ನು ಹೇಳಿಕೊಳ್ಳುತ್ತಾನೆ..? ಆರ್.ಜೆ (ದೀಪಿಕಾ ಕಾಮಯ್ಯ) ರಾಜನನ್ನು ಒಲಿಸಿಕೊಳ್ಳುತ್ತಾಳಾ..? ಚಿತ್ರ ನೋಡಿ ಉತ್ತರ ಪಡೆದುಕೊಳ್ಳಿ..!

ಆಟೋ ರಾಜ ತನ್ನ ಪ್ರೀತಿಯನ್ನುಚಿತ್ರಕಥೆಯಲ್ಲಿ ಇನ್ನೂ ಬಿಗಿ ತರಬೇಕಿತ್ತು. ಅನವಶ್ಯಕ ಹಾಸ್ಯ ದೃಶ್ಯಗಳು, ಕಥೆ ಮುಂದುವರೆಯುವುದನ್ನು ತಡೆಯುತ್ತದೆ. ಶಂಕರ ನಾಗ್ ಹೆಸರನ್ನು ಬಳಸಿಕೊಂಡು ಸಿನಿಮಾ ಗೆಲ್ಲಬೇಕೆಂದುಕೊಂಡಿದ್ದಾರೆ. ಹಾಗಾಗಿ ಆಟೋ ಡ್ರೈವರ್ ಗಳ, ಪೂರಕ ಸಂಭಾಷಣೆಗಳು ಅವರುಗಳ ಕಷ್ಟ ನಷ್ಟ ಗಳ ಬಗ್ಗೆ ಹೇಳುವುದರ ಜೊತೆಗೆ ಆಟೋ ಡ್ರೈವರ್ ಗಳ ಜೀವನವನ್ನು ವಿಮರ್ಶಿಸಿ ಅವರನ್ನು ಸರಿದಾರಿಯಲ್ಲಿ ಬದುಕಲು ಪ್ರೇರೇಪಿಸಲು ಪ್ರಯತ್ನಿಸಿದ್ದಾರೆ.

ಅಭಿನಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಗಣೇಶ್ ಕಷ್ಟಪಟ್ಟು ನಟಿಸಿದ್ದಾರೆ. ನಿಧಿ ಕಾಮಯ್ಯ ಇನ್ನೂ ಕಲಿಯಬೇಕು..ಇದ್ದುದರಲ್ಲೇ ಭಾಮಾ ಪರವಾಗಿಲ್ಲ. ಹಾಸ್ಯನಟರು ಟಾರ್ಚರ್ ಕೊಟ್ಟು ಹೋಗುತ್ತಾರೆ.
ಛಾಯಾಗ್ರಹಣದಲ್ಲಿ ಯಾವುದೇ ವಿಶೇಷವಿಲ್ಲ, ಸಂಕಲನ ಕೂಡಾ ಸಿನಿಮಾಗೆ ತಕ್ಕಂತಿದೆ. ಆರ್ಜುನ್ ಜನ್ಯಾ ಹಾಡುಗಳಲ್ಲಿ ಒಂದೆರಡು ಹಾಡು ಗುನಗಬಹುದು. ಹಿನ್ನೆಲೆ ಸಂಗೀತ ಪೂರಕವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಒಮ್ಮೆ ನೋಡಲಡ್ಡಿಯಿಲ್ಲ. ಆದರೆ ಈ ಚಿತ್ರ ಹತ್ತರಲ್ಲಿ ಹನ್ನೊಂದನೆಯದಷ್ಟೆ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited