Untitled Document
Sign Up | Login    
ಏಕೆ ರಾಮಚಂದ್ರಾಪುರ ಮಠದ ಮೇಲೆ ಷಡ್ಯಂತ್ರ??

ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯ

ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಸಾಕ್ಷಾತ್ ಪರಶಿವನ ಅವತಾರ ಸ್ವರೂಪವಾದ ಅದ್ವೈತ ಮತದ ಮೇರು ಶಿಖರವಾದ ಆಚಾರ್ಯ ಶಂಕರ ಭಗವತ್ಪಾದರಿಂದ ಆರಂಭಗೊಂಡ, ಇಂದಿನವರೆಗೂ ಜೀವ ಜಗತ್ತನ್ನು ಉದ್ಧರಿಸುತ್ತ ಬಂದಿರುವ ಇಡೀ ಜಗತ್ತಿನ ಏಕೈಕ ಅವಿಚ್ಚಿನ್ನ ಪರಂಪರೆ ರಾಮಚಂದ್ರಾಪುರ ಮಠದ ಗುರು ಪರಂಪರೆ. ಶಂಕರಾಚಾರ್ಯರು ಅಂದು ಬೆಳಗಿದ ಜ್ಯೋತಿಯೊಂದು ಇಂದಿಗೂ ಅವಿಚ್ಚಿನ್ನವಾಗಿ ಪ್ರಕಾಶಿಸುತ್ತಾ, ಸಮಾಜಕ್ಕೆ ಅರಿವಿನ ಬೆಳಕನ್ನು ಅನುಗ್ರಹಿಸುತ್ತಿದೆ. ಆಯಾ ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಧಾರ್ಮಿಕ, ಸಾಮಾಜಿಕ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತ ಬಂದಿದೆ.

ಪೀಠವನ್ನು ಅಲಂಕರಿಸಿ ಅನುಗ್ರಹಿಸಿದ ಎಲ್ಲಾ ಯತಿಶ್ರೇಷ್ಠರು ಪರಮ ತಪಸ್ವಿಗಳು, ಪರತತ್ವದರ್ಶಿಗಳು ಹಾಗೂ ನಿಗ್ರಹ ಅನುಗ್ರಹ ಸಮರ್ಥರು; ವೇದ, ನ್ಯಾಯ, ಸಂಸ್ಕೃತ ಯೋಗ ಹಾಗೂ ಇನ್ನು ಅನೇಕ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದವರು. ಶ್ರೀಪೀಠದ ಎಲ್ಲಾ ಯತೀಶ್ವರರು ಧರ್ಮಸಾಮ್ರಾಜ್ಯದ ನೇತಾರರಾಗಿ ಸಮಾಜವನ್ನು ಯೋಗ್ಯಮಾರ್ಗದಲ್ಲಿ ಮುನ್ನಡೆಸಿದ್ದಾರೆ. ಶ್ರೀಮಠದ ಪರಂಪರೆಯಿಂದ ಆರಾಧಿಸಿಕೊಂಡು ಬಂದಿರುವ ದೇವತಾವಿಗ್ರಹಗಳು ಅಗಸ್ತ್ಯ ಸಂಪೂಜಿತವಾಗಿ ಶ್ರೀವರದಮುನಿಗಳಿಂದ ಪ್ರಾಪ್ತವಾದ ತಪೋರಾಮಾದಿ ವಿಗ್ರಹಗಳು ಚಂದ್ರಮೌಳೀಶ್ವರ ಲಿಂಗ ಹಾಗೂ ಶ್ರೀಪಾದುಕೆಗಳು ಶ್ರೀಮಠದ ವೈಶಿಷ್ಟ್ಯತೆಯ ಕಿರೀಟಪ್ರಾಯವಾದ ಸಂಗತಿ. ಜಗತ್ತಿನ ಅತಿಶ್ರೇಷ್ಠ ರಾಮಚಂದ್ರಾಪುರ ಮಠದ ಧರ್ಮಾಚಾರ್ಯ ಪೀಠವನ್ನಾರೀಹಿಸಿದ 36ನೇಯ ಯತೀಶ್ವರರು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು. ಸಮಾಜದ ಬಹುದೊಡ್ಡ ಸೌಭಾಗ್ಯದ ಪ್ರತೀಕವಾಗಿ  ದೊರೆತ ಅನರ್ಘ್ಯರತ್ನ ಇವರು. ಶ್ರೀಮಠದ ಆಡಳಿತ ಸೂತ್ರವನ್ನು ಹಿಡಿದ ಮೇಲೆ ಸಮಾಜದ ಎಲ್ಲಾ ಶಿಷ್ಯರನ್ನು ವಿದ್ಯುತ ಸಂಚಾರದ ಮೂಲಕ ಸಂಘಟಸಿ ನಿಕಟ ಸಂಪರ್ಕಕ್ಕಾಗಿ ಸೀಮಾಪರಿಷತ್  ರಚಿಸಿದರು. ತಾಯಂದಿರಿಗಾಗಿ ಮಹಿಳಾಪರಿಷತ್ ಕೂಡ ರಚಿನೆಯಾಗಿ ಮಹಿಳೆಯರು ಕೂಡಾ ಶ್ರೀಮಠದ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಮಾತೃಶಾಖೆಯೆಂಬ ಬೃಹತ್ ಮಹಿಳಾ ಸಂಘಟನೆಯೊಂದು ಇಂದು ಶ್ರೀಮಠದಲ್ಲಿ ಅಹರ್ನಿಶಿ ತನ್ನ ಸೇವಾಕೈಂಕರ್ಯ ಗೈಯುತ್ತಿದೆ. ಶ್ರೀಗಳವರ ದೂರದರ್ಶಿತ್ವದ ಫಲವಾಗಿ ಸನಾತನ ಶಿಕ್ಷಣಕ್ಕಾಗಿ ಗುರುಕುಲ,  ವಿದ್ಯಾರ್ಥಿನಿಲಯ,  ಮಹಿಳೆಯರಿಗಾಗಿ ನಾರಿನಿಕೇತನ, ದಾನ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವಿಗಾಗಿ ಮುಷ್ಟಿಭಿಕ್ಷೆ, ಬಿಂಧುಸಿಂಧು, ಹಲವಾರು ಶಿಕ್ಷಣ ಸಂಸ್ಥೆಗಳು,  ವೈದ್ಯಕೀಯ ಚಿಕಿತ್ಸಾಕೇಂದ್ರಗಳು, ಗೋಶಾಲೆಗಳು, ದೇವಾಲಯಗಳು ಮೊದಲಾದ ಸಾಂಸ್ಥಿಕ ಕಾರ್ಯಗಳು ರೂಪುಗೊಂಡು ಯಶಸ್ವಿಯಾಗಿ ಮುಂದುವರಿಯುತ್ತಿದೆ. 

ರಾಮಯಣ ಮಹಾಸತ್ರ, ಭಾರತೀಯ ಗೋಯಾತ್ರೆ, ವಿಶ್ವಗೋಸಮ್ಮೇಳನ - ಇಂತಹ ಅಭೂತಪೂರ್ವ ಕಾರ್ಯಕ್ರಮಗಳಿಂದ, ಶ್ರೀಗಳ ಅಪೂರ್ವ ಯೋಜನೆಗಳಿಂದ ಶ್ರೀಮಠವು ಜಾಗತಿಕ ಸ್ಥರದಲ್ಲಿ ಪ್ರಸಿದ್ಧಿ ಪಡೆದಿದೆ. ಆಗಸ್ಟ್ ೧೪, ೨೦೦೮ ರಂದು ಸರ್ಕಾರದ ಚಾರಿತ್ರಿಕ ನಿರ್ಣಯದ ಫಲವಾಗಿ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಸಂಪೂರ್ಣ ನಿರ್ವಹಣಾ ವ್ಯವಸ್ಥೆ ಶ್ರೀಮಠಕ್ಕೆ ಹಸ್ತಾಂತರವಾಯಿತು. ಶ್ರೀಮಠದ್ದೇ ಆಗಿದ್ದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವು ಪುನಃ ತಾಯಿಯ ಮಡಿಲನ್ನು ಸೇರಿದ ಬಗೆಯಿದು. ಬಯಸದೇ ಬಂದ ಭಾಗ್ಯ. ೩೬ನೇಯ ಪೀಠಾಧಿಪತಿಗಳಾದ ಶ್ರೀಗುರುಗಳು ಗೋಕರ್ಣದ ಅಭಿವೃದ್ಧಿಗಾಗಿ ಮಹಾಸಂಕಲ್ಪವನ್ನು ಘೋಷಿಸಿ ಗೋಕರ್ಣ ಶ್ರೀಮಠಕ್ಕೆ ಹಸ್ಥಾಂತರವಾದ ಕಳೆದ ೪,೫ ವರ್ಷಗಳಲ್ಲಿ ಅನೇಕ ಅತ್ಯಗತ್ಯ ಮತ್ತು ಸ್ವಾಗತಾರ್ಹ ಬದಲಾವಣೆಗಳನ್ನು ಕಂಡಿದೆ. ನಿಂತುಹೋಗಿದ್ದ ಹಲವು ಉತ್ಸವಗಳು, ಧಾರ್ಮಿಕವಿಧಿಗಳಿಗೆ ಪುನಃ ಚಾಲನೆ ದೊರೆತಿದೆ. ಸ್ವಚ್ಚತೆ, ಯಾತ್ರಿಕರಿಗೆ ಮೂಲಭೂತ ಸೌಲಭ್ಯ ಸೇವಾವ್ಯವಸ್ಥೆಯಲ್ಲಿ ಪಾರದರ್ಶಕತೆ, ಸಾಮೂಹಿಕ ಪೂಜೆ, ಮಹಾಬಲನ ಪ್ರಸಾದರೂಪವಾದ ಅಮೃತಾನ್ನ ದುರ್ಬಲವರ್ಗದವರಿಗಾಗಿ ಗೋದಿನ, ಇವೆಲ್ಲಾ ಶ್ರೀಗಳ ಮನೋಲತೆಯಲ್ಲಿ ಅರಳಿದ ಕೆಲವು ಸುಮಗಳು ಮಾತ್ರ.

ಇಷ್ಟೇ ಅಲ್ಲದೇ ಶ್ರೀಗಳು ನೃತ್ಯ, ರೂಪಕ, ಗಾಯನ ಹೀಗೆ ಹಲವು ಕಲಾಪ್ರಾಕರಗಳ ಸಮ್ಮಿಳಿತವಾದ ವಿಶಿಷ್ಟ ರೀತಿ ಕಲಾಪ್ರಾಕಾರವಾದ 'ರಾಮಕಥೆ'ಯ ಪ್ರವರ್ತಕರು. ಸಮಷ್ಟಿಯ ಸೇವೆಯ ಮಹಾಭಿಯಾನವನ್ನು ಕೈಗೊಂಡು ಸಂಘಟನೆಯ ವ್ಯವಸ್ಥೆಯಲ್ಲಿ ಸಹಸ್ರಾರು ಕಾರ್ಯಕರ್ತರನ್ನು ಪುಣ್ಯದ ಗಂಗೆಯಲ್ಲಿ ಮಿಂದೇಳುವಂತೆ ಮಾಡಿ ಪುನೀತರಾಗಿಸಿದ್ದಾರೆ. ಸಮಾಜದ ಕೊಟ್ಟಕೊನೆಯ ವ್ಯಕ್ತಿಗೂ ಶ್ರೀಮಠದ ಮುಖ್ಯವಾಹಿನಿಯಲ್ಲಿ ಸೇವೆಗೈಯಲು ಅವಕಾಶವನ್ನಿತ್ತಿದ್ದಾರೆ. ಶ್ರೀಮಠಕ್ಕೆ ಕೇವಲ ಹವ್ಯಕ ಸಮಾಜವಲ್ಲದೇ ಹಾಲಕ್ಕಿ, ಭಂಡಾರಿ, ಮುಕ್ರಿ ಹೀಗೆ ಹತ್ತು ಹಲವಾರು ಸಮಾಜದ ಶಿಷ್ಯಭಕ್ತರಿದ್ದಾರೆ. ಅವರೆಲ್ಲರಿಗೂ ಸಮಾನ ಅವಕಾಶಗಳಿವೆ. ಈ ಎಲ್ಲಾ ಸಮಾಜದ ಬಾಂಧವರು ಶ್ರೀಮಠದಲ್ಲಿ
ಅವಿರತವಾಗಿ ನಿಷ್ಟೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಒಂದು ಬೃಹತ್ ಸಂಘಟನೆಯನ್ನು ಪ್ರಪಂಚದ ಇನ್ಯಾವ ಮಠದಲ್ಲೂ ಕಾಣಲು ಸಾಧ್ಯವಿಲ್ಲ.

ವಿಶ್ವಮಂಗಲ ಗೋ ಗ್ರಾಮ ಯಾತ್ರೆ ಮೂಲಕ ಶ್ರೀಗಳು ದೇಶಾದ್ಯಂತ ಸಂಚರಿಸಿ ಭಾರತೀಯ ಗೋತಳಿಗಳ ಬಗ್ಗೆ ಜಾಗೃತಿ ಮೂಡಿಸಿದರು.
ಹೀಗೆ, ಶ್ರೀಗಳ ಅವಿರತ ಶ್ರಮದಿಂದಾಗಿ ರಾಮಚಂದ್ರಾಪುರ ಮಠದ ಖ್ಯಾತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಬ್ಬುತ್ತಿರುವುದನ್ನು ಸಹಿಸದ ಕೆಲವು ಅತೃಪ್ತ ಆತ್ಮಗಳು, ರಾಜಕೀಯ ಪುಡಾರಿಗಳು, ತಮ್ಮ ಹೇಯಕೃತ್ಯಗಳಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗಿ ಶ್ರೀಮಠದಿಂದ ಹೊರಗುಳಿದಿದ್ದ ಕೆಲವು ಕುಹುಕಿಗಳು ಅಂಬಾರಗುಡ್ಡದ ಗಣಿಗಾರಿಕೆಯ ಮಾಫಿಯಾಗಳು, ಗೋಕರ್ಣವನ್ನು ತಮ್ಮ ಮನಬಂದಂತೆ ನಡೆಸುತ್ತಿದ್ದ, ಕಾನೂನುಬಾಹಿರ
ಚಟುವಟಿಕೆಗಳನ್ನು ನಡೆಸುತ್ತಿದ್ದ ದುಷ್ಕರ್ಮಿಗಳು, ಶ್ರೀಮಠದ ಸಂಘಟನೆಯನ್ನು ಒಡೆಯಲೆತ್ನಿಸಿದ ಕೆಲವು ಸಮಾಜಘಾತಕ ಶಕ್ತಿಗಳು ಒಗ್ಗೂಡಿ 'ಸಮಾನ ಮನಸ್ಕ'ರಾದರು.

ಶ್ರೀಗಳನ್ನು ಹೋಲುವ ನಕಲಿ ವೇಷಧಾರಿಯನ್ನು ಸೃಷ್ಟಿಸಿ ನಕಲಿ CD ತಯಾರಿಸಿ ಶ್ರೀಗಳ ತೇಜೋವಧೆಗೆ ಯತ್ನಿಸಿದರು. ಊಹುಂ.. ಕುತಂತ್ರ ಫಲಿಸಲಿಲ್ಲ, blackmail ಪ್ರಕರಣ ಸೃಷ್ಟಿಸಿ ಖುದ್ದಾಗಿ ಪೋಲಿಸರ ವಶವಾದರು. ಕೊನೆಗೆ ಇವೆಲ್ಲಕ್ಕಿಂತಲೂ ದೊಡ್ಡದಾದ ಒಂದು ಚಕ್ರವ್ಯೂಹದ ಯೋಚನೆ ಕುತಂತ್ರಿಗಳ ಮನಸ್ಸಿನಲ್ಲಿ ಹುಟ್ಟಿಕೊಂಡಿತು. ಒಬ್ಬ ವ್ಯಕ್ತಿಗೆ ಪ್ರಾಣಕ್ಕಿಂತ ಮುಖ್ಯವಾಗಿದ್ದು ಮಾನ, ಚಾರಿತ್ರ್ಯ. ಚಾರಿತ್ರ್ಯವನ್ನು ನಾಶಮಾಡಿದರೆ ಆ ವ್ಯಕ್ತಿ ಸರ್ವನಾಶವಾದಂತೆ. ಹಾಗಾಗಿ ಶ್ರೀಗಳ ಮರ್ಯಾದೆಗೆ ಧಕ್ಕೆ ತರುವ, ಕೊಲೆಗಿಂತಲೂ ಹೇಯವಾದ ಅತ್ಯಾಚಾರದ ಮಿಥ್ಯ ಆರೋಪವನ್ನು ಹೊರಿಸಿದರು. ಆದರೆ ಯಾವುದೂ ಅವರ ಇಚ್ಚೆಯಂತೆ ಘಟಿಸಲಿಲ್ಲ.

ಶ್ರೀಗಳು ಕಟ್ಟಿದ ಭದ್ರವಾದ ಕೋಟೆಯ ಒಂದು ಇಟ್ಟಿಗೆಯೂ ಸಡಿಲಗೊಳ್ಳಲಿಲ್ಲ. ಮಠವನ್ನು ತಮ್ಮ ಸ್ವಾಮ್ಯದಲ್ಲಿರಿಸಿಕೊಂಡು ಮನಬಂದಂತೆ ಅಧಿಕಾರ ಚಲಾಯಿಸುವ ಷಡ್ಯಂತ್ರಿಗಳ ಹಗಲುಗನಸು ಮಣ್ಣುಪಾಲಾಯಿತು. ಶ್ರೀಗಳು ಅವಿರತ ಶ್ರಮದಿಂದ ಕಟ್ಟಿದ ಸಮಾಜ ನಾಯಿನರಿಗಳ ಪಾಲಾಗಲಿಲ್ಲ. ಬದಲಾಗಿ, ಶ್ರೀಮಠದಲ್ಲಿಯ ಕಾರ್ಯಕರ್ತರ ಸೇನೆ, ಸಂಘಟನೆ ಉಕ್ಕಿನಷ್ಟು ಬಲವಾಯಿತು. ಶ್ರೀಮಠ, ಗುರುವಿನ ಮೇಲಿನ ಪ್ರೀತಿ, ನಿಷ್ಟೆ ನಂಬಿಕೆಗಳು ಸಾವಿರಪಟ್ಟು ಅಧಿಕಗೊಂಡವು. ಹಿಂದೆಂದೂ ಕಾಣದ ಸಾವಿರಾರು ಯುವಕರು ಶ್ರೀಮಠದ ಅಂಗಳಕ್ಕೆ ಧಾವಿಸಿ ಬಂದರು. ಬಲಿಷ್ಠ ಸೇವಾ ಸಾಮ್ರಾಜ್ಯವೇ ನಿರ್ಮಾಣವಾಯಿತು. ಅತ್ಯಂತ ಪ್ರಬಲವಾದ ಷಡ್ಯಂತ್ರದ ನಡುವೆಯೂ ಶ್ರೀಮಠವು ತನ್ನ ದೈನಂದಿನ ಕಾರ್ಯಗಳಿಗೆ ಎಳ್ಳಷ್ಟೂ ಚ್ಯುತಿಬಾರದಂತೆ ಸುಸೂತ್ರವಾಗಿ ನಡೆಸಿಕೊಂಡು ಹೋಗುತ್ತಿರುವುದು ಅತ್ಯಂತ ವೈಶಿಷ್ಟ್ಯದ ಸಂಗತಿ. ಹೊಸನೀರು ಹಳೆನೀರಿನೊಂದಿಗೆ ಸೇರಿ ಪ್ರವಾಹೋಪಾದಿಯಲ್ಲಿ ಧರ್ಮಕ್ಕಾಗಿ ಹೋರಾಡಿ ತನ್ನ ಅಳಿಲು ಸೇವೆಯನ್ನು ಶ್ರೀರಾಮನ ಪದತಲಕ್ಕೆ ಸಮರ್ಪಿಸುತ್ತಿದೆ.

ಈ ಎಲ್ಲಾ ಷಡ್ಯಂತ್ರಗಳನ್ನು ಗಮನಿಸುತ್ತಿದ್ದರೆ ನಕಲಿ CD ಪ್ರಕರಣದ ಹಿಂದಿನ ಪ್ರಬಲವಾದ ಕಾಣದ ಕೈಗಳೇ ಅತ್ಯಾಚಾರದ ಮಿಥ್ಯಾರೋಪ ಪ್ರಕರಣದ ರೂವಾರಿಗಳು ಎಂಬುದಂತೂ ಸ್ಪಷ್ಟವಾಗುತ್ತದೆ. ಖೇದದ ಸಂಗತಿಯೆಂದರೆ, ಸಮಾಜದ, ಧರ್ಮದ, ಸಂಸ್ಕೃತಿಯ ರಕ್ಷಣೆಗೆ ನಿಂತ ಕೆಲವರೂ ಈ ಷಡ್ಯಂತ್ರದಲ್ಲಿ ಭಾಗಿಯಾಗಿರುವುದು. ಇದಕ್ಕೆ ಕಾಲವನ್ನು ದೂರಬೇಕೆ? ಅಥವಾ ನಮ್ಮ ಅವಿವೇಕತನವನ್ನು ದೂರಬೇಕೆ?..

 

Author : ನಮಿತಾ ಹೆಗಡೆ 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited