Untitled Document
Sign Up | Login    
Dynamic website and Portals
  
Home >> Movie Home >> Reviews >> ಕಡ್ಡಿಪುಡಿ
Movie Review
ಕಡ್ಡಿಪುಡಿ
ಘಾಟಿಲ್ಲದ ಕಡ್ಡಿಪುಡಿ
Rating :
Hero :
ಶಿವರಾಜ್ ಕುಮಾರ್
Heroine :
ರಾಧಿಕಾ ಪಂಡಿತ್
Other Cast :
ರಂಗಾಯಣ ರಘು, ಅನಂತನಾಗ್, ಶರತ್ ಲೋಹಿತಾಶ್ವ, ಚಂದ್ರು, ಅವಿನಾಶ೵,ರಾಜೇಶ್ ನಟರಂಗ. ಮುಂತಾದವರು.
Director :
ಸೂರಿ
Music Director :
ಹರಿಕ್ರಷ್ಣ
Producer :
ಚಂದ್ರು
Release Date :
07-06-2013
ಸೂರಿ ಎಂದಿಗಿಂತ ತುಂಬಾ ಗೆಲುವಾಗಿರುವುದನ್ನು ಕಂಡದ್ದು ಈ ಚಿತ್ರ ಮಾಡಿದ ಮೇಲೆ. ಅಂದರೆ, ಅವರ ಶೈಲಿಯಲ್ಲಿ ಸಿನಿಮಾ ಮಾಡಿ ಬಿಡುಗಡೆಗೆ ಕಾಯುತ್ತಾ ನಿರಾಳವಾಗಿ ಕಾಯುತ್ತಿದ್ದರು. ಅದು ಇಂದು ಸಫಲವಾಗಿದೆ. ಕನ್ನಡದಲ್ಲಿ ಇತ್ತೀಚೆಗೆ ಬರುತ್ತಿರುವುದೆಲ್ಲಾ ಪ್ರೇಮಕತೆ, ಮತ್ತೊಂದು ಲಾಂಗು ಮಚ್ಚುಗಳ ಕತೆ. ಇದೂ ಕೂಡ ಲಾಂಗು ಮಚ್ಚಿನ ಕತೆಯಾದರೂ ಹೆಚ್ಚಿಗೆ ರಕ್ತಹರಿಸದೇ ಅನವಶ್ಯಕ ಬಿಲ್ಡಪ್ಗಳಿಲ್ಲದೆ ನೈಜವಾಗಿ ಕತೆಯನ್ನು ಹೇಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಸೂರಿರವರ ಕಲಾ ಪ್ರೌಢಿಮೆಯ ಹಾಗು ಸರಳ ನಿರೂಪಣಾ ತಂತ್ರವಿರುವ ನೇರ ಸಿನಿಮಾ ಕಡ್ಡಿಪುಡಿ.

ಒಬ್ಬ ರೂಲಿಂಗ್ನಲ್ಲಿರುವ ರೌಡಿ(ಶಿವಣ್ಣ-ಕಡ್ಡಿಪುಡಿ) ತನ್ನ ಪೂರ್ವಾಶ್ರಮವನ್ನು ಬಿಟ್ಟು ಎಲ್ಲರಂತೆ ಇರಲು ಪ್ರಯತ್ನಿಸುತ್ತಾನೆ. ಆದರೆ ದ್ವೇಷದ ಗೂಡಾಗಿರುವ ರೌಡಿಸಂ ಮತ್ತು ರಾಜಕೀಯ, ಅವನನ್ನು ಅದರಿಂದ ಹೊರಬರಲು ಸಾಧ್ಯವಾಗಿಸುವುದಿಲ್ಲ. ಇದೆಲ್ಲಾ ಬಂದಿರುವ ಕತೆಯೇ ಎಂದುಕೊಂಡರೂ ಕತೆಗೆ ಜೀವ ತುಂಬುವುದು ಕಮಿಷನರ್(ಅನಂತನಾಗ್) ಮತ್ತು ಅವನ ಹೆಂಡತಿಯ ಪಾತ್ರ (ರಾಧಿಕಾ ಪಂಡಿತ್-ಉಮ). ಹಾಗೆ ಹಾಳಾಗುತ್ತಿರುವ ತನ್ನ ಗಂಡನ ಜೀವನದ ಬಗ್ಗೆ ಅತಿಯಾದ ಕಾಳಜಿತೋರಿಸುವ ಆಕೆ, ಎಲ್ಲವನ್ನು ಬಿಡುವಂತೆ ಹೇಳುತ್ತಾಳೆ. ಹಾಗೆ ಬಿಡುವ ಅವಸರದಲ್ಲಿ ನಾಯಕ ತನ್ನ ಪ್ರಾಣ ಸ್ನೇಹಿತರನ್ನು ಕಳೆದುಕೊಳ್ಳುತಾ ಹೋಗುತ್ತಾನೆ. ಆಗ ಅವನಿಗೆ ಮತ್ತೆ ಹೊಳೆಯುವುದು ಅಧಿಕಾರ. ಹಾಗೆ ಅಧಿಕಾರ ಗಿಟ್ಟಿಸಿಕೊಂಡು ಬದುಕುತ್ತಾನೋ..? ಸಾಯುತ್ತಾನೋ..? ಎಂಬುದೇ ಕತೆ.

ಅದನ್ನು ಚಿತ್ರ ಮಂದಿರಲ್ಲಿ ನೋಡಿ. ಕತೆಯನ್ನು ಇದ್ದ ಹಾಗೆ ಹೇಳುವುದು ಸೂರಿಯವರ ಶೈಲಿ. ಅದು ಲ್ಯಾಗಿಂಗ್ ಎನ್ನಿಸಿದರೂ ಹಾಗೆ ಶೂಟ್ ಮಾಡಿ ಜನರ ಮುಂದಿಟ್ಟು ಅವರ ಸಹನೆಯನ್ನು ಚೆಕ್ ಮಾಡುತ್ತಾರೆ. ಹಾಗೆ ’ಇಂತಿ ನಿನ್ನ ಪ್ರೀತಿಯ’ ಎಂಬ ಸಿನಿಮಾ ಮಾಡಿ ಸೋತಿದ್ದರು. ಆದರೆ ಇದನ್ನು ಹಾಗೆ ಮಾಡುವ ಬದಲು ಕೆಲವಷ್ಟು ಕಮರ್ಷಿಯಲ್ ಪಾಯಿಟ್ ಇಟ್ಟು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಶಿವಣ್ಣನ ಸಿನಿಮಾ ಎಂದು ಕೊಂಡು ಬಂದವರಿಗೆ ಟೋಟಲ್ ಲಾಸ್. ಸೂರಿ ಸಿನಿಮಾ ಎಂದು ಬಂದವರಿಗೆ ಫುಲ್ ಮಜ. ಹೀಗೆ ಸಿನಿಮಾ ಡೋಲಾಯಮಾನವಾಗಿದ್ದರೂ ಒಮ್ಮೆ ನೋಡಬಹುದು. ತಾಳ್ಮೆ ಗೆಟ್ಟರೆ ನಾವು ಜವಾಬ್ದಾರರಲ್ಲ.

ಟೊಟಲ್ ಆಗಿ ಸಿನಿಮಾದಲ್ಲಿ ಶಿವಣ್ಣ ಎಂದಿಗಿಂತ ಉತ್ತಮವಾಗಿ ಅಭಿನಯಿಸಿದ್ದಾರೆ. ಎಲ್ಲಾ ಸಿನಿಮಾಗಳ ಮಾಮೂಲಿ ಶಿವಣ್ಣ ಅಲ್ಲಿ ಕಾಣ ಸಿಗುವುದಿಲ್ಲ. ಅಬ್ಬರದ ಡೈಲಾಗ್ಗಳಿಲ್ಲ. ತುಂಬಾ ಸೆಟಲ್ ಆಗಿ ಅಭಿನಯಿಸಿದ್ದಾರೆ. ರಂಗಾಯಣ ರಘು ಅವರದ್ದು ಹಾಗೆ, ಪಾತ್ರಕ್ಕೆ ತಕ್ಕಂತೆ ಅಭಿನಿಸಿದ್ದಾರೆ. ರಾಧಿಕಾ ಮತ್ತು ಐಂದ್ರಿತಾ ತುಂಬಾ ಬೋಲ್ಡ್ ಆಗಿ ತಮ್ಮ ಛಾಪು ಮೂಡಿಸುತ್ತಾರೆ. ಮಿಕ್ಕಂತೆ ರಾಜೇಶ್ ನಟರಂಗ, ಅನಂತನಾಗ್, ಚಂದ್ರು, ಅವಿನಾಷ್, ಶರತ್ ಲೋಹಿತಾಶ್ವ, ಸಮರ್ಥವಾಗಿ ಪಾತ್ರ ನಿರ್ವಹಿಸಿದ್ದಾರೆ. ರೌಡಿಗಳಲ್ಲಿ ೩ ಜನ ಹುಡುಗರು ತುಂಬಾ ಒಳ್ಳೆಯ ಪಾತ್ರ ಮಾಡಿದ್ದಾರೆ. ಎಲ್ಲಾ ಪಾತ್ರಗಳ ಪಾತ್ರ ಪೋಷಣೆ ಚೆನ್ನಾಗಿದೆ. ಒಟ್ಟಾರೆ ಸೂರಿಯವರ ಪಾತ್ರಗಳ ವೈಶಿಷ್ಟ್ಯತೆ ಅದು. ಎಲ್ಲರೂ ತಮ್ಮ ಅಳತೆಗೆ ಮೀರಿ ಕೆಲಸ ಮಾಡುತ್ತಾರೆ.

ತಾಂತ್ರಿಕ ವರ್ಗವು ಅಷ್ಟೆ ಸಂಗೀತದಲ್ಲಿ ಅಬ್ಬರವಿಲ್ಲ. ಹರಿಕೃಷ್ಣ ಸೈಲೆಂಟ್ ಆಗಿ ಕೆಲಸ ಮಾಡಿದ್ದರೆ. ಅದು ಕಡ್ಡಿಪುಡಿಯಲ್ಲಿ ಮಾತ್ರ. ಎಸ್. ಕೃಷ್ಣ ಕ್ಯಾಮರಾ ಕೈಚಳಕ ಚೆನ್ನಾಗಿದೆ. ಸಂಭಾಷಣೆಯ ವಿಚಾರದಲ್ಲೂ ಎಲ್ಲೂ ಪೇಲವೆನ್ನಿಸುವುದಿಲ್ಲ, ಚೆನ್ನಾಗಿದೆ. ಒಂದು ಘಾಟಿಲ್ಲದ, ಗೌಜು ಗದ್ದಲವಿಲ್ಲದ, ಸಿನಿಮಾ ನೋಡ ಬೇಕೆನಿಸಿದರೆ, ಸೂರಿ ಶೈಲಿಯದು ಎಂದು ತಿಳಿದು ಸಿನಿಮಾಗೆ ಹೋಗಿ.


ವರದಿಃ ನಟರಾಜ್ ಎಸ್. ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited