Untitled Document
Sign Up | Login    
Dynamic website and Portals
  
Home >> Movie Home >> ಆಪರೇಷನ್ ಡೈಮಂಡ್ ರಾಕೆಟ್ ಮೇ.31 ರಂದು ತೆರೆಗೆ
ಆಪರೇಷನ್ ಡೈಮಂಡ್ ರಾಕೆಟ್ ಮೇ.31 ರಂದು ತೆರೆಗೆ
ಆಪರೇಷನ್ ಡೈಮಂಡ್ ರಾಕೆಟ್ ಮೇ.31 ರಂದು  ತೆರೆಗೆ
ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದಲ್ಲಿ ಡಾ. ರಾಜ್ ಕುಮಾರ್

ಕನ್ನಡ ಚಿತ್ರರಂಗದಲ್ಲಿ ಡಾ|| ರಾಜ್‌ರನ್ನು ಬಾಂಡ್ ಶೈಲಿಯ ಚಿತ್ರಗಳಿಗೆ ಪರಿಚಯಿಸಿದವರೆ ನಿರ್ದೇಶಕ ದ್ವಯರಾದ ದೊರೈ ಭಗವಾನ್ ಜೋಡಿ ಇವರು 60-70 ರ ದಶಕದಲ್ಲಿ ನಿರ್ಮಿಸಿ ನಿರ್ದೇಶಿಸಿದ ಪ್ರತಿಧ್ವನಿ, ಗೋವಾದಲ್ಲಿ ಸಿ.ಐ.ಡಿ. ಆಪರೇಶನ್ ಜಾಕ್ ಪಾಟ್, ಆಪರೇಷನ್ ಡೈಮಂಡ್ ರಾಕೆಟ್.

ಈ ಎಲ್ಲಾ ಬಾಂಡ್ ಚಿತ್ರಗಳಿಗೂ ಡಾ|| ರಾಜ್ ನಾಯಕರಾಗಿದ್ದರು. ಆಪರೇಷನ್ ಡೈಮಂಡ್ ರಾಕೆಟ್ 78 ರಲ್ಲಿ ಕಂಡ ಕಡೆಯ ಬಾಂಡ್ ಚಿತ್ರ. 78 ರಲ್ಲಿ ತೆರೆಕಂಡ ಈ ಚಿತ್ರವು ಪ್ರಿಂಟ್ ಮೂಲಕ ರಾಜ್ಯಾದ್ಯಂತ ತೆರೆಕಂಡಿತ್ತು. 35 ವರ್ಷಗಳ ನಂತರ ಈ ಚಿತ್ರವು ಯು.ಎಫ್.ಓ. ಹಾಗೂ ಕ್ಯೂಬ್ ಮೂಲಕ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಅನುಪಮ್ ಮೂವೀಸ್ ಲಾಂಛನದಡಿಯಲ್ಲಿ ದೊರೈ ಭಗವಾನ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಚಿ. ಉದಯಶಂಕರ್ ಸಂಭಾಷಣೆ, ಜಿ.ಕೆ. ವೆಂಕಟೇಶ್ ಸಂಗೀತ, ದೊರೈ ಭಗವಾನ್ ನಿರ್ದೇಶನವಿದ್ದು, ಡಾ|| ರಾಜ್‌ಕುಮಾರ್, ಪದ್ಮಪ್ರಿಯಾ, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಸಿಲೋನ್ ಮನೋಹರ್, ಟೈಗರ್ ಪ್ರಭಾಕರ್, ಫೈಟರ್ ಶೆಟ್ಟಿ ಮುಂತಾದವರಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited