Untitled Document
Sign Up | Login    
ಧರ್ಮವನ್ನು ರಕ್ಷಿಸಿ ಉಳಿಸಿದ ಸಂತರಿಗಿದೋ ಸಹಸ್ರ ನಮನಗಳು..

ಬೆಂಗಳೂರಿನ ಕೋರಮಂಗಲದಲ್ಲಿ ನಡೆಯುವ ಸಹಸ್ರ ಸಂತರ ಸಂಗಮಕ್ಕೆ ಅಹ್ವಾನ..

ಧಾರ್ಮಿಕ ಆಚರಣೆಯ ನಿಮಿತ್ತ ಸಹಸ್ರಾರು ಸಂತರು ತಾಯಿ ಗಂಗೆಯ ಮಡಿಲಲ್ಲಿ ಸೇರಿದ್ದನ್ನು ನಾವೆಲ್ಲ ಕೇಳಿದ್ದೇವೆ, ಆದರೆ ಈ ಸಂತ ಸಂಗಮ ಧಾರ್ಮಿಕ ಆಚರಣೆಯ ನಿಮಿತ್ತವಲ್ಲ, ಸಂತ ಭೂಮಿಯಾದ ಭರತ ಭೂಮಿಯಲ್ಲಿ "ಧರ್ಮವನ್ನು" ಪ್ರತಿ ಜನರ ಹೃದಯಕ್ಕೆ ತಲುಪಿಸುವ ನಿಮಿತ್ತ ಎಲ್ಲಾ ಸಾಧು ಸಂತರು ಒಂದೆಡೆ ನೆರೆಯುತ್ತಿದ್ದಾರೆ.

ಪರಕೀಯರ ದಾಳಿಗೆ ಸಿಕ್ಕ ಜಗತ್ತಿನ ಹಲವಾರು ಜನಾಂಗಗಳು, ನಾಗರಿಕತೆಗಳು ನಾಶವಾದವು. ಆದರೆ ಈ ಭರತ ಭೂಮಿಯಲ್ಲಿ ಹಾಗಾಗಲಿಲ್ಲ. ಹಲವು ಶತಮಾನಗಳ ಕಾಲ ಪರಕೀಯರು ಆಳಿದರೂ ಸಹ ಇಂದೂ ನಾವೆಲ್ಲಾ ಸನಾತನಿಗಳಾಗಿದ್ದೇವೆಂದರೆ ಅದಕ್ಕೆ ಕಾರಣ ನಮ್ಮ ಸಂತರು. ನಮ್ಮ ಸಂತರು ಧರ್ಮವನ್ನು ಕೇವಲ ಪುಸ್ತಕದಲ್ಲಿಡಲಿಲ್ಲ, ಹೃದಯದಲ್ಲಿಟ್ಟರು. ಧರ್ಮವೇ ಆರಕ್ಷಕನಂತೆ ಕೆಲಸ ಮಾಡಿತು.

ಆಳ್ವಿಕೆಯು ಕಾಲಕ್ಕೆ ತಕ್ಕಂತೆ ಬದಲಾಯಿತು, ಹಾಗೆಯೇ ದಾಳಿಯ ಸ್ವರೂಪವೂ ಕೂಡ. ಧರ್ಮ ಮಂದಿರದಲ್ಲಿದೆ ಎಂದು ಮೊದಲು ಸಾವಿರಾರು ದೇಗುಲಗಳ ನಾಶವಾಯಿತು. ಆದರೆ ಧರ್ಮ ಹೃದಯ ಮಂದಿರದಲ್ಲಿತ್ತು. ಸಂತರು ಆ ಮಂದಿರದ ಕಾವಲು ಕಾಯುತ್ತಿದ್ದರು. ಆದರೆ ಇದನ್ನು ಅರಿತ ಹಲವರು ಸಂತರ ಮೇಲೆಯೇ ದಾಳಿ ಆರಂಭಿಸಿದ್ದಾರೆ. ಸಂತರಿಗೆ ಮಾನವೇ ಪ್ರಾಣವಾದ್ದರಿಂದ "ಮಾನದ" ಮೇಲೆ ದಾಳಿ ಮಾಡಿ ಸನಾತನ ಧರ್ಮದ ಮೇಲೆ ಪರೋಕ್ಷ ದಾಳಿಯಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಇಂತಹ ಪರೋಕ್ಷ ದಾಳಿಗಳು ಹೆಚ್ಚಾಗುತ್ತಿದೆ, ಹಾಗೆಯೇ ನಮ್ಮ ಸಂಸ್ಕೃತಿಯ ಮೌಲ್ಯ ತುಚ್ಚವೆಂಬತೆ ಬಿಂಬಿಸಿ, ಪಾಶ್ಚಾತ್ಯ ಸಂಸ್ಕೃತಿಯತ್ತ ಯುವ ಸಮುದಾಯ ವಾಲುವಂತೆ ಮಾಡಲಾಗುತ್ತಿದೆ. ನಮ್ಮ ಸಂಸ್ಕ್ರತಿ ಅತ್ಯುತ್ಕೃಷ್ಟ ಹಾಗೂ ವಿಶ್ವಕ್ಕೇ ಮಾದರಿಯ ಸಂಸ್ಕ್ರತಿ; ಏಕೆಂದರೆ, ನಮ್ಮದು ಗುರು-ಶಿಷ್ಯ ಪರಂಪರೆ.

ನಮ್ಮಲ್ಲಿ ಆದೆಷ್ಟೋ ವಿವಿಧ ಪಂಗಡಗಳು ಇವೆ. ಆದರೆ ಎಲ್ಲವೂ ಭರತ ಭೂಮಿಯ ಸಂಸ್ಕೃತಿಯಲ್ಲಿ ಏಕವಾಗಿವೆ. ಅಂತಹ ಸಂಸ್ಕೃತಿಯ ಉಳಿವು -ಬೆಳೆವಿಗಾಗಿ ಸಹಸ್ರ ಸಂತರು ಒಂದೆಡೆ ಸೇರುತ್ತಿದ್ದಾರೆ, ಎಲ್ಲವನ್ನೂ ಸಮಾಜಕ್ಕೆ ಧಾರೆಯೆರೆದ ಸಂತರಿಗೆ ನಮಿಸೋಣ. ಸಂತ ಸಂಗಮದಲ್ಲಿ ಪಾಲ್ಗೊಂಡು, ನಮಗಾಗಿ ತಮ್ಮ ಜೀವನವನ್ನೇ ಧಾರೆಯರೆದ ಸಂತರಿಗೆ ಒಂದಿನಾತಾದರು ಕೃತಜ್ಞತೆ ಸಲ್ಲಿಸೋಣ.

ಸಂತಶ್ರೇಷ್ಠರಿಗೆ ಸಹಸ್ರ ನಮನಗಳೊಂದಿಗೆ..

 

Author : ಪ್ರಶಾಂತ ಹೆಗಡೆ ಆವಿನಹಳ್ಳಿ 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited