Untitled Document
Sign Up | Login    
Dynamic website and Portals
  
Home >> Movie Home >> Reviews >> ಟೀನೇಜ್
Movie Review
ಟೀನೇಜ್
ಟೀನೇಜೆಂಬ ವಯಸ್ಕರ ಸಿನಿಮಾ
Rating :
Hero :
ಕಿಶನ್
Heroine :
ಅಪೂರ್ವ, ತನ್ವಿ, ಪ್ರಿಯಾ
Other Cast :
ಜಯಶ್ರೀ ರಾಜ್, ಮಾಸ್ಟರ್ ಲಕ್ಷ್ಮಣ್, ತಬಲಾ ನಾಣಿ, ವಿ ಮನೋಹರ್ ಮುಂತಾದವರು
Director :
ಶೀಕಾಂತ್
Music Director :
ಸಿದ್ದಾರ್ಥ್
Producer :
ಸಾಲ್ತ್ ಆಂಡ್ ಪೆಪ್ಪರ್ ಎಂಟ್ರೈನ್ ಮೆಂಟ್ ಪ್ರೈ ಲಿ
Release Date :
26-07-2013
ಇದು ಟೀನೇಜೋ, ಸೆಂಟಿಮೆಂಟ್ ಎಮೋಷನ್ನೋ, ಇಲ್ಲಾ ಮಕ್ಕಳ ಮೇಲಿನ ವಯಸ್ಸಾದವರ ಪ್ರೀತಿಯ ಸಿನಿಮಾವೋ ಮಾಡಿದವರಿಗೆ ಗೊತ್ತು. ಶ್ರೀಕಾಂತ್‌ರವರು ಒಬ್ಬ ವಿದ್ಯಾವಂತರಾಗಿ ಹೀಗೆ ಸುಮ್ಮನೆ ಹುಡುಗಿಯರ ಗುಂಪನ್ನು ಒಟ್ಟುಮಾಡಿಕೊಂಡು, ಚಿಕ್ಕ ಬಟ್ಟೆ ತೊಡಿಸಿ, ಹರೆಯದ ಸಿನಿಮಾ ಮಾಡಿದ್ದಾರೆ.

ಶೀಕಾಂತ್ ಈ ಚಿತ್ರವನ್ನು ಯಾರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದಾರೋ ಗೊತ್ತಿಲ್ಲ. ಸಿನಿಮಾದಲ್ಲಿ ತೋರಿಸಿರುವ ಹರೆಯದ ಯುವಕರು ಸಿನಿಮಾ ನೋಡುತ್ತಿಲ್ಲ. ಇನ್ನು ಇದನ್ನು ನೋಡಿ ಸಾಮಾನ್ಯ ಜನತೆ ತಮ್ಮ ಹರೆಯವನ್ನು ನೆನೆಯುವುದು ಕಷ್ಟ ಸಾಧ್ಯ. ಏಕೆಂದರೆ ಇದೆಲ್ಲಾ ಹೈ ಸೊಸೈಟಿಯ ಅನುಭವಗಳು. ಸುಮ್ಮನೆ ಸುತ್ತಾಡುವುದು, ಮೋಜು ಮಸ್ತಿಮಾಡುವುದು, ಗೋವಾ ಸುತ್ತುವುದು ಸಾಮಾನ್ಯ ಕುಟುಂಬಗಳಲ್ಲಿ ಅಸಾಧ್ಯ. ಇವರು ಹೇಳುವಂತೆ ಒಂದು ವಿಷಯ, ಎಲ್ಲರ ಜೀವನದಲ್ಲೂ ಸರ್ವೆಸಾಮಾನ್ಯವಾಗಿ ಆಗಿರುತ್ತದೆ. ಅದು ಕ್ರಶ್.

ಕತೆಯ ವಿಷಯಕ್ಕೆ ಬಂದರೆ ಹಾಡುವ ತಂದೆಯ ಮಗ ಆರ್ಯ(ಕಿಶನ್). ಅವನೂ ಹಾಡುತ್ತಿರುತ್ತಾನೆ. ತಾಯಿಯೊಂದಿಗೆ ಬೆಳೆದ ಇವನು ತಂದೆಯನ್ನು ಅಪಘಾತದಲ್ಲಿ ಕಳೆದುಕೊಂಡಿರುತ್ತಾನೆ. ಅವನಿಗೊಬ್ಬಳು ತಂಗಿ, ಅವಳನ್ನು ದೊಡ್ಡಮ್ಮನಿಗೆ ತಾಯಿಯೇ ದತ್ತು ಕೊಟ್ಟಿರುತ್ತಾಳೆ. ಅವಳಿಗಾಗಿ ತವಕಿಸುವ ಆರ್ಯ. ಅವನನ್ನು ಅಣ್ಣ ಎಂದು ಸ್ವೀಕರಿಸದ ತಂಗಿ. ಇದೇನೂ ಅಣ್ಣ-ತಂಗಿ ಕತೆ ಎಂದು ಕೊಂಡಿರ..? ಅಲ್ಲ. ಅದು ಅಲ್ಲಿಗೆ ಕ್ಲೋಸ್ ಆಗುತ್ತದೆ. ಮೊದಲಿಗೆ ಸಿಗುವ ಹುಡುಗಿ ಅಂಜಲಿ, ನಂತರ ಪ್ರೀತಿ, ಆಮೇಲೆ ರೋಸಿ ಹೀಗೆ ಪುಟ್ಟ ಬಟ್ಟೆತೊಟ್ಟ ಹುಡುಗಿಯರ ದಂಡೇ ನಾಯಕಿಯರಾಗಿ ಪ್ರತ್ಯಕ್ಷವಾಗುತ್ತಾರೆ. ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಕನ್‌ಫ್ಯೂಸ್‌ನಲ್ಲೇ ಮೂರೂ ಹುಡುಗಿಯರ ಜೊತೆ ಸುತ್ತಾಡುತ್ತಾನೆ, ರೊಮ್ಯಾಂಟಿಕ್ ಸೀನ್ ನಡೆಸುತ್ತಾನೆ, ನಾಲ್ಕು ಸಾಂಗ್ ಮುಗಿಸುವ ಆರ್ಯ, ಏನೂ ಅರಿಯದ ಮುಗ್ಧ ಹುಡುಗ! . ಅವನ ಇನೋಸೆಂಟ್ ಗುಣ ಎಲ್ಲಾ ಹುಡುಗಿರಯರಿಗೆ ಇಷ್ಟವಾಗುತ್ತದೆ. ತಂಗಿ ಏನಾದಳು ಎಂದಿರಾ..? ಅವಳಿಗಾಗಿ ಒಂದು ರಿಯಾಲಿಟಿ ಶೋ, ಅಲ್ಲಿ ಮತ್ತೇನೋ...

ಹೋಗಲಿ ಬಿಡಿ ಒಟ್ಟಾರೆ ಸಿನಿಮಾ ಹೇಗೇಗೋ ಸಾಗುತ್ತದೆ. ಹುಡುಗಿಯರಿಗಾಗಿ ಕತೆ ಮಾಡಿದ್ದಾರೋ..? ಕತೆಯಲ್ಲಿ ಹುಡುಗಿಯರನ್ನು ತರುತ್ತಾ.. ಪ್ರೇಮ, ಹರೆಯ, ತಂಗಿ ವಾತ್ಸಲ್ಯ, ತಾಯಿ ಮಮತೆ, ರಿಯಾಲಿಟೀ ಶೋ ಎಲ್ಲವನ್ನು ಮಾಡಿದ್ದಾರೋ..? ಅವರೇ ಹೇಳಬೇಕು. ಇಲ್ಲಾ.. ಆಗಾಗ ಬಂದು ಸಿನಿಮಾದ ಹುಡುಗನ ಕತೆ ಹೇಳುವ ರಾಜು ತಾಳಿಕೋಟೆ ಹೇಳಬೇಕು.

ಮಹೇಶ್‌ರ ಕ್ಯಾಮರ ವಿಶ್ಯುಲ್ ಬ್ಯೂಟಿ ಚೆನ್ನಾಗಿದೆ. ಸಂಗೀತ ಸುಮಾರಾಗಿದೆ.

ನಟ ಕಿಶನ್ ಅಭಿನಯ ಚೆನ್ನಾಗಿದೆ. ಆದರೆ ಈ ಪಾತ್ರ ಒಪ್ಪುವುದಿಲ್ಲ. ಆ ಹುಡುಗಿರ ಮುಂದೆ ತುಂಬಾ ಪೀಚಾಗಿ ಕಾಣುತ್ತಾರೆ. ಒಂದಷ್ಟು ವರ್ಷ ತಾಳ್ಮೆಯಿಂದ ಕಾದರೆ ಒಳ್ಳೆ ನಾಯಕನಾಗುವುದಲ್ಲಿ ಸಂಶಯವಿಲ್ಲ. ಅಪೂರ್ವ, ತನ್ವಿ, ಪ್ರಿಯಾ ತಮ್ಮ ವಯಸ್ಸಿಗೆ ತಕ್ಕಂತೆ ಅಭಿನಯಿಸಿದ್ದಾರೆ. ಮಿಕ್ಕೆಲ್ಲ ಪಾತ್ರಗಳು ಬಂದು ಹೋಗುತ್ತದೆ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited