Untitled Document
Sign Up | Login    
Dynamic website and Portals
  
Home >> Movie Home >> ಪಗಡೆಯಾಟಕ್ಕೆ ಸಿದ್ದರಾಗಿ
ಪಗಡೆಯಾಟಕ್ಕೆ ಸಿದ್ದರಾಗಿ
ಪಗಡೆಯಾಟಕ್ಕೆ ಸಿದ್ದರಾಗಿ
ಪಗಡೆಯಲ್ಲಿ ಗಮ್ಯ ಮತ್ತು ವಿಶ್ವಾಸ್ ಭಾರದ್ವಾಜ್

ಪ್ರತಿ ದಿನ ನಮ್ಮ ರಾಜ್ಯಕ್ಕೆ ಬರುವವರು, ಇಲ್ಲಿಂದ ಹೊರರಾಜ್ಯಕ್ಕೆ ಹೋಗುವವರು ಸಾವಿರಾರು ಜನ. ಅವರಿಂದ ನಮಗೇನು ಲಾಭವಾಗಿದೆ, ನಮ್ಮಿಂದ ಅವರಿಗೇನು ಅನುಕೂಲತೆಗಳಾಗಿವೆ. ನಮ್ಮ ಪಕ್ಕದಲ್ಲೇ ಇರುವವರ ಬಗ್ಗೆ ವಿಚಾರಿಸದಿದ್ದರೆ ಏನಾಗುತ್ತದೆ ಎಂಬ ಸೂಕ್ಷ್ಮ ವಿಚಾರಗಳನ್ನಿಟ್ಟುಕೊಂಡು ನಿರ್ಮಾಣವಾದ ಚಿತ್ರ ’ಪಗಡೆ’ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ನಾಲ್ಕೈದು ಪೌರಾಣಿಕ ಚಿತ್ರಗಳನ್ನು ನಿರ್ದೇಶಿಸಿದ್ದ ಪುರುಷೋತ್ತಮ ಮೊದಲ ಬಾರಿಗೆ ಸಸ್ಪೆನ್ಸ್‌ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಹೆಚ್.ವಿ. ಅಣ್ಣಪ್ಪ ನಿರ್ಮಾಣದ ಈ ಚಿತ್ರದಲ್ಲಿ ಕಿರುತೆರೆ ನಟ ವಿಶ್ವಾಸ್ ಭಾರದ್ವಾಜ್ ಹಾಗೂ ಗಮ್ಯ ನಟಿಸಿದ್ದಾರೆ. "ಆಡಿಯೋ ರಿಲೀಸ್ ಸೆಮಿಫೈನಲ್‌ ಆದ ರೆಚಿತ್ರದ ಬಿಡುಗಡೆ ಫೈನ ಲ್‌ಆದಂತೆ. ಈಗ ಸೆಮಿಫೈನಲ್‌ ದಾಟಿ ಫೈನಲ್ ಹಂತಕ್ಕೆ ಬಂದಿದ್ದೇವೆ. ನಮ್ಮ ಹಣೆಬರಹವನ್ನು ಬರೆಯಲು ವೀಕ್ಷಕರು ಸಿದ್ದರಾಗಿದ್ದಾರೆ.ಸಂಪೂರ್ಣ ಸಸ್ಪೆನ್ಸ್‌ ಕಥೆ ಹೊಂದಿರುವ ಈ ಚಿತ್ರದಲ್ಲಿ ಪ್ರೀತಿಯ ಎಳೆ ಇದೆ. ಆದರೆ ಡ್ಯುಯಟ್ ಹಾಡಿಲ್ಲ, ನಾಯಕ-ನಾಯಕಿ ಮರ ಸುತ್ತೋಲ್ಲ .ಕಥೆಗೋಸ್ಕರ ಪಾತ್ರಗಳನ್ನು ಸೃಷ್ಟಿಸಿದ್ದೇವೆಯೇ ಹೊರತು ಪಾತ್ರಗಳಿಗಾಗಿ ಕಥೆ ಹೆಣೆದಿಲ್ಲ ಇಲ್ಲಿ ಕಥೆಯೇ ಹೀರೋ ಎಂದು ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪುರುಷೋತ್ತಮ್ ತಿಳಿಸಿದರು.

ನಿರ್ಮಾಪಕರಾದ ಹೆಚ್.ವಿ. ಅಣ್ಣಪ್ಪ ಮಾತನಾಡಿ ಕೆಲ ತಾಂತ್ರಿಕ ಕಾರಣಗಳಿಂದಾಗಿ ಬಿಡುಗಡೆ ಸ್ವಲ್ಪ ತಡವಾಯ್ತು. ಚಿತ್ರದಲ್ಲಿ ಕುತೂಹಲಕರವಾದ ಕಥೆ ಇದೆ. ಇಡೀ ಸಿನಿಮಾವನ್ನು ನೋಡಿದಾಗಲೇ ಕ್ಲೈಮ್ಯಾಕ್ಸ್‌ ಅರ್ಥವಾಗುತ್ತದೆ. ’ಪಗಡೆ’ ಹೆಸರಿನಲ್ಲಿಯೇ ಒಂದು ಶಕ್ತಿಯಿದೆ. ಪ್ರಾಬ್ಲಂ ಕೂಡ ಇದೆ. ನಾನು ಎರಡನ್ನೂ ಅನುಭವಿಸಿದೆ. ಈ ಚಿತ್ರವನ್ನು ಜನ ಸ್ವೀಕರಿಸುವರೆಂಬ ನಿರೀಕ್ಷೆಯಿದೆ. ಇದಲ್ಲದೆ ಇನ್ನು ಹಲವಾರು ಚಿತ್ರಗಳನ್ನು ನಿರ್ಮಿಸುವ ಯೋಜನೆಯೂ ಇದೆ ಎಂದು ಹೇಳಿಕೊಂಡರು. ಚಿತ್ರದ ನಾಯಕ ವಿಶ್ವಾಸ್ ಭಾರದ್ವಾಜ್‌ಗೆ ನಾಯಕಿಯಾಗ ಮೊದಲ ಪ್ರಯತ್ನ, ನಾಯಕಿ ಗಮ್ಯಗೆ 3ನೇ ಚಿತ್ರ. ನನ್ನ ಹಿಂದಿನ ಚಿತ್ರಗಳಿಗಿಂತ ಇದು ಭಿನ್ನವಾದ ಪಾತ್ರ .ದೇಶ ಪ್ರೇಮದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಬೇರೆಯವರು ನಮ್ಮಲ್ಲಿಗೆ ಬಂದಾಗ ನಮ್ಮವರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ನಿರ್ದೇಶಕರು ವಿವರಿಸಿದ್ದಾರೆಂದು ಗಮ್ಯ ಹೇಳಿಕೊಂಡರು.

ಚಿತ್ರದಲ್ಲಿ ನನ್ನ ಪಾತ್ರ ಎಂಥದ್ದೆಂದು ಹೇಳಲಾರೆ. ನೋಡಿದ ಮೇಲೆ ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ. ಕಿರುತೆರೆಯಲ್ಲಿಜನ ನನ್ನನ್ನು ಮೆಚ್ಚಿದ ಹಾಗೆ ಬೆಳ್ಳಿತೆರೆಯಲ್ಲೂ ಒಪ್ಪಿಕೊಳ್ಳುವರೆಂಬ ನಂಬಿಕೆ ಇದೆ, ಎಂದು ನಾಯಕ ವಿಶ್ವಾಸ್‌ ಭಾರದ್ವಾಜ್ ಹೇಳಿದರು. ಹರ್ಷವರ್ಧನರ ಕಥೆ ಈ ಚಿತ್ರಕ್ಕಿದ್ದು ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಪುರಷೋತ್ತಮ್ ನಿರ್ವಹಿಸಿದ್ದಾರೆ. ಉಳಿದ ತಾರಾಗಣದಲ್ಲಿಧರ್ಮ, ಅಚ್ಯುತ್‌ಕುಮಾರ್, ರವಿಶಂಕರ್ ಅಭಿನಯಿಸಿದ್ದಾರೆ. ಗೌರಿವೆಂಕಟೇಶ್‌ ಛಾಯಾಗ್ರಹಣ, ಸಾಗರ್ ನಾಗಭೂಷಣ್ ಸಂಗೀತವಿದೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited