Untitled Document
Sign Up | Login    
Dynamic website and Portals
  
Home >> Movie Home >> Reviews >> ವಿಜಲ್
Movie Review
ವಿಜಲ್
ವಿಜಲ್ ಚಿತ್ರದ ದೃಶ್ಯ
Rating :
Hero :
ಚಿರಂಜೀವಿ ಸರ್ಜಾ
Heroine :
ಪ್ರಣೀತಾ
Other Cast :
ಧನಂಜಯ್, ಗುರು ಪ್ರಾಸದ್, ಗುರುದತ್
Director :
ಪ್ರಶಾಂತ್ ರಾಜ್
Music Director :
ಜೊಶ್ವ ಶ್ರೀಧರ್
Producer :
ನವೀನ್
Release Date :
12-07-2013
ಒಬ್ಬ ಫಿಜ್ಜಾ ಸೆಂಟರ್‌ನಲ್ಲಿ ಕೆಲಸ ಮಾಡುವ ರಾಮ್ (ಚಿರಂಜೀವಿ ಸರ್ಜಾ). ಇವನಿಗೆ ಸಣ್ಣ ವಯಸ್ಸಿನಿಂದ ಜೊತೆಗಿರುವ ಅನು (ಪ್ರಣೀತಾ) ಎಂಬ ಗೆಳತಿ ಇರುತ್ತಾಳೆ. ಅನು ದೆವ್ವ, ಆತ್ಮಗಳ ಬಗ್ಗೆ ರಿಸರ್ಚ್ ಮಾಡುತ್ತಿರುತ್ತಾಳೆ. ರಾಮ್‌ಗೆ ದೆವ್ವ, ಭೂತಗಳೆಂದರೆ ಭಯ, ಅನು ಆಗಾಗ ದೆವ್ವಗಳ ಸಿನಿಮಾ ನೋಡುವ, ಓದುವ ಹವ್ಯಾಸದ ಜೊತೆಗೆ, ರಾಮ್‌ಗೆ ಕಥೆಗಳನ್ನು ಹೇಳಿ ಹೆದರಿಸುತ್ತಿರುತ್ತಾಳೆ. ರಾಮ್ ಆಗುಹೋಗುಗಳಿಗೆ ಸ್ವಂದಿಸುವ ಸ್ನೇಹಿತರಾಗಿ ಧನಂಜಯ್ (ಕ್ಯಾಷಿಯರ್), ಗುರುದತ್ (ಅಡಿಗೆ ಭಟ್ಟ)ರು ಇರುತ್ತಾರೆ.

ಒಂದು ದಿನ ಮಾಲೀಕ (ಗುರು ಪ್ರಸಾದ್) ಮನೆಗೆ ಪೈಲ್ ಕೊಟ್ಟುಬರಲು ರಾಮ್‌ಗೆ ಹೇಳುತ್ತಾನೆ. ಅವನು ಅವರ ಮನೆಗೆ ಹೋದಾಗ ಮಾಲೀಕನ ಮಗಳಿಗೆ ಒಂದು ಆತ್ಮ (ಮಿತ್ಯ) ಸೇರಿಕೊಂಡಿರುತ್ತದೆ. ಇವನಿಗೆ ಭಯ, ಮನೆಗೆ ಬಂದು ಅನುಗೆ ಎಲ್ಲ ಹೇಳುತ್ತಾನೆ.

ಹೀಗಿರಬೇಕಾದರೆ ಒಂದು ದಿನ ಫಿಜ್ಜಾ ಆರ್ಡರ್ ಬರುತ್ತದೆ ಸ್ಮಿತ ಬಂಗಲೆ (ಭೂತ ಬಂಗಲೆ )ಯಿಂದ. ರಾಮ್ ಆರ್ಡರ್ ಕೊಡಲು ಹೋಗುತ್ತಾನೆ. ಅಲ್ಲಿ ಅದನ್ನು ಪಡೆಯಲು ಸುಂದರ ಯುವತಿ ಇರುತ್ತಾಳೆ. ರಾಮ್ ಆರ್ಡರ್ ಕೊಟ್ಟು ದುಡ್ಡು ಕೇಳುತ್ತಾನೆ. ಅಷ್ಟರಲ್ಲಿ ಕರೆಂಟ್ ಹೋಗುತ್ತದೆ. ಆಗ ಆ ಸುಂದರಿ ಕ್ಯಾಂಡಲ್ ಹಚ್ಚಿ ಒಂದು ಕಳ್ಳ ದೃಷ್ಟಿ ಇವನ ಕಡೆ ಬೀರಿ, ದುಡ್ಡ ತರಲು ಹೋಗುತ್ತಾಳೆ. ಆಗ ಅಲ್ಲಿ ಎರಡು ಬರ್ಬರವಾಗಿ ಮರ್ಡರ್ ಆಗುತ್ತದೆ. ರಾಮ್‌ಗೆ ಭಯಶುರು, ಇದರ ನಡುವೆ ಮತ್ತೊಂದು ಮಗು ಬರುತ್ತದೆ. ಭಯ, ಭೀತಿ, ಕಿರಿಚಾಟ, ಅರಿಚಾಟದ ನಡುವೆ ಬೆಳಗಾಗುತ್ತದೆ. ಪೊಲೀಸ್ ಬರುತ್ತಾರೆ. ಬಂದು ಅಲ್ಲಿ ಒಂದು ವಾರದ ಹಿಂದೆ ನಡೆದ ಮರ್ಡರ್ ಹಾಗೂ ಅನು ಸತ್ತಿರುವ ಬಗ್ಗೆನೂ ಹೇಳುತ್ತಾರೆ. ರಾಮ್ ಎನು ಮಾಡಬೇಕೆಂದು ತೋಚದೆ ಅವರಿಂದ ತಪ್ಪಿಸಿಕೊಂಡು ಹೋಗುತ್ತಾನೆ. ಪೊಲೀಸರು ಅಲ್ಲಿಯೇ ವಿಚಿತ್ರವಾಗಿ ಸಾಯುತ್ತಾರೆ. ಇದನ್ನು ಹೀರೋ, ಮಾಲೀಕ ಮತ್ತು ಸ್ನೇಹಿತರಿಗೆ ಹೇಳುತ್ತಾನೆ.

ಮುಂದೆನಾಗುತ್ತದೆ? ಅಲ್ಲಿ ಸತ್ತವರ‍್ಯಾರು? ಯಾರು ಸಾಯಿಸಿದರು. ಅನು ಏಕೆ ಕಾಣೆಯಾದಳು ನೆಡೆದಿದ್ದಾದರೂ ಎನು! ಸಾಯಿಸಿದ್ದು ದೆವ್ವನಾ? ಮನುಷ್ಯರ? ಎಂದು ತಿಳಿಯಲು ಸಿನಿಮಾ ನೋಡಿ.

ಚಿರು ಇಲ್ಲಿ ಲವರ್ ಬಾಯ್‌ಯಾಗಿ, ಭಯವನ್ನು ವ್ಯಕ್ತಪಡಿಸುವಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ನಂತರ ಪ್ರಣೀತಾ ಹಾಗೂ ಧನಂಜಯ್, ಗುರು ಪ್ರಾಸದ್, ಗುರುದತ್ ಕೊಟ್ಟ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಇತ್ತಿಚಿಗೆ ರಿಮೇಕಗಳೇ ಹೆಚ್ಚುತ್ತಿರುವ ದಿನಗಳಲ್ಲಿ ನಿರ್ದೇಶಕ ಪ್ರಶಾಂತ್ ರಾಜ್‌ರ ರಿಮೇಕ್ ನಿರ್ಧಾರ ಸರಿಯೋ? ತಪ್ಪೊ? ಗೊತ್ತಿಲ್ಲ. ಆದರೆ ಅದನ್ನು ಕನ್ನಡ ಪ್ರೇಕ್ಷಕ ಯಾವ ರೀತಿ ತೆಗೆದುಕೊಳ್ಳತ್ತಾನೆ ಎಂದು ಒಂದು ಬಾರಿ ಅಲ್ಲ ನೂರು ಬರಿ ಯೋಚಿಸಬೇಕು. ಆ ಯೋಚನೆಯಲ್ಲಿ ಮತ್ತು ಸಿನಿಮಾ ಮಾಡುವುದರಲ್ಲಿ ಸ್ವಲ್ಪ ಯಡವಿದಂತೆ ಹಾಗೂ ಅಲ್ಲಲ್ಲಿ ಪ್ರೇಕ್ಷಕನ್ನು ಮರೆತಿರುವಂತೆ ಭಾಸವಾಗುತ್ತದೆ. ಉಳಿದಂತೆ ಗುರು ಪ್ರಸಾದ್ ಸಂಭಾಷಣೆ ಅಷ್ಟೇನೂ ಪ್ರಭಾವ ಬೀರದಿದ್ದರೂ, ಪರವಾಗಿಲ್ಲ ಅನಿಸುತ್ತದೆ. ಸಂತೋಷ್ ರೈ ಪಾತಾಜೆಯವರ ಕ್ಯಾಮರ ಕೆಲಸ ಅಲ್ಲಲ್ಲಿ ಎದ್ದು ಕಾಣುತ್ತದೆ. ಸೌಂಡ್ & ಎಫೆಕ್ಟ್ಸ ಈ ಚಿತ್ರದ ಪ್ಲೆಸ್ ಪಾಯಿಂಟ್. ಶ್ರೀಧರ್ ಅವರ ಸಂಗೀತದಲ್ಲಿ ಒಂದು ಹಾಡು ಕೇಳುವಂತಿದೆ.

ವರದಿಃ ನಟರಾಜ್ ಎಸ್. ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited