Untitled Document
Sign Up | Login    
Dynamic website and Portals
  
Home >> Movie Home >> ಬುಲ್‌ಬುಲ್ ಚಿತ್ರಕ್ಕೆ ಡಿ.ಟಿ.ಎಸ್
ಬುಲ್‌ಬುಲ್ ಚಿತ್ರಕ್ಕೆ ಡಿ.ಟಿ.ಎಸ್
ಬುಲ್‌ಬುಲ್ ಚಿತ್ರಕ್ಕೆ ಡಿ.ಟಿ.ಎಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಕಾಣಿಕೆ ‘ಬುಲ್‌ಬುಲ್’ ಚಿತ್ರಕ್ಕೆ ಮಂಜರಿ ಸ್ಟೂಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ.

ಎಲ್ಲಾ ಅಂದುಕೊಂಡಂತೆ ನಡೆದರೆ ಚಿತ್ರ ಮೇ 10ರಂದು ತೆರೆಗೆ ಬರಲಿದೆ.

ತೂಗುದೀಪ ಪ್ರೊಡಕ್ಷನ್ಸ್‌ನ ನಿರ್ಮಾಪಕರಾದ ಶ್ರೀಮತಿ ಮೀನಾ ತೂಗುದೀಪ ಶ್ರೀನಿವಾಸ್ ‘ಬುಲ್‌ಬುಲ್’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದಿನಕರ್ ತೂಗುದೀಪ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸಂಸ್ಥೆಯ ಮೂರನೇ ಕಾಣಿಕೆಯಾದ ಈ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶಿಸಿದ್ದಾರೆ.

ಕವಿರಾಜ್ ಗೀತರಚನೆ ಮಾಡುವುದರೊಂದಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೃಷ್ಣಕುಮಾರ್(ಕೆ ಕೆ) ಅವರ ಛಾಯಾಗ್ರಹಣ, ಸೌಂದರರಾಜ್ ಸಂಕಲನ, ಮಲ್ಲಿಕಾರ್ಜುನ್(ಗದಗ) ಸಹನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಂಗಸ್ವಾಮಿ, ಸುಂದರರಾಜ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚಿತಾ ರಾಂ, ಅಶೋಕ್, ಚಿತ್ರಾಶೆಣೈ, ಶರಣ್, ರಮೇಶ್‌ಭಟ್, ಸಿಹಿಕಹಿ ಚಂದ್ರು, ಸಾಧುಕೋಕಿಲಾ, ಟೆನ್ನಿಸ್‌ಕೃಷ್ಣ ಮುಂತಾದವರಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited