Untitled Document
Sign Up | Login    
Dynamic website and Portals
  
Home >> Movie Home >> 'ಗರ್ಭದ ಗುಡಿ’ ಜೂನ್ 21 ರಂದು ತೆರೆಗೆ
'ಗರ್ಭದ ಗುಡಿ’ ಜೂನ್ 21 ರಂದು ತೆರೆಗೆ
'ಗರ್ಭದ ಗುಡಿ’ ಜೂನ್ 21 ರಂದು ತೆರೆಗೆ
ಗರ್ಭದ ಗುಡಿ ಚಿತ್ರದಲ್ಲಿ ಮೋಹನ್ ಮತ್ತು ಅನು ಪ್ರಭಾಕರ್

ಹೆಣ್ಣು ಸಂಸಾರದ ಕಣ್ಣು, ಕಲಿತ ಹೆಣ್ಣು ನಾಡಿನ ಆಸ್ತಿ, ಹೆಣ್ಣು ಅಂದರೆ ಹ್ಯಾಗಿರಬೇಕು, ಹೆಣ್ಣು ಭೂಮಿ ತಾಯಿ?. ಹೀಗೆಲ್ಲಾ ಹೊಲಿಸುವ ಈ ಸಮಾಜ ಹೆಣ್ಣಿನ ಬ್ರೂಣ ಹತ್ಯೆ ಅಲ್ಲಿ ಮುಂದಾಗಿರುವುದು ಇಂದಿನ ಪರಿಸ್ಥಿತಿಯ ವಿಕೋಪ. ಅದನ್ನೇ ವಿಚಾರವಾಗಿ ಇಟ್ಟುಕೊಂಡು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ‘ಗರ್ಭದ ಗುಡಿ’ ಕನ್ನಡ ಸಿನೆಮಾ ಸಾಮಾಜಿಕ ಕಾಳಜಿಯೊಂದಿಗೆ ರಜತ ಪರದೆಗೆ ತಂದಿದ್ದಾರೆ.

ಹೆಣ್ಣಿನ ಶೋಷಣೆ, ಅಕ್ಕ ತಂಗಿ, ಅಪ್ಪ ಅಮ್ಮ, ಹೀಗೆ ಅನೇಕ ಸಂಬಂದಗಳಿಗೆ ಯಾವಾಗಲೂ ಮುಂಚೂಣಿಯಲ್ಲಿರುವ ಸಾಯಿ ಪ್ರಕಾಶ್ ಅವರು ಹಲವು ಹೋಲಿಕೆಗಳನ್ನು ಈ ಚಿತ್ರದಲ್ಲಿ ತಂದಿದ್ದಾರೆ.

ಈ ಚಿತ್ರದ ಕಥೆ ಹಾಗೂ ನಿರ್ಮಾಪಕರು ಬಾವಾಜಿ ಅವರು. ಚಿತ್ರಕಥೆ, ನಿರ್ದೇಶಕ ಓಂ ಸಾಯಿ ಪ್ರಕಾಷ್ ಅವರದು. ನಿರ್ಮಾಣ ನಿರ್ವಹಣೆ ಥಾಮಸ್ ಅವರು, ಸಂಗೀತ ವಿಜಯ್ ಶ್ರೀ ನಿವಾಸ್, ಸಿ ನಾರಾಯಣ ಅವರ ಛಾಯಾಗ್ರಹಣ, ಸಂಭಾಷಣೆ ಕೇಶವಚಂದ್ರು ಅವರದು.

ಅನು ಪ್ರಭಾಕರ್ ಅವರು ಪಾತ್ರ ಪೋಷಣೆಯಲ್ಲಿ ಪರಿಣಿತಿ ಪಡೆದವರು ಎರಡು ಬಾರಿ ರಾಜ್ಯ ಪ್ರಶಸ್ತಿ ವಿಜೇತ ನಟಿ ಈ ‘ಗರ್ಭದ ಗುಡಿ’ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಮೋಹನ್, ರಮೇಶ್ ಭಟ್, ಪದ್ಮಜ ರಾವು, ಗಿರಿಜ ಲೋಕೇಶ್, ಟೆನ್ನಿಸ್ ಕೃಷ್ಣ, ವಿ ಬಾವಾಜಿ, ರಂಜನ, ಪ್ರಿನ್ಸ್ ದರ್ಶನ್, ಸಿಹಿಕಹಿ ಚಂದ್ರು, ರವೀಂದ್ರನಾಥ್, ಮನಮೋಹನ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited