Untitled Document
Sign Up | Login    
2015-16ನೇ ಸಾಲಿನ ಬಜೆಟ್ ನ ಪ್ರಮುಖ ನಿರೀಕ್ಷೆಗಳು

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಥಮ ಪೂರ್ಣಪ್ರಮಾಣದ ಬಜೆಟ್ ಫೆ.28ರಂದು ಮಂಡನೆಯಾಗಲಿದೆ. ಈಗಾಗಲೇ ಭಾರತದ ಆರ್ಥಿಕ ಬೆಳವಣಿಗೆ ಸಾಕಷ್ಟು ಭರವಸೆಗಳನ್ನು ಮೂಡಿಸಿದ್ದು, ಎಲ್ಲವೂ ಕೇಂದ್ರದ ಯೋಜನೆಗಳ ಪ್ರಕಾರ ನಡೆದರೆ ಮುಂದಿನ ವರ್ಷದಿಂದ ಅಭಿವೃದ್ಧಿಯಲ್ಲಿ ನಾವು ಚೀನಾಗಿಂತಲೂ ಮುಂದಿರಲಿದ್ದೇವೆ. ಅಭಿವೃದ್ಧಿ ದೀರ್ಘಕಾಲ ಸ್ಥಿರವಾಗಿರಬೇಕಾದರೆ ಮೂಲಸೌಲಭ್ಯಗಳಿಗೆ ಆದ್ಯತೆ ನೀಡುವುದು ಅಗತ್ಯವಾಗಿದ್ದು ಅರುಣ್ ಜೇಟ್ಲಿ, ಈಬಾರಿಯ ಬಜೆಟ್ ನಲ್ಲಿ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಲಿದ್ದಾರೆ ಎಂಬ ನಿರೀಕ್ಷೆ ಇದೆ.

ಅರುಣ್ ಜೇಟ್ಲಿಯ ಬಜೆಟ್ ನಲ್ಲಿ ಮಧ್ಯಮ ವರ್ಗದ ಜನರಿಗೆ ಉಪಯುಕ್ತವಾಗಲಿರುವಂತಹ ಕೊಡುಗೆ ನೀಡುವ ನಿರೀಕ್ಷೆ ಇದ್ದು, ತೆರಿಗೆ ವಿನಾಯ್ತಿ ನೀಡುತ್ತಾರಾ ಎಂಬ ಕುತೂಹಲ ಮೂಡಿದೆ. ಕಳೆದ ಬಾರಿ ಮಂಡಿಸಿದ್ದ ಬಜೆಟ್ ನಲ್ಲಿ ಅರುಣ್ ಜೇಟ್ಲಿ, ತೆರಿಗೆ ವಿನಾಯ್ತಿಯನ್ನು 2 ರಿಂದ 2.5 ಲಕ್ಷಕ್ಕೆ ಏರಿಕೆ ಮಾಡಿದ್ದರು. ಅಲ್ಲದೇ ಗೃಹ ಸಾಲದ ಮೇಲಿನ ತೆರಿಗೆ ವಿನಾಯ್ತಿಯನ್ನು 2 ಲಕ್ಷದಿಂದ 1.5 ಲಕ್ಷಕ್ಕೆ ಇಳಿಕೆ ಮಾಡಿದ್ದರು.

ಈ ಬಾರಿ ತೆರಿಗೆ ವಿನಾಯ್ತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡುವ ನಿರೀಕ್ಷೆ ಇದೆ. ಇದರಿಂದಾಗಿ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ. ಗೃಹ ಸಾಲದ ಮೇಲಿನ ಪ್ರಿನ್ಸಿಪಲ್ ಪೇಮೆಂಟ್ ನ್ನು 1.5 ರಿಂದ 3 ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ.
ಬ್ಯಾಂಕ್ ಕ್ಷೇತ್ರ ಸುಧಾರಣೆಗೆ ಅರುನ್ ಜೇಟ್ಲಿ ಹೊಸ ಮಾರ್ಗಸೂಚಿಗಳನ್ನು ಘೋಷಿಸುವ ನಿರೀಕ್ಷೆ ಇದೆ. ಕೊಟ್ಟ ಸಾಲ ವಾಪಸು ಬರದೇ ಇದ್ದರೆ, ಅದನ್ನು ನಿಷ್ಕ್ರಿಯ ಸಾಲದ ಖಾತೆಗೆ ವರ್ಗಾಯಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಈ ವಾಪಸು ಬಾರದ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ನಿಷ್ಕ್ರಿಯ ಸಾಲದ ಪ್ರಮಾಣ ತಗ್ಗಿಸುವ ಮತ್ತು ಬ್ಯಾಂಕ್‌ಗಳ ಉತ್ಪಾದಕತೆ ಮತ್ತು ಲಾಭಾಂಶ ಹೆಚ್ಚಿಸುವ ಸಲುವಾಗಿ ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆ ಅಗತ್ಯವಾಗಿದೆ.

2020ರ ಹೊತ್ತಿಗೆ ಎಲ್ಲಿರಿಗೂ ವಸತಿ ಸೌಲಭ್ಯ ಒದಗಿಸುವ ಗುರಿಯನ್ನು ಮೋದಿ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ವಸತಿ ವಲಯಕ್ಕೆ ಉತ್ತೇಜನ ಸಿಕ್ಕರೆ ಉದ್ಯೋಗ ಸೃಷ್ಟಿಯಾಗುತ್ತದೆ. ಅಲ್ಲದೇ ಸಿಮೆಂಟ್, ಕಬ್ಬಿಣ ಸೇರಿದಂತೆ ಸಿಮೆಂಟ್, ಕಬ್ಬಿಣ ಆದ್ದರಿಂದ ಅರುಣ್ ಜೇಟ್ಲಿ, ಉತ್ಪಾದನಾ ಹಾಗೂ ಹೂದಿಕೆ ಕ್ಷೇತ್ರಗಳಿಗೆ ಹೆಚ್ಚು ಉತ್ತೇಜನ ನೀಡಲಿದ್ದಾರೆ. ಮುಖ್ಯವಾಗಿ ಮೂಲಭೂತ ಸೌಲಭ್ಯ ವಲಯಕ್ಕೆ ಕನಿಷ್ಠ ಪರ್ಯಾಯ ತೆರಿಗೆ(ಎಂಎಟಿ) ರದ್ದು ಮಾಡಿ, ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗೆ ಹೆಚ್ಚಿನ ಆರ್ಥಿಕ ಬೆಂಬಲ ನೀಡುವ ನಿರೀಕ್ಷೆಯೂ ಇದೆ.

ವಾಹನಗಳ ಮೇಲಿನ ಅಬಕಾರಿ ಸುಂಕ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಹೊಂದಿದ್ದರೆ ಅದು ಸುಳ್ಳಾಗುವ ಸಾಧ್ಯತೆ ಇದೆ. ಈ ಬಾರಿ ಅರುಣ್ ಜೇಟ್ಲಿ ತಮ್ಮ ಬಜೆಟ್ ನಲ್ಲಿ ವಾಹನಗಳ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವ ಲಕ್ಷಣಗಳಿಲ್ಲ. ಆದ್ದರಿಂದ ವಾಹನಗಳ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆ.

ಒಟ್ಟಾರೆ ಅರುಣ್ ಜೇಟ್ಲಿ ಅವರ ಪೂರ್ಣಪ್ರಮಾಣದ ಬಜೆಟ್ ಮಧ್ಯಮವರ್ಗದವರಿಗೆ ಅನುಕೂಲವಾಗುವ ರೀತಿಯಲ್ಲಿ ಮಂಡನೆಯಾಗುವ ಎಲ್ಲಾ ಸಾಧ್ಯತೆಗಳಿವೆ.

 

Author : ಬೆಂಗಳೂರು ವೇವ್ಸ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited