ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಂಕರ್ಗೌಡ ಹಾಗೂ ಸ್ಯಾಂಡಿ ಅವರು ನಿರ್ಮಿಸುತ್ತಿರುವ ‘ಬಾಯ್ಸ್‘ ಚಿತ್ರಕ್ಕೆ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
ನಿರ್ಮಾಪಕರಾಗಿರುವ ಶಂಕರ್ಗೌಡ ಈ ಚಿತ್ರದ ನಿರ್ದೇಶಕರೂ ಹೌದು. ‘ಬಾಯ್ಸ್‘ ಶಂಕರ್ಗೌಡ ನಿರ್ದೇಶನದ ಪ್ರಥಮ ಚಿತ್ರ. ಮಾಲಾಶ್ರೀ ಅವರು ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್, ತಬಲನಾಣಿ, ಬುಲೆಟ್ಪ್ರಕಶ್, ಡ್ಯಾನಿ, ಮಂಜು, ಮನೋಜ್, ರಾಜೀವ್, ಮಾಯಾ, ಕಾಜಲ್, ರಾವಿ ಮುಂತಾದವರಿದ್ದಾರೆ.
ರಾಜೇಶ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್ಜನ್ಯ ಸಂಗೀತ ನೀಡುತ್ತಿದ್ದಾರೆ. ಶ್ರೀ ಸಂಕಲನ, ಆನಂದ್ ಕಲಾನಿರ್ದೇಶನ, ಗಣೇಶ್, ತ್ರಿಭುವನ್ ನೃತ್ಯ ನಿರ್ದೇಶನ, ಥ್ರಿಲ್ಲರ್ಮಂಜು, ಪೀಟರ್ ಅವರ ಸಾಹಸ ನಿರ್ದೇಶನವಿರುವ ‘ಬಾಯ್ಸ್‘ ಚಿತ್ರಕ್ಕೆ ಶಕ್ತಿ ಸಂಭಾಷಣೆ ಬರೆದಿದ್ದಾರೆ.