ಶ್ರೀ ಭೈರವೇಶ್ವರ ಫಿಲಂ ಪ್ಲಾನೆಟ್ ಅರ್ಪಿಸುವ 9 ಥಾಟ್ ಸಿನಿಮಾಸ್ ಲಾಂಛನದಲ್ಲಿ ತರುಣ್ ಶಿವಪ್ಪ ನಿರ್ಮಾಣದ ’ರೋಜ್’ ಚಿತ್ರಕ್ಕೆ ಬ್ಯಾಡರ ಹಳ್ಳಿಯ ಖಾಸಗಿ ಬಂಗಲೆಯೊಂದರಲ್ಲಿ ನಾಯಕ ನಾಯಕಿಯೊಂದಿಗೆ ಬುಲೆಟ್, ನಿರ್ದೇಶಕ ವಿಕ್ಟರಿ ವಾಸು ಮುಂತಾದವರು ಪಾಲ್ಗೊಂಡಿದ್ದ ದೃಶ್ಯ ಚಿತ್ರೀಕರಿಸಲಾಯಿತು.
ಈ ಚಿತ್ರದ ರಚನೆ -ನಿರ್ದೇಶನ ಸಹನ ಹೆಚ್.ಎಸ್. ಛಾಯಾಗ್ರಹಣ - ಗುರುಪ್ರಶಾಂತ್ ರೈ, ಸಂಗೀತ-ಅನೂಪ್ ಸೀಳಿನ್, ಸಂಕಲನ-ಕೆ.ಎಂ.ಪ್ರಕಾಶ್, ನೃತ್ಯ - ಎ.ಹರ್ಷ-ಕಲೈ, ಸಾಹಸ-ಮಾಸ್ ಮಾದ, ಸಹನಿರ್ದೇಶನ - ಕೆ.ವಿಜಯ್ ಭದ್ರಾವತಿ, ನವೀನ್ ರೆಡ್ಡಿ, ರಿಷಿ ರಾಮಯ್ಯ, ನಿರ್ವಹಣೆ - ಸುಧೀಂದ್ರ ಹೊಸಳ್ಳಿ
ತಾರಾಗಣದಲ್ಲಿ - ಅಜಯ್ ರಾವ್, ಶ್ರಾವ್ಯ, ಚಂದ್ರಶೇಖರ್ (ಎಡಕಲ್ಲುಗುಡ್ಡದ ಮೇಲೆ), ಚಿ.ಗುರುದತ್, ಸಾದು ಕೋಕಿಲ, ಬುಲೆಟ್ ಪ್ರಕಾಶ್, ವಿಕ್ಟರಿ ವಾಸು, ಉಮೇಶ್ ಪುಂಗ, ವೆಂಕಟೇಶ್ ಪ್ರಸಾದ್, ಸುಧೀರ್, ರೋಹನ್ ಗೌಡ, ಮುಂತಾದವರಿದ್ದಾರೆ.