Untitled Document
Sign Up | Login    
Dynamic website and Portals
  
Home >> Movie Home >> ಕೆರೆತೊಣ್ಣೂರಿನಲ್ಲಿ ‘ಗೋವಾ’ದ ಚಿತ್ರೀಕರಣ
ಕೆರೆತೊಣ್ಣೂರಿನಲ್ಲಿ ‘ಗೋವಾ’ದ ಚಿತ್ರೀಕರಣ
ಕೆರೆತೊಣ್ಣೂರಿನಲ್ಲಿ ‘ಗೋವಾ’ದ ಚಿತ್ರೀಕರಣ

ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ.ಎಂ.ಆರ್ ಶಂಕರ್‌ರೆಡ್ಡಿ ಹಾಗೂ ಶಂಕರ್‌ಗೌಡ ಅವರು ನಿರ್ಮಿಸುತ್ತಿರುವ ‘ಗೋವಾ’ ಚಿತ್ರಕ್ಕೆ ಶ್ರೀರಂಗಪಟ್ಟಣ ಬಳಿಯ ಕೆರೆತೊಣ್ಣೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕೋಮಲ್, ಶ್ರೀಕಾಂತ್, ತರುಣ್, ಅಶೋಕ್, ಶೋಭ್‌ರಾಜ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಸೂರ್ಯಗೌಡ ನಿರ್ದೇಶನದ ಈ ಚಿತ್ರದಲ್ಲಿ ಕೋಮಲ್, ತರುಣ್‌ಚಂದ್ರ, ಶ್ರೀಕಾಂತ್, ಶರ್ಮಿಳಾಮಾಂಡ್ರೆ, ರಚಲ್, ಶೃತಿ ಸೋನುಗೌಡ, ಅಶೋಕ್, ಶೊಭ್‌ರಾಜ್, ರಮೇಶ್‌ಭಟ್ ಮುಂತಾದವರು ಅಭಿನಯಿಸುತ್ತಿದ್ದಾರೆ. ನಿರ್ಮಾಪಕ ಶಂಕರ್‌ಗೌಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅರ್ಜುನ್‌ಜನ್ಯ ಸಂಗೀತವಿರುವ ಈ ಚಿತ್ರಕ್ಕೆ ರಾಜೇಶ್ ಅವರ ಛಾಯಾಗ್ರಹಣವಿದೆ. ದೀಪು.ಎಸ್.ಕುಮಾರ್ ಸಂಕಲನ, ಮುರಳಿ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೆಶನ, ಆನಂದ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ ಬರೆದಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited